ನಿಮ್ಮ ಮೂಳೆ ಹಾಗೂ ನರಗಳಲ್ಲಿ ಸ್ಟ್ರೆಂಥ್ ಹೆಚ್ಚಿಸಲು ಈ ಮನೆ ಮದ್ದುಗಳನ್ನು ಫಾಲೋ ಮಾಡಿ…
ದೇಹದಲ್ಲಿ ಮೂಳೆಗಳು ಆರೋಗ್ಯವಾಗಿದ್ದಾಗ ಗಟ್ಟಿಯಾಗಿದ್ದಾಗ ನರಗಳಲ್ಲಿ ಶಕ್ತಿ ಇದ್ದಾಗ ಮಾತ್ರ ದೇಹ ಚೈತನ್ಯದಿಂದ ಕೂಡಿರುತ್ತದೆ. ಇಲ್ಲವಾದಲ್ಲಿ ಪದೇಪದೇ ಸುಸ್ತಾಗುವುದು, ಯಾವುದರಲ್ಲೂ ಆಸಕ್ತಿಯೇ ಇಲ್ಲದಿರುವುದು, ಕೈಕಾಲು ನೋವು, ಮೂಳೆ ನೋವು, ಮಂಡಿ ನೋವು, ಬೆನ್ನು ನೋವು, ಇಂತಹ ಆರೋಗ್ಯ ಸಮಸ್ಯೆಗಳು ಬಾಧಿಸುತ್ತವೆ. ಹಾಗಾಗಿ ದೇಹದಲ್ಲಿ ಮೂಳೆಗಳಿಗೆ ನರಗಳಿಗೆ ಶಕ್ತಿ ಇರಬೇಕು ಎಂದರೆ ದೇಹದಲ್ಲಿ ಕ್ಯಾಲ್ಸಿಯಂ ಪ್ರಮಾಣ ಬ್ಯಾಲೆನ್ಸಿಂಗ್ ಆಗಿರಬೇಕು.
ದೇಹದಲ್ಲಿ ಕ್ಯಾಲ್ಸಿಯ ಪ್ರಮಾಣ ಕುಂಠಿತವಾದಾಗ ಮೂಳೆಗಳು ಸವೆಯುತ್ತವೆ. ಮೂಳೆಗಳಲ್ಲಿ ಶಕ್ತಿ ಕುಂದುತ್ತದೆ ಇದು ಗಂಭೀರವಾದಾಗ ಮೂಳೆಗಳ ಕ್ಯಾನ್ಸರ್ ಕೂಡ ಕಾಣಿಸಿಕೊಳ್ಳಬಹುದು, ಇದನ್ನು ತಪ್ಪಿಸಲು ಕ್ಯಾಲ್ಸಿಯಂ ಅನ್ನು ನೈಸರ್ಗಿಕವಾಗಿ ಹೆಚ್ಚಿಸಿಕೊಳ್ಳುವಂತಹ ಆಹಾರ ಪದಾರ್ಥಗಳನ್ನು ಸೇವನೆ ಮಾಡಬೇಕು.
ದೇಹದಲ್ಲಿ ಕ್ಯಾಲ್ಸಿಯಂ ಪ್ರಮಾಣ ಹೆಚ್ಚಿಸಲು ಮೂರು ತಿಂಗಳಿನವರೆಗೆ ಈಗ ನಾವು ಹೇಳುವ ಈ ಆಹಾರ ಪದಾರ್ಥಗಳನ್ನು ಮನೆಮದ್ದುಗಳು ಎಂದುಕೊಂಡು ಸೇವನೆ ಮಾಡಿ. ಆದರೆ ಮೂರು ತಿಂಗಳಿನ ನಂತರ ಇದನ್ನು ಕ್ರಮೇಣವಾಗಿ ಕಡಿಮೆ ಮಾಡಿಕೊಳ್ಳುತ್ತಾ ಬರಬೇಕು. ಇಲ್ಲವಾದರೆ ದೇಹಕ್ಕೆ ಇದು ಹ್ಯಾಬಿಟ್ ಆಗಿ ಅದು ಮತ್ತೊಂದು ರೀತಿಯ ಅಡ್ಡ ಪರಿಣಾಮ ಆಗಬಹುದು. ಕ್ಯಾಲ್ಸಿಯಂ ಹೆಚ್ಚಿಸುವ ಆಹಾರ ಪದಾರ್ಥಗಳ ಪಟ್ಟಿ ಹೀಗಿದೆ ನೋಡಿ.
