ಶತ್ರುಗಳ ಸಮಸ್ಯೆಯಿಂದ ಮುಕ್ತಿ ಸಿಗಲಿದೆ ಈ 8 ರಾಶಿಗಳಿಗೆ ಇಂದು ನರಸಿಂಹ ಸ್ವಾಮಿ ಕೃಪೆ ಸಾಲಗಳು ತೀರಲಿವೆ... - Karnataka's Best News Portal
https://adulateearring.com/t77pg9f0bn?key=27d0eac1279d1d54f242ce019dac0514

ಮೇಷ ರಾಶಿ:- ಮನೆಯ ವಾತಾವರಣ ಇಂದು ಉತ್ತಮವಾಗಿರುವುದಿಲ್ಲ. ಕುಟುಂಬ ಸದಸ್ಯರೊಂದಿಗೆ ನಿಮ್ಮ ಸಂಬಂಧ ಹದಗೆಡಬಹುದು. ಅಂತಹ ಸಮಯದಲ್ಲಿ ನಿಮ್ಮ ನಡವಳಿಕೆಯ ಬಗ್ಗೆ ವಿಶೇಷವಾದ ಕಾಳಜಿ ವಹಿಸಿ. ಜೀವನ ಸಂಗಾತಿಯ ಆರೋಗ್ಯ ತೀವ್ರವಾಗಿ ಕ್ಷೀಣಿಸಬಹುದು. ಹಣಕಾಸಿನ ಪರಿಸ್ಥಿತಿ ಸಾಮಾನ್ಯಕ್ಕಿಂತ ಉತ್ತಮವಾಗಿರುತ್ತದೆ. ಪಾಲುದಾ ರಿಕೆಯಲ್ಲಿ ಕೆಲಸ ಮಾಡುವವರು ನಿರೀಕ್ಷಿತ ಫಲಿತಾಂಶ ಪಡೆಯಬಹುದು ಅದೃಷ್ಟ ಸಂಖ್ಯೆ – 9 ಅದೃಷ್ಟ ಬಣ್ಣ – ಗುಲಾಬಿ ಬಣ್ಣ ಸಮಯ – ಬೆಳಿಗ್ಗೆ 10:15 ರಿಂದ ಮಧ್ಯಾನ 1:15ರವರೆಗೆ.

ವೃಷಭ ರಾಶಿ:- ಇಂದು ನಿಮಗೆ ಉತ್ತಮವಾದ ಬೆಳವಣಿಗೆಯ ದಿನ ವಾಗಿರಲಿದೆ. ಕಠಿಣ ಪರಿಶ್ರಮದ ಫಲವನ್ನು ಪಡೆಯುವ ಸಾಧ್ಯತೆ ಇದೆ. ಉದ್ಯೋಗಸ್ಥರು ಕಚೇರಿಯಲ್ಲಿ ಎಲ್ಲರ ಹೊಗಳಿಕೆಗೆ ಪಾತ್ರರಾಗುತ್ತಾರೆ. ಅಲ್ಲದೆ ನಿಮ್ಮ ಕೆಲವು ಪ್ರಮುಖ ಕಾರ್ಯಗಳು ಯಾವುದೇ ಅಡೆ-ತಡೆ ಇಲ್ಲದೆ ಪೂರ್ಣಗೊಳ್ಳುತ್ತದೆ. ಸಣ್ಣ ವ್ಯಾಪಾರಿಗಳಿಗೆ ಇಂದು ಲಾಭ ಉಂಟಾಗುತ್ತದೆ. ಅದೃಷ್ಟ ಸಂಖ್ಯೆ – 8 ಅದೃಷ್ಟ ಬಣ್ಣ – ಬಿಳಿ ಬಣ್ಣ ಸಮಯ – ಬೆಳಿಗ್ಗೆ 5:15 ರಿಂದ 8:30ರವರೆಗೆ.

ಮಿಥುನ ರಾಶಿ:- ಇಂದು ಕೆಲಸದಲ್ಲಿ ದಣಿವನ್ನು ಅನುಭವಿಸುತ್ತೀರಿ. ಕಚೇರಿಯಲ್ಲಿ ನಿಮ್ಮ ಕೆಲಸದ ಹೊರೆ ನಿಮ್ಮ ಒತ್ತಡವನ್ನು ಹೆಚ್ಚಿಸುತ್ತದೆ. ಒಂದು ಪ್ರಮುಖ ಕೆಲಸವನ್ನು ನಿರ್ವಹಿಸುವಲ್ಲಿ ವಿಳಂಬ ಆಗುವ ಸಾಧ್ಯತೆ ಇದೆ. ನಿಮ್ಮ ಬಾಸ್ ನಿಮ್ಮ ಮೇಲೆ ಕೋಪಗೊಳ್ಳಬಹುದು. ಇಂದು ನೀವು ಉಳಿತಾಯದ ಬಗ್ಗೆ ಹೆಚ್ಚು ಗಮನಹರಿಸುತ್ತೀರಿ. ಅದೃಷ್ಟ ಸಂಖ್ಯೆ – 6 ಅದೃಷ್ಟ ಬಣ್ಣ – ನೇರಳೆ ಬಣ್ಣ ಸಮಯ – ಬೆಳಗ್ಗೆ 10:15 ರಿಂದ ಮಧ್ಯಾನ 1:30 ರವರೆಗೆ.

