ರಾಹು ಬೃಹಸ್ಪತಿ ಮಹಾಸಂಧಿ ಆ 24 ದಿನಗಳು ಮೇ 27 ರಿಂದ ಯಾವ ರಾಶಿಗೆ ಅದೃಷ್ಟ ನೋಡಿ.. - Karnataka's Best News Portal https://cudgeletc.com/t77pg9f0bn?key=27d0eac1279d1d54f242ce019dac0514

ರಾಹು ಬೃಹಸ್ಪತಿ ಮಹಾಸಂಧಿ..|| ಆ 24 ದಿನಗಳು ಮೇ 27ರಿಂದ ಯಾವ ರಾಶಿಗೆ ಏನು ಫಲ……??

ಅಶ್ವಿನಿ ನಕ್ಷತ್ರದ ಮೂರನೇ ಪಾದದಲ್ಲಿ ಈ ಒಂದು ರಾಹು ಬೃಹಸ್ಪತಿ ಮಹಾಸಂಧಿ ಮೇ 27ನೇ ತಾರೀಖಿನಂದು ನಡೆಯುತ್ತಿದ್ದು. ಇದರಲ್ಲಿ ರಾಹು ಮತ್ತು ಗುರು ಒಂದೇ ಪಾದದಲ್ಲಿ ಇರುವಂತದ್ದು. ಈ ಒಂದು ಸಮಯದಲ್ಲಿ 24 ದಿನಗಳ ಕಾಲ ಅಂದರೆ ಜೂನ್ 20ನೇ ತಾರೀಖಿನವರೆಗೆ.

ಸುಮಾರು 24 ದಿನಗಳ ಕಾಲ ಮಹಾ ಸಂಧಿ ಇರುವಂತದ್ದು. ಸಂಧಿ ಕಾಲವು ಬಹಳಷ್ಟು ವ್ಯತ್ಯಾಸವನ್ನು ಮಾಡುತ್ತದೆ. ಇಲ್ಲಿ ರಾಹು ಹಲವಾರು ಕೆಟ್ಟ ಪರಿಸ್ಥಿತಿಗಳನ್ನು ಉಂಟುಮಾಡುತ್ತಾನೆ. ಇದು ಕೇವಲ ನಮ್ಮ ದೇಶಕ್ಕೆ ಸಂಭವಿಸುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಇಡೀ ಪ್ರಪಂಚಕ್ಕೆ ಈ ಒಂದು ಪರಿಣಾಮ ಉಂಟಾಗುವಂತದ್ದು ಅದರಲ್ಲೂ ಜಾಗತಿಕವಾಗಿ ಒಂದು ದೇಶ ಒಂದು ರಾಶಿ ಒಂದು ನಕ್ಷತ್ರದವರಿಗೆ ಉಂಟಾಗುವಂತದ್ದಲ್ಲ.

ಒಟ್ಟಾರೆಯಾಗಿ ನಮ್ಮ ಭೂಮಂಡಲಕ್ಕೆ ಇದು ಉಂಟಾಗುತ್ತಿದೆ. ಇವನು ಮೇಷ ರಾಶಿಯಲ್ಲಿ ಇರುವಂತದ್ದು. ಮೇಷ ರಾಶಿಯ ಅಧಿಪತಿ ಮಂಗಳ ಆಗಿರುತ್ತಾನೆ. ಇಲ್ಲಿ ಮಂಗಳ ಕರ್ಕಾಟಕ ರಾಶಿಯವರಿಗೆ ನೀಚನಾಗಿ ಹೊರಹೊಮ್ಮಿದ್ದಾನೆ ಅಂದರೆ ಪರಮ ನೀಚ ಸ್ಥಾನದಲ್ಲಿ ಇದ್ದಾನೆ. ಇದರಿಂದ ವಾತಾವರಣದ ಮೇಲೆ ಹಲವಾರು ಬದಲಾವಣೆಗಳು ಉಂಟಾಗುತ್ತದೆ ಅಂದರೆ ಉಷ್ಣತೆ ಮತ್ತು ಶೀತದ ಒಂದು ವೈಪರಿತ್ಯ

