ರೇಷನ್ ಕಾರ್ಡ್ ಗೆ ಅರ್ಜಿ ಆಹ್ವಾನ…. ಮೊಬೈಲ್ ನಿಂದ ಮನೆಯಲ್ಲಿಯೇ ಎಪಿಎಲ್ ಅಥವಾ ಬಿಪಿಎಲ್ ಕಾರ್ಡ್ ಪಡೆಯುವ ಸಂಪೂರ್ಣ ಮಾಹಿತಿ……..||
ಇತ್ತೀಚಿನ ದಿನದಲ್ಲಿ ಪ್ರತಿಯೊಬ್ಬರ ಬಳಿಯೂ ಕೂಡ ಎಪಿಎಲ್ ಕಾರ್ಡ್ ಅಥವಾ ಬಿಪಿಎಲ್ ಕಾರ್ಡ್ ಇರಲೇ ಬೇಕಾಗಿರುತ್ತದೆ ಎಂದೇ ಹೇಳ ಬಹುದು. ಹೌದು ಏಕೆಂದರೆ ಯಾವುದೇ ರೀತಿಯ ಪ್ರಯೋಜನವನ್ನು ನಾವು ಪಡೆದುಕೊಳ್ಳಬೇಕು ಎಂದರೆ ನಾವು ರೇಷನ್ ಕಾರ್ಡ್ ಗಳನ್ನು ತೋರಿಸುವುದು ಬಹಳ ಮುಖ್ಯವಾಗಿರುತ್ತದೆ.
ಹೌದು ಅದರಲ್ಲೂ ಬಿಪಿಎಲ್ ಕಾರ್ಡ್ ಹೊಂದಿರುವಂತಹ ಜನರು ಸರ್ಕಾರದಿಂದ ಬರುವಂತಹ ಹಲವಾರು ಸೌಕರ್ಯಗಳನ್ನು ಪಡೆದು ಕೊಳ್ಳಬಹುದಾಗಿದೆ ಆದರೆ ಎಪಿಎಲ್ ಕಾರ್ಡ್ ಹೊಂದಿರುವವರು ಯಾವುದೇ ರೀತಿಯಾದಂತಹ ಹೆಚ್ಚಿನ ಪ್ರಯೋಜನವನ್ನು ಪಡೆದು ಕೊಳ್ಳಲು ಸಾಧ್ಯವಾಗುವುದಿಲ್ಲ ಆದ್ದರಿಂದ ಯಾರಲ್ಲಿ ವಾರ್ಷಿಕ ಆದಾಯ ಕಡಿಮೆ ಇರುತ್ತದೆಯೋ ಅಂತವರು ಈ ಒಂದು ಬಿಪಿಎಲ್ ರೇಷನ್ ಕಾರ್ಡ್ ಅನ್ನು ಸುಲಭವಾಗಿ ಪಡೆಯಬಹುದಾಗಿದೆ.
ಹೌದು ಹಾಗಾದರೆ ಈ ದಿನ ಯಾರ ಬಳಿ ಯಾವುದೇ ರೀತಿಯಾದಂತಹ ಎಪಿಎಲ್ ಕಾರ್ಡ್ ಅಥವಾ ಬಿಪಿಎಲ್ ಕಾರ್ಡ್ ಇಲ್ಲವೋ ಅವರು ನಿಮ್ಮ ಮೊಬೈಲ್ ನಲ್ಲಿ ಹೇಗೆ ಅರ್ಜಿಯನ್ನು ಸಲ್ಲಿಸಿ ಪಡಿತರ ಚೀಟಿಯನ್ನು ಪಡೆಯಬಹುದು, ಯಾರೆಲ್ಲಾ ಎಪಿಎಲ್ ಕಾರ್ಡ್ ಪಡೆಯುವುದಕ್ಕೆ ಅರ್ಹರಿರುತ್ತಾರೆ, ಯಾರೆಲ್ಲ ಬಿಪಿಎಲ್ ಕಾರ್ಡ್ ಪಡೆಯ ಬೇಕಾಗುತ್ತದೆ, ಯಾವ ಕೆಲವು ದಾಖಲೆಗಳು ಇದ್ದವರು ಬಿಬಿಎಲ್ ಕಾರ್ಡ್ ಪಡೆದುಕೊಳ್ಳಬಹುದು.
