ಬ್ಯಾಂಕ್ ನಿಂದ ಸಾಲ ಪಡೆದು ಏಜೆಂಟ್ ಗಳಿಂದ ಸಮಸ್ಯೆ ಅನುಭವಿಸುತ್ತಿದ್ದೀರಾ.? ತಲೆ ಕೆಡಿಸ್ಕೋಬೇಡಿ ಹೀಗೆ ಮಾಡಿ ಸಾಕು.. - Karnataka's Best News Portal
https://adulateearring.com/t77pg9f0bn?key=27d0eac1279d1d54f242ce019dac0514

ಬ್ಯಾಂಕ್ ನಿಂದ ಸಾಲ ಪಡೆದು ಏಜೆಂಟ್ ಗಳಿಂದ ಸಮಸ್ಯೆ ಅನುಭವಿಸುತ್ತಿದ್ದೀರಾ.? ತಲೆ ಕೆಡಿಸ್ಕೋಬೇಡಿ.!

ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರಿಗೂ ಕೂಡ ಬ್ಯಾಂಕ್ ಗಳಲ್ಲಿ ಸಾಲ ಮಾಡಬೇಕಾದ ಅವಶ್ಯಕತೆ ಇದ್ದೇ ಇರುತ್ತದೆ. ಮನೆ ಕಟ್ಟುವುದಕ್ಕಾಗಿ, ಸೈಟ್ ಖರೀದಿಸುವುದಕ್ಕಾಗಿ ಅಥವಾ ಚಿನ್ನ ಖರೀದಿಗೆ, ವಾಹನ ಖರೀದಿಗೆ ಹೀಗೆ ಒಂದಲ್ಲಾ ಒಂದು ಕಾರಣಕ್ಕಾಗಿ ಕೆಲ ಸಂದರ್ಭದಲ್ಲಿ ಬ್ಯಾಂಕ್ ಗಳಿಂದ ಲೋನ್ ಪಡೆದಿರುತ್ತೇವೆ. ಆದರೆ ಈ ರೀತಿ ಬ್ಯಾಂಕ್ ಗಳಿಂದ ಲೋನ್ ಪಡೆದ ಮೇಲೆ ಅವುಗಳ ವಂತಿಕೆ ಅಥವಾ ಬಡ್ಡಿದರಗಳನ್ನು ಮರುಪಾವತಿಸುವಾಗ ಸ್ವಲ್ಪ ವಿಳಂಬವಾದರೂ ಕೂಡ ಅನೇಕ ಸಮಸ್ಯೆಗಳು ತಲೆದೋರುತ್ತವೆ.

ಅದರಲ್ಲಿ ಮುಖ್ಯವಾಗಿ ಬ್ಯಾಂಕ್ ಗಳು ಅವರು ಕೊಟ್ಟಿದ್ದ ಸಾಲವನ್ನು ವಸೂಲಿ ಮಾಡಲು ರಿಕವರಿ ಏಜೆಂಟ್ ಗಳನ್ನು ನೇಮಿಸಿಕೊಂಡಿರುತ್ತಾರೆ. ಒಂದು ವೇಳೆ ನಿಮ್ಮ ಸಾಲವನ್ನು ವಸೂಲಿ ಮಾಡಲು ಅವರಿಗೆ ಅನುಮತಿ ಕೊಟ್ಟರೆ ಅವರು ನಾನಾ ರೀತಿಯಲ್ಲಿ ನಿಮಗೆ ತೊಂದರೆ ಕೊಡುತ್ತಾರೆ. ಸಂಬಂಧಿಕರಿಗೆ ಸ್ನೇಹಿತರಿಗೆ ಕರೆ ಮಾಡಿ ವಿಚಾರಿಸುವುದು, ಕರೆಗಳ ಮೂಲಕ ವಾಟ್ಸಪ್ ಸಂದೇಶಗಳ ಮೂಲಕ ನಿಂದಿಸಿ ಮಾತನಾಡುವುದು, ಬೆದರಿಕೆ ಹಾಕುವುದು ಇನ್ನು ಮುಂತಾದ ಮಾನಸಿಕ ಕಿರುಕುಳವನ್ನು ನೀಡಿ ವ್ಯಕ್ತಿಯನ್ನು ಹಿಂಸಿಸುತ್ತಾರೆ.

