ಮೀಟರ್ ಬಾಕ್ಸ್ ನೋಡಿ ಪ್ರತಿದಿನ ನಾವು ಎಷ್ಟು ಯೂನಿಟ್ ವಿದ್ಯುತ್ ಬಳಸುತ್ತಿದ್ದೇವೆ ಎಂದು ಲೆಕ್ಕ ಹಾಕುವುದು ಹೇಗೆ ಗೊತ್ತಾ?
ನಾವು ಪ್ರತಿದಿನ ಬಳಸುವ ಎಲ್ಲ ವಸ್ತುಗಳ ಲೆಕ್ಕಾಚಾರ ಇಡುತ್ತೇವೆ. ನಾವು ದಿನಕ್ಕೆ ಎಷ್ಟು ಲೀಟರ್ ನೀರು ಕುಡಿಯುತ್ತೇವೆ, ನಮ್ಮ ಮನೆಗೆ ದಿನಕ್ಕೆ ಎಷ್ಟು ಲೀಟರ್ ಹಾಲು ತರಬೇಕು, ಒಂದು ತಿಂಗಳಿಗೆ ನಮ್ಮ ಮನೆಗೆ ಎಷ್ಟು ರೇಷನ್ ಖರ್ಚಾಗುತ್ತದೆ, ಗಾಡಿಗೆ ಪೆಟ್ರೋಲ್ ಎಷ್ಟು ಹಾಕಿಸಬೇಕು, ಹೀಗೆ ಲೆಕ್ಕ ಹಾಕುವ ನಾವು ಪ್ರತಿದಿನವೂ ತಪ್ಪದೇ ಬರುವ ವಿದ್ಯುತ್ ಬಿಲ್ ಬಗ್ಗೆ ನಿರ್ಲಕ್ಷ ವಹಿಸುತ್ತೇವೆ.
ಶ್ರೀ ಬನಶಂಕರಿ ದೇವಿ ಜ್ಯೋತಿಷ್ಯ ಪೀಠಂ ಪ್ರಧಾನ ತಾಂತ್ರಿಕ್ ಶ್ರೀ ಗಣಪತಿ ಭಟ್ ಪೋನ್ – 9972030557.ಮಾಟಮಂತ್ರ,ಗಂಡ ಹೆಂಡತಿ ಕಲಹ,ಗುಪ್ತ ಸಮಸ್ಯೆಗಳು,ಹಣಕಾಸು,ಸಾಲಬಾಧೆ,ಪ್ರೀತಿ ಪ್ರೇಮ ವಿಚಾರ,ಶತ್ರು ಬಾಧೆ,ನಿಮ್ಮ ಜೀವನದಲ್ಲಿ ಏನೆ ಕಠಿಣ ಕಷ್ಟವಿದ್ದರೂ ಶೀಘ್ರವಾಗಿ ಪರಿಹಾರ ನೀಡಲಾಗುತ್ತದೆ ಈಗಲೆ ಕರೆ ಮಾಡಿ 9972030557
ಆದ್ದರಿಂದಲೇ ತಿಂಗಳಿಗೆ ಒಂದೊಂದು ರೀತಿಯ ವಿದ್ಯುತ್ ಬಿಲ್ ನಮಗೆ ಬರುತ್ತದೆ. ನಾವು ಪ್ರತಿದಿನ ಎಷ್ಟು ಯೂನಿಟ್ ವಿದ್ಯುತ್ ಬಳಸುತ್ತೇವೆ ಎಂದರೆ ತಕ್ಷಣವೇ ನಮಗೆ ಲೆಕ್ಕ ಹೇಳಲು ಬರುವುದಿಲ್ಲ. ಯಾಕೆಂದರೆ ನಾವು ಇದರ ಬಗ್ಗೆ ಗಮನವೇ ಕೊಟ್ಟಿರಲಿಲ್ಲ. ಒಂದು ಅಂದಾಜಿಗೆ ನಮ್ಮ ತಿಂಗಳಿಗೆ ಇಷ್ಟರಿಂದ ಇಷ್ಟು ವಿದ್ಯುತ್ ಬಿಲ್ ಬರುತ್ತದೆ ಎಂದು ಹೇಳುತ್ತೇವೆ ಹೊರತು ಆ ವಿದ್ಯುತ್ ಬಿಲ್ ನಾವು ಎಷ್ಟು ಯೂನಿಟ್ ಬಳಸಿದ್ದರಿಂದ ಬಂದಿದೆ ಎನ್ನುವ ಮಾಹಿತಿಯನ್ನು ತಿಳಿದುಕೊಳ್ಳುವ ಗೋಜಿಗೆ ನಾವು ಹೋಗಿರುವುದಿಲ್ಲ.