ಕಟಕ ರಾಶಿ:- ಗ್ರಹಗಳ ಬದಲಾವಣೆಯಿಂದ ನಿಮ್ಮ ಕೆಲವು ಪ್ರಮುಖ ಕೆಲಸಗಳಲ್ಲಿ ಅಡ್ಡಿ ಉಂಟಾಗಬಹುದು. ಉದ್ಯೋಗಿಗಳಿಗೆ ಇಂದು ಅದೃಷ್ಟದ ದಿನವಾಗಿರಲಿದೆ. ನಿಮ್ಮ ಕೈಯಲ್ಲಿ ಉತ್ತಮ ಅವಕಾಶ ಇರಬಹುದು. ಅದನ್ನು ಸರಿಯಾಗಿ ಬಳಸಿಕೊಳ್ಳಿ. ಬಟ್ಟೆ ವ್ಯಾಪಾರಿಗಳು ಇಂದು ನಿರೀಕ್ಷಿತ ಫಲಿತಾಂಶವನ್ನು ಪಡೆಯಬಹುದು. ಇಂದು ಸಂಗಾತಿಯೊಂದಿಗೆ ಹೆಚ್ಚು ಸಮಯ ಕಳೆಯಲು ಬಯಸುತ್ತೀರಿ. ಅದೃಷ್ಟ ಸಂಖ್ಯೆ – 1 ಅದೃಷ್ಟ ಬಣ್ಣ – ಕೆಂಪು ಬಣ್ಣ ಸಮಯ – ಬೆಳಗ್ಗೆ 6:30 ರಿಂದ 9:45 ರವರೆಗೆ.

ಸಿಂಹ ರಾಶಿ:- ಸಮಾಜದಲ್ಲಿ ನಿಮ್ಮ ಗೌರವ ಹೆಚ್ಚಾಗುತ್ತದೆ. ಈ ದಿನ ಕುಟುಂಬ ಸದಸ್ಯರೊಂದಿಗೆ ಯಾವುದಾದರು ಸಾಮಾಜಿಕ ಕಾರ್ಯಕ್ರಮ ದಲ್ಲಿ ಭಾಗವಹಿಸಲು ಅವಕಾಶ ಸಿಗುತ್ತದೆ. ಪೋಷಕರೊಂದಿಗಿನ ಸಂಬಂಧವು ಬಲವಾಗಿರುತ್ತದೆ. ಬೇರೆಯವರಿಂದ ಪಡೆದ ಸಾಲವನ್ನು ಶೀಘ್ರದಲ್ಲಿ ತೀರಿಸಲು ಪ್ರಯತ್ನಿಸಿ. ಅದೃಷ್ಟ ಸಂಖ್ಯೆ – 8 ಅದೃಷ್ಟ ಬಣ್ಣ – ಹಸಿರು ಬಣ್ಣ ಸಮಯ – ಮಧ್ಯಾಹ್ನ 12:30 ರಿಂದ 3:45 ರವರೆಗೆ.

ಕನ್ಯಾ ರಾಶಿ:- ನೀವು ಮನೆಯಿಂದ ಕೆಲಸ ಮಾಡಿದರೆ ಉನ್ನತ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿ ಇರಬೇಕು. ಕುಟುಂಬ ಜೀವನದಲ್ಲಿ ಪರಿಸ್ಥಿತಿಗಳು ಅನುಕೂಲಕರವಾಗಿರುತ್ತದೆ. ಮನೆಯ ವಾತಾವರಣ ವರ್ಷಚಿತ್ತದಿಂದ ಕೂಡಿರುತ್ತದೆ. ಇದಕ್ಕಿದ್ದಂತೆ ಕೆಲವು ಅತಿಥಿಗಳು ಮನೆಗೆ ಬರಬಹುದು. ಹಣಕಾಸಿನ ಪರಿಸ್ಥಿತಿ ತೃಪ್ತಿಕರವಾಗಿರುತ್ತದೆ. ನಿಮ್ಮ ಆರೋಗ್ಯವು ಉತ್ತಮವಾಗಿರಲಿದೆ. ಅದೃಷ್ಟ ಸಂಖ್ಯೆ – 7 ಅದೃಷ್ಟ ಬಣ್ಣ – ಗುಲಾಬಿ ಬಣ್ಣ ಸಮಯ – ಬೆಳಿಗ್ಗೆ 6:15 ರಿಂದ 9:30ವರೆಗೆ.

