ತುಳಸಿಗಿಡ ಈ ದಿಕ್ಕಿಗೆ ಇಟ್ಟರೆ ಬಡತನ ಬರುತ್ತೆ..ನಿಮ್ಮ ಮನೆಯಲ್ಲಿ ತುಳಸಿ ಈ ದಿಕ್ಕಿಗಿದ್ದರೆ ಈಗಲೇ ಬದಲಿಸಿ.. - Karnataka's Best News Portal
https://adulateearring.com/t77pg9f0bn?key=27d0eac1279d1d54f242ce019dac0514

ತುಳಸಿ ಗಿಡವನ್ನು ಈ ದಿಕ್ಕಿನಲ್ಲಿ ಇಟ್ಟರೆ ಬಡತನ ಬರುತ್ತೆ…….||

ತುಳಸಿಯು ಭಗವಾನ್ ವಿಷ್ಣುವಿಗೆ ಅತ್ಯಂತ ಪ್ರಿಯ ಹಾಗೂ ತುಳಸಿ ಗಿಡವನ್ನು ತಾಯಿ ಲಕ್ಷ್ಮಿ ದೇವಿಯ ಪ್ರತೀಕ ಎಂದು ಪರಿಗಣಿಸಲಾಗುತ್ತದೆ. ಯಾರ ಮನೆಯಲ್ಲಿ ತುಳಸಿ ಗಿಡವು ಹಸಿರಿನಿಂದ ಕೂಡಿರುತ್ತದೆಯೋ ಅಂತವರ ಮನೆಯಲ್ಲಿ ಪ್ರತಿಯೊಬ್ಬರೂ ಕೂಡ ಸಂತೋಷವಾಗಿ ಇರುತ್ತಾರೆ ಮತ್ತು ಅಂತಹ ಮನೆಯಲ್ಲಿ ತಾಯಿ ಲಕ್ಷ್ಮಿ ದೇವಿಯು ಸದಾಕಾಲ ನೆಲೆಸುತ್ತಾಳೆ ಎಂದು ಹೇಳಲಾಗುತ್ತದೆ.

ಹಾಗಾಗಿ ಲಕ್ಷ್ಮಿಯ ಆಶೀರ್ವಾದವು ನಿಮ್ಮ ಮನೆಯಲ್ಲಿ ಉಳಿಯುವು ದಕ್ಕೆ ತುಳಸಿ ಗಿಡವನ್ನು ಸರಿಯಾದ ದಿಕ್ಕಿನಲ್ಲಿ ಇಡುವುದು ತುಂಬಾ ಅವಶ್ಯಕ. ತುಳಸಿ ಗಿಡದ ದಿಕ್ಕಿನ ವಿಶೇಷವಾದ ಮಹತ್ವವನ್ನು ವಾಸ್ತುವಿನಲ್ಲೂ ಹೇಳಲಾಗಿದೆ. ತುಳಸಿ ಗಿಡವನ್ನು ಸರಿಯಾದ ದಿಕ್ಕಿನಲ್ಲಿ ಮತ್ತು ಸರಿಯಾದ ದಿಕ್ಕಿನಲ್ಲಿ ಇರಿಸಿದರೆ ನಿಮ್ಮ ಮನೆಯಲ್ಲಿ ಧನಾತ್ಮಕ ಶಕ್ತಿಯ ಅರಿವು ಹೆಚ್ಚಾಗುತ್ತದೆ ಮತ್ತು ಆರ್ಥಿಕ ಸ್ಥಿತಿಯು ಬಲಗೊಳ್ಳುತ್ತದೆ

ಹಾಗಾಗಿ ತುಳಸಿ ಗಿಡವನ್ನು ನೆಡುವಾಗ ಹೆಚ್ಚು ಕಾಳಜಿಯನ್ನು ವಹಿಸ ಬೇಕು ಹಾಗಾದರೆ ಈ ದಿನ ಯಾವ ದಿಕ್ಕಿನಲ್ಲಿ ತುಳಸಿ ಗಿಡವನ್ನು ನೆಟ್ಟರೆ ಅತ್ಯಂತ ಶುಭ ಎನ್ನುವುದರ ಸಂಪೂರ್ಣವಾದ ವಿವರ ಈ ಕೆಳಗಿನಂತೆ ಇದೆ. ಹಿಂದಿನ ಕಾಲದಲ್ಲಿ ತುಳಸಿ ಗಿಡವನ್ನು ಮನೆಯ ಅಂಗಳದ ಮಧ್ಯ ಭಾಗದಲ್ಲಿ ಇಡುವಂತಹ ಸಂಪ್ರದಾಯ ಇತ್ತು ಇದರಿಂದ ಸಸ್ಯಕ್ಕೆ ಸಾಕಷ್ಟು ಪ್ರಮಾಣದ ಸೂರ್ಯನ ಬೆಳಕು ಗಾಳಿ ಮತ್ತು ನೀರು ಲಭ್ಯವಾಗುತ್ತಿತ್ತು.

