ಹಣದ ಪರಿಸ್ಥಿತಿಯಲ್ಲಿ ಈ 4 ರಾಶಿಗೆ ಇಂದು ಚೇತರಿಕೆ ಬರಬೇಕಾದ ಹಣ ಕೈ ಸೇರಲಿದೆ ಚೌಡೇಶ್ವರಿ ದೇವಿಯ ಕೃಪೆ - Karnataka's Best News Portal

ಹಣದ ಪರಿಸ್ಥಿತಿಯಲ್ಲಿ ಈ 4 ರಾಶಿಗೆ ಇಂದು ಚೇತರಿಕೆ ಬರಬೇಕಾದ ಹಣ ಕೈ ಸೇರಲಿದೆ ಚೌಡೇಶ್ವರಿ ದೇವಿಯ ಕೃಪೆ

ಮೇಷ ರಾಶಿ:- ಈ ದಿನ ನಿಮ್ಮ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿಯನ್ನು ವಹಿಸಬೇಕಾಗುತ್ತದೆ. ಅಗತ್ಯಕ್ಕಿಂತ ಹೆಚ್ಚು ಖರ್ಚು ಮಾಡುವುದನ್ನು ತಪ್ಪಿಸಿ. ಈ ದಿನ ಕುಟುಂಬ ಜೀವನದಲ್ಲಿ ಸಂತೋಷ ಮತ್ತು ಶಾಂತಿ ಇರುತ್ತದೆ. ಪ್ರತಿಕೂಲ ಸಂದರ್ಭದಲ್ಲಿ ನಿಮ್ಮ ಪ್ರೀತಿ ಪಾತ್ರರ ಸಂಪೂರ್ಣ ಬೆಂಬಲವನ್ನು ನೀವು ಪಡೆಯುತ್ತೀರಿ. ಈ ದಿನ ಹಣದ ವಿಚಾರವಾಗಿ ಬೇರೆಯವರೊಂದಿಗೆ ವಿವಾದ ಹೊಂದಿರಬಹುದು. ಅದೃಷ್ಟ ಸಂಖ್ಯೆ – 2 ಅದೃಷ್ಟ ಬಣ್ಣ – ಕೇಸರಿ ಬಣ್ಣ ಸಮಯ – ಸಂಜೆ 4:30 ರಿಂದ ರಾತ್ರಿ 9:00ಯವರೆಗೆ.

WhatsApp Group Join Now
Telegram Group Join Now

ವೃಷಭ ರಾಶಿ:- ನಿಮ್ಮ ಸ್ವಭಾವದಲ್ಲಿ ಸ್ವಲ್ಪ ಬದಲಾವಣೆಯನ್ನು ಮಾಡಿಕೊಂಡರೆ ನಿಮಗೆ ಬರುವ ಅನೇಕ ತೊಂದರೆಗಳನ್ನು ನೀವು ನಿವಾರಿಸಬಹುದು. ಈ ದಿನ ನೀವು ಆರಾಮಾಗಿ ಕೆಲಸ ಮಾಡಿದರೆ ಕುಟುಂಬ ಸದಸ್ಯರೊಂದಿಗೆ ಉತ್ತಮ ಸಂಬಂಧವನ್ನು ಹೊಂದಿರ ಬಹುದು. ಈ ದಿನ ನಿಮ್ಮ ಮಕ್ಕಳ ಬಗ್ಗೆ ಹೆಚ್ಚು ಗಮನ ಹರಿಸಬೇಕು. ಅದೃಷ್ಟ ಸಂಖ್ಯೆ – 1 ಅದೃಷ್ಟ ಬಣ್ಣ – ಕೆಂಪು ಬಣ್ಣ ಸಮಯ – ಬೆಳಿಗ್ಗೆ 6:30 ರಿಂದ ಮಧ್ಯಾಹ್ನ 12 ಗಂಟೆಯವರೆಗೆ.

