ದೇವಸ್ಥಾನದಲ್ಲಿ ಮಕ್ಕಳ ನಾಲಗೆ ಮೇಲೆ ಓಂಕಾರ ಬರೆಯುತ್ತಾರೆ ನಿಮಿಷದಲ್ಲಿ ಮುಕ್ಕಳು ಬುದ್ದಿವಂತರಾಗುತ್ತಾರೆ..

ಕರ್ನಾಟಕದ ಈ ದೇವಸ್ಥಾನದಲ್ಲಿ ಮಕ್ಕಳ ನಾಲಿಗೆ ಮೇಲೆ ಓಂಕಾರ ಬರೆಯುತ್ತಾರೆ….! ಐದು ನಿಮಿಷದಲ್ಲಿ ಮಕ್ಕಳು ಬುದ್ಧಿವಂತರಾಗುತ್ತಾರೆ.!

WhatsApp Group Join Now
Telegram Group Join Now

ಕರ್ನಾಟಕದಲ್ಲಿ ಅತ್ಯಂತ ಅಪರೂಪವಾಗಿರುವಂತಹ ಶಾರದಮ್ಮನವರ ದೇವಸ್ಥಾನ ಇದು. ಶೃಂಗೇರಿ ಶಾರದಾಂಬ ದೇವಸ್ಥಾನಕ್ಕಿಂತ ಈ ದೇವಸ್ಥಾನಕ್ಕೆ ಹೆಚ್ಚಿನ ಭಕ್ತರು ಬರುತ್ತಾರೆ. ದೇವರು ಇಲ್ಲ ಎನ್ನುವವರಿಗೆ ಈ ದೇವಸ್ಥಾನದಲ್ಲಿ ನೆಲೆಸಿರುವoತಹ ಶಾರದಮ್ಮನವರೇ ಉತ್ತರ ಕೊಡುತ್ತಾರೆ. ಹಾಗಾದರೆ ಈ ಅದ್ಭುತವಾದಂತಹ ದೇವಸ್ಥಾನ ಇರುವುದಾದರೂ ಎಲ್ಲಿ?

ಹಾಗಾದರೆ ಈ ಒಂದು ದೇವಸ್ಥಾನದ ವಿಶೇಷತೆ ಏನು? ಈ ದೇವಸ್ಥಾನಕ್ಕೆ ಮಕ್ಕಳನ್ನು ಕರೆದುಕೊಂಡು ಹೋದರೆ ಬುದ್ಧಿವಂತರಾಗುತ್ತಾರೆ ಎನ್ನುವು ದಕ್ಕೆ ಏನು ನಿದರ್ಶನ? ಹೀಗೆ ಈ ಎಲ್ಲಾ ವಿಚಾರಕ್ಕೆ ಸಂಬಂಧಿಸಿದಂತೆ ಹಲವಾರು ಮಾಹಿತಿಗಳ ಬಗ್ಗೆ ಈ ದಿನ ತಿಳಿದುಕೊಳ್ಳುತ್ತಾ ಹೋಗೋಣ. ಮೊದಲನೆಯದಾಗಿ ಈ ಒಂದು ದೇವಸ್ಥಾನ ಇರುವುದಾದರೆ ಎಲ್ಲಿ ಇದರ ಸಂಪೂರ್ಣವಾದ ವಿಳಾಸ ಈ ಕೆಳಗಿನಂತೆ ತಿಳಿಯೋಣ.

ಚಿಕ್ಕಮಂಗಳೂರಿನಿಂದ 67 ಕಿಲೋಮೀಟರ್ ಪ್ರಯಾಣ ಮಾಡಿದರೆ ಅಮೃತಪುರ ಹಳ್ಳಿ ಸಿಗುತ್ತೆ. ಇದೇ ಹಳ್ಳಿಯಲ್ಲಿ ನೆಲೆಸಿರುವ ಅಮೃತೇಶ್ವರ ದೇವಸ್ಥಾನ. ಈ ದೇವಸ್ಥಾನಕ್ಕೆ ಹಾಸನ ನಗರದಿಂದ 110 KM ದೂರ ವಾಗುತ್ತದೆ. ಶಿವಮೊಗ್ಗಯಿಂದ 50 KM ಹಾಗೂ ಬೆಂಗಳೂರಿನಿಂದ 110 KM ದಾವಣಗೆರೆಯಿಂದ 115 ಕಿಲೋಮೀಟರ್ ದೂರವಾಗುತ್ತದೆ. ಶನಿವಾರ ಭಾನುವಾರದ ದಿನದಂದು ಎಲ್ಲಾ ಕಡೆಯಿಂದಲೂ ಅಧಿಕ ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸುತ್ತಾರೆ.

