ಮುಂದಿನ 5 ದಿನ ಈ ರಾಶಿಗಳಿಗೆ ಅದೃಷ್ಟವೋ ಅದೃಷ್ಟ ದೇವಿ ಕೃಪೆಯಿಂದ ಧನಲಾಭ ಭೂಲಾಭ ನಿಮ್ಮ ರಾಶಿ ಇದೆಯಾ ನೋಡಿ. - Karnataka's Best News Portal
https://adulateearring.com/t77pg9f0bn?key=27d0eac1279d1d54f242ce019dac0514

ಮೇಷ ರಾಶಿ:- ಈ ದಿನ ನಿಮಗೆ ನೆನಪಿನಲ್ಲಿರುವ ದಿನವಾಗಿರುತ್ತದೆ. ಸ್ನೇಹಿತರು ಹಾಗೂ ಸಂಬಂಧಿಕರೊಡನೆ ಒಳ್ಳೆಯ ಸಮಯವನ್ನು ಕಳೆಯುತ್ತೀರಿ. ಪೋಷಕರ ಆರೋಗ್ಯವೂ ಕೂಡ ಸುಧಾರಿಸಲಿದೆ ಆದರೆ ಆರ್ಥಿಕವಾಗಿ ಒಳ್ಳೆಯ ದಿನವಾಗಿರುವುದಿಲ್ಲ. ಉದ್ಯೋಗಿಗಳು ಬಹಳ ಶ್ರಮವನ್ನು ವಹಿಸಿ ಕೆಲಸವನ್ನು ಮಾಡಬೇಕಾಗುತ್ತದೆ.
ಅದೃಷ್ಟದ ಸಂಖ್ಯೆ – 1 ಅದೃಷ್ಟದ ಬಣ್ಣ – ಕೆಂಪು
ಉತ್ತಮ ಸಮಯ – ಬೆಳಿಗ್ಗೆ 10:00 ರಿಂದ ಮಧ್ಯಾಹ್ನ 2:30 ರವರೆಗೆ.

ವೃಷಭ ರಾಶಿ:- ಕೆಲವು ದಿನಗಳಿಂದ ನಿಮ್ಮ ಜೀವನದಲ್ಲಿ ನಿರಂತರವಾಗಿ ಏರಿಳಿತಗಳು ಕಂಡುಬಂದಿದ್ದರೆ ಇಂದು ಎಲ್ಲದಕ್ಕೂ ಪರಿಹಾರ ಸಿಗುತ್ತದೆ. ಅದಾಗಿಯೂ ಕೆಲವು ಸಂದರ್ಭದಲ್ಲಿ ನೀವು ಹುಷಾರಾಗಿ ಇರಬೇಕಾಗುತ್ತದೆ. ಉದ್ಯೋಗಿಗಳಾಗಿದ್ದರೆ ಹಿರಿಯ ಅಧಿಕಾರಿಗಳೊಂದಿಗೆ ಹಾಗೂ ಸಹೋದ್ಯೋಗಿಗಳೊಂದಿಗೆ ಉತ್ತಮವಾದ ಸಂಬಂಧವನ್ನು ಕಾಯ್ದುಕೊಳ್ಳಿ.
ಅದೃಷ್ಟದ ಸಂಖ್ಯೆ – 1 ಅದೃಷ್ಟದ ಬಣ್ಣ – ನೇರಳೆ
ಉತ್ತಮ ಸಮಯ – ಸಂಜೆ 4:30 ರಿಂದ ರಾತ್ರಿ 8:00 ರವರೆಗೆ.