ಈಗ ಕಾಂಗ್ರೆಸ್ ಸರ್ಕಾರ ಹೇಳಿರುವ ಗೃಹಜ್ಯೋತಿ ಯೋಜನೆ ಬಗ್ಗೆ ಕೇಳಿದ ನಂತರ ಎಲ್ಲರೂ ಸಹ ತಮ್ಮ ಮನೆಯಲ್ಲಿ ಎಷ್ಟೆಷ್ಟು ಯೂನಿಟ್ ವಿದ್ಯುತ್ ಬಳಸುತ್ತಾರೆ ಎನ್ನುವುದನ್ನು ಲೆಕ್ಕ ಹಾಕಲು ಕುಳಿತಿದ್ದಾರೆ. ಕಾಂಗ್ರೆಸ್ ಸರ್ಕಾರವು ಅಧಿಕಾರಕ್ಕೆ ಬಂದರೆ ಮೊದಲನೇ ಗ್ಯಾರಂಟಿ ಕಾರ್ಡ್ ಆಗಿ ಗೃಹಜ್ಯೋತಿ ಯೋಜನೆ ಅಡಿ ಪ್ರತಿ ಕುಟುಂಬಕ್ಕೂ 200 ಯೂನಿಟ್ ವಿದ್ಯುತ್ ಉಚಿತವಾಗಿ ಕೊಟ್ಟು ಕರ್ನಾಟಕವನ್ನು ಕತ್ತಲೆ ಮುಕ್ತ ಮಾಡುವುದಾಗಿ ಹೇಳಿತ್ತು.
ಈಗ ಕೊಟ್ಟಿದ್ದ ಮಾತಿಗೆ ಬದ್ಧವಾಗಿ ನಡೆದುಕೊಂಡು ತಮ್ಮದು ನೋಡಿದಂತೆ ನಡೆಯುವ ಸರ್ಕಾರ ಎಂದು ಹೇಳಿ ಅದಕ್ಕೆ ಆದೇಶ ಪತ್ರವನ್ನು ಕೂಡ ಹೊರಡಿಸಿದೆ. ಹಾಗಾಗಿ ಎಲ್ಲರೂ ತಾವು ಎಷ್ಟು ವಿದ್ಯುತ್ ಖರ್ಚು ಮಾಡುತ್ತೇವೆ ಎನ್ನುವುದರ ಬಗ್ಗೆ ಗಮನ ಹರಿಸುತ್ತಿದ್ದಾರೆ.
ನಾವು ನಮ್ಮ ಹಳೆಯ ಕರೆಂಟ್ ಬಿಲ್ ತೆಗೆದುಕೊಂಡು ನೋಡಿದರೆ ಹಿಂದಿನ ತಿಂಗಳು ನಾವು ಎಷ್ಟು ಯೂನಿಟ್ ವಿದ್ಯುತ್ ಖರ್ಚು ಮಾಡಿದ್ದೆವು ಎನ್ನುವ ಲೆಕ್ಕ ನಮಗೆ ಸಿಗುತ್ತದೆ. ಅದು ಮಾತ್ರ ಅಲ್ಲದೆ ಮೀಟರ್ ಬಾಕ್ಸ್ ನೋಡಿ ಕೂಡ ನಾವು ಎಷ್ಟು ವಿದ್ಯುತ್ ಖರ್ಚು ಮಾಡಿದ್ದೇವೆ ಎನ್ನುವುದನ್ನು, ಪ್ರತಿದಿನ ಎಷ್ಟು ಯೂನಿಟ್ ವಿದ್ಯುತ್ ಖರ್ಚಾಗುತ್ತಿದೆ ಎನ್ನುವುದನ್ನು ಕೂಡ ಸುಲಭವಾಗಿ ತಿಳಿದುಕೊಳ್ಳಬಹುದು.
ಹಿಂದೆಲ್ಲಾ ಮೀಟರ್ ಬಾಕ್ಸ್ ಅಲ್ಲಿ ವೀಲ್ ರೂಪದಲ್ಲಿ ವಿದ್ಯುತ್ ರೀಡ್ ಆಗುವುದು ನೋಡುತ್ತಿದ್ದೆವು. ಈಗ ಎಲ್ಲವೂ ಡಿಜಿಟಲ್ ಮಯ ಆಗಿರುವುದರಿಂದ ಈಗ ಡಿಜಿಟಲ್ ರೂಪದಲ್ಲಿದೆ. ಕರೆಂಟ್ ಎಷ್ಟು ಬಳಕೆ ಆಗುತ್ತಿದೆ ಎನ್ನುವುದರ ಸ್ಪಷ್ಟ ಲೆಕ್ಕ ಸಿಗುತ್ತದೆ. ಒಂದು ಐದು ನಿಮಿಷ ಮೀಟರ್ ಬಾಕ್ಸ್ ಎದುರು ನಿಂತು ಅದರಲ್ಲಿ ಬರುವ ಸಂಖ್ಯೆಗಳನ್ನು ಗಮನಿಸಿದರೆ ಅಂದಿನ ದಿನಾಂಕ ಏನು ಎನ್ನುವುದು ಮೀಟರ್ ಬಾಕ್ಸ್ ಮೇಲೆ ಸಂಖ್ಯೆಗಳಲ್ಲಿ ಕಾಣುತ್ತದೆ.