ಶಕ್ತಿಶಾಲಿ ನರಸಿಂಹ ದೇವರ ಅನುಗ್ರಹದಿಂದ ಈ ರಾಶಿಗಳಿಗೆ ಇಂದು ಅನೀರಿಕ್ಷಿತ ಧನಾಗಮನ ಕಾರ್ಯಜಯ.. - Karnataka's Best News Portal
https://adulateearring.com/t77pg9f0bn?key=27d0eac1279d1d54f242ce019dac0514

ಮೇಷ ರಾಶಿ:- ಇಂದು ಸಾಕಷ್ಟು ಖಿನ್ನತೆ ಮತ್ತು ತೊಡಕುಗಳನ್ನು ಅನು ಭವಿಸುತ್ತೀರಿ. ನಿಮ್ಮ ಮೇಲೆ ಹೆಚ್ಚಿನ ಕೆಲಸದ ಹೊರೆ ಹಾಕುವುದನ್ನು ತಪ್ಪಿಸಿ. ಇದು ನಿಮ್ಮ ಆರೋಗ್ಯವನ್ನು ದುರ್ಬಲಗೊಳಿಸುತ್ತದೆ. ಪೋಷಕರು ತಾಳ್ಮೆಯಿಂದ ಕೆಲಸ ಮಾಡಲು ಸೂಚಿಸಲಾಗಿದೆ. ಹೊಸ ಕೆಲಸವನ್ನು ಪ್ರಯತ್ನಿಸುತ್ತಿದ್ದರೆ ಹೆಚ್ಚು ಪ್ರಚಾರದ ಕಡೆ ಗಮನಹರಿಸ ಬೇಕು. ಅದೃಷ್ಟ ಸಂಖ್ಯೆ – 4 ಅದೃಷ್ಟ ಬಣ್ಣ – ಹಸಿರು ಬಣ್ಣ ಸಮಯ – ಸಂಜೆ 6 ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ

ವೃಷಭ ರಾಶಿ:- ವ್ಯಾಪಾರ ಮಾಡಿದರೆ ಲಾಭ ಗಳಿಸುವ ಉತ್ತಮ ಅವಕಾಶಗಳನ್ನು ಪಡೆಯುವ ಸಾಧ್ಯತೆ ಇದೆ. ಹಣ ಕಾಸಿನ ಸಮಸ್ಯೆ ಬಗೆಹರಿಯುತ್ತದೆ. ಉದ್ಯೋಗದಲ್ಲಿರುವಂತಹ ಜನರು ಬಾಕಿ ಇರುವಂತಹ ಎಲ್ಲಾ ಕಾರ್ಯಗಳನ್ನು ಪೂರ್ಣಗೊಳಿಸಲು ಶ್ರಮವನ್ನು ವಹಿಸಬೇಕಾಗುತ್ತದೆ. ಇನ್ನು ಕುಟುಂಬ ಜೀವನದ ಪರಿಸ್ಥಿತಿಗಳು ಈ ದಿನ ಸಾಮಾನ್ಯವಾಗಿರುತ್ತದೆ. ಅದೃಷ್ಟ ಸಂಖ್ಯೆ – 5 ಅದೃಷ್ಟ ಬಣ್ಣ – ನೀಲಿ ಬಣ್ಣ ಸಮಯ – ಸಂಜೆ 5:00ಯಿಂದ ರಾತ್ರಿ 7:30 ವರೆಗೆ.

ಮಿಥುನ ರಾಶಿ:- ಈ ದಿನ ನಿಮ್ಮ ಎಲ್ಲಾ ಗಮನವೂ ಕೂಡ ನಿಮ್ಮ ಆರ್ಥಿಕ ಪರಿಸ್ಥಿತಿಯ ಮೇಲೆ ಇರುತ್ತದೆ. ಹಣಕಾಸಿನ ವಿಷಯಗಳ ಬಗ್ಗೆ ತುಂಬಾ ಗಂಭೀರವಾಗಿರುತ್ತೀರಿ. ನಿಮ್ಮ ಯೋಜನೆಗಳು ಸಹ ಬದಲಾಯಿಸ ಬಹುದು. ಆದರೂ ಈ ಅವಧಿಯಲ್ಲಿ ಸಾಲ ಪಡೆಯುವುದನ್ನು ಕೂಡ ತಪ್ಪಿಸಬೇಕಾಗುತ್ತದೆ. ಅದೃಷ್ಟ ಸಂಖ್ಯೆ – 4 ಅದೃಷ್ಟ ಬಣ್ಣ – ಬಿಳಿ ಬಣ್ಣ ಸಮಯ – ಬೆಳಗ್ಗೆ 7:00 ಯಿಂದ ಮಧ್ಯಾಹ್ನ 1 ಗಂಟೆಯವರೆಗೆ.

