ಭೂಮಿಯನ್ನೇ ನಾಶ ಮಾಡೋ ಬಾಂಬ್ ಕಂಡುಹಿಡಿದವ ಭಗವದ್ಗೀತೆ ಓದಿದ್ಯಾಕೆ ಗೊತ್ತಾ ? - Karnataka's Best News Portal
https://adulateearring.com/t77pg9f0bn?key=27d0eac1279d1d54f242ce019dac0514

ಭೂಮಿಯನ್ನೇ ನಾಶಮಾಡೋ ಆಟಂ ಬಾಂಬ್ ಕಂಡುಹಿಡಿದ ವ್ಯಕ್ತಿ….!!

ಈಗ ನಾವು ಹೇಳುತ್ತಿರುವಂತಹ ಈ ವ್ಯಕ್ತಿ ಯಾರು ಎಂದು ನಿಮಗೆ ಗೊತ್ತಿಲ್ಲದಿರಬಹುದು. ಈ ವ್ಯಕ್ತಿಯ ಹೆಸರು ಜೆ ರಾಬರ್ಟ್ ಓಪನ್ ಹೈಮರ್ ಈ ವ್ಯಕ್ತಿಯ ಹೆಸರನ್ನು ನೀವು ನಿಮ್ಮ ಶಾಲಾ ಸಮಯದಲ್ಲಿ ಕೇಳಿದ್ದರೂ ಸಹ ಅಷ್ಟೊಂದು ಈ ಹೆಸರು ನಿಮಗೆ ನೆನಪಿನಲ್ಲಿ ಇಲ್ಲದೆ ಇರಬಹುದು. ಅಷ್ಟಕ್ಕೂ ಈ ವ್ಯಕ್ತಿ ಯಾರು? ಎಂದರೆ

ಯಾವ ಹೆಸರನ್ನು ಹೇಳಿದರೆ ಭೂಮಿಯ ಮೇಲೆ ಇರುವಂತಹ ಪ್ರತಿಯೊಂದು ದೇಶ ಹೆದರುತ್ತದೆಯೋ ಯಾವುದರ ಬಗ್ಗೆ ಅಮೇರಿಕಾ ರಷ್ಯಾದಂತಹ ದೇಶಗಳು ಪ್ರತಿಕ್ಷಣ ಒತ್ತಡದಿಂದ ಕೂಡಿರುತ್ತದೆಯೋ ಯಾವುದನ್ನು ಬಳಸಿದರೆ ಇಡೀ ಭೂಮಿಯೇ ಸರ್ವನಾಶವಾಗುತ್ತದೆ ಯೋ. ಅದನ್ನು ಕಂಡುಹಿಡಿದಿದ್ದೆ ಈ ವ್ಯಕ್ತಿ ಅದೇ ಆಟಂ ಬಾಂಬ್ ಅಥವಾ ನ್ಯೂಕ್ಲಿಯರ್ ವೆಪನ್. ಅದಕ್ಕಾಗಿಯೇ ಈತನನ್ನು ಇತಿಹಾಸದಲ್ಲಿಯೇ ಅತ್ಯಂತ ಡೇಂಜರಸ್ ಸೈಂಟಿಸ್ಟ್ ಎಂದು ಕರೆಯುತ್ತಾರೆ.

ಇಂತಹ ಡೇಂಜರಸ್ ಸೈಂಟಿಸ್ಟ್ ನಮ್ಮ ಭಗವದ್ಗೀತೆಯನ್ನು ಓದಿದ್ದ ಎಂದು ಹೇಳಿದರೆ ನೀವು ನಂಬುತ್ತೀರಾ! ಹೌದು, ಈ ವ್ಯಕ್ತಿ ಭಗವದ್ಗೀತೆ ಯನ್ನು ಓದಿದ್ದಾರೆ. ಇಷ್ಟು ಡೇಂಜರಸ್ ಸೈಂಟಿಸ್ಟ್ ಭಗವದ್ಗೀತೆಯನ್ನು ಯಾಕೆ ಓದಿದ ನ್ಯೂಕ್ಲಿಯರ್ ವೆಪ್ಪನ್ ಗು ಭಗವದ್ಗೀತೆಗು ಲಿಂಕ್ ಏನು. ಈ ಓಪನ್ ಹೈಮರ್ ಯಾರು. ಈತ ಹೇಗೆ ವಿಶ್ವದಲ್ಲೇ ಅತ್ಯಂತ ಡೇಂಜರಸ್ ವೆಪನ್ ಅನ್ನು ಹೇಗೆ ಕಂಡುಹಿಡಿದ.

