ಹನುಮನ ರೀತಿ ದೇಹ ಹೊಂದಿದ್ದ ಪ್ರಭಾಕರ್ ಕೊನೆಯ ಘಳಿಗೆಯಲ್ಲಿ ಹೇಗಿದ್ರು ನೋಡಿ..ಬದುಕಿದ್ದಾಗಲೆ ನರಕ ನೋಡಿದ್ರು - Karnataka's Best News Portal
https://adulateearring.com/t77pg9f0bn?key=27d0eac1279d1d54f242ce019dac0514

ಹನುಮನ ರೀತಿ ದೇಹ ಹೊಂದಿದ್ದ ಪ್ರಭಾಕರ್ ಕೊನೆಯ ಗಳಿಗೆಯಲ್ಲಿ ಹೇಗಾಗಿದ್ರು ಗೊತ್ತಾ…….!!

ಟೈಗರ್ ಪ್ರಭಾಕರ್ ಈ ಹೆಸರನ್ನು ಕೇಳದೆ ಇರುವಂತಹ ಕನ್ನಡಿಗರು ಇಲ್ಲ ಎಂದೇ ಹೇಳಬಹುದು. ಕನ್ನಡ ಹಾಗೂ ತಮಿಳಿನಲ್ಲಿ ಟೈಗರ್ ಎಂದು ಪ್ರಸಿದ್ಧಿಯಾಗಿದ್ದಂತಹ ಪ್ರಭಾಕರ್ ಅತ್ತ ಪಕ್ಕದ ತೆಲುಗು ರಾಜ್ಯದಲ್ಲಿ ಯೂ ಕೂಡ ಸಾಕಷ್ಟು ಹೆಸರನ್ನು ಮಾಡಿದವರು. ಕನ್ನಡ ಮಾತ್ರವಲ್ಲದೆ ತಮಿಳು, ತೆಲುಗು, ಹಿಂದಿ, ಮುಂತಾದ ಭಾಷೆಗಳಲ್ಲಿಯೂ ಕೂಡ

ಉತ್ತಮ ಹೆಸರನ್ನು ಸಾಧಿಸಿದಂತಹ ಟೈಗರ್ ಪ್ರಭಾಕರ್ ಅವರು ಅವತ್ತಿನ ಕಾಲಕ್ಕೆ ಅತ್ಯಂತ ಯಶಸ್ವಿ ಚತುರ್ ಭಾಷಾ ನಟರಾಗಿದ್ದರು. ಇನ್ನು ಅವರ ನಟನೆ ಅಂತ ಬಂದರೆ ಅದು ನಾಯಕನ ಪಾತ್ರವಿರಲಿ, ಪೋಷಕ ಪಾತ್ರವೇ ಇರಲಿ, ಎಲ್ಲದಕ್ಕೂ ಕೂಡ ಸೈ ಎಂದೇ ಇದ್ದಂತಹ ಪ್ರತಿಭಾನ್ವಿತ ಕಲಾವಿದರು. ಓರ್ವ ಸಾಧಾರಣ ಸ್ಟಂಟ್ ಆರ್ಟಿಸ್ಟ್ ಆಗಿ ತಮ್ಮ ಜರ್ನಿಯನ್ನು ಶುರು ಮಾಡಿದಂತಹ ಟೈಗರ್ ಪ್ರಭಾಕರ್ ಅವರು

ಅಭಿನಯದ ಎಲ್ಲಾ ಮಜಲುಗಳನ್ನು ಕೂಡ ಆವರಿಸಿಕೊಂಡರು. ಅಭಿನಯ ಮಾತ್ರವಲ್ಲದೆ ನಿರ್ದೇಶನ, ನಿರ್ಮಾಣ, ಸ್ಟೋರಿ ರೈಟಿಂಗ್, ಚಿತ್ರಕಥೆ ಹೀಗೆ ನಾನಾ ವಿಭಾಗಗಳಲ್ಲಿಯೂ ಕೂಡ ಯಶಸ್ಸನ್ನು ಕಂಡರು. ಬಹುಬೇಗನೆ ಯಶಸ್ಸಿನ ತುತ್ತ ತುದಿಯನ್ನು ತಲುಪಿದಂತಹ ಪ್ರಭಾಕರ್ ಅವರು ಅಷ್ಟೇ ಬೇಗ ಕಣ್ಮರೆಯಾಗಿ ಹೋದರು. ತಮ್ಮ ಕೆಲವು ದುರಭ್ಯಾಸ ಹಾಗೂ ಅನಾರೋಗ್ಯದ ಪರಿಣಾಮ.

