ಮೀನ ರಾಶಿ ಜುಲೈ ಮಾಸ ಭವಿಷ್ಯ ವಿಚಿತ್ರ ಸಂಘರ್ಷ ಜಯ ನಿಮಗಾ ಎದುರಾಳಿಗಾ ನೋಡಿ..ಹಣ ಆರೋಗ್ಯ ಹೇಗಿರಲಿದೆ ಗೊತ್ತಾ

ಮೀನ ರಾಶಿ ಜುಲೈ ಮಾಸ ಭವಿಷ್ಯ…….||

WhatsApp Group Join Now
Telegram Group Join Now

ನಿಮ್ಮ ವ್ಯಯ ಭಾಗದಲ್ಲಿ ಶನಿ ಬಲಿಷ್ಠನಾಗುತ್ತಿದ್ದಾನೆ. ಹಾಗೂ ಸಾಡೇ ಸಾತಿ ಮತ್ತಷ್ಟು ಬಿಗಿ ಹಿಡಿತವನ್ನು ತರುತ್ತದೆ. ಹಾಗೆಂದ ಮಾತ್ರಕ್ಕೆ ಭಯಪಡುವ ಅವಶ್ಯಕತೆ ಇಲ್ಲ. ಇವೆಲ್ಲವೂ ಕೂಡ ನಿಧಾನವಾಗಿ ನಿಮ್ಮ ಮೇಲೆ ಪರಿಣಾಮ ಬೀರುತ್ತದೆ. ಆದ್ದರಿಂದ ಹೆಚ್ಚು ಭಯಭೀತಿಗೊಳ್ಳುವ ಅವಶ್ಯಕತೆ ಇಲ್ಲ. ಕೆಲವೊಂದಷ್ಟು ಜನ ತಮ್ಮ ಜೀವನದಲ್ಲಿ ಎಲ್ಲಾ ವಿಚಾರದಲ್ಲಿಯೂ ಮುಂದೆ ಇರುತ್ತಾರೆ.

ಆದರೆ ಇನ್ನು ಮುಂದಿನ ಎರಡು ವರ್ಷದ ತನಕ ನಿಮ್ಮ ಎಲ್ಲಾ ವಿಚಾರದ ಲ್ಲಿಯೂ ಕೂಡ ಸ್ವಲ್ಪ ಮಂದಗತಿ ಎನ್ನುವುದು ಇರುತ್ತದೆ. ನೀವು ಎಷ್ಟು ಚುರುಕಾಗಿ ಕೆಲಸ ಮಾಡುತ್ತಿದ್ದರೋ ಅಷ್ಟೇ ಮಂದಗತಿಯಲ್ಲಿ ನೀವು ಸಾಗಬೇಕಾಗುತ್ತದೆ. ಅಂತಹ ಪರಿಸ್ಥಿತಿಗಳು ಎದುರಾಗುತ್ತದೆ. ನೀವು ಎಲ್ಲರ ಮುಂದೆ ಎಷ್ಟು ಚುರುಕಾಗಿದ್ದೀರಾ ಅಷ್ಟು ನೀವು ಸುಮ್ಮನಾಗಿ ಬಿಡುತ್ತೀರಿ. ಇನ್ನು ಮುಂದಿನ ಎರಡು ವರ್ಷದ ತನಕ ಸವಾಲುಗಳನ್ನು ಎಳೆದುಕೊಂಡಂತಹ ರೀತಿಯಲ್ಲಿ ನಿಮ್ಮ ಬದಲಾವಣೆಗಳು ಆಗುತ್ತದೆ.

ಯಾರು ತಾಳಿದವನು ಬಾಳಿಯಾನು ಎಂಬಂತೆ ಜೀವನ ನಡೆಸುತ್ತಿರು ತ್ತಾರೋ ಅವರಿಗೆ ಈ ಒಂದು ಸಮಯ ಅದ್ಭುತವಾದಂತಹ ಸಮಯ ವಾಗಿರುತ್ತದೆ ಎಂದೇ ಹೇಳಬಹುದು. ಹಾಗಾಗಿ ಮೀನ ರಾಶಿಯ ಪ್ರತಿಯೊಬ್ಬರೂ ಕೂಡ ಹೆಚ್ಚು ತಾಳ್ಮೆಯನ್ನು ಬೆಳೆಸಿಕೊಳ್ಳುವುದು ಮುಖ್ಯವಾಗಿರುತ್ತದೆ. ಅದೇ ರೀತಿ ಸಾಡೇ ಸಾಥ್ ಬಿಸಿ ನಿಮ್ಮ ಮೇಲೆ ತಟ್ಟದೇ ಇರುವ ರೀತಿ ದ್ವಿತೀಯದಲ್ಲಿರುವಂತಹ ಗುರು ನಿಮ್ಮನ್ನು ಕಾಪಾಡುತ್ತಿದ್ದಾನೆ.

