ಮಿಥುನ ರಾಶಿ ಜುಲೈ ಮಾಸ ಭವಿಷ್ಯ..ಬಂದೆ ಬಿಡ್ತು ನೀವು ಕಾಯ್ತಾ ಇದ್ದ ಒಂದು ಸುವರ್ಣ ಯೋಗ

ಮಿಥುನ ರಾಶಿ ಜುಲೈ 2023 ಮಾಸ ಭವಿಷ್ಯ……….||

WhatsApp Group Join Now
Telegram Group Join Now

ಮಿಥುನ ರಾಶಿಯ ಭವಿಷ್ಯವನ್ನು ನೋಡುವುದಕ್ಕೂ ಮೊದಲು ಈ ತಿಂಗಳು ಯಾವ ಗ್ರಹಗಳ ಬದಲಾವಣೆಗಳು ಆಗುತ್ತದೆ. ಹಾಗೂ ಅವುಗಳು ಮಿಥುನ ರಾಶಿಯವರಿಗೆ ಶುಭ ಫಲಗಳನ್ನು ಕೊಡುತ್ತದೆ ಅಶುಭ ಫಲಗಳನ್ನು ಕೊಡುತ್ತದ ಎನ್ನುವುದನ್ನು ಈ ಕೆಳಗೆ ತಿಳಿಯೋಣ ಅದಕ್ಕೂ ಮೊದಲು ಗ್ರಹಗಳ ಬದಲಾವಣೆ ಈ ತಿಂಗಳು ಉಂಟಾಗುತ್ತಿದೆ ಎಂದು ನೋಡಬಹುದಾದರೆ.

ಶುಕ್ರ ಬುಧ ರವಿ ಹಾಗೂ ಗುರು ಪರಿವರ್ತನೆಯಾಗುತ್ತಿದ್ದಾನೆ. ಗ್ರಹಗಳ ಬದಲಾವಣೆಯಿಂದ ಮಿಥುನ ರಾಶಿಯವರಿಗೆ ಯಾವ ಪರಿಣಾಮ ಉಂಟಾಗುತ್ತದೆ ಎಂದು ಈ ಕೆಳಗೆ ನೋಡೋಣ. ಶುಕ್ರ ಮಿಥುನ ರಾಶಿಯವರಿಗೆ ಪಂಚಮಾಧಿಪತಿ ವ್ಯಯಾಧಿಪತಿ ಹಾಗೂ ಮಿತ್ರ ಗ್ರಹ ಆಗಿದೆ. ಮೂರನೇ ಮನೆಯಲ್ಲಿ ಸಂಚಾರ ಅಂದರೆ ಕಟಕ ರಾಶಿಯಿಂದ ಸಿಂಹ ರಾಶಿಗೆ ರಾಶಿ ಪರಿವರ್ತನೆ ಹೊಂದುತ್ತಿದೆ. ಇನ್ನು ಶುಕ್ರ ನಿಮಗೆ ಯಾವ ರೀತಿಯ ಶುಭಫಲಗಳನ್ನು ಕೊಡುತ್ತಾನೆ ಎಂದು ನೋಡುವುದಾದರೆ.

ಮೂರನೇ ಮನೆಯಲ್ಲಿ ಶುಕ್ರ ಸಂಚಾರ ಮಾಡುತ್ತಿರುವುದರಿಂದ ಧೈರ್ಯ ಹೌದು ಯಾವುದೇ ಒಂದು ವಿಚಾರದಲ್ಲಿಯೂ ಕೂಡ ನಿಮಗೆ ಶುಕ್ರ ಧೈರ್ಯವನ್ನು ಕೊಡುತ್ತಾನೆ. ಹಾಗೂ ನಿಮಗೆ ಹಣಕಾಸಿನ ವಿಚಾರದಲ್ಲಿಯೂ ಕೂಡ ಅಭಿವೃದ್ಧಿ ಉಂಟಾಗುತ್ತದೆ. ನಿಮ್ಮ ವ್ಯಾಪಾರ ವ್ಯವಹಾರಗಳಲ್ಲಿ ಹೆಚ್ಚಿನ ಲಾಭವನ್ನು ಕಾಣುತ್ತೀರಿ. ನೀವು ಯಾವ ಕೆಲಸವನ್ನು ಮಾಡಬೇಕು ಎಂದುಕೊಂಡಿರುತ್ತೀರೋ ಅವೆಲ್ಲವೂ ಕೂಡ ಯಾವುದೇ ಅಡೆತಡೆ ಇಲ್ಲದೆ ನೆರವೇರುತ್ತದೆ.