ಕೆಲವೊಂದು ಸಂದರ್ಭಗಳಲ್ಲಿ ಸಾಲ ಪಡೆದುಕೊಂಡವರು ಇವರ ಕಾಟವನ್ನು ತಡೆಯಲು ಸಾಧ್ಯವಾಗದೆ ಊರು ಬಿಟ್ಟು ಓಡಿ ಹೋಗುವ ಅಥವಾ ಆತ್ಮಹತ್ಯೆಗೆ ಪ್ರಯತ್ನಿಸುವ ಪ್ರಕರಣಗಳನ್ನು ಕಂಡಿದ್ದೇವೆ. ಆದರೆ ನಿಜಕ್ಕೂ RBI ಸಾಲ ಮರುಪಾವತಿಗೆ ಏನೆಲ್ಲ ಗೈಡ್ಲೈನ್ಸ್ ನೀಡಿದೆ ಎನ್ನುವುದನ್ನು ಪ್ರತಿಯೊಬ್ಬರೂ ಕೂಡ ತಿಳಿದುಕೊಂಡಿರಲೇಬೇಕು. ಸಾಲ ಪಡೆದುಕೊಳ್ಳುವುದಕ್ಕೆ ಯೋಚಿಸುವ ಮುನ್ನವೂ ಕೂಡ ಒಮ್ಮೆ ಸಾಲ ಪಡೆಯುವಾಗ ಯಾವೆಲ್ಲ ವಿಚಾರಗಳ ಬಗ್ಗೆ ಗ್ರಾಹಕ ಗಮನಹರಿಸಬೇಕು, ಬ್ಯಾಂಕ್ ನಲ್ಲಿ ವ್ಯವಹಾರ ಹೇಗೆ ನಡೆಯಬೇಕು ಎನ್ನುವುದನ್ನು ಕೂಡ ಈ ಗೈಡ್ಲೈನ್ಸ್ ಮೂಲಕ ತಿಳಿಸಿದೆ. ಅವುಗಳ ಬಗ್ಗೆಯೂ ಗ್ರಾಹಕರು ತಿಳಿದುಕೊಂಡಿರಲೇಬೇಕು.

ಈ ವಿಚಾರಗಳ ಬಗ್ಗೆ ಕೆಲ ಇಂಪಾರ್ಟೆಂಟ್ ವಿಷಯಗಳನ್ನು ತಿಳಿಸುವ ಪ್ರಯತ್ನವನ್ನು ಈ ಅಂಕಣದಲ್ಲಿ ಮಾಡುತ್ತಿದ್ದೇವೆ. RBI ಗೈಡ್ ಲೈನ್ಸ್ ಪ್ರಕಾರ ಬ್ಯಾಂಕ್ ಗಳಲ್ಲಿ ವ್ಯವಹಾರ ಮಾಡುವ ಸಿಬ್ಬಂದಿ ಆಗಲಿ ಅಥವಾ ಬ್ಯಾಂಕ್ ವ್ಯವಹಾರಗಳಲ್ಲಿ ಬಳಸುವ ಅರ್ಜಿಗಳು ಆಗಲಿ ಇನ್ನಿತರ ವಿಷಯಗಳಾಗಲಿ ಸಾಲ ಪಡೆಯುವಾತನ ಅಥವಾ ಬ್ಯಾಂಕಿನ ಗ್ರಾಹಕನ ಪ್ರಾದೇಶಿಕ ಭಾಷೆಯಲ್ಲಿ ಇರಬೇಕು ಹೀಗಿದ್ದಾಗ ಮಾತ್ರ ಅಲ್ಲಿರುವ ವಿಷಯಗಳು ಆತನಿಗೆ ಸ್ಪಷ್ಟವಾಗಿ ಅರ್ಥವಾಗುತ್ತದೆ.

ಷರತ್ತು ಮತ್ತು ನಿಬಂಧನೆಗಳನ್ನು ಒಪ್ಪಿ ಸಹಿ ಮಾಡಲು ಅನುಕೂಲತೆ ಆಗುತ್ತದೆ. ಒಂದು ವೇಳೆ ಗ್ರಾಹಕ ಅನಕ್ಷರಸ್ಥ ಆಗಿದ್ದರೆ ಅಥವಾ ಆತನಿಗೆ ತಿಳಿಯದೇ ಬೇರೆ ಭಾಷೆಗಳಲ್ಲಿ ಇವುಗಳು ಇದ್ದರೆ ಅವುಗಳ ಮಾಹಿತಿ ಆತನಿಗೆ ತಲುಪಿಲ್ಲ ಎಂದೇ ಅರ್ಥವಾಗುತ್ತದೆ. ಆದ್ದರಿಂದ ದಪ್ಪ ಅಕ್ಷರಗಳಲ್ಲಿ ಗ್ರಾಹಕನಿಗೆ ಅರ್ಥ ಆಗುವ ಭಾಷೆಯಲ್ಲಿ ವ್ಯವಹಾರ ಪತ್ರಗಳು ಇರಬೇಕು ಎನ್ನುವುದನ್ನು RBI ತನ್ನ ಗೈಡ್ ಲೈನ್ಸ್ ಅಲ್ಲಿ ತಿಳಿಸಿದೆ. ಅವುಗಳ ಬಗ್ಗೆ ಸಂಪೂರ್ಣ ಮಾಹಿತಿ ತಿಳಿದುಕೊಳ್ಳಲು ಈ ವಿಡಿಯೋವನ್ನು ಪೂರ್ತಿಯಾಗಿ ನೋಡಿ.

By admin

Leave a Reply

Your email address will not be published. Required fields are marked *