ಮೇಷ ರಾಶಿ:- ಮಾನಸಿಕವಾಗಿ ಇಂದು ಸ್ವಲ್ಪ ಗೊಂದಲಗಳು ಉಂಟಾಗ ಬಹುದು. ಅನೇಕ ರೀತಿಯ ಆಲೋಚನೆಗಳು ಮನಸ್ಸಿಗೆ ಬರಬಹುದು ನಕರಾತ್ಮಕ ಯೋಚನೆಗಳಿಂದ ನಿಮ್ಮನ್ನು ದೂರವಿರುಸುವುದು ಮತ್ತು ಗಮನವನ್ನು ಹರಿಸದೇ ಇರುವುದು ಉತ್ತಮ. ಅದೃಷ್ಟ ಸಂಖ್ಯೆ – 01 ಅದೃಷ್ಟ ಬಣ್ಣ – ಗುಲಾಬಿ ಬಣ್ಣ ಸಮಯ – ಬೆಳಗ್ಗೆ 6:30 ರಿಂದ 11:00 ರವರೆಗೆ.
ವೃಷಭ ರಾಶಿ:- ಕೆಲಸದ ವಿಷಯದಲ್ಲಿ ಇಂದು ನಿಮಗೆ ಮಿಶ್ರ ಫಲಿತಾಂಶ ದೊರೆಯಲಿದೆ. ನೀವು ವ್ಯಾಪಾರ ಮಾಡುತ್ತಾ ಇದ್ದರೆ ಮತ್ತು ದೊಡ್ಡ ಲಾಭವನ್ನು ನಿರೀಕ್ಷಿಸುತ್ತಿದ್ದರೆ ನಿಮ್ಮ ವ್ಯವಹಾರ ಯೋಜನೆಗಳಲ್ಲಿ ನೀವು ಕೆಲವು ಬದಲಾವಣೆಗಳನ್ನು ಮಾಡಿಕೊಳ್ಳಬೇಕಾಗುತ್ತದೆ. ಅದೃಷ್ಟ ಸಂಖ್ಯೆ – 01 ಅದೃಷ್ಟ ಬಣ್ಣ – ಕಿತ್ತಳೆ ಬಣ್ಣ ಸಮಯ – ಸಂಜೆ 4:00 ರಿಂದ ರಾತ್ರಿ 8:00 ರವರೆಗೆ.
ಮಿಥುನ ರಾಶಿ:- ಇಂದು ಈ ರಾಶಿ ಚಕ್ರದ ಜನರಿಗೆ ಬಹಳ ಮುಖ್ಯವಾದ ದಿನವಾಗಿರಲಿದೆ. ನಿಮ್ಮ ಜೀವನದಲ್ಲಿ ಯಾವುದೇ ಸಕಾರಾತ್ಮಕ ಬದಲಾವಣೆಗಳು ಇರುತ್ತದೆ. ನೀವು ಕೆಲಸವನ್ನು ಬದಲಾಯಿಸುವ ಬಗ್ಗೆ ಯೋಚಿಸುತ್ತ ಇದ್ದರೆ ಈ ಸಮಯ ನಿಮಗೆ ಅನುಕೂಲಕರವಾಗಿದೆ. ಅದೃಷ್ಟ ಸಂಖ್ಯೆ – 08 ಅದೃಷ್ಟ ಬಣ್ಣ – ನೀಲಿ ಬಣ್ಣ ಸಮಯ – ಸಂಜೆ 6:00 ರಿಂದ 9:00 ರವರೆಗೆ.
ಕರ್ಕಾಟಕ ರಾಶಿ:- ಇಂದು ನಿಮಗೆ ಉತ್ತಮ ದಿನವಾಗಿರುತ್ತದೆ. ಮತ್ತು ಮೊದಲನೆಯದಾಗಿ ಹಣದ ಬಗ್ಗೆ ಮಾತನಾಡುವುದಾದರೆ ನೀವು ಸಾಲ ಮಾಡಿದ್ದರೆ ಇಂದು ಅದನ್ನು ಹಿಂತಿರುಗಿಸಿ ಕೊಡಲು ಸಾಧ್ಯವಾಗುತ್ತದೆ. ನಿಮ್ಮ ತಂದೆಯಿಂದ ಆರ್ಥಿಕ ಸಹಾಯ ಪಡೆಯ ಬಹುದು. ಅದೃಷ್ಟ ಸಂಖ್ಯೆ – 02 ಅದೃಷ್ಟ ಬಣ್ಣ – ನೇರಳೆ ಬಣ್ಣ ಸಮಯ – ಬೆಳಗ್ಗೆ 6:45 ರಿಂದ 9:30 ರವರೆಗೆ.
ಸಿಂಹ ರಾಶಿ:- ನೀವು ಇಂದು ಏನೇ ಮಾಡಿದರು ಬಹಳ ಯೋಚನೆ ಮಾಡಿ ಮುಂದುವರೆಯಿರಿ ಉದ್ವೇಗಗೊಳ್ಳಬೇಡಿ ಮತ್ತು ಭವಿಷ್ಯದಲ್ಲಿ ನೀವು ವಿಷಾದಿಸಬೇಕಬಹುದಾದ ಯಾವುದೇ ಕೆಲಸವನ್ನು ಮಾಡಬೇಡಿ.