ಮಿಥುನ ರಾಶಿ:- ಹಣದ ವಿಷಯವಾಗಿ ಈ ದಿನ ನಿಮಗೆ ಮಿಶ್ರಫಲದ ದಿನವಾಗಿರುತ್ತದೆ. ನಿಮ್ಮ ಆದಾಯದಲ್ಲಿ ಹೆಚ್ಚಳ ಆಗಬೇಕು ಎಂದರೆ ನಿಮ್ಮ ಖರ್ಚನ್ನು ಆದಷ್ಟು ನಿಯಂತ್ರಣದಲ್ಲಿ ಇಟ್ಟುಕೊಳ್ಳಬೇಕಾಗುತ್ತದೆ. ಹಣದ ವಿಷಯವಾಗಿ ಇಂದು ನಿಮ್ಮ ಸಂಗಾತಿಯೊಂದಿಗೆ ವಾದವನ್ನು ಹೊಂದಿರಬಹುದು. ನಿಮ್ಮ ಪದವನ್ನು ಬುದ್ಧಿವಂತಿಕೆಯಿಂದ ಬಳಸುವುದು ಉತ್ತಮ. ಅದೃಷ್ಟ ಸಂಖ್ಯೆ – 3 ಅದೃಷ್ಟ ಬಣ್ಣ – ಕೆಂಪು ಬಣ್ಣ ಸಮಯ – ಸಂಜೆ 6 ಗಂಟೆಯಿಂದ ರಾತ್ರಿ 9:00 ಗಂಟೆಯವರೆಗೆ.

See also  ವಾಸ್ತು ಪ್ರಕಾರವಾಗಿ ಟಿವಿ,ಫ್ರಿಡ್ಜ್,ಸೋಫಾ,ಈ ವಿಧವಾಗಿ ಜೋಡಿಸಿಕೊಂಡರೆ ಎಲ್ಲಿಲ್ಲದ ಅದೃಷ್ಟ ಕೂಡಿ ಬರುತ್ತದೆ..

ಕಟಕ ರಾಶಿ:- ವ್ಯಾಪಾರಸ್ಥರು ಇಂದು ಹಣಕಾಸು ವಿಚಾರದಲ್ಲಿ ಸ್ವಲ್ಪ ಜಾಗರೂಕತೆಯನ್ನು ವಹಿಸಬೇಕಾಗುತ್ತದೆ. ನೀವೇನಾದರೂ ಸಾಲ ಪಡೆದುಕೊಳ್ಳುತ್ತಿದ್ದರೆ ಆದಷ್ಟು ಎಚ್ಚರಿಕೆಯಿಂದ ತೆಗೆದುಕೊಳ್ಳಿ. ಹಾಗೂ ವಿಪರೀತವಾಗಿ ಸಾಲ ಮಾಡುವುದನ್ನು ತಪ್ಪಿಸಿ. ಈ ದಿನ ನಿಮ್ಮ ಸಂಗಾತಿಯೊಂದಿಗೆ ಕೆಲವೊಂದಷ್ಟು ಕಹಿ ಸಂದರ್ಭಗಳು ಹೆಚ್ಚಾಗಬಹುದು. ಅದೃಷ್ಟ ಸಂಖ್ಯೆ – 1 ಅದೃಷ್ಟ ಬಣ್ಣ – ನೀಲಿ ಬಣ್ಣ ಸಮಯ – ಬೆಳಗ್ಗೆ 6:00 ಯಿಂದ 11:30ವರೆಗೆ.