52ರ ಮಧ್ಯ ವಯಸ್ಸಿನಲ್ಲಿಯೇ ಪ್ರಭಾಕರ್ ಅವರು ನಮ್ಮೆಲ್ಲರನ್ನ ಅಗಲಿದರು. ಚಿತ್ರರಂಗದಲ್ಲಿ ಅವರು ಒಬ್ಬ ಅದ್ವಿತೀಯ ಹಾಗೂ ಅಭಿಜಾತ ಕಲಾವಿದರು ಎಂದು ಕರೆಸಿಕೊಂಡವರು. ಸುತ್ತಲಿನ ಎಲ್ಲಾ ಚಿತ್ರರಂಗದವರಿಗೂ ಕೂಡ ಬೇಕಾದಂತಹ ವ್ಯಕ್ತಿಯಾಗಿದ್ದರು. ಕನ್ನಡವನ್ನು ಕನ್ನಡದ ನೆಲದ ಹೊರಗೂ ಕೂಡ ಪ್ರತಿನಿಧಿಸಿದಂತಹ ಆಗಿನ ಕೆಲವೇ ಕೆಲವು ಅಪರೂಪದ ಕಲಾವಿದರಗಳಲ್ಲಿ ಈ ಟೈಗರ್ ಪ್ರಭಾಕರ್ ಅವರು ಕೂಡ ಒಬ್ಬರು.

ಇವರನ್ನು ಆಗ ಬೇರೆ ಚಿತ್ರರಂಗದಲ್ಲಿ ಕನ್ನಡಪ್ರಭಾಕರ್ ಎಂದೇ ಕಾರೆಯುತ್ತಿದ್ದರು. ಇನ್ನು ನಟನ ಬದುಕಿನ ಹೊರತಾಗಿ ಪ್ರಭಾಕರ್ ಅದರ ಆಚೆಗೂ ಕೂಡ ಒಬ್ಬ ಇಂಟರೆಸ್ಟಿಂಗ್ ವ್ಯಕ್ತಿಯಾಗಿದ್ದರು. ಅವರಿಗೆ ಕುಡಿತದ ಹವ್ಯಾಸ ಇತ್ತು ಹಾಗೂ ಒಂದಷ್ಟು ಅಫೇರುಗಳ ಹಿಂದೆಯೂ ಕೂಡ ಅವರ ಹೆಸರು ಆಗಾಗ ಕೇಳಿ ಬರುತ್ತಿತ್ತು. ಅವತ್ತಿನ ಮಟ್ಟಿಗೆ ಜನರಿಗೆ ಗೊತ್ತಿದ್ದಂತಹ ಇವರ ಅಫೇರ್ ಗಳ ಸಂಖ್ಯೆ ಗಿಂತಲೂ ಕೂಡ ಹೆಚ್ಚು

ಅಫೇರ್ ಗಳನ್ನು ಹೊಂದಿದ್ದರು ಎಂದು ಇವರ ಹತ್ತಿರದಲ್ಲಿ ಬೆಳೆದಂತಹ ಕೆಲವೊಂದಷ್ಟು ಜನ ಹೇಳುತ್ತಾರೆ. ಆಗಿನ ಎಲ್ಲ ಸ್ಟಾರ್ ಹೀರೋಗಳ ಚಿತ್ರಗಳಲ್ಲಿಯೂ ಕೂಡ ಪ್ರಭಾಕರ್ ಅವರೇ ಮುಖ್ಯ ವಿಲ್ಲನ್ ಆಗಿದ್ದರು. ಕೇವಲ ದಕ್ಷಿಣಕ್ಕೆ ಮಾತ್ರವೇ ಸೀಮಿತವಾಗಿರದೆ ಪ್ರಭಾಕರ್ ಹಿಂದಿಯಲ್ಲಿ ಯೂ ಕೂಡ ತಮ್ಮ ಚಾಪನ್ನು ಮೂಡಿಸಿದ್ದರು. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

By admin

Leave a Reply

Your email address will not be published. Required fields are marked *