ವಿಶೇಷವಾಗಿ ಹಣಕಾಸಿನ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಆತುರವನ್ನು ಪಡಬೇಡಿ. ಅದೃಷ್ಟ ಸಂಖ್ಯೆ – 01 ಅದೃಷ್ಟ ಬಣ್ಣ – ಬಿಳಿ ಬಣ್ಣ ಸಮಯ – ಬೆಳಗ್ಗೆ 10:00 ರಿಂದ ಮಧ್ಯಾಹ್ನ 2:00 ರವರೆಗೆ.
ಕನ್ಯಾ ರಾಶಿ:- ಈ ರಾಶಿಯಲ್ಲಿ ಇರುವವರಿಗೆ ಶುಭದಿನ ವಾಗಿರುತ್ತದೆ. ನಿಮ್ಮ ಪ್ರತಿಯೊಂದು ಪ್ರಯತ್ನವು ಕೂಡ ನಿಮಗೆ ಇಂದು ಯಶಸ್ಸಾಗ ಬಹುದು. ವೈಯಕ್ತಿಕ ಅಥವಾ ವೃತ್ತಿಪರ ಜೀವನ ಎರಡರಲ್ಲೂ ನೀವು ಅತ್ಯುತ್ತಮವಾದವನ್ನು ನೀಡಲು ಪ್ರಯತ್ನಿಸುತ್ತೀರಿ. ಅದೃಷ್ಟ ಸಂಖ್ಯೆ – 08 ಅದೃಷ್ಟ ಬಣ್ಣ – ಕಂದು ಬಣ್ಣ ಸಮಯ – ಮಧ್ಯಾಹ್ನ 1:00 ರಿಂದ ಸಂಜೆ 5:00 ರವರೆಗೆ.
ತುಲಾ ರಾಶಿ:- ನೀವು ತುಂಬಾ ಶ್ರಮಿಸ ಬೇಕಾಗಹುದು ನೀವು ಉದ್ಯೋಗ ಮಾಡುತ್ತಾ ಇದ್ದರೆ ನಿಮ್ಮ ಕೆಲಸದ ಹೊರೆ ಹೆಚ್ಚಾಗಬಹುದು. ಇದು ನಿಮ್ಮ ಮಾನಸಿಕ ಗೊಂದಲವನ್ನು ಹೆಚ್ಚಿಸಬಹುದು. ನಿಮ್ಮ ಕೆಲಸವನ್ನು ಶಾಂತ ಮನಸ್ಸಿನಿಂದ ಮಾಡಿ ಮತ್ತು ವ್ಯಾಪಾರಸ್ಥರು ತಮ್ಮ ವ್ಯವಹಾರದ ನಿರ್ಧಾರಗಳನ್ನು ಬುದ್ಧಿವಂತಿಕೆಯಿಂದ ತೆಗೆದುಕೊಳ್ಳಿ. ಅದೃಷ್ಟ ಸಂಖ್ಯೆ – 01 ಅದೃಷ್ಟ ಬಣ್ಣ – ಹಸಿರು ಬಣ್ಣ ಸಮಯ – ಬೆಳಗ್ಗೆ 9:45 ರಿಂದ ಮಧ್ಯಾಹ್ನ 1:00 ರವರೆಗೆ.
ವೃಶ್ಚಿಕ ರಾಶಿ:- ವೈಯಕ್ತಿಕ ಜೀವನದಲ್ಲಿ ತೊಂದರೆಗಳು ಹೆಚ್ಚಾಗಬಹುದು. ಮನೆಯಲ್ಲಿನ ಕಲಹಗಳು ನಿಮ್ಮ ಮಾನಸಿಕ ಶಾಂತಿಯನ್ನು ಭಂಗಗೊ ಳಿಸುತ್ತದೆ. ನೀವು ಬುದ್ಧಿವಂತಿಕೆಯಿಂದ ವಿಷಯವನ್ನು ಪರಿಹರಿಸಲು ಪ್ರಯತ್ನಿಸಬೇಕು. ತಾಯಿ ಆರೋಗ್ಯ ಸ್ವಲ್ಪ ದುರ್ಬಲವಾಗಿರಲಿದೆ. ಅದೃಷ್ಟ ಸಂಖ್ಯೆ – 03 ಅದೃಷ್ಟ ಬಣ್ಣ – ಕೆಂಪು ಬಣ್ಣ ಸಮಯ – ಸಂಜೆ 5:00 ರಿಂದ ರಾತ್ರಿ 10:00 ರವರೆಗೆ.