ಸಿಂಹ ರಾಶಿ:- ಈ ದಿನ ನೀವು ನಿಮ್ಮ ಸಮಯಕ್ಕೆ ಹೆಚ್ಚಿನ ಗೌರವವನ್ನು ಕೊಡಬೇಕು. ಕೆಲಸದಲ್ಲಿ ಈ ದಿನ ಆರಂಭದಲ್ಲಿ ಉತ್ತಮವಾಗಿರುತ್ತದೆ. ನೀವು ಕಷ್ಟಪಟ್ಟು ಕೆಲಸ ಮಾಡಬೇಕಾಗುತ್ತದೆ. ಕಚೇರಿಯಲ್ಲಿ ನೀವು ಸಣ್ಣ ಕೆಲಸ ಮಾಡುತ್ತಿದ್ದರೆ ಹೆಚ್ಚು ಶ್ರಮಪಟ್ಟು ಕೆಲಸದ ಕಡೆ ಗಮನ ಕೊಡಬೇಕಾಗುತ್ತದೆ. ಕುಟುಂಬ ಜೀವನವು ಇಂದು ಸಂತೋಷ ಮತ್ತು ಶಾಂತಿಯಿಂದ ಇರುತ್ತದೆ. ಅದೃಷ್ಟ ಸಂಖ್ಯೆ – 5 ಅದೃಷ್ಟ ಬಣ್ಣ – ಬಿಳಿ ಬಣ್ಣ ಸಮಯ – ಬೆಳಿಗ್ಗೆ 7:30ರಿಂದ ಮಧ್ಯಾಹ್ನ 12:30 ವರೆಗೆ.

ಕನ್ಯಾ ರಾಶಿ:- ಇಂದು ಸಾಕಷ್ಟು ಖಿನ್ನತೆ ಮತ್ತು ತೊಡಕುಗಳನ್ನು ಅನುಭವಿಸುತ್ತೀರಿ. ಇಂದು ನಿಮ್ಮ ಮೇಲೆ ಹೆಚ್ಚಿನ ಕೆಲಸದ ಹೊರೆ ಹಾಕುವುದನ್ನು ತಪ್ಪಿಸಬೇಕು ಇಲ್ಲವಾದರೆ ಅದು ನಿಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಪೋಷಕರು ಈ ದಿನ ತಾಳ್ಮೆಯಿಂದ ಕೆಲಸ ಮಾಡುವಂತೆ ಸೂಚಿಸಲಾಗಿದೆ. ಈ ದಿನ ನೀವು ಮಾನಸಿಕವಾಗಿ ಉತ್ತಮವಾಗಿರುತ್ತೀರಿ. ಅದೃಷ್ಟ ಸಂಖ್ಯೆ – 4 ಅದೃಷ್ಟ ಬಣ್ಣ – ಹಸಿರು ಬಣ್ಣ ಸಮಯ – ಸಂಜೆ 6 ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ.

See also  ಏಪ್ರಿಲ್ ಒಂದರಿಂದ ಈ ನಾಲ್ಕು ರಾಶಿಯವರಿಗೆ ಅದೃಷ್ಟವೋ ಅದೃಷ್ಟ.. ನಿಮ್ಮ ರಾಶಿ ಇದೆಯಾ ಚೆಕ್ ಮಾಡಿಕೊಳ್ಳಿ

ತುಲಾ ರಾಶಿ:- ಇಂದು ನೀವು ಕಡಿಮೆ ಶ್ರಮದಿಂದ ಉತ್ತಮವಾದ ಯಶಸ್ಸನ್ನು ಪಡೆಯಬಹುದು. ಈ ದಿನ ವ್ಯಾಪಾರ ಮಾಡಿದರೆ ಉತ್ತಮವಾದ ಲಾಭಗಳಿಸುವ ಅವಕಾಶ ಸಿಗುತ್ತದೆ. ಹಣಕಾಸಿನ ಸಮಸ್ಯೆಗಳು ಬಗೆಹರಿಯುತ್ತದೆ. ಉದ್ಯೋಗಸ್ಥರು ಬಾಕಿ ಇರುವ ಕೆಲಸವನ್ನು ಪೂರ್ಣಗೊಳಿಸಲು ಹೆಚ್ಚು ಶ್ರಮ ವಹಿಸಬೇಕಾಗುತ್ತದೆ. ಅದೃಷ್ಟ ಸಂಖ್ಯೆ – 5 ಅದೃಷ್ಟ ಬಣ್ಣ – ನೀಲಿ ಬಣ್ಣ ಸಮಯ – ಸಂಜೆ 5:00ಯಿಂದ ರಾತ್ರಿ 7:30ವರೆಗೆ.