See also  ಮುಕೇಶ್ ಅಂಬಾನಿ ಯವರ ಜಾತಕ ವಿಶ್ಲೇಷಣೆ ಈ ರೀತಿ ನಿಮ್ಮ ಜಾತಕ ಇದ್ದಲ್ಲಿ ನೀವು ಅತ್ಯಂತ ಶ್ರೀಮಂತರಾಗುವಿರಿ

ಜಯ ಗೆಲುವು ಶಕ್ತಿ ಸಹೋದರ ಸಹೋದರಿಯರಿಂದ ನಿಮಗೆ ಸಂತೋಷ ಪ್ರಾಪ್ತಿಯಾಗುತ್ತದೆ. ಹಾಗೂ ನೀವೇನಾದರೂ ಯಾವುದಾದರೂ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರೆ ಅದರಿಂದ ಮುಕ್ತಿಯನ್ನು ಪಡೆಯುತ್ತೀರಿ. ಗೌರವ ಸನ್ಮಾನಗಳು ಇವೆಲ್ಲವೂ ಕೂಡ ಪ್ರಾಪ್ತಿಯಾಗುತ್ತದೆ. ಹಾಗೂ ದೈವಪೂಜೆ, ದೈವಾರಾಧನೆ ಹೀಗೆ ದೇವತಾ ಕಾರ್ಯಗಳಲ್ಲಿ ಹೆಚ್ಚು ಭಾಗವಹಿಸುತ್ತೀರಿ ಎಂದು ಹೇಳಬಹುದು.

ಆಧ್ಯಾತ್ಮಿಕ ವಿಚಾರಗಳಲ್ಲಿ ಸರಿಯಾಗಿ ಯೋಚನೆಯನ್ನು ಮಾಡುತ್ತೀರಿ. ಹಾಗೂ ನಿಜವಾದ ಸ್ನೇಹಿತರನ್ನು ಪಡೆದುಕೊಳ್ಳುತ್ತೀರಿ. ಹಾಗೂ ಯಾವುದೇ ದೊಡ್ಡ ವ್ಯಾಪಾರ ವ್ಯವಹಾರ ಮಾಡುತ್ತಿರುವಂತಹ ಜನರಿಗೆ ಈ ಒಂದು ಸಮಯ ಬಹಳ ಅದ್ಭುತವಾದಂತಹ ಸಮಯ ಎಂದೇ ಹೇಳಬಹುದು. ಈ ಸಮಯದಲ್ಲಿ ಅವರು ಅತಿಹೆಚ್ಚಿನ ಲಾಭವನ್ನು ಅಂದರೆ ಆರ್ಥಿಕ ಅಭಿವೃದ್ಧಿಯನ್ನು ಹೊಂದಬಹುದಾಗಿದೆ. ಆದರೆ ಕೆಲವೊಂದಷ್ಟು ಜನರಿಗೆ ಕೆಲವೊಂದಷ್ಟು ವಿಚಾರದಲ್ಲಿ ಅಪಮಾನ ಅವಮಾನಗಳು ಉಂಟಾಗುವ ಸಾಧ್ಯತೆ ಇದೆ.

ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಶತ್ರುಗಳು ಹುಟ್ಟಿಕೊಳ್ಳುತ್ತಾರೆ ಹೀಗೆ ಕೆಲವೊಂದಷ್ಟು ವಿಚಾರದಲ್ಲಿ ಕೆಲವೊಂದಷ್ಟು ಜನ ಅಗೌರವವನ್ನು ಸಹ ಪಡೆದುಕೊಳ್ಳುತ್ತಾರೆ ಹೀಗೆ ಒಬ್ಬೊಬ್ಬರು ಒಂದೊಂದು ರೀತಿಯಾದಂತಹ ಫಲಗಳನ್ನು ಪಡೆಯುತ್ತಾರೆ. ಅದರಲ್ಲೂ ಎಲ್ಲವೂ ಕೂಡ ಅವರ ಜಾತಕದ ಅನುಸಾರ ಅವರ ಗ್ರಹಗಳ ಅನುಸಾರ ಎಲ್ಲಾ ರೀತಿಯ ಫಲಗಳನ್ನು ಪಡೆದುಕೊಳ್ಳಬೇಕಾಗುತ್ತದೆ. ಆದ್ದರಿಂದ ಇವೆಲ್ಲವೂ ಕೂಡ ಗೋಚಾರದ ಫಲಗಳಾಗಿದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]


crossorigin="anonymous">