ಶನಿ ದೇವರ ಜಯಂತಿ ಅಮಾವಾಸ್ಯೆ ದಿನ ತಪ್ಪದೇ ಎಲ್ಲರೂ ಈ ಸ್ತೋತ್ರ ಹೇಳಿ ಸಣ್ಣ ದಾನ ಮಾಡಿ ಜೀವನದ ಕಷ್ಟ ಕಳೆಯುತ್ತೆ……!!
ವೈಶಾಖ ಮಾಸದ ಕೃಷ್ಣ ಪಕ್ಷದ ಅಮಾವಾಸ್ಯೆಗೆ ನಾವು ಭಾವುಕ ಅಮಾವಾಸ್ಯೆ ಎಂದು ಹೇಳುತ್ತೇವೆ. ಹಾಗಾದರೆ ಈ ದಿನ ಏನು ವಿಶೇಷ ಎಂದು ನೋಡುವುದಾದರೆ ಶನೈಶ್ಚರನ ಜಯಂತಿಯನ್ನಾಗಿ ಆಚರಣೆಯನ್ನು ಮಾಡುತ್ತಾರೆ. ಆ ದಿನ ಶನಿ ದೇವರು ಹುಟ್ಟಿದ ದಿನವನ್ನಾಗಿ ಆಚರಣೆಯನ್ನು ಮಾಡುತ್ತಾರೆ.
ಶನಿ ದೇವರು ಸೂರ್ಯನ ಹಾಗೂ ಛಾಯಾಳ ಪುತ್ರನಾಗಿ ಭಾರತದ ಸೌರಾಷ್ಟ್ರದಲ್ಲಿ ವೈಶಾಖ ಮಾಸದ ಅಮಾವಾಸ್ಯೆಯ ದಿವಸ ಮಧ್ಯಾಹ್ನದ ಸಮಯದಲ್ಲಿ ಶನಿ ದೇವರ ಜನನ ಆಯ್ತು ಎಂದು ಹೇಳಿ ಪುರಾಣ ಪ್ರಕಾರ ನಾವು ಹೇಳುತ್ತೇವೆ. ಈ ದಿನ ನಾವು ಶನಿ ದೇವರನ್ನು ಪೂಜೆ ಮಾಡುವುದರಿಂದ ನಮ್ಮ ಸಕಲ ಕಷ್ಟಗಳು ಸಹ ದೂರವಾಗುತ್ತದೆ.
ಹೌದು ಶನಿ ದೇವರು ಪ್ರತಿಯೊಬ್ಬರ ಮೇಲು ಸಹ ತಮ್ಮ ಪ್ರಭಾವವನ್ನು ಬೀರುತ್ತಾರೆ ಎಂದೇ ಹೇಳಬಹುದು. ಅದರಲ್ಲೂ ಶನಿಯ ನೇರ ದೃಷ್ಟಿಗಿಂತ ವಕ್ರದೃಷ್ಟಿ ನಮಗೆ ತೊಂದರೆಯಾಗಿ ಪರಿಣಮಿಸುತ್ತದೆ. ಸಾಡೇ ಸಾಥ್ ಒಬ್ಬ ಮನುಷ್ಯನಿಗೆ 30 ವರ್ಷಕ್ಕೊಮ್ಮೆ ಬರುತ್ತದೆ ಎಂದು ಹೇಳಬಹುದು. ಆದ್ದರಿಂದಲೇ ಶನಿಯ ನೇರ ದೃಷ್ಟಿಗಿಂತ ವಕ್ರದೃಷ್ಟಿ ನಮಗೆ ಬೇಗನೆ ಅಶುಭ ಫಲಗಳನ್ನು ತಂದುಕೊಡುತ್ತದೆ ಎನ್ನಬಹುದು.