ವೃಶ್ಚಿಕ ರಾಶಿ:- ನೀವೇನಾದರೂ ಸರ್ಕಾರಿ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದರೆ ಈ ದಿನ ಬಹಳ ಮುಖ್ಯವಾದ ದಿನವಾಗಿರುತ್ತದೆ. ನಿಮಗೆ ಬೇಕಾದ ಕಡೆ ವರ್ಗಾವಣೆ ಪಡೆಯುವ ಸಾಧ್ಯತೆ ಇದೆ. ನಿಮ್ಮ ಮೇಲಾಧಿಕಾರಿಗಳು ನಿಮ್ಮ ಮೇಲೆ ಹೆಚ್ಚಿನ ಗಮನ ಹರಿಸಿರುತ್ತಾರೆ. ವ್ಯಾಪಾರಸ್ಥರು ಇಂದು ಉತ್ತಮವಾದ ಆರ್ಥಿಕ ಲಾಭ ಪಡೆಯಬಹುದು. ಅದೃಷ್ಟ ಸಂಖ್ಯೆ – 1 ಅದೃಷ್ಟ ಬಣ್ಣ – ಕೇಸರಿ ಬಣ್ಣ ಸಮಯ – ಬೆಳಗ್ಗೆ 6:30 ರಿಂದ ಮಧ್ಯಾಹ್ನ 1:30 ರವರೆಗೆ.

ಧನಸ್ಸು ರಾಶಿ:- ಈ ದಿನ ನೀವು ನಿಮ್ಮ ಕೆಲಸದ ಕಡೆ ಹೆಚ್ಚಿನ ಗಮನ ಕೊಡಬೇಕು. ಈ ಸಮಯದಲ್ಲಿ ನಿಮ್ಮ ಸಣ್ಣ ಕೆಲಸವನ್ನು ಬಹಳ ಎಚ್ಚರಿಕೆಯಿಂದ ಮಾಡಬೇಕಾಗುತ್ತದೆ. ಬಟ್ಟೆ ಉದ್ಯಮ ಮಾಡುವವರು ಈ ದಿನ ಹೆಚ್ಚಿನ ಲಾಭ ಪಡೆಯಬಹುದು. ಈ ದಿನ ನಿಮ್ಮ ಮನೆಯ ವಾತಾವರಣ ಅಷ್ಟೇನೂ ಚೆನ್ನಾಗಿರುವುದಿಲ್ಲ. ಮನೆಯ ಹಿರಿಯ ರೊಂದಿಗೆ ನಿಮ್ಮ ಸಂಬಂಧ ಹದಗೆಡಬಹುದು. ಅದೃಷ್ಟ ಸಂಖ್ಯೆ – 9 ಅದೃಷ್ಟ ಬಣ್ಣ – ಹಳದಿ ಬಣ್ಣ ಸಮಯ – ಸಂಜೆ 5:30 ರಿಂದ ರಾತ್ರಿ 8 ಗಂಟೆಯವರೆಗೆ.

See also  ಮಹಾಲಕ್ಷ್ಮಿ ಮನೆ ಬಿಟ್ಟು ಹೋಗುವುದಕ್ಕಿಂತ ಮುಂಚೆ ಕೆಲವು ಸೂಚನೆಗಳು ಕೊಡುತ್ತಾಳೆ ನಂತರವೇ ಮನೆಗೆ ಕಷ್ಟ ದಾರಿದ್ರ್ಯ ಬರುತ್ತೆ