ಪಾಲಕ್ ಸೊಪ್ಪು, ನುಗ್ಗೆ ಸೊಪ್ಪು, ಮೆಂತ್ಯೆಸೊಪ್ಪುಗಳ ಜ್ಯೂಸ್ ಮತ್ತು ಪಲ್ಯ ತಿನ್ನುವುದರಿಂದ ಕ್ಯಾಲ್ಸಿಯಂ ಹೆಚ್ಚುತ್ತದೆ. ಸೀತಾಫಲ, ರಾಮ ಫಲ, ಬಾಳೆಹಣ್ಣು ಮತ್ತು ವಿಟಮಿನ್ ಸಿ ಅಂಶ ಹೇರಳವಾಗಿ ಉಳ್ಳ ಕಿತ್ತಳೆ ಮೂಸಂಬಿ ಪೈನಾಪಲ್ ದ್ರಾಕ್ಷಿ ಈ ರೀತಿ ಹಣ್ಣುಗಳನ್ನು ಸೇವನೆ ಮಾಡುವುದರಿಂದ ಕೂಡ ದೇಹದಲ್ಲಿ ಕ್ಯಾಲ್ಸಿಯ ಪ್ರಮಾಣ ಉತ್ಪತ್ತಿ ಆಗಲು ಸಹಾಯವಾಗುತ್ತದೆ.
ಸೋರೆಕಾಯಿ, ಬೂದುಗುಂಬಳಕಾಯಿ ಈ ರೀತಿ ತರಕಾರಿಗಳನ್ನು ಜ್ಯೂಸ್ ಮಾಡಿಕೊಂಡು ಅಥವಾ ಪಲ್ಯ ಮಾಡಿಕೊಂಡು ಹೇರಳವಾಗಿ ಸೇವಿಸುವುದರಿಂದ ಕೂಡ ಕ್ಯಾಲ್ಸಿಯಂ ಪ್ರಮಾಣ ಹೆಚ್ಚಾಗುತ್ತದೆ. ಎಲ್ಲ ರೀತಿಯ ಸಿರಿಧಾನ್ಯಗಳ ಸೇವನೆಯಿಂದ ಮತ್ತು ರಾಗಿ ಜೋಳ ಇವುಗಳ ಸೇವನೆಯಿಂದ ಕೂಡ ದೇಹದಲ್ಲಿ ಕ್ಯಾಲ್ಸಿಯಂ ಪ್ರಮಾಣ ಬ್ಯಾಲೆನ್ಸಿಂಗ್ ಆಗಿರುತ್ತದೆ.
ದ್ರಾಕ್ಷಿ ಗೋಡಂಬಿ ಬಾದಾಮಿ ಖರ್ಜೂರ ಮುಂತಾದ ಡ್ರೈ ಫ್ರೂಟ್ ಗಳನ್ನು ನೆನೆಸಿ ತಿನ್ನುವುದರಿಂದ ಕೂಡ ಕ್ಯಾಲ್ಸಿಯಂ ಪ್ರಮಾಣ ಹೆಚ್ಚಾಗುತ್ತದೆ. ಪ್ರತಿದಿನ ಊಟ ಆದ ಬಳಿಕ ಒಂದು ಲೋಟ ಹಾಲು ಸೇವಿಸುವುದರಿಂದ ಜೊತೆಗೆ ಊಟದಲ್ಲಿ ತುಪ್ಪವನ್ನು ಬಳಸುವುದರಿಂದ ಕೂಡ ದೇಹಕ್ಕೆ ಕ್ಯಾಲ್ಸಿಯಂ ಪ್ರಮಾಣ ಸೇರುತ್ತದೆ. ದಿನದಲ್ಲಿ ಒಮ್ಮೆಯಾದರೂ ಎಲೆ ಅಡಿಕೆ ಜೊತೆ ಎರಡು ಗ್ರಾಂ ಸುಣ್ಣ ಮತ್ತು ಸೋಂಪು ಕಾಳು ಸೇರಿಸಿ ತಿನ್ನುವುದರಿಂದ ಕೂಡ ಕ್ಯಾಲ್ಸಿಯಂ ಪ್ರಮಾಣ ಹೆಚ್ಚಾಗುತ್ತದೆ. ಕಮಲದ ಹೂಗಳನ್ನು ತುಪ್ಪದಲ್ಲಿ ಹುರಿದು ಹಾಲಿನಲ್ಲಿ ಬೇಯಿಸಿ ಬೆಲ್ಲದ ಸೇರಿಸಿ ತಿನ್ನುವುದರಿಂದ ಕೂಡ ಕ್ಯಾಲ್ಸಿಯಂ ಪ್ರಮಾಣ ಹೆಚ್ಚಾಗುತ್ತದೆ. ಇವುಗಳನ್ನು ಪಾಲಿಸಿ, ಆರೋಗ್ಯವನ್ನು ಉತ್ತಮವಾಗಿಟ್ಟುಕೊಳ್ಳಿ.