ಕಟಕ ರಾಶಿ:- ನಿಮ್ಮ ಸ್ವಭಾವದಲ್ಲಿ ಸ್ವಲ್ಪ ಬದಲಾವಣೆಯನ್ನು ಮಾಡಿಕೊಂಡರೆ ನಿಮಗೆ ಬರುವಂತಹ ಅನೇಕ ತೊಂದರೆಗಳನ್ನು ಕೂಡ ನೀವು ನಿವಾರಿಸಬಹುದು. ನೀವು ಇಂದು ಆರಾಮವಾಗಿ ಕೆಲಸ ಮಾಡಿದರೆ ಕುಟುಂಬ ಸದಸ್ಯರೊಂದಿಗಿನ ನಿಮ್ಮ ಸಂಬಂಧವನ್ನು ಕೂಡ ಸುಧಾರಿಸಬಹುದು. ಮತ್ತು ಈ ದಿನ ನಿಮ್ಮ ಮಕ್ಕಳ ಬಗ್ಗೆ ನೀವು ಹೆಚ್ಚಿನ ಗಮನವನ್ನು ಹರಿಸಬೇಕು. ಅದೃಷ್ಟ ಸಂಖ್ಯೆ – 1 ಅದೃಷ್ಟ ಬಣ್ಣ – ಕೆಂಪು ಬಣ್ಣ ಸಮಯ – ಬೆಳಗ್ಗೆ 6:30 ರಿಂದ ಮಧ್ಯಾಹ್ನ 12 ಗಂಟೆವರೆಗೆ.

ಸಿಂಹ ರಾಶಿ:- ಈ ದಿನ ನಿಮಗೆ ಒಳ್ಳೆಯ ದಿನವಾಗಿರುತ್ತದೆ. ಹಾಗು ನಿಮ್ಮ ಪರಿಸ್ಥಿತಿಗಳು ಕೂಡ ಅನುಕೂಲಕರವಾಗಿರುತ್ತದೆ. ಕಚೇರಿಯಲ್ಲಿ ಅಭಿನಂದನೆಗಳು ಮತ್ತು ಗೌರವವನ್ನು ಪಡೆಯುತ್ತೀರಿ. ಮತ್ತು ಇಂದು ನಿಮ್ಮ ಸಂಗಾತಿಯೊಂದಿಗೆ ಚೆನ್ನಾಗಿ ಮಾತನಾಡಿ. ಮತ್ತು ಕುಟುಂಬಕ್ಕೆ ಸಂಬಂಧಿಸಿದ ಕೆಲವು ವಿಷಯಗಳು ಇಂದು ನಿಮ್ಮನ್ನು ಕಾಡಬಹುದು. ಅದೃಷ್ಟ ಸಂಖ್ಯೆ – 1 ಅದೃಷ್ಟ ಬಣ್ಣ – ನೀಲಿ ಬಣ್ಣ ಸಮಯ – ಸಂಜೆ 4:30 ರಿಂದ ರಾತ್ರಿ 7 ಗಂಟೆಯವರೆಗೆ.

ಕನ್ಯಾ ರಾಶಿ:- ನೀವು ಯಶಸ್ವಿಯಾಗಲು ಬಯಸಿದರೆ ಕಷ್ಟಪಟ್ಟು ಕೆಲಸವನ್ನು ಮಾಡಬೇಕಾಗುತ್ತದೆ. ಈ ಸಮಯದಲ್ಲಿ ನೀವು ನಿರೀಕ್ಷೆಗೆ ತಕ್ಕಂತೆ ಫಲಿತಾಂಶವನ್ನು ಪಡೆಯಲು ಸಾಧ್ಯವಾಗದೇ ಇದ್ದರೆ ನೀವು ನಿರಾಸೆಗೊಳ್ಳುವುದು ಅಗತ್ಯವಿಲ್ಲ. ಶೀಘ್ರದಲ್ಲಿ ಎಲ್ಲಾ ವಿಷಯಗಳು ಕೂಡ ನಿಮ್ಮ ಪರವಾಗಿ ಗೋಚರಿಸುತ್ತದೆ. ಹಣದ ದೃಷ್ಟಿಯಿಂದ ಈ ದಿನ ಸಾಮಾನ್ಯವಾಗಿರುತ್ತದೆ. ಅದೃಷ್ಟ ಸಂಖ್ಯೆ – 2 ಅದೃಷ್ಟ ಬಣ್ಣ – ನೇರಳೆ ಬಣ್ಣ ಸಮಯ – ಸಂಜೆ 6 ಗಂಟೆಯಿಂದ ರಾತ್ರಿ 9 ಗಂಟೆವರೆಗೆ

ತುಲಾ ರಾಶಿ:- ಇಂದು ಇದ್ದಕ್ಕಿದ್ದಂತೆ ಕೆಲವು ಒಳ್ಳೆಯ ಸುದ್ದಿಗಳನ್ನು ಕೂಡ ಪಡೆಯಬಹುದು. ಅದು ನಿಮಗೆ ತುಂಬಾನೇ ಸಂತೋಷವನ್ನು ನೀಡುತ್ತದೆ. ಆರ್ಥಿಕ ದೃಷ್ಟಿಯಿಂದ ಈ ದಿನವು ತುಂಬಾನೇ ಒಳ್ಳೆಯ ದಿನವಾಗಿರುತ್ತದೆ. ನಿಮ್ಮ ಆದಾಯ ಕೂಡ ಹೆಚ್ಚಾಗಬಹುದು. ನಿಮ್ಮ ವೆಚ್ಚವು ಕಡಿಮೆಯಾಗುತ್ತದೆ. ಅದೃಷ್ಟ ಸಂಖ್ಯೆ – 1 ಅದೃಷ್ಟ ಬಣ್ಣ – ಕೆಂಪು ಬಣ್ಣ ಸಮಯ – ಸಂಜೆ 4:00ಯಿಂದ ರಾತ್ರಿ 7:00ವರೆಗೆ

ವೃಶ್ಚಿಕ ರಾಶಿ:- ಇಂದು ಬಹಳ ಸಮಯದ ನಂತರ ಕುಟುಂಬದೊಂದಿಗೆ ಸ್ವಲ್ಪ ಸಮಯವನ್ನು ಕಳೆಯಲು ನಿಮಗೆ ಅವಕಾಶ ಸಿಗುತ್ತದೆ. ಎಲ್ಲಾ ಒತ್ತಡವನ್ನು ಮರೆತು ಈ ಅವಕಾಶವನ್ನು ಸಂಪೂರ್ಣವಾಗಿ ಆನಂದಿಸು ವುದು ಉತ್ತಮ. ನೀವು ಇಂದು ನಿಮಗಾಗಿ ಸಾಕಷ್ಟು ಸಮಯವನ್ನು ಪಡೆಯುತ್ತೀರಿ ಮತ್ತು ಮನೆಯ ಕೆಲಸದಲ್ಲಿ ಕೂಡ ನಿಮಗೆ ಹೆಚ್ಚಿನ ಗಮನವನ್ನು ಹರಿಸಲು ಸಾಧ್ಯವಾಗುತ್ತದೆ. ಅದೃಷ್ಟ ಸಂಖ್ಯೆ – 1 ಅದೃಷ್ಟ ಬಣ್ಣ – ಹಳದಿ ಬಣ್ಣ ಸಮಯ – ಬೆಳಗ್ಗೆ 7:30 ರಿಂದ 9 ಗಂಟೆವರೆಗೆ.

ಧನಸ್ಸು ರಾಶಿ:- ಹಾಗೂ ಈ ಸಮಯದಲ್ಲಿ ಉದ್ಯೋಗಿಗಳಿಗೆ ಕೆಲವು ಸವಾಲುಗಳು ಕೂಡ ಬರಬಹುದು. ನೀವು ಈ ದಿನ ತುಂಬಾ ಜಾಗರೂ ಕತೆಯನ್ನು ವಹಿಸಬೇಕಾಗುತ್ತದೆ. ಮತ್ತು ಸಂಗಾತಿಯೊಂದಿಗೆ ನಿಮ್ಮ ಸಂಬಂಧವನ್ನು ಸುಧಾರಿಸಲು ಪ್ರಯತ್ನಿಸಿ. ನಿಮಗೇನಾದರು ಸಮಸ್ಯೆ ಗಳಿದ್ದರೆ ನಿಮ್ಮ ಮನೆಯ ಗುರು ಹಿರಿಯರಿಗೆ ಹೇಳಿ ಆ ಸಮಸ್ಯೆ ಗಳನ್ನು ಸುಧಾರಿಸಿಕೊಳ್ಳಲು ನೀವು ಪ್ರಯತ್ನವನ್ನು ಮಾಡಬೇಕಾಗುತ್ತದೆ. ಅದೃಷ್ಟ ಸಂಖ್ಯೆ – 6 ಅದೃಷ್ಟ ಬಣ್ಣ – ನೀಲಿ ಬಣ್ಣ ಸಮಯ – ಬೆಳಿಗ್ಗೆ 8 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ

ಮಕರ ರಾಶಿ:- ನೀವೇನಾದರೂ ಸರ್ಕಾರಿ ಕ್ಷೇತ್ರದಲ್ಲಿ ಕೆಲಸ ಮಾಡುತ್ತಾ ಇದ್ದರೆ ಇಂದು ನಿಮಗೆ ಬಹಳ ಮುಖ್ಯವಾದ ದಿನವಾಗಿರುತ್ತದೆ. ನಿಮಗೆ ಬೇಕಾದ ವರ್ಗಾವಣೆಯನ್ನು ಪಡೆಯುವ ಸಾಧ್ಯತೆ ಇದೆ. ನೀವೇನಾ ದರೂ ಖಾಸಗಿ ಕ್ಷೇತ್ರದಲ್ಲಿ ಉದ್ಯೋಗವನ್ನು ಮಾಡುತ್ತ ಇದ್ದರೆ ಈ ಸಮಯದಲ್ಲಿ ಬಹಳ ನೀವು ಪರಿಶ್ರಮವನ್ನು ಪಟ್ಟು ಕೆಲಸವನ್ನು ಮಾಡಬೇಕಾಗುತ್ತದೆ. ನಿಮ್ಮ ಮೇಲಾಧಿಕಾರಿಗಳು ನಿಮ್ಮ ಮೇಲೆ ಹೆಚ್ಚಿನ ಗಮನವನ್ನು ಹರಿಸಿರುತ್ತಾರೆ. ಅದೃಷ್ಟ ಸಂಖ್ಯೆ – 1 ಅದೃಷ್ಟ ಬಣ್ಣ – ಕೇಸರಿ ಬಣ್ಣ ಸಮಯ – ಬೆಳಿಗ್ಗೆ 6:30 ರಿಂದ ಮಧ್ಯಾಹ್ನ 1:30 ರವರೆಗೆ

ಕುಂಭ ರಾಶಿ:- ಪ್ರೀತಿಯ ವಿಷಯದಲ್ಲಿ ಇಂದು ಬಹಳ ವಿಶೇಷವಾದ ದಿನವಾಗಿರುತ್ತದೆ. ಕೆಲವು ದಿನಗಳ ವರೆಗೆ ಕೆಲಸದಲ್ಲಿ ನಿರಂತರವಾಗಿರು ವುದರಿಂದ ನಿಮ್ಮ ಸಂಗಾತಿಯನ್ನು ಭೇಟಿ ಮಾಡಲು ನಿಮಗೆ ಸಾಧ್ಯವಾ ಗದೇ ಇದ್ದರೆ ಇಂದು ನಿಮಗೆ ಭೇಟಿಯಾಗುವ ಅವಕಾಶ ಕೂಡ ಸಿಗುತ್ತದೆ ಮದುವೆಯಾಗಿದ್ದರೆ ನಿಮ್ಮ ಸಂಗಾತಿಯೊಂದಿಗೆ ನಿಮ್ಮ ಒಡನಾಟ ಚೆನ್ನಾಗಿರುತ್ತದೆ. ಅದೃಷ್ಟ ಸಂಖ್ಯೆ – 4 ಅದೃಷ್ಟ ಬಣ್ಣ – ಹಸಿರು ಬಣ್ಣ ಸಮಯ – ಸಂಜೆ 7:30 ರಿಂದ ರಾತ್ರಿ 9 ಗಂಟೆಯವರೆಗೆ

ಮೀನ ರಾಶಿ:- ಆರೋಗ್ಯದ ದೃಷ್ಟಿಯಿಂದ ಈ ದಿನವೂ ಅನುಕೂಲಕರ ವಾಗಿರುತ್ತದೆ. ಈ ಹಿಂದೆ ಆರೋಗ್ಯದ ಸಮಸ್ಯೆ ಇದ್ದರೆ ಈ ದಿನ ಅವೆಲ್ಲವೂ ಕೂಡ ನಿವಾರಣೆ ಆಗುವ ಸಾಧ್ಯತೆ ಇದೆ. ಹಾಗೆಯೇ ನೀವು ಇಂದು ತುಂಬಾನೇ ಶಕ್ತಿಯುತವಾಗಿರುವಂತಹ ಮನಸ್ಥಿತಿಯಲ್ಲಿ ಇರುತ್ತೀರಿ. ಮತ್ತು ಕಚೇರಿಯಲ್ಲಿ ಬಾಗಿ ಇರುವಂತಹ ಕೆಲಸದ ಹೊರೆ ಕಡಿಮೆಯಾಗುತ್ತದೆ. ಅದೃಷ್ಟ ಸಂಖ್ಯೆ – 2 ಅದೃಷ್ಟ ಬಣ್ಣ – ಬಿಳಿ ಬಣ್ಣ ಸಮಯ – ಮಧ್ಯಾಹ್ನ 2:30 ರಿಂದ ಸಂಜೆ 5:00 ವರೆಗೆ.

By admin

Leave a Reply

Your email address will not be published. Required fields are marked *