ಧನಸ್ಸು ರಾಶಿ:- ಉದ್ಯೋಗ ಮಾಡುತ್ತಾ ಇದ್ದರೆ ಕೆಲಸದಲ್ಲಿ ಮಾಡಿದ ತಪ್ಪನ್ನು ಮತ್ತೆ ಮತ್ತೆ ಕಛೇರಿಯಲ್ಲಿ ಪುನರಾವರ್ತಿಸುವುದನ್ನು ತಪ್ಪಿಸ ಬೇಕು. ಇಲ್ಲದಿದ್ದರೆ ಇಂದು ನೀವು ತೊಂದರೆಯಲ್ಲಿ ಸಿಲುಕಬಹುದು. ಅರ್ಧದಲ್ಲೇ ನಿಂತಿದ್ದ ವ್ಯವಹಾರದ ಪ್ರಕಾರದಲ್ಲೇ ಲಾಭ ಪಡೆಯ ಬಹುದು. ಅದೃಷ್ಟ ಸಂಖ್ಯೆ – 09 ಅದೃಷ್ಟ ಬಣ್ಣ – ಬಿಳಿ ಬಣ್ಣ ಸಮಯ – ಬೆಳಗ್ಗೆ 11:00 ರಿಂದ ಮಧ್ಯಾಹ್ನ 3:30 ರವರೆಗೆ.
ಮಕರ ರಾಶಿ:- ಕೆಲವು ಕಾರಣದಿಂದಾಗಿ ನಿಮ್ಮ ತಂದೆ ನಿಮ್ಮ ಮೇಲೆ ಕೋಪಗೊಂಡಿದ್ದರೆ ನಿಮ್ಮ ತಪ್ಪುಗಳಿಗೆ ಕ್ಷಮೆ ಯಾಚಿಸಿ. ಮತ್ತು ಈ ವಿಷಯವನ್ನು ಇಂದು ಇಲ್ಲೇ ಕೊನೆಗೊಳಿಸಲು ಪ್ರಯತ್ನಿಸಿ. ನಿಮ್ಮ ಹಿರಿಯರು ನಿಮಗೆ ಒಳ್ಳೆಯದನ್ನು ಬಯಸುತ್ತಾರೆ. ಅದೃಷ್ಟ ಸಂಖ್ಯೆ – 09 ಅದೃಷ್ಟ ಬಣ್ಣ – ಬಿಳಿ ಬಣ್ಣ ಸಮಯ – ಮಧ್ಯಾಹ್ನ 2:00 ರಿಂದ ಸಂಜೆ 7:00 ರವರೆಗೆ.
ಕುಂಭ ರಾಶಿ:- ಈ ದಿನದ ಆರಂಭವೂ ಒಳ್ಳೆಯದಾಗಿರುತ್ತದೆ. ಬೆಳಗ್ಗೆ ಕೆಲವು ಒಳ್ಳೆಯ ಸುದ್ದಿಗಳನ್ನು ಕೇಳಿ ಮನಸ್ಸು ತುಂಬಾ ಸಂತೋಷವಾಗು ತ್ತದೆ. ಕೆಲಸದ ಬಗ್ಗೆ ಹೇಳುವುದಾದರೆ ಉದ್ಯೋಗಿಗಳಿಗೆ ತಮ್ಮ ಹಿರಿಯ ರಿಂದ ಹೆಚ್ಚು ಕೆಲಸ ಸಿಗುತ್ತದೆ. ಸರ್ಕಾರಿ ಕೆಲಸ ಮಾಡುತ್ತಿದ್ದರೆ ಇಂದು ನಿಮಗೆ ಕೆಲಸದ ಹೊರೆ ಹೆಚ್ಚಾಗುತ್ತದೆ. ಅದೃಷ್ಟ ಸಂಖ್ಯೆ – 07 ಅದೃಷ್ಟ ಬಣ್ಣ – ಹಳದಿ ಬಣ್ಣ ಸಮಯ – ಬೆಳಗ್ಗೆ 8:00 ರಿಂದ ಮಧ್ಯಾಹ್ನ 12:15 ರವರೆಗೆ.
ಮೀನ ರಾಶಿ:- ಇಂದು ನಿಮ್ಮ ಮಾತಿನ ಮೇಲೆ ನಿಮಗೆ ಸಾಕಷ್ಟು ನಿಯಂತ್ರಣವಿರಬೇಕು. ನಿಮ್ಮ ತಪ್ಪಾದ ಪ್ರಯೋಗ ನಿಮಗೆ ಸಮಸ್ಯೆ ಗಳನ್ನು ಉಂಟು ಮಾಡಬಹುದು. ವಿಶೇಷವಾಗಿ ನಿಮ್ಮ ಸಹ ಉದ್ಯೋಗಿಗಳೊಂದಿಗೆ ನೀವು ವಾದಗಳನ್ನು ತಪ್ಪಿಸಬೇಕು. ವ್ಯಾಪಾರ ಮಾಡುತ್ತಾ ಇದ್ದರೆ ಇಂದು ನಿರಾಶೆಯನ್ನು ಅನುಭವಿಸುವಿರಿ. ಅದೃಷ್ಟ ಸಂಖ್ಯೆ – 05 ಅದೃಷ್ಟ ಬಣ್ಣ – ನೀಲಿ ಬಣ್ಣ ಸಮಯ – ಸಂಜೆ 6:00 ರಿಂದ ರಾತ್ರಿ 9:00 ರವರೆಗೆ.