ತುಲಾ ರಾಶಿ:- ಹೋಟೆಲ್ ಹಾಗೂ ರೆಸ್ಟೋರೆಂಟ್ ಕೆಲಸ ಮಾಡುವವರು ಹೋಟೆಲ್ ಸ್ವಚ್ಛತೆಯ ಬಗ್ಗೆ ಹೆಚ್ಚಿನ ಗಮನ ವಹಿಸಬೇಕಾಗುತ್ತದೆ. ಉದ್ಯೋಗಿಗಳು ತಮ್ಮ ಹಿರಿಯ ಅಧಿಕಾರಿಗಳೊಂದಿಗೆ ಉತ್ತಮವಾದ ಹೊಂದಾಣಿಕೆ ಹೊಂದಿರಬೇಕು. ಹಣಕಾಸಿನ ಪರಿಸ್ಥಿತಿ ಉತ್ತಮವಾಗಿರ ಲಿದೆ. ಇಂದು ನಿಮಗೆ ಬಿಡುವಿನ ಸಮಯ ಸಿಗಬಹುದು. ಅದೃಷ್ಟ ಸಂಖ್ಯೆ – 9 ಅದೃಷ್ಟ ಬಣ್ಣ – ಕಂದು ಬಣ್ಣ ಸಮಯ – ಮಧ್ಯಾಹ್ನ 3 ರಿಂದ ಸಂಜೆ 6:15 ರವರೆಗೆ.

ವೃಶ್ಚಿಕ ರಾಶಿ:- ಇಂದು ನಿಮಗೆ ಕಾರ್ಯನಿರತ ದಿನವಾಗಿರಲಿದೆ. ಇದಕ್ಕಿ ದ್ದಂತೆ ಹೆಚ್ಚು ಪ್ರಯಾಣಿಸಬೇಕಾಗಬಹುದು. ಸಾರಿಗೆಗೆ ಸಂಬಂಧಿಸಿದಂತೆ ಕೆಲಸ ಮಾಡುವವರಿಗೆ ಇಂದು ಉತ್ತಮ ದಿನವಲ್ಲ. ಇಂದು ನೀವು ಆರ್ಥಿ ಕ ನಷ್ಟವನ್ನು ಅನುಭವಿಸಬಹುದು. ಇಂದು ನೀವು ಸಾಲ ಪಡೆಯುವುದ ನ್ನು ಹಾಗೂ ಕೊಡುವುದನ್ನು ತಪ್ಪಿಸುವಂತೆ ಸೂಚಿಸಲಾಗಿದೆ. ಅದೃಷ್ಟ ಸಂಖ್ಯೆ – 2 ಅದೃಷ್ಟ ಬಣ್ಣ – ಬಿಳಿ ಬಣ್ಣ ಸಮಯ – ಸಂಜೆ 6:45 ರಿಂದ ರಾತ್ರಿ 10 ಗಂಟೆಯವರೆಗೆ.

ಧನಸ್ಸು ರಾಶಿ:- ಮನೆಯ ವಾತಾವರಣವನ್ನು ಹರ್ಷ ಚಿತ್ತದಿಂದ ಇರಿಸಲು ಕುಟುಂಬದವರೊಂದಿಗೆ ಉತ್ತಮವಾದ ಸಂಬಂಧವನ್ನು ಇಟ್ಟುಕೊಳ್ಳಿ. ಹಣಕಾಸಿನ ಪರಿಸ್ಥಿತಿಯನ್ನು ಸುಧಾರಿಸಲು ಸಾಧ್ಯವಾಗು ತ್ತದೆ. ಇಂದು ಕಚೇರಿಯಲ್ಲಿ ನಿಮ್ಮ ಬಾಸ್ ನ ಮನಸ್ಥಿತಿ ಸರಿಯಾಗಿ ಇರುವುದಿಲ್ಲ. ವ್ಯಾಪಾರಿಗಳು ಇಂದು ಯಾವುದೇ ದೊಡ್ಡ ಹೂಡಿಕೆ ಮಾಡುವುದು ಅಷ್ಟು ಸೂಕ್ತವಲ್ಲ. ಅದೃಷ್ಟ ಸಂಖ್ಯೆ – 8 ಅದೃಷ್ಟ ಬಣ್ಣ – ನೇರಳೆ ಬಣ್ಣ ಸಮಯ – ಬೆಳಗ್ಗೆ 8:45 ರಿಂದ ಮಧ್ಯಾಹ್ನ 12 ಗಂಟೆಯವರೆಗೆ.