ಮಿಥುನ ರಾಶಿ:- ಹಣದ ವಿಚಾರದಲ್ಲಿ ಮುನ್ನೆಚ್ಚರಿಕೆ ತೆಗೆದುಕೊಳ್ಳುವುದು ಉತ್ತಮ. ಈ ದಿನ ಯಾವುದೇ ಕಾರಣಕ್ಕೂ ಹಣವನ್ನು ಯಾರಿಗೂ ಸಾಲ ಕೊಡಬೇಡಿ ಮತ್ತು ಯಾರಿಂದಲೂ ಕೂಡ ಹಣ ಸಾಲ ತೆಗೆದುಕೊಳ್ಳಬೇಡಿ. ಯಾವುದಾದರೂ ಅಮೂಲ್ಯ ವಸ್ತುವನ್ನು ಖರೀದಿಸಬೇಕು ಎಂದುಕೊಂಡಿದ್ದರೆ ಈ ದಿನ ಉತ್ತಮವಲ್ಲ. ಉದ್ಯೋಗಸ್ಥರಿಗೆ ಕಚೇರಿಯಲ್ಲಿ ಎಚ್ಚರಿಕೆಯಿಂದ ಇರಲು ಸೂಚಿಸಲಾಗಿದೆ.
ಅದೃಷ್ಟದ ಸಂಖ್ಯೆ – 5 ಅದೃಷ್ಟದ ಬಣ್ಣ – ಗುಲಾಬಿ
ಉತ್ತಮ ಸಮಯ – ಬೆಳಿಗ್ಗೆ 9:00 ರಿಂದ ಮಧ್ಯಾಹ್ನ 12:30 ರವರೆಗೆ.

ಕಟಕ ರಾಶಿ:- ಇಂದು ಕುಟುಂಬ ಸದಸ್ಯರ ಜೊತೆ ಬಹಳ ಸಂತೋಷದಿಂದ ಸಮಯ ಕಳೆಯುತ್ತೀರಿ. ನಿಮ್ಮ ಭವಿಷ್ಯದ ಕನಸುಗಳ ಬಗ್ಗೆ ಕುಟುಂಬಸ್ಥರ ಜೊತೆ ಚರ್ಚೆ ನಡೆಸುತ್ತೀರಿ. ಸಂಗಾತಿಯೊಂದಿಗೆ ಸಂಬಂಧವು ಕೂಡ ಉತ್ತಮವಾಗಿರುತ್ತದೆ. ನಿಮ್ಮ ಪ್ರೀತಿ ಪಾತ್ರದಿಂದ ಒಳ್ಳೆಯ ಸುದ್ದಿಗಳನ್ನು ಕೂಡ ಕೇಳಬಹುದು. ಹಣಕಾಸಿನ ಪರಿಸ್ಥಿತಿಯು ಸಾಮಾನ್ಯಕ್ಕಿಂತ ಉತ್ತಮವಾಗಿರುತ್ತದೆ.
ಅದೃಷ್ಟದ ಸಂಖ್ಯೆ – 4 ಅದೃಷ್ಟದ ಬಣ್ಣ – ಕೇಸರಿ
ಉತ್ತಮ ಸಮಯ – ಸಂಜೆ 7:30 ರಿಂದ ರಾತ್ರಿ 9:00 ರವರೆಗೆ.

ಸಿಂಹ ರಾಶಿ:- ನಿಮ್ಮ ಕನಸುಗಳು ತುಂಬಾ ದೊಡ್ಡದಾಗಿರುತ್ತವೆ. ಆದರೆ ಅವುಗಳನ್ನು ಪೂರೈಸಲು ಯಾವ ದಿಕ್ಕಿನಲ್ಲಿ ನೀವು ಶ್ರಮವನ್ನು ವಹಿಸಬೇಕು ಎನ್ನುವ ಬಗ್ಗೆ ಗೊಂದಲದಲ್ಲಿ ಇರುತ್ತೀರಿ. ಇಂತಹ ಮನಸ್ಥಿತಿಯಲ್ಲಿದ್ದಾಗ ಅನುಭವಿ ವ್ಯಕ್ತಿಗಳ ಜೊತೆ ಚರ್ಚಿಸಿ ಸಲಹೆ ಪಡೆಯಿರಿ. ವ್ಯಾಪಾರಸ್ಥರಿಗೆ ಈ ದಿನ ಉತ್ತಮವಾಗಿರುತ್ತದೆ. ಉತ್ತಮವಾದ ಆರ್ಥಿಕ ಲಾಭವನ್ನು ಕೂಡ ಪಡೆಯಲಿದ್ದೀರಿ.
ಅದೃಷ್ಟದ ಸಂಖ್ಯೆ – 4 ಅದೃಷ್ಟದ ಬಣ್ಣ – ನೀಲಿ
ಉತ್ತಮ ಸಮಯ – ಬೆಳಿಗ್ಗೆ 6:00 ರಿಂದ ಮಧ್ಯಾಹ್ನ 12:30 ವರೆಗೆ.

