ಬೆಂಗಳೂರಿನ ಈ ದೇಗುಲದಲ್ಲಿ ಪೂಜಿತಗೊಳ್ಳುತ್ತಿದೆ 1200 ವರ್ಷ ಪುರಾತನ ವೇಣುಗೋಪಾಲಸ್ವಾಮಿ ವಿಗ್ರಹ... - Karnataka's Best News Portal
https://adulateearring.com/t77pg9f0bn?key=27d0eac1279d1d54f242ce019dac0514

ಮಲ್ಲೇಶ್ವರ ವೇಣುಗೋಪಾಲಸ್ವಾಮಿ ದೇವಸ್ಥಾನ ಬೆಂಗಳೂರು……||

ನಮ್ಮ ಬೆಂಗಳೂರಿನ ಅತ್ಯಂತ ಹಳೆಯ ಹಾಗೂ ಸುಸಂಸ್ಕೃತವಾದ ಬಡಾವಣೆಗಳಲ್ಲಿಯೇ ಮಲ್ಲೇಶ್ವರ ಬಡಾವಣೆ ಮುಂಚೂಣಿಯಲ್ಲಿ ಬರುತ್ತದೆ. ಮಲ್ಲೇಶ್ವರ ಬೆಂಗಳೂರಿನ ಒಂದು ಜೀವಂತ ಸ್ಥಳ ಎಂದೇ ಹೇಳಬಹುದು. ಹಳೆಯ ಬೆಂಗಳೂರಿನ ಸೊಗಡನ್ನು ಮಲ್ಲೇಶ್ವರದಲ್ಲಿ ನಾವು ಈಗಲೂ ಸಹ ಅನುಭವಿಸಬಹುದು. ಮಲ್ಲೇಶ್ವರದ ಜೀವಂತಿಕೆಗೆ ಪ್ರಮುಖ ಕಾರಣ ಯಾವುದು ಎಂದರೆ ಇಲ್ಲಿರುವಂತಹ ದೇವಾಲಯಗಳು.

ಕಾಡು ಮಲ್ಲೇಶ್ವರ ದೇವಸ್ಥಾನ, ದಕ್ಷಿಣಾಭಿಮುಖ ನಂದಿ ತೀರ್ಥ, ಗಂಗಮ್ಮ ದೇವಸ್ಥಾನ, ಲಕ್ಷ್ಮಿ ನರಸಿಂಹ ದೇವಸ್ಥಾನ, ಹೀಗೆ ಮಲ್ಲೇಶ್ವರ ಬಡಾವಣೆಯಲ್ಲಿ ಹತ್ತು ಹಲವಾರು ದೇವಾಲಯಗಳು ಇದ್ದು. ಮಲ್ಲೇಶ್ವರ ಬಡಾವಣೆಯನ್ನು ಈ ದೇವರುಗಳು ಪುಣ್ಯಭೂಮಿಯನ್ನಾಗಿಸಿದೆ. ಮಲ್ಲೇಶ್ವರದಲ್ಲಿ ಸ್ಥಿತವಿರುವ ಐತಿಹಾಸಿಕ ದೇಗುಲವೇ ಶ್ರೀ ವೇಣು ಗೋಪಾಲ ಸ್ವಾಮಿ ದೇವಸ್ಥಾನ. ಈ ದೇವಾಲಯವು ಮಲ್ಲೇಶ್ವರದ 10 ಮತ್ತು 11ನೇ ಅಡ್ಡರಸ್ತೆಯ ಮಧ್ಯಭಾಗದಲ್ಲಿ ಇದೆ.

ಕೆಂಪೇಗೌಡ ಬಸ್ ನಿಲ್ದಾಣ ಹಾಗೂ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಿಂದ ಈ ದೇಗುಲ ಕೇವಲ 4 ಕಿಲೋಮೀಟರ್ ದೂರದಲ್ಲಿ ಇದೆ. ಸುಮಾರು 1100 ವರ್ಷ ಹಳೆಯದಾದ ಈ ದೇವಾಲಯವು ಕಲ್ಲಿನಿಂದಲೇ ನಿರ್ಮಾಣವಾಗಿದೆ. ವೇಣುಗೋಪಾಲ ಸ್ವಾಮಿ ದೇವಸ್ಥಾನ 100 ವರ್ಷಗಳಷ್ಟು ಪುರಾತನವಾಗಿದ್ದರೂ ದೇಗುಲದಲ್ಲಿನ ಪ್ರಧಾನ ದೇವರಾದ ಶ್ರೀ ವೇಣುಗೋಪಾಲ ಸ್ವಾಮಿಯ ವಿಗ್ರಹ ಕ್ರಿಸ್ತಶಕ 9ನೇ ಶತಮಾನಕ್ಕಿಂತಲೂ ಹಳೆಯದು.