ಮಕರ ರಾಶಿ:- ನೀವೇನಾದರೂ ಮಾರ್ಕೆಟ್ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದರೆ ಇಂದು ಕೆಲವು ಪ್ರಮುಖ ನಿರ್ಧಾರಗಳನ್ನು ತೆಗೆದು ಕೊಳ್ಳಬೇಕಾಗುತ್ತದೆ. ಈ ದಿನ ಉದ್ಯೋಗಿಗಳಿಗೆ ಕೆಲವು ಸವಾಲುಗಳು ಸಹ ಎದುರಾಗಬಹುದು. ಸಂಗಾತಿಯೊಂದಿಗೆ ನಿಮ್ಮ ಸಂಬಂಧ ಸುಧಾರಿಸಲು ಪ್ರಯತ್ನಿಸಿ. ಈ ದಿನ ವಿದ್ಯಾರ್ಥಿಗಳಿಗೆ ತುಂಬಾ ಶುಭ ದಿನವಾಗಿರುತ್ತದೆ. ಅದೃಷ್ಟ ಸಂಖ್ಯೆ – 6 ಅದೃಷ್ಟ ಬಣ್ಣ – ನೀಲಿ ಬಣ್ಣ ಸಮಯ – ಬೆಳಿಗ್ಗೆ 8 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ

ಕುಂಭ ರಾಶಿ:- ಈ ದಿನ ನಿಮ್ಮ ಎಲ್ಲಾ ಗಮನವು ನಿಮ್ಮ ಆರ್ಥಿಕ ಪರಿಸ್ಥಿತಿಯ ಮೇಲೆ ಇರುತ್ತದೆ. ಈ ದಿನ ನಿಮ್ಮ ಯೋಜನೆಗಳನ್ನು ಸಹ ಬದಲಾಯಿಸಬಹುದು. ಬೇರೆಯವರಿಂದ ಸಾಲ ತೆಗೆದುಕೊಳ್ಳುವುದನ್ನು ತಪ್ಪಿಸುವಂತೆ ಸೂಚಿಸಲಾಗಿದೆ. ಇಲ್ಲದಿದ್ದರೆ ನಿಮ್ಮ ಮೇಲೆ ಒತ್ತಡ ಹೆಚ್ಚಾಗಬಹುದು. ಇತರರ ನಿರ್ಧಾರದಿಂದ ಯಾವುದೇ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳದಂತೆ ಸೂಚಿಸಲಾಗಿದೆ. ಅದೃಷ್ಟ ಸಂಖ್ಯೆ – 4 ಅದೃಷ್ಟ ಬಣ್ಣ – ಬಿಳಿ ಬಣ್ಣ ಸಮಯ – ಬೆಳಗ್ಗೆ 7 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ.

ಮೀನ ರಾಶಿ:- ಇಂದು ನಿಮ್ಮ ಉದ್ಯೋಗ ಕ್ಷೇತ್ರದಲ್ಲಿ ಕೆಲವು ಬದಲಾವಣೆಗಳು ಆಗುವ ಸಾಧ್ಯತೆ ಇದೆ. ಸಕಾರಾತ್ಮಕ ಫಲಿತಾಂಶವನ್ನು ಪಡೆಯುವ ಹೆಚ್ಚಿನ ಅವಕಾಶ ಸಿಗುತ್ತದೆ. ಈ ದಿನ ಹಣಕಾಸಿನ ಪರಿಸ್ಥಿತಿ ಉತ್ತಮವಾಗಿರುತ್ತದೆ. ಮನೆಯ ಸದಸ್ಯರೊಂದಿಗೆ ಈ ದಿನ ಉತ್ತಮ ವಾದ ಸಂಬಂಧ ಹೊಂದಿರುತ್ತೀರಿ. ಅದೃಷ್ಟ ಸಂಖ್ಯೆ – 1 ಅದೃಷ್ಟ ಬಣ್ಣ – ನೀಲಿ ಬಣ್ಣ ಸಮಯ – ಸಂಜೆ 4:30 ರಿಂದ ರಾತ್ರಿ 7:30ರ ವರೆಗೆ.

[irp]


crossorigin="anonymous">