ಕನ್ಯಾ ರಾಶಿ:- ಕೆಲಸದ ಆರಂಭದಲ್ಲಿ ಈ ದಿನವು ನಿಮಗೆ ದೊಡ್ಡ ಸವಾಲನ್ನು ತರಬಹುದು. ವಿಶೇಷವಾಗಿ ಉದ್ಯೋಗದಲ್ಲಿರುವ ಜನರು ಕಚೇರಿಯಲ್ಲಿ ಸಮಯದ ಬಗ್ಗೆ ಹಾಗೂ ಕೆಲಸದ ಬಗ್ಗೆ ಹೆಚ್ಚು ಗಮನ ವಹಿಸಬೇಕಾದ ಅವಶ್ಯಕತೆ ಇದೆ. ನಿಮಗೆ ಕೊಟ್ಟ ಯಾವುದೇ ಕೆಲಸವನ್ನು ಕೂಡ ಜವಾಬ್ದಾರಿಯಿಂದ ಹಾಗೂ ಕಠಿಣ ಪರಿಶ್ರಮದಿಂದ ಪೂರೈಸಲು ಪ್ರಯತ್ನಿಸಿ ನಿಮ್ಮ ಶ್ರಮಕ್ಕೆ ತಕ್ಕ ಪ್ರತಿಫಲ ಖಂಡಿತ ದೊರೆಯುತ್ತದೆ.
ಅದೃಷ್ಟದ ಸಂಖ್ಯೆ – 4 ಅದೃಷ್ಟದ ಬಣ್ಣ – ನೀಲಿ
ಉತ್ತಮ ಸಮಯ – ಬೆಳಿಗ್ಗೆ 6:00ರಿಂದ ಮಧ್ಯಾಹ್ನ 12:00ರವರೆಗೆ.

ತುಲಾ ರಾಶಿ:- ಕುಟುಂಬದ ಜವಾಬ್ದಾರಿಗಳು ಹೆಚ್ಚಾಗುವುದರಿಂದ ಸ್ವಲ್ಪ ಚಿಂತೆಯಿಂದ ಕೂಡಿರುವ ದಿನವಾಗಿರುತ್ತದೆ. ಆರೋಗ್ಯ ಸಮಸ್ಯೆಗಳು ಕೂಡ ಕಾಡಬಹುದು. ಕಾರ್ಯನಿರಂತರವಾದ ದಿನದ ಚಟುವಟಿಕೆಗಳಿಂದ ಸ್ವಲ್ಪ ಬಿಡುವು ತೆಗೆದುಕೊಳ್ಳಿ ಮತ್ತು ಆರೋಗ್ಯದ ಕಡೆ ಕಾಳಜಿ ವಹಿಸಿ. ಆರ್ಥಿಕ ಪರಿಸ್ಥಿತಿ ಅಷ್ಟೊಂದು ಉತ್ತಮವಾಗಿರುವುದಿಲ್ಲ, ಹಣಕಾಸಿನ ಸಮಸ್ಯೆಗಳು ಕೂಡ ಕಾಡಬಹುದು.
ಅದೃಷ್ಟದ ಸಂಖ್ಯೆ – 3 ಅದೃಷ್ಟದ ಬಣ್ಣ – ನೀಲಿ
ಉತ್ತಮ ಸಮಯ – ಸಂಜೆ 4:00 ರಿಂದ ರಾತ್ರಿ 8:00 ರವರೆಗೆ.

ವೃಶ್ಚಿಕ ರಾಶಿ:- ಈ ದಿನ ನೀವು ಆತ್ಮವಿಶ್ವಾಸದಿಂದ ಹಾಗೂ ಉತ್ಸಾಹದಿಂದ ಇರುತ್ತೀರಿ. ನಿಮ್ಮ ಸಂಗಾತಿಯ ಸಂಪೂರ್ಣ ಬೆಂಬಲ ಇಂದು ನಿಮ್ಮ ಜೊತೆಗೆ ಇರುತ್ತದೆ. ಅವರ ಎಲ್ಲ ಅಡೆತಡೆಗಳನ್ನು ಮೀರಿ ಇಂದು ನಿಮ್ಮ ಜೊತೆ ಕೈಜೋಡಿಸುತ್ತಾರೆ. ಸಕಾರಾತ್ಮಕ ಬದಲಾವಣೆಗಳನ್ನು ತರುವಂತಹ ಅವಕಾಶಗಳನ್ನು ಕೂಡ ಪಡೆಯುತ್ತೀರಿ. ವೃತ್ತಿಪರ ಜೀವನದಲ್ಲಿ ಮಹತ್ವದ ನಿರ್ಧಾರಗಳನ್ನು ತೆಗೆದುಕೊಳ್ಳುವಂತಹ ಸಮಯ ಬರಬಹುದು.
ಅದೃಷ್ಟದ ಸಂಖ್ಯೆ – 5 ಅದೃಷ್ಟದ ಬಣ್ಣ – ನೀಲಿ
ಉತ್ತಮ ಸಮಯ – ಮಧ್ಯಾಹ್ನ 3 ರಿಂದ ಸಂಜೆ 6:00 ರವರೆಗೆ.

ಧನಸ್ಸು ರಾಶಿ:- ಈ ದಿನ ನಿಮ್ಮ ಆರೋಗ್ಯ ಉತ್ತಮವಾಗಿರುತ್ತದೆ ಜೊತೆಗೆ ನಿಮ್ಮ ಮನಸ್ಸಿನ ಆರೋಗ್ಯಕ್ಕೂ ಕೂಡ ಉತ್ತಮವಾಗಿರುತ್ತದೆ. ಇದರಿಂದ ಏಕಕಾಲದಲ್ಲಿ ಅನೇಕ ಕಾರ್ಯಗಳನ್ನು ಪೂರ್ಣಗೊಳಿಸಲು ನಿಮಗೆ ಸಾಧ್ಯವಾಗುತ್ತದೆ. ಮನೆಯಲ್ಲಿ ಹಾಗೂ ಕಛೇರಿ ಕೆಲಸಗಳಲ್ಲಿ ಬಹಳ ಚುರುಕಾಗಿ ಇರುತ್ತೀರಿ. ವ್ಯಾಪಾರಿಗಳಾಗಿದ್ದರೆ ಯಾವುದೇ ನಿರ್ಧಾರವನ್ನು ಅವಸರದಲ್ಲಿ ತೆಗೆದುಕೊಳ್ಳಬೇಡಿ.
ಅದೃಷ್ಟದ ಸಂಖ್ಯೆ – 7 ಅದೃಷ್ಟದ ಬಣ್ಣ – ಹಸಿರು
ಉತ್ತಮ ಸಮಯ – ಬೆಳಿಗ್ಗೆ 10:00 ರಿಂದ ಮಧ್ಯಾಹ್ನ 1:30ರ ವರೆಗೆ.

ಮಕರ ರಾಶಿ:- ವೈಯಕ್ತಿಕ ಜೀವನದಲ್ಲಿ ಯಾವುದೇ ರೀತಿಯ ಸಮಸ್ಯೆಗಳನ್ನು ಎದುರಿಸುತ್ತಿದ್ದರೂ ಕೂಡ ಇಂದು ಅದರ ಬಗ್ಗೆ ದೃಢವಾದ ನಿರ್ಧಾರಗಳನ್ನು ತೆಗೆದುಕೊಳ್ಳಬಹುದು. ಮನೆಯಲ್ಲಿ ನಿಮ್ಮ ವಿರುದ್ಧ ಪ್ರತಿಭಟನೆಯ ಧ್ವನಿ ಕೇಳಿ ಬರಬಹುದು. ಆದರೆ ನಿರ್ಧಾರಗಳನ್ನು ವಸ್ತುನಿಷ್ಠವಾಗಿ ತೆಗೆದುಕೊಳ್ಳಿ. ಹಣಕಾಸಿನ ವಿಚಾರದಲ್ಲಿ ಆತುರವಾಗಿ ನಿರ್ಧಾರ ತೆಗೆದುಕೊಳ್ಳದೇ ಇದ್ದರೆ ಒಳ್ಳೆಯದು.
ಅದೃಷ್ಟದ ಸಂಖ್ಯೆ – 4 ಅದೃಷ್ಟದ ಬಣ್ಣ – ಕೇಸರಿ
ಉತ್ತಮ ಸಮಯ – ಬೆಳಿಗ್ಗೆ 9:00 ರಿಂದ ಮಧ್ಯಾಹ್ನ 12:00ರವರೆಗೆ.