ಆದರೆ ಈಗ ಮನೆಗಳ ಗಾತ್ರ ಮೊದಲಿಗಿಂತ ಚಿಕ್ಕದಾಗಿರುವುದರಿಂದ ಮತ್ತು ಮಹಾನಗರಗಳಲ್ಲಿ ಫ್ಲಾಟ್ ಸಂಸ್ಕೃತಿ ಹೆಚ್ಚಾಗಿರುವುದರಿಂದ ತುಳಸಿ ಗಿಡವನ್ನು ಎಲ್ಲಿ ನಡೆಬೇಕು ಎನ್ನುವುದೇ ಒಂದು ದೊಡ್ಡ ಪ್ರಶ್ನೆಯಾಗಿದೆ. ನೀವು ಬಯಸಿದರೆ ಮನೆಯ ಮುಖ್ಯ ಭಾಗದಲ್ಲಿ ತುಳಸಿ ಗಿಡವನ್ನು ನೆಡಬಹುದು. ಆದರೆ ನಿಮ್ಮ ಮನೆಯ ಮುಖ್ಯ ಬಾಗಿಲಿಗೆ ಗಾಳಿ ನೀರು ಮತ್ತು ಸೂರ್ಯನ ಬೆಳಕು ಬರದಿದ್ದರೆ ತುಳಸಿ ಗಿಡವು ಒಣಗಿ ಹೋಗಬಹುದು.

ಅದಕ್ಕಾಗಿಯೇ ಅಂತಹ ಮನೆಯ ಬಾಲ್ಕನಿಗಳಲ್ಲಿ ತುಳಸಿ ಗಿಡವನ್ನು ನೆಡಬಹುದು. ಆದರೆ ಬಾಲ್ಕನಿಯು ಉತ್ತರ ಅಥವಾ ಪೂರ್ವ ದಿಕ್ಕಿನಲ್ಲಿ ಇರಬೇಕು ಅನ್ನುವುದನ್ನು ನೆನಪಿನಲ್ಲಿಡಿ. ಧಾರ್ಮಿಕ ನಂಬಿಕೆಗಳ ಪ್ರಕಾರ ದೇವತೆಗಳು ಈ ಎರಡು ದಿಕ್ಕಿನಲ್ಲಿ ನೆಲೆಸಿರುತ್ತಾರೆ ಅಂತ ನಂಬಲಾಗಿದೆ. ಉತ್ತರದಿಕ್ಕನ್ನು ಸಂಪತ್ತಿನ ದೇವರಾದ ಕುಬೇರನ ಸ್ಥಳ ಅಂತ ಪರಿಗಣಿಸಲಾಗಿದೆ.

ಆದ್ದರಿಂದ ಈ ದಿಕ್ಕಿನಲ್ಲಿ ತುಳಸಿ ಗಿಡವನ್ನು ನೆಡುವುದರಿಂದ ನಿಮ್ಮ ಮನೆಯಲ್ಲಿ ಹಣದ ಹರಿವು ಹೆಚ್ಚಾಗುತ್ತದೆ. ವಾಸ್ತು ನಿಯಮಗಳ ಪ್ರಕಾರ ತಪ್ಪಾಗಿಯೂ ತುಳಸಿ ಗಿಡವನ್ನು ದಕ್ಷಿಣದಿಕ್ಕಿನಲ್ಲಿ ನೆಡಬೇಡಿ. ಈ ದಿಕ್ಕನು ಪೂರ್ವಜರ ಆವಾಸಸ್ಥಾನ ಎಂದು ಪರಿಗಣಿಸಲಾಗಿದೆ. ಮತ್ತು ಈ ದಿಕ್ಕಿನಲ್ಲಿ ತುಳಸಿ ಗಿಡವನ್ನು ನೆಟ್ಟರೆ ಅದು ಒಣಗುತ್ತದೆ ಹಾಗೂ ತಾಯಿ ಲಕ್ಷ್ಮಿ ದೇವಿ ನಿಮ್ಮ ಮೇಲೆ ಅಸಮಾಧಾನ ಗೊಳ್ಳುತ್ತಾಳೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

By admin

Leave a Reply

Your email address will not be published. Required fields are marked *