ಈ ಒಂದು ಶ್ರೀರಕ್ಷೆ ಮುಂದೆ ಕೂಡ ನಿಮಗೆ ಮುಂದುವರೆಯುತ್ತದೆ. ಆದರೆ ಗುರುವಿನ ಜೊತೆ ರಾಹು ಕೂಡ ಇದ್ದಾನೆ. ಹಾಗಾಗಿ ನಿಮ್ಮ ಜೀವನದಲ್ಲಿ ಯಾವುದೆಲ್ಲ ವಿಚಾರಗಳು ಇದೆಯೋ ಅವೆಲ್ಲವನ್ನು ಸಹ ಬಹಳಷ್ಟು ಗಮನದಲ್ಲಿಟ್ಟುಕೊಂಡು ಮುಂದೆ ಸಾಗುವುದು ಒಳ್ಳೆಯದು. ಹಾಗೂ ಯಾರು ಗುರುವಿನ ಎಚ್ಚರಿಕೆಯನ್ನು ಗಮನದಲ್ಲಿಟ್ಟುಕೊಂಡು ಸಾಧನೆಯ ಹಾದಿಯಲ್ಲಿ ಇರುತ್ತಾರೋ ಅವರಿಗೆ ಅವರ ಒಂದು ಹಾದಿಯಲ್ಲಿ ಯಶಸ್ಸು ಎನ್ನುವುದು ಕಟ್ಟಿಟ್ಟ ಬುತ್ತಿಯಾಗಿರುತ್ತದೆ.

ಹವಾಮಾನದ ದುಷ್ಪರಿಣಾಮಗಳು ಏನಿದೆಯೋ ಇದರಿಂದ ಸ್ವಲ್ಪ ಮಟ್ಟಿಗೆ ನಿಮ್ಮ ಆರೋಗ್ಯದಲ್ಲಿ ತೊಂದರೆಗಳು ಉಂಟಾಗುತ್ತದೆ. ವಿಶೇಷ ವಾಗಿ ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗಳು ಕಾಡುತ್ತದೆ. ಆದ್ದರಿಂದ ಜುಲೈ ತನಕ ನೀವು ಆದಷ್ಟು ಜಾಗರೂಕತೆಯಿಂದ ಇರುವುದು ಒಳ್ಳೆಯದು. ಹಾಗೆಯೇ ಮೀನ ರಾಶಿಯವರಿಗೆ ನಾಲ್ಕನೇ ಮನೆಯಲ್ಲಿ ರವಿ ಇರುತ್ತಾನೆ ಇದರ ಅರ್ಥ ಸುಖದಲ್ಲಿ ಅಡ್ಡಿ.

ಹಾಗೂ ದೊಡ್ಡ ಗ್ರಹ ರವಿಯಿಂದ ಸಾಕಷ್ಟು ಆತಂಕಗಳು ಉಂಟಾಗು ತ್ತದೆ. ಅಂದರೆ ನೀವು ನಿಮ್ಮ ಸಮಯದಲ್ಲಿ ನಿಮ್ಮ ಕುಟುಂಬದವರು ನಿಮ್ಮ ಸ್ನೇಹಿತರೊಂದಿಗೆ ಸಮಯ ಕಳೆಯಬೇಕು ಎಂದುಕೊಂಡಿದ್ದರೆ ಆ ಸಮಯದಲ್ಲಿ ನೀವು ಬೇರೆ ಕೆಲಸಗಳಿಗೆ ಗುರಿಯಾಗುತ್ತೀರಿ ನೀವು ಅವರೊಂದಿಗೆ ಹೆಚ್ಚು ಸಮಯ ಕಳೆಯಲು ಅವಕಾಶ ಸಿಗದೇ ಇರುತ್ತದೆ. ಹೀಗೆ ಕೆಲವೊಂದಷ್ಟು ಅಡ್ಡಿಗಳು ಉಂಟಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]