ಶನಿ ದೇವರಿಗೆ ಎಳ್ಳೆಣ್ಣೆ ಎಂದರೆ ಅತಿ ಪ್ರಿಯವಾದದ್ದು. ಆದ್ದರಿಂದ ಆತನಿಗೆ ಎಳ್ಳೆಣ್ಣೆಯ ಅಭಿಷೇಕವನ್ನು ಮಾಡುವುದರಿಂದ ನಮ್ಮ ಎಲ್ಲಾ ದೋಷಗಳು ಕೂಡ ನಿವಾರಣೆಯಾಗುತ್ತದೆ. ಅದೇ ರೀತಿಯಾಗಿ ಈ ದಿನ ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿಸಿದಂತೆ ಶನಿಯ ಯಾವುದೇ ರೀತಿಯಾದಂತಹ ದೃಷ್ಟಿ ನಮ್ಮ ಮೇಲೆ ಬೀಳಬಾರದು ಎಂದರೇ ಪ್ರತಿಯೊಬ್ಬರೂ ಕೂಡ ಕಷ್ಟದಲ್ಲಿರುವವರಿಗೆ ಸಹಾಯ ಮಾಡಬೇಕು. ಹಾಗೆಯೇ ದಾನ ಧರ್ಮ ಇತ್ಯಾದಿಗಳನ್ನು ಮಾಡಬೇಕು.
ಜೊತೆಗೆ ಯಾವಾಗಲೂ ಸಹ ನ್ಯಾಯಯುತವಾಗಿ ನಡೆದುಕೊಳ್ಳಬೇಕು. ಆಗ ಯಾವುದೇ ರೀತಿಯಾದಂತಹ ಶನಿಯ ದೃಷ್ಟಿ ನಮ್ಮ ಮೇಲೆ ಬೀಳುವುದಿಲ್ಲ. ಹಾಗೇನಾದರೂ ನಿಮ್ಮ ಮೇಲೆ ಇದ್ದರೆ ನೀವು ಸರಿಯಾದಂತಹ ಮಾರ್ಗದಲ್ಲಿ ನಡೆಯುತ್ತಿಲ್ಲ ಎಂದರ್ಥ ಆಗಿಯೇ ನಿಮ್ಮ ಹಿಂದಿನ ಜನ್ಮದಲ್ಲಿ ನೀವು ಮಾಡಿದ ಕರ್ಮದ ಫಲವಾಗಿ ನೀವು ಈಗ ಶನಿಯ ದೃಷ್ಟಿಗೆ ಒಳಗಾಗಿದ್ದೀರಿ ಎಂಬುವುದೇ ಇದರ ಅರ್ಥವಾಗಿದೆ.
ಹಾಗಾದರೆ ಇವತ್ತಿನ ದಿನ ಈ ಒಂದು ಪರಿಹಾರವನ್ನು ಮಾಡಿಕೊಳ್ಳು ವುದು ಉತ್ತಮ. ಒಂದು ಹೊಸ ಚಿಕ್ಕ ಸ್ಟೀಲ್ ಪಾತ್ರೆಯನ್ನು ತೆಗೆದು ಅದರ ತುಂಬಾ ಕಪ್ಪು ಎಳ್ಳನ್ನು ತುಂಬಿ ಅದರ ಮೇಲೆ ತಾಂಬೂಲ ಎಲೆ ಅಡಿಕೆ ಇಟ್ಟು “ಯಃ ಪುನರ್ನಷ್ಟ ರಾಜ್ಯಾಯ ನಲಾಯ ಪರಿತೋಷಿತಃ ಸ್ವಪ್ನ ದದೌ ನಿಜಂ ಸ ಮೇ ಸೌರಿ ಪ್ರಸೀದತು ನಮೋ ಅರ್ಕ ಪುತ್ರಾಯ ಶನೈಶ್ಚರಾಯ ನೀಹಾರವರ್ಣಾಂಜನ ಮೇಚಕಾಯ ಶ್ರುತ್ವಾ ರಹಸ್ಯಂ ಭವ ಕಾಮದಸ್ತ್ವಂ ಫಲಪ್ರದೋ ಮೇ ಭವ ಸೂರ್ಯ ಪುತ್ರ” ಈ ಶ್ಲೋಕವನ್ನು ಹೇಳಿ ಇದನ್ನು ಬ್ರಾಹ್ಮಣರಿಗೆ ದಾನ ಮಾಡಬೇಕು. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.