ಈ ದೇವಸ್ಥಾನದಲ್ಲಿ ನೆಲೆಸಿರುವುದು ಎರಡು ದೇವರು ಒಂದು ಅಗ್ನಿ ಸಾಲಿಗ್ರಾಮ ಶಿವಲಿಂಗ ಮತ್ತೊಂದು ಶಾರದಮ್ಮನವರು. ಪ್ರತಿದಿನ ಈ ದೇವಸ್ಥಾನ ಬೆಳಗ್ಗೆ 6 ಗಂಟೆಯಿಂದ ಸಂಜೆ 6:00ಯವರೆಗೂ ತೆರೆದಿರು ತ್ತದೆ. ಶಿವನ ದೇವಸ್ಥಾನದಲ್ಲಿ ಶಾರದಾದೇವಿ ನೆಲೆಸಿರುವುದು ಈ ದೇವ ಸ್ಥಾನದ ಒಂದು ಅಪರೂಪದಲ್ಲೇ ಅಪರೂಪ ಎಂದು ಹೇಳಬಹುದು. ಈ ರೀತಿಯಾದಂತಹ ಒಂದು ಅದ್ಭುತ ನೀವು ಪ್ರಪಂಚದಲ್ಲಿಯೇ ಎಲ್ಲೂ ನೋಡಲು ಸಾಧ್ಯವಿಲ್ಲ.

See also  ವೃಷಭ ರಾಶಿ ಅಬ್ಬಬ್ಬಾ ನೀವು ಇಷ್ಟೊಂದು ವಿಭಿನ್ನ ಗುಣ ಲಕ್ಷಣ ಹೊಂದಿದ್ದೀರಾ..! ನಿಮ್ಮ ಜೀವನ ಹೀಗೆ ನಡೆಯುತ್ತೆ

ಅಗ್ನಿ ಸಾಲಿಗ್ರಾಮ ಶಿವಲಿಂಗದ ಜೊತೆ ಶಾರದಾ ದೇವಿ ನೆಲೆಸಿರುವುದ ರಿಂದ ಅತ್ಯಂತ ಶಕ್ತಿಶಾಲಿ ದೇವಸ್ಥಾನವಾಗಿ ಹೊರಹೊಮ್ಮಿದೆ. 1196 ನೇ ಇಸವಿಯಲ್ಲಿ ಹೊಯ್ಸಳ ಸಾಮ್ರಾಜ್ಯದವರು ಈ ದೇವಸ್ಥಾನವನ್ನು ನಿರ್ಮಿಸುತ್ತಾರೆ. ಈ ದೇವಸ್ಥಾನದಲ್ಲಿ ಸರಿಸುಮಾರು 56 ಕಂಬಗಳು ಇದೆ ಅವು ಈಗಲೂ ಕೂಡ ಅಷ್ಟೇ ಅದ್ಭುತವಾಗಿದೆ ಯಾವುದೇ ರೀತಿಯ ಅಪಾಯಕ್ಕು ಒಳಗಾಗಿಲ್ಲ.

ಅಷ್ಟೇ ಅಲ್ಲದೆ ಈ ದೇವಸ್ಥಾನದಲ್ಲಿ 250ಕ್ಕೂ ಹೆಚ್ಚು ಅಧಿಕ ಶಿಲ್ಪಾಕೃತಿ ಗಳು ಇದೆ. ಈ ದೇವಸ್ಥಾನವನ್ನು ಆಕಾಶದಲ್ಲಿರುವ ನಕ್ಷತ್ರದ ರೀತಿ ನಿರ್ಮಾಣ ಮಾಡಲಾಗಿದೆ. ಈ ದೇವಸ್ಥಾನವು ಸ್ವಾತಿ ನಕ್ಷತ್ರವನ್ನು ಪ್ರತಿ ಬಿಂಬಿಸುತ್ತದೆ ಎಂದು ಪುರಾವೆಯಲ್ಲಿ ಹೇಳಲಾಗಿದೆ. ಈ ದೇವಸ್ಥಾನದಲ್ಲಿ ರುವಂತಹ ಶಿವಲಿಂಗವನ್ನು ನೇಪಾಳದಲ್ಲಿರುವಂತಹ ಗಂಡಕ್ಕಿ ನದಿಯಲ್ಲಿ ಸಿಕ್ಕಂತಹ ಅಗ್ನಿ ಸಾಲಿಗ್ರಾಮದಿಂದ ನಿರ್ಮಿಸಲಾಗಿದೆ ಎಂದು ಹೇಳಲಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]


crossorigin="anonymous">