ಅಂದರೆ ಯಾವ ಅರ್ಹತೆಗಳಿದ್ದರೆ ಅವರು ಬಿಪಿಎಲ್ ಕಾರ್ಡ್ ಪಡೆಯ ಬಹುದು ಹೀಗೆ ಈ ಎಲ್ಲಾ ವಿಚಾರವಾಗಿ ಸಂಬಂಧಿಸಿದ ಹಲವಾರು ಮಾಹಿತಿಗಳ ಬಗ್ಗೆ ಈ ದಿನ ತಿಳಿಯೋಣ. ಮೊದಲನೆಯದಾಗಿ ಬಿಪಿಎಲ್ ಕಾರ್ಡ್ ಪಡೆಯುವುದಕ್ಕೆ ಯಾವುದೆಲ್ಲ ಅರ್ಹತೆಗಳು ಇರುತ್ತದೆ ಎಂದು ನೋಡುವುದಾದರೆ ಮೊದಲನೆಯದಾಗಿ ಬಿಪಿಎಲ್ ಕಾರ್ಡ್ ಪಡೆಯು ವಂತಹ ಕುಟುಂಬದ ಸದಸ್ಯ ಅಂದರೆ ಯಜಮಾನನ ವಾರ್ಷಿಕ ಆದಾಯ 1,20,000 ಒಳಗಡೆ ಹಣವನ್ನು ಪಡೆಯುತ್ತಿದ್ದರೆ.
ಅಂಥವರು ಬಿಪಿಎಲ್ ಕಾರ್ಡ್ ಪಡೆಯುವಂತಹ ಹಕ್ಕನ್ನು ಹೊಂದಿರು ತ್ತಾರೆ. ಅದೇ ರೀತಿಯಾಗಿ 1,60,000 ಮೇಲೆ ವಾರ್ಷಿಕ ಆದಾಯವನ್ನು ಪಡೆಯುವಂತಹ ಕುಟುಂಬ ಎಪಿಎಲ್ ಕಾರ್ಡ್ ಪಡೆಯಬಹುದು. ಹಾಗಾದರೆ ಈ ದಿನ ರೇಷನ್ ಕಾರ್ಡ್ ಹೊಸದಾಗಿ ಮಾಡಿಸಿಕೊಳ್ಳಬೇಕು ಎಂದರೆ ನೀವು ನಿಮ್ಮ ಮೊಬೈಲ್ ನಲ್ಲಿ ಅರ್ಜಿಯನ್ನು ಹೇಗೆ ಹಾಕಬಹುದು ಎಂದು ನೋಡುವುದಾದರೆ.
ಮೊದಲನೆಯದಾಗಿ ಅರ್ಜಿ ಹಾಕುವಂತಹ ಪ್ರತಿಯೊಬ್ಬರ ಆಧಾರ್ ಕಾರ್ಡ್ ಹಾಗೂ ಆದಾಯ ಪ್ರಮಾಣ ಪತ್ರ, ಈ ರೀತಿ ಕೆಲವೊಂದು ದಾಖಲಾತಿಗಳನ್ನು ಇಟ್ಟುಕೊಂಡು ಆನ್ಲೈನ್ ನಲ್ಲಿ ಸೇವಾ ಸಿಂಧು ವೆಬ್ಸೈಟ್ ನಲ್ಲಿ ನೀವೇ ಅರ್ಜಿಯನ್ನು ಸುಲಭವಾಗಿ ಹಾಕಬಹುದು. ನಿಮ್ಮ ಆಧಾರ್ ಕಾರ್ಡ್ ಗೆ ಮೊಬೈಲ್ ನಂಬರ್ ಲಿಂಕ್ ಇಲ್ಲ ಎಂದರೆ ಆನ್ಲೈನ್ ಸೆಂಟರ್ ಗಳಿಗೆ ಹೋಗಿ ಅಲ್ಲಿ ನೀವು ಅರ್ಜಿಯನ್ನು ಸಲ್ಲಿಸಬೇಕಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.