ಫೋನ್ ಪೇ ಈಗ ಎಷ್ಟು ಕೋಟಿ ವ್ಯವಹಾರ ಮಾಡುತ್ತಿದೆ ಗೊತ್ತಾ?
ಫೋನ್ ಪೇ ಎನ್ನುವ UPI ಆಧಾರಿತ ಸೇವೆಯ ಬಗ್ಗೆ ಈಗ ಪ್ರತಿ ಮನೆಮನೆಗಳಲ್ಲೂ ಕೂಡ ಮಾತನಾಡುತ್ತಾರೆ. ಯಾಕೆಂದರೆ ಜನ ಕ್ಯಾಶ್ ಲೆಸ್ ವ್ಯವಹಾರವನ್ನು ಮೆಚ್ಚಿಕೊಂಡಿದ್ದಾರೆ ಮತ್ತು ಬೆಂಬಲಿಸುತ್ತಿದ್ದಾರೆ. ಫೋನ್ ಪೇ ಮಾತ್ರವಲ್ಲದೆ ಭಾರತದಲ್ಲಿ ಇನ್ನೂ ನಾಲ್ಕು UPI ಆಧಾರಿತ ಆನ್ಲೈನ್ ಪೇಮೆಂಟ್ ಮಾಡುವ ಸೇವೆಗಳು ಇವೆ. ಗೂಗಲ್ ಪೇ, ಪೇಟಿಎಂ, ಅಮೆಜಾನ್ ಪೇ ಮತ್ತು ಭಾರತ್ ಪೇ.
ಆದರೆ ಇವುಗಳನ್ನೆಲ್ಲ ಹಿಂದಿಕ್ಕಿ ಭಾರತದಲ್ಲಿ ಆನ್ಲೈನ್ ಅಲ್ಲಿ ಹಣ ವ್ಯವಹಾರ ಮಾಡುವ ಅರ್ಧಕ್ಕಿಂತಲೂ ಹೆಚ್ಚಿನ ಜನರ ವಿಶ್ವಾಸವನ್ನು ದೇಶಿ ಕಂಪನಿ ಆದ ಫೋನ್ ಪೇ ಪಡೆದುಕೊಂಡಿದೆ. ಇದಕ್ಕೆ ಕಾರಣ ಫೋನ್ ಪೇ ಕೊಟ್ಟಿರುವ ಸೇವೆಗಳು. ಭಾರತದಲ್ಲಿ ಬಡ ಹಾಗೂ ಮಾಧ್ಯಮ ವರ್ಗದವರು ಹೆಚ್ಚಾಗಿರುವುದರಿಂದ ಅಂತವರಿಗೆ ಅನುಕೂಲವಾಗುವ ಸರಳವಾದ ಸೇವೆಗಳನ್ನು ಕೊಡುವುದರಿಂದ ಹೆಚ್ಚು ಜನರು ಇದಕ್ಕೆ ರೀಚ್ ಆಗುತ್ತಾರೆ, ಸದ್ಯಕ್ಕೆ ಭಾರತದಲ್ಲಿ 40 ಕೋಟಿಗಿಂತಲೂ ಹೆಚ್ಚು ಜನರು ಫೋನ್ ಪೇ ಗ್ರಾಹಕರಾಗಿದ್ದಾರೆ.
ಫೋನ್ ಪೇ ಒಂದು ಪ್ರಾಡಕ್ಟ್ ಅಲ್ಲ ಬದಲಿಗೆ ಇದೊಂದು ಸೇವೆ. ಫೋನ್ ಪೇ ಮೂಲಕ ಜನರು ತಮ್ಮ ಕರೆಂಟ್ ಬಿಲ್, ಗ್ಯಾಸ್ ಬಿಲ್ ವೆಹಿಕಲ್ ಇನ್ಸೂರೆನ್ಸ್, LIC ಇನ್ಸೂರೆನ್ಸ್ ಸೇರಿದಂತೆ ಫುಡ್ ಆರ್ಡರ್ ಮಾಡುವುದು ಟಿಕೆಟ್ ಬುಕ್ ಮಾಡುವುದು ಇನ್ನು ಮುಂತಾದ ಎಲ್ಲಾ ಸೇವೆಗಳನ್ನು ಕೂಡ ಪಡೆಯುತ್ತಿದ್ದಾರೆ. ಆದರೆ ಇದು ಆರಂಭವಾದಾಗ ಬ್ಯಾಂಕ್ನಿಂದ ಬ್ಯಾಂಕಿಗೆ ಹಣ ಟ್ರಾನ್ಸ್ಫರ್ ಮಾಡುವ ಉದ್ದೇಶವನ್ನು ಹೊಂದಿತ್ತು ನಿಧಾನವಾಗಿ ಗ್ರಾಹಕರ ಅಭಿರುಚಿಗೆ ತಕ್ಕಂತೆ ಬದಲಾಯಿತು.
