ಮನೆಯಲ್ಲಿ ಟೀ ಮಾಡುವ ವಿಧಾನ ಇಂದೆ ಬದಲಿಸಿ ಮನೆ ಮಂದಿಗೆಲ್ಲಾ ಇಷ್ಟವಾಗುವ ಟಿ ರೆಸಿಪಿ ಇಲ್ಲಿದೆ ನೋಡಿ ಈ 2 ವಸ್ತು ಇಂದ ಸೂಪರ್ ಟೀ.. - Karnataka's Best News Portal
https://adulateearring.com/t77pg9f0bn?key=27d0eac1279d1d54f242ce019dac0514

ಹೊಸ ವಿಧಾನದಲ್ಲಿ ರುಚಿಯಾದ ಟೀ ಮಾಡುವ ಅದ್ಭುತ ವಿಧಾನ…….||

ಎಲ್ಲರಿಗೂ ಕೂಡ ಬೆಳಗಿನ ಸಮಯ ಅಥವಾ ತಿಂಡಿಯಾದ ನಂತರ ಟೀ ಕುಡಿಯುವಂತಹ ಅಭ್ಯಾಸ ಇರುತ್ತದೆ. ಆದರೆ ಟೀ ಅನ್ನು ಯಾವ ವಿಧಾನ ದಲ್ಲಿ ಮಾಡಿದರೆ ಅದು ಅದ್ಭುತವಾದಂತಹ ರುಚಿಯನ್ನು ಹೊಂದುತ್ತದೆ ಎಂದು ತಿಳಿದಿಲ್ಲ. ಹಾಗಾದರೆ ಈ ದಿನ ಅದ್ಭುತವಾದಂತಹ ಒಳ್ಳೆಯ ಬಣ್ಣವನ್ನು ಹೊಂದಿರುವಂತಹ ಹಾಗೂ ಒಳ್ಳೆಯ ರುಚಿಯನ್ನು ಹೊಂದಿರುವಂತಹ ಟೀ ಅನ್ನು ಹೇಗೆ ಮಾಡುವುದು.

ಹಾಗೂ ಟೀ ರುಚಿಯಾಗಿ ಬರಬೇಕು ಎಂದು ಯಾವ ಕೆಲವು ಪದಾರ್ಥ ಗಳನ್ನು ಹಾಕುವುದರಿಂದ ಟೀಯನ್ನು ಸ್ವಾದಿಷ್ಟವಾಗಿ ಮಾಡಬಹುದು ಹೀಗೆ ಈ ಎಲ್ಲ ವಿಚಾರವಾಗಿ ಸಂಬಂಧಿಸಿದ ಹಲವಾರು ಮಾಹಿತಿಗಳ ಬಗ್ಗೆ ತಿಳಿದುಕೊಳ್ಳುತ್ತಾ ಹೋಗೋಣ. ಸಾಮಾನ್ಯವಾಗಿ ಟೀ ಮಾಡುವು ದಕ್ಕೆ ಎಲ್ಲರೂ ಸಕ್ಕರೆ ಟೀ ಪುಡಿ ಇವೆರಡನ್ನು ಮಾತ್ರ ಸೇರಿಸಿ ಟೀ ತಯಾರಿಸುತ್ತಾರೆ.

ಆದರೆ ಈ ದಿನ ನಾವು ಹೇಳುತ್ತಿರುವಂತಹ ಈ ಒಂದು ವಿಧಾನದಲ್ಲಿ ನೀವು ಟೀ ಮಾಡಿ ಮನೆಮಂದಿಗೆ ಹಾಗೂ ನಿಮ್ಮ ಸಂಬಂಧಿಕರಿಗೆ ಕೊಟ್ಟರೆ ನಿಮ್ಮನ್ನು ಮತ್ತೆ ಟೀ ಮಾಡಿಕೊಡಿ ಎನ್ನುವಷ್ಟು ರುಚಿಕರವಾಗಿ ಅದು ತಯಾರಾಗುತ್ತದೆ. ಹಾಗಾದರೆ ಅದನ್ನು ಮಾಡುವ ವಿಧಾನ ಹೇಗೆ ಎಂದು ಈ ಕೆಳಗಿನಂತೆ ತಿಳಿದುಕೊಳ್ಳೋಣ. ಮೊದಲು ಒಂದು ಪಾತ್ರೆಯಲ್ಲಿ ಎರಡು ಲೋಟ ನೀರನ್ನು ಹಾಕಿ ಅದು ಚೆನ್ನಾಗಿ ಕುದಿಯುವ ತನಕ ಬಿಟ್ಟು

ಆನಂತರ ಕಾಲು ಚಮಚ ಹಸಿ ಶುಂಠಿಯನ್ನು ಜಜ್ಜಿ ಅದನ್ನು ನೀರಿನ ