ನಿಮ್ಮ ಮಕ್ಕಳು ಸ್ಕೂಲ್ ಗೆ ಹೋಗುತ್ತಾರ…….?? ಎಚ್ಚರ…….!!
ರಮೇಶ್ ಮತ್ತು ರೂಪ ದಂಪತಿಗಳಿಗೆ ಒಬ್ಬಳೇ ಮುದ್ದಿನ ಮಗಳು ಶ್ರಾವಣಿ ನೋಡೋಕೆ ತುಂಬಾ ಮುದ್ದು. ಶ್ರಾವಣಿ ukg ಓದುತ್ತಿರುತ್ತಾಳೆ ರಮೇಶ್ ಮತ್ತು ರೂಪ ಇಬ್ಬರು ಸಹ ಕೆಲಸ ಮಾಡುತ್ತಿರುತ್ತಾರೆ. ರೂಪ ಆಫೀಸಿಗೆ ಹೋಗುವ ದಾರಿಯಲ್ಲೇ ಶ್ರಾವಣಿಯ ಸ್ಕೂಲ್ ಹಾಗಾಗಿ ಶ್ರಾವಣಿ ಯನ್ನು ಸ್ಕೂಲ್ ವ್ಯಾನ್ ನಲ್ಲಿ ಕಳಿಸದೆ ರೂಪ ಹೋಗುವಾಗ ಸ್ಕೂಲ್ ಗೆ ಬಿಟ್ಟು ಬರುವಾಗ ಕರೆದುಕೊಂಡು ಬರುತ್ತಾಳೆ.
ಹೀಗೆ ನಿತ್ಯವೂ ನಡೆಯುತ್ತಿರುತ್ತದೆ ಒಂದು ದಿನ ರೂಪ ಮನೆಗೆ ಬರುವಾಗ ಶ್ರಾವಣಿಯನ್ನು ಕರೆದುಕೊಂಡು ಬರಲು ಸ್ಕೂಲ್ ಬಳಿ ಹೋದಾಗ ಶ್ರಾವಣಿ ಇರುವುದಿಲ್ಲ. ರೂಪ ಗಾಬರಿಗೊಂಡು ಸ್ಕೂಲ್ ಸುತ್ತ ಮುತ್ತ, ಆಟ ಆಡುವ ಸ್ಥಳ ಎಲ್ಲಾ ಕಡೆ ಹುಡುಕುತ್ತಾಳೆ ಶ್ರಾವಣಿ ಎಲ್ಲಿಯೂ ಕಾಣುವುದಿಲ್ಲ. ಅವರ ಸ್ಕೂಲ್ ಟೀಚರ್ ಗೆ ಫೋನ್ ಮಾಡುತ್ತಾಳೆ.
ಅವರು ಎಲ್ಲಾ ಮಕ್ಕಳು ಹೋಗಾಯಿತು ಶ್ರಾವಣಿ ಎಂದಿನಂತೆ ಕಾಂಪೌಂಡ್ ಒಳಗೆ ನಿಮಗಾಗಿ ಕಾಯುತ್ತಾ ಕುಳಿತಿದ್ದಳು. ಯಾಕೆ ಶ್ರಾವಣಿ ಅಲ್ಲಿಲ್ಲವೇ ಎಂದು ಕೇಳುತ್ತಾರೆ ಅದಕ್ಕೆ ರೂಪ ಶ್ರಾವಣಿ ಇಲ್ಲಿ ಇಲ್ಲ ಎಲ್ಲಾ ಕಡೆ ಹುಡುಕಿದ್ದೇನೆ ಅವಳು ಎಲ್ಲಿಯೂ ಕಾಣುತಿಲ್ಲ ಎಂದು ಕರೆ ಕಟ್ ಮಾಡುತ್ತಾಳೆ. ನಂತರ ರೂಪ ರಮೇಶ್ ಗೆ ಕರೆ ಮಾಡಿ ಶ್ರಾವಣಿ ಕಾಣಿತ್ತಿಲ್ಲ ಎಂದು ಹೇಳಿದಾಗ ರಮೇಶ್ ಅವಳ ಸ್ಕೂಲ್ ಬಳಿ ಬಂದು ಅವನು ಕೂಡ ಎಲ್ಲಾ ಕಡೆ ವಿಚಾರಿಸುತ್ತಾನೆ.
ಅವಳ ಗೆಳತಿಯರ ತಂದೆ ತಾಯಿಯರಿಗೂ ಫೋನ್ ಮಾಡಿ ವಿಚಾರಿಸು ತ್ತಾರೆ. ಎಲ್ಲಿಯೂ ಅವಳ ಬಗ್ಗೆ ತಿಳಿಯುವುದೇ ಇಲ್ಲ. ರೂಪ ಅವಳ ಮಗಳ ಬಗ್ಗೆ ಚಿಂತಿಸುತ್ತಾ ಕಣ್ಣೀರಾಕುತ್ತಿರುತ್ತಾಳೆ. ರಮೇಶ್ ಪೊಲೀಸ್ ಕಂಪ್ಲೇಂಟ್ ಕೊಟ್ಟು ಮನೆಗೆ ಬರುತ್ತಾನೆ. ರೂಪ ಮತ್ತು ರಮೇಶ್ ಮಗಳಿಲ್ಲದ ಮನೆ ಖಾಲಿ ಖಾಲಿ ಎನಿಸುತ್ತದೆ.
ಇಬ್ಬರು ಶ್ರಾವಣಿ ಎಲ್ಲಿದ್ದಾಳೋ, ಹೇಗಿದ್ದಾಳೋ, ಏನಾದರೂ ತಿಂದಳೋ ಇಲ್ಲವೋ ಅವಳು ಹೊಟ್ಟೆ ಹಸಿವಿಗೆ ತಡೆಯುವುದಿಲ್ಲ ಎಂದು ತುಂಬಾ ಅಳುತ್ತಾರೆ. ರೂಪ ದೇವರಮನೆಗೆ ಹೋಗಿ ದೇವರ ಮುಂದೆ ನನ್ನ ಮಗಳು ಯಾವುದೇ ತೊಂದರೆ ಇಲ್ಲದೆ ಬೇಗ ಮನೆಗೆ ಬರುವಂತೆ ಮಾಡು ದೇವರೇ ಎಂದು ಪರಿ ಪರಿಯಾಗಿ ಬೇಡಿ ಕೊಳ್ಳುತ್ತಾಳೆ. ರಮೇಶ್ ಫೋನ್ ಹಿಡಿದು ಕೊಂಡು ಯಾರಾದರೂ ಫೋನ್ ಮಾಡುತ್ತಾರ ಎಂದು ಕಾಯುತ್ತ ಬಾಗಿಲ ಬಳಿಯೇ ಕುಳಿತುಕೊಳ್ಳುತ್ತಾನೆ.
ಹೀಗೆ ಒಂದೆರಡು ದಿನಗಳ ನಂತರ ರಮೇಶ್ ಗೆ ಪೊಲೀಸ್ ಕಡೆಯಿಂದ ಫೋನ್ ಬರುತ್ತದೆ ಅರ್ಜೆಂಟಾಗಿ ಜನರಲ್ ಹಾಸ್ಪಿಟಲ್ ಬಳಿ ಬನ್ನಿ ಎಂದು. ರಮೇಶ್ ಮತ್ತು ರೂಪ ಅಲ್ಲಿಗೆ ಹೋದಾಗ ಪೊಲೀಸ್ ನಿಮ್ಮ ಮಗಳಿಗೆ ಆಕ್ಸಿಡೆಂಟ್ ಆಗಿ ತೀರಿ ಹೋಗಿದ್ದಾಳೆ ಶವಗಾರದಲ್ಲಿ ನಿಮ್ಮ ಮಗಳ ಡೆಡ್ ಬಾಡಿ ಇದೆ ಹೋಗಿ ನೋಡಿ ಎಂದು ಹೇಳುತ್ತಾರೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.