2016ರಲ್ಲಿ ನೋಟ್ ಬ್ಯಾನ್ ಆದಾಗ ಈ ರೀತಿ ಆನ್ಲೈನ್ ಪೇಮೆಂಟ್ ವ್ಯವಸ್ಥೆ ಎಷ್ಟು ಅನುಕೂಲಕರನ್ನು ಜನರಿಗೆ ಮನವರಿಕೆ ಆಯಿತು, ಮತ್ತೊಮ್ಮೆ ಕೊರೋನ ಸಮಯದಲ್ಲಿ ಇದರ ಮಹತ್ವ ದಿಗುಣವಾಗಿ ತಿಳಿಯಿತು. ಫೋನ್ ಪೇ ಅಲ್ಲಿ ನಾವು ಯಾವುದೇ ಟ್ರಾನ್ಸಾಕ್ಷನ್ ಮಾಡಿದರು ಕೂಡ ಸದ್ಯಕ್ಕೆ ನಮ್ಮ ಹಣ ಕಟ್ ಆಗುತ್ತಿಲ್ಲ ಇದು ಫ್ರೀ ಸೇವೆ ಆಗಿರುವುದರಿಂದ ಕಂಪನಿಗೆ ಏನು ಲಾಭ ಎಂದು ಹಲವರ ಅನುಮಾನ.
ಆದರೆ ಇದಕ್ಕೆ ಕಮಿಷನ್ ರೂಪದಲ್ಲಿ ಹಣ ಬರುತ್ತದೆ. ನಾವು ಯಾವ ಕಂಪನಿಯ ರಿಚಾರ್ಜ್ ಅನ್ನು ಮಾಡುತ್ತೇವೋ ಆ ಕಂಪನಿಗಳು ಕಮಿಷನ್ ಲೆಕ್ಕದಲ್ಲಿ ಫೋನ್ ಪೇಗೆ ಹಣ ಕೊಡುತ್ತಾರೆ. ಆರಂಭದಲ್ಲಿ ಎಲ್ಲಾ ಕಂಪನಿಗಳು ಕೂಡ ಗ್ರಾಹಕರನ್ನು ಸೆಳೆಯುವ ಉದ್ದೇಶದಿಂದ ಎಲ್ಲವನ್ನು ಉಚಿತವಾಗಿ ಕೊಟ್ಟು ಮುಂದೆ ಅದರ ಮೇಲೆ ಡಿಪೆಂಡ್ ಆದ ಮೇಲೆ ಚಾರ್ಜಸ್ ಅಪ್ಲೈ ಮಾಡುವುದನ್ನು ನಾವು ನೋಡಿದ್ದೇವೆ.
ಇನ್ನು ಮುಂದೆ UPI ಸೇವೆಗಳಲ್ಲಿ 2000 ವ್ಯವಹಾರದ ಮೇಲೆ 2 ರೂಪಾಯಿ ಚಾರ್ಜ್ ಆಗುತ್ತದೆ ಎನ್ನುವ ಮಾತುಗಳು ಹರಿದಾಡುತ್ತಿರುವುದರಿಂದ ಅತಿ ಹೆಚ್ಚು ಗ್ರಾಹಕರನ್ನು ಹೊಂದಿರುವ ಫೋನ್ ಪೇ ರಿಚಾರ್ಜ್ ಇಂದಲೇ ಕೋಟ್ಯಾನು ಕೋಟಿ ಗಳಿಸುವ ಸಾಧ್ಯತೆ ಇದೆ. ಫೋನ್ ಪೇ ಬಗ್ಗೆ ಇನ್ನೂ ಹತ್ತಾರು ಇಂಟರೆಸ್ಟಿಂಗ್ ವಿಷಯಗಳನ್ನು ತಿಳಿದುಕೊಳ್ಳಲು ಈ ವಿಡಿಯೋವನ್ನು ಪೂರ್ತಿಯಾಗಿ ನೋಡಿ.