ಚೋಳರ ಆಡಳಿತ ಅವಧಿಯಲ್ಲಿ ತಮಿಳುನಾಡು ರಾಜ್ಯದ ತಿರುಕಡ ಲೂರಿನ ದೇಗುಲ ಒಂದರಲ್ಲಿ ಪೂಜೆಗೊಳ್ಳುತ್ತಿದ್ದಂತಹ ವಿಗ್ರಹ ಇದು. ಇಷ್ಟು ಪುರಾತನವಾದಂತಹ ವಿಗ್ರಹ ನಮ್ಮ ಮಲ್ಲೇಶ್ವರದ ವೇಣು ಗೋಪಾಲ ಸ್ವಾಮಿಯ ದೇವಾಲಯದಲ್ಲಿ ಪ್ರತಿಷ್ಠಾಪನೆಗೊಂಡು ಪೂಜೆಗೊಳ್ಳುತ್ತಿರುವುದರ ಹಿಂದೆ ಒಂದು ಕುತೂಹಲ ಭರಿತ ಕಥೆ ಇದೆ. 19ನೇ ಶತಮಾನದ ಹಾದಿಯಲ್ಲಿ ಮಲ್ಲೇಶ್ವರ ಬಡಾವಣೆ ಅಭಿವೃದ್ಧಿ ಹೊಂದುತ್ತಿದ್ದಂತಹ ಸಂದರ್ಭದಲ್ಲಿ ಮಲ್ಲೇಶ್ವರ ಬಡಾವಣೆಯ ನಿವಾಸಿಗಳು ಹಾಗೂ ಪ್ರಭಾವಶಾಲಿ ವ್ಯಕ್ತಿಗಳಾಗಿದ್ದ.

ಶೆಟ್ಲೂರು ವೆಂಕಟರಂಗ ಅಯ್ಯಂಗಾರ್, ಪ್ರೊಫೆಸರ್ MT ನಾರಾಯಣ ಅಯ್ಯಂಗಾರ್, ಶ್ರೀ ರಾವ್ ಬಹದ್ದೂರ್ ನರಸಿಂಹಚಾರ್ಯ, ಎಂ ಟಿ ನರಸಿಂಹ ಅಯ್ಯಂಗಾರ್, ಮತ್ತು ವಿದ್ವಾನ್ ಶ್ರೀ ಅಸೂರಿ ಆನಂದಾ ಳ್ವಾರ್ ಸ್ವಾಮಿಗಳು ಮತ್ತು ಇತರ ವಿದ್ವಾಂಸರು ಮಲ್ಲೇಶ್ವರ ಬಡಾವಣೆ ಯಲ್ಲಿ ಮಹಾ ವಿಷ್ಣು ಆಲಯವನ್ನು ನಿರ್ಮಿಸಲು ಪಣತೊಡುತ್ತಾರೆ. ಈ ದಿವ್ಯವಾದ ಭವ್ಯವಾದ ಮಂದಿರದ ನಿರ್ಮಾಣದ ಉದ್ದೇಶದಿಂದ ಇವರೆಲ್ಲರೂ ಮೈಸೂರು ಸರಕಾರದ ಸಹಾಯವನ್ನು ಕೇಳುತ್ತಾರೆ.

ಆ ಸಮಯದಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಅಪ್ರಾಪ್ತರಾ ಗಿದ್ದರಿಂದಲೇ ಮಹಾರಾಣಿ ಕೆಂಪನಂಜಮ್ಮಣ್ಣಿ ಎನ್ನುವವರು ಮೈಸೂರು ಸಂಸ್ಥಾನದ ರಾಜ ಪ್ರತಿನಿಧಿಯಾಗಿದ್ದರು. ಮಹಾರಾಣಿಯವರು ಮಹಾ ವಿಷ್ಣು ದೇಗುಲದ ಕಟ್ಟಡಕ್ಕೆ ಸರ್ಕಾರದ ವತಿಯಿಂದ ಜಾಗವನ್ನು ಹಾಗೂ 3750 ವರಾಹವನ್ನು ದೇಣಿಗೆಯಾಗಿ ನೀಡುತ್ತಾರೆ. ಆನಂತರ ಮಲ್ಲೇಶ್ವರ ಬಡಾವಣೆಯ ನಿವಾಸಿಗಳೆಲ್ಲರೂ ಸೇರಿ 11,794 ವರಾಹಗಳನ್ನೂ ಕೊಡುಗೆಯಾಗಿ ನೀಡಿ ಮಲ್ಲೇಶ್ವರದಲ್ಲಿ ವೇಣುಗೋಪಾಲ ಸ್ವಾಮಿ ದೇವಾಲಯವನ್ನು ನಿರ್ಮಿಸಿದರು. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

By admin

Leave a Reply

Your email address will not be published. Required fields are marked *