ಕುಂಭ ರಾಶಿ:- ಈ ದಿನ ಮಾನಸಿಕವಾಗಿ ಶಾಂತಿಯನ್ನು ಅನುಭವಿಸುತ್ತೀರಿ. ಯಾವುದೇ ಸಮಸ್ಯೆ ಇದ್ದರೂ ತಾಳ್ಮೆಯಿಂದ ಎದುರಿಸಿ. ವೈಯಕ್ತಿಕ ಜೀವನದ ತೊಂದರೆಗಳನ್ನು ಎದುರಿಸಲು ನಿಮಗೆ ಸಾಧ್ಯವಾಗುತ್ತದೆ. ಕುಟುಂಬದ ಸದಸ್ಯರ ನಡುವೆ ಭಿನ್ನಾಭಿಪ್ರಾಯಗಳನ್ನು ಹೊಂದಿದ್ದರೆ ಈ ದಿನ ಪರಿಸ್ಥಿತಿ ಸುಧಾರಿಸುವ ಸಾಧ್ಯತೆ ಇದೆ. ಹಳೆಯ ಸ್ನೇಹಿತರನ್ನು ಭೇಟಿಯಾಗುತ್ತೀರಿ ಮತ್ತು ಪರಸ್ಪರ ಸಾಕಷ್ಟು ಸಮಯವನ್ನು ಕಳೆಯುತ್ತೀರಿ.
ಅದೃಷ್ಟದ ಸಂಖ್ಯೆ – 4 ಅದೃಷ್ಟದ ಬಣ್ಣ – ಕೇಸರಿ
ಉತ್ತಮ ಸಮಯ – ಸಂಜೆ 4:30 ರಿಂದ ರಾತ್ರಿ 9:00ರವರೆಗೆ.

ಮೀನ ರಾಶಿ:- ನಿಮ್ಮ ಸಂಗಾತಿಯ ಜೊತೆ ಅನಾವಶ್ಯಕವಾಗಿ ಮನಸ್ತಾಪ ಮಾಡಿಕೊಳ್ಳುವುದನ್ನು ಬಿಡಿ. ಹೆಚ್ಚುವರಿ ಒತ್ತಡವು ನಿಮ್ಮ ಸಕಾರಾತ್ಮಕ ಶಕ್ತಿಯನ್ನು ಕುಂದಿಸಬಹುದು, ಅದಕ್ಕೆ ಅವಕಾಶ ಕೊಡಬೇಡಿ. ಜನರ ಪ್ರಭಾವಕ್ಕೆ ಒಳಗಾಗದೆ ಪ್ರಮುಖ ನಿರ್ಧಾರಗಳನ್ನು ನೀವೇ ತೆಗೆದುಕೊಳ್ಳಲು ಪ್ರಯತ್ನಿಸಿ, ಪ್ರತಿ ಹೆಜ್ಜೆಯನ್ನು ಎಚ್ಚರಿಕೆಯಿಂದ ಇಡಿ. ಆದಷ್ಟು ದಿನ ಪೂರ್ತಿ ತಾಳ್ಮೆಯಿಂದ ಇರಿ.
ಅದೃಷ್ಟದ ಸಂಖ್ಯೆ – 4 ಅದೃಷ್ಟದ ಬಣ್ಣ – ಬಿಳಿ
ಉತ್ತಮ ಸಮಯ – ಬೆಳಿಗ್ಗೆ 7:00 ರಿಂದ 12:30 ರವರೆಗೆ.

By admin

Leave a Reply

Your email address will not be published. Required fields are marked *