ಈ ಎಲ್ಲಾ ವಿಷಯಗಳನ್ನು ಈ ದಿನ ಸಂಪೂರ್ಣವಾಗಿ ತಿಳಿದುಕೊಳ್ಳುತ್ತಾ ಹೋಗೋಣ. ಈ ಓಪನ್ ಹೈಮರ್ ಏಪ್ರಿಲ್ 22, 1904 ರಂದು ಅಮೇ ರಿಕಾದ ನ್ಯೂಯಾರ್ಕ್ ನಲ್ಲಿ ಹುಟ್ಟುತ್ತಾರೆ. ಇವರು ಚಿಕ್ಕಂದಿನಿಂದಲೇ ಮಲ್ಟಿ ಟ್ಯಾಲೆಂಟೆಡ್ ಆಗಿದ್ದರು. ಪ್ರತಿಯೊಂದು ವಿಷಯದಲ್ಲಿಯೂ ಕೂಡ ತುಂಬಾ ಆಸಕ್ತಿ ಹೊಂದಿದ್ದರು. ಆ ಒಂದು ಆಸಕ್ತಿಯಿಂದಲೇ ಒಂದು ಹಾಗೂ ಎರಡನೇ ತರಗತಿ ನಂತರ.

ಒಂದೇ ವರ್ಷದಲ್ಲಿಯೇ ಮೂರು ಮತ್ತು ನಾಲ್ಕನೇ ತರಗತಿಯನ್ನು ಸಹ ಮುಗಿಸಿಬಿಟ್ಟರು. ಅದೇ ರೀತಿ ಎಂಟನೇ ತರಗತಿ ಕೂಡ ಅರ್ಧ ವರ್ಷದ ಲ್ಲಿಯೇ ಮುಗಿಸಿಬಿಟ್ಟರು. ಈ ರೀತಿ ವೇಗವಾಗಿ ಕಲಿಯುತ್ತಿದ್ದಂತಹ ಓಪನ್ ಹೈಮರ್ ತನ್ನ ಹನ್ನೆರಡನೆಯ ವರ್ಷಕ್ಕೆ ನ್ಯೂಯಾರ್ಕ್ ನ ಮಯಾಲಜಿಕಲ್ ಕ್ಲಬ್ ನಲ್ಲಿ ಲೆಕ್ಚರರ್ ಆಗುತ್ತಾರೆ. ಇದಾದ ಮೇಲೆ ಓಪನ್ ಹೈಮರ್ ಗೆ ಪುಸ್ತಕವೇ ತನ್ನ ಪ್ರಪಂಚವಾಗಿ ಹೋಯಿತು.

ಏಕೆಂದರೆ ಯಾರು ಸ್ನೇಹಿತರು ಇರಲಿಲ್ಲ. ಚಿಕ್ಕ ವಯಸ್ಸಿನಿಂದಲೇ ಯಾವ ಸ್ನೇಹಿತರೊಂದಿಗೆ ಸಹ ಇವರು ಬೆಳೆಯದೆ ಒಬ್ಬಂಟಿಯಾಗಿ ಬೆಳೆದರು. ಇವರ ಶಾಲೆಯಲ್ಲಿ ಎಲ್ಲರೂ ಕೂಡ ಇವರಿಗೆ ಹೆಚ್ಚಿನ ತೊಂದರೆಯನ್ನು ಕೊಡುತ್ತಿದ್ದರು. 1919 ರಲ್ಲಿ ಇವರು ಸಮ್ಮರ್ ಕ್ಯಾಂಪ್ ಗೆ ಹೋದಾಗ ಅಲ್ಲಿಯೂ ಕೂಡ ಕೆಲವೊಂದಷ್ಟು ಜನ ಇವರಿಗೆ ಅವಮಾನವನ್ನು ಮಾಡಿದ್ದರು. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

By admin

Leave a Reply

Your email address will not be published. Required fields are marked *