ಮಕರ ರಾಶಿ:- ಕಚೇರಿಯಲ್ಲಿ ಬಾಕಿ ಇರುವ ಕೆಲಸದ ಪಟ್ಟಿ ಹೆಚ್ಚಾಗ ಬಹುದು. ನಿಮ್ಮ ಎಲ್ಲ ಕೆಲಸವನ್ನು ಆದಷ್ಟು ಬೇಗ ಪೂರ್ಣಗೊಳಿಸಲು ಪ್ರಯತ್ನಿಸಿ. ಇಲ್ಲದಿದ್ದರೆ ತೊಂದರೆಗೆ ಸಿಲುಕಬಹುದು. ಇಂದು ಮರದ ವ್ಯಾಪಾರ ಮಾಡುವವರು ಆರ್ಥಿಕವಾಗಿ ಲಾಭ ಪಡೆಯಬಹುದು. ಈ ದಿನ ನಿಮ್ಮ ಸಂಗಾತಿ ಉತ್ತಮವಾದ ಮನಸ್ಥಿತಿಯಲ್ಲಿ ಇರುತ್ತಾರೆ. ಅದೃಷ್ಟ ಸಂಖ್ಯೆ – 8 ಅದೃಷ್ಟ ಬಣ್ಣ – ಹಳದಿ ಬಣ್ಣ ಸಮಯ – ಬೆಳಗ್ಗೆ 7:30 ರಿಂದ 10:45 ರವರೆಗೆ.

ಕುಂಭ ರಾಶಿ:- ನಿಮ್ಮ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸಿ. ಈ ದಿನ ನಿಮ್ಮ ಸಂಗಾತಿಯೊಂದಿಗೆ ವಾದವನ್ನು ಮಾಡಬಹುದು. ಹಣಕಾಸಿನ ಪರಿಸ್ಥಿತಿಯು ಸಾಮಾನ್ಯಕ್ಕಿಂತ ಉತ್ತಮವಾಗಿರುತ್ತದೆ. ಹೊಸ ವ್ಯಾಪಾರ ವನ್ನು ಪ್ರಾರಂಭ ಮಾಡುವುದಿದ್ದರೆ ಇಂದು ಉತ್ತಮ ಸಮಯ ಅಲ್ಲ. ಸಂಗಾತಿಯ ಮಾತುಗಳಿಗೆ ಕಿವಿ ಕೊಡಬೇಕಾಗುತ್ತದೆ. ಕಟ್ಟು ಕಥೆಗಳು ಮತ್ತು ವದಂತಿಗಳಿಂದ ಆದಷ್ಟು ದೂರ ಇರಿ. ಅದೃಷ್ಟ ಸಂಖ್ಯೆ – 6 ಅದೃಷ್ಟ ಬಣ್ಣ – ನೀಲಿ ಬಣ್ಣ ಸಮಯ – ಸಂಜೆ 4:15 ರಿಂದ ರಾತ್ರಿ 7.30 ರವರೆಗೆ.

ಮೀನ ರಾಶಿ:- ನೀವು ಸರ್ಕಾರಿ ಕ್ಷೇತ್ರದಲ್ಲಿ ಕೆಲಸ ಮಾಡುವವರಿದ್ದರೆ ಇಂದು ಉತ್ತೇಜನವನ್ನು ಪಡೆಯಬಹುದು. ಇಂದು ಹಣಕಾಸು ವ್ಯವಹಾರ ಮಾಡುವವರು ಹೆಚ್ಚು ಜಾಗರೂಕರಾಗಿರಬೇಕು. ಕುಟುಂಬ ಜೀವನವು ಸಂತೋಷವಾಗಿರುತ್ತದೆ. ಆರ್ಥಿಕ ರಂಗದಲ್ಲಿ ದಿನವೂ ಪ್ರಯೋಜನಕಾರಿಯಾಗಲಿದೆ. ನಿಮ್ಮ ಸಂಗಾತಿಯೊಂದಿಗೆ ಇಂದು ಉತ್ತಮ ಸಮಯ ಕಳೆಯುತ್ತೀರಿ. ಅದೃಷ್ಟ ಸಂಖ್ಯೆ – 3 ಅದೃಷ್ಟ ಬಣ್ಣ – ಕಿತ್ತಳೆ ಬಣ್ಣ ಸಮಯ – ಬೆಳಗ್ಗೆ 9:00 ರಿಂದ ಮಧ್ಯಾಹ್ನ 12:15ರವರೆಗೆ.

By admin

Leave a Reply

Your email address will not be published. Required fields are marked *