ಮಳೆ ಮತ್ತು ಬಿಸಿಲಿನ ವೈಪರಿತ್ಯ. ಇದರಿಂದ ಹಲವಾರು ರೋಗ ರುಜುನೆ ಸಹ ಸಂಭವಿಸುವ ಸಾಧ್ಯತೆ ಹೆಚ್ಚಿರುತ್ತದೆ. ಇದರ ಜೊತೆ ವಿಷಜಂತುಗಳ ಹಾವಳಿ ಹೆಚ್ಚಾಗುವಂತದ್ದು. ವಿಷ ಅನಿಲಗಳ ಫ್ಯಾಕ್ಟರಿಗಳಲ್ಲಿ ಸ್ಪೋಟ ಹೀಗೆ ಹಲವಾರು ತೊಂದರೆಗಳು ಉಂಟಾಗುವ ಸಾಧ್ಯತೆ ಹೆಚ್ಚಿರುತ್ತದೆ. ಇದರ ಜೊತೆ ಮನರಂಜನ ಕ್ಷೇತ್ರ, ಕ್ರೀಡಾ ಕ್ಷೇತ್ರಗಳಲ್ಲಿಯೂ ಸಹ ಹಲವಾರು ತೊಂದರೆಗಳು ಉಂಟಾಗುವಂತದ್ದು.

ಸೈನ್ಯ ಅಥವಾ ಮಿಲಿಟರಿಗಳಲ್ಲಿ ಇನ್ನಿತರ ತೊಂದರೆಗಳು ಯುದ್ಧಗಳು ಸಂಭವಿಸುವಂಥದ್ದು. ಹಾಗೂ ರಾಹು ಬೃಹಸ್ಪತಿ ಸಂಧಿ ಕಾಲದ ಫಲ ವಿಶ್ವದ ಜನರ ಮನಸ್ಸು ವಿಷಪೂರಿತವಾಗಿ ದ್ವೇಷ ಅಸೂಯೆ, ಅಪರಾಧ ಕೃತ್ಯ, ಮೋಸ, ವಂಚನೆ, ಭ್ರಷ್ಟಾಚಾರ ಹೆಚ್ಚಾಗುತ್ತದೆ. ಆರ್ಥಿಕವಾಗಿ ಹಿನ್ನಡೆಯನ್ನು ಅನುಭವಿಸುವಂಥದ್ದು. ಧರ್ಮಗುರು ಅಥವಾ ಧಾರ್ಮಿಕ ನಾಯಕರಿಗೆ ಸಂಕಷ್ಟಗಳು ಹೆಚ್ಚಾಗುತ್ತದೆ. ಹಾಗೂ ಧಾರ್ಮಿಕ ಸ್ಥಳಗಳಲ್ಲಿ ಹಿಂಸೆ ದುರಂತಗಳು ಸಂಭವಿಸುವಂಥದ್ದು.

ಖ್ಯಾತ ಸೆಲೆಬ್ರಿಟಿಗಳಿಗೆ ಕಂಟಕ ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ಹಲವಾರು ರೀತಿಯ ಬದಲಾವಣೆಗಳು ಸಂಭವಿಸುತ್ತದೆ. ಇನ್ನು ಮಿಥುನ ಕಟಕ ವೃಶ್ಚಿಕ ಕುಂಭ ರಾಶಿಗಳಿಗೆ ರಾಹುವಿನಿಂದ ಹೆಚ್ಚು ಶುಭ ಫಲ ನಿರೀಕ್ಷೆ ಇದೆ. ಸಿಂಹ ತುಲಾ ಧನಸ್ಸು ಮೀನ ರಾಶಿಗಳಿಗೆ ಸಮ್ಮಿಶ್ರವಾದ ಫಲಗಳ ನಿರೀಕ್ಷೆ ಇದೆ. ಇನ್ನು ಮೇಷ ವೃಷಭ ಕನ್ಯಾ ಮಕರ ರಾಶಿಗಳಿಗೆ ಸಂಕಷ್ಟ ಫಲಗಳ ಸೂಚನೆ ಇದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

By admin

Leave a Reply

Your email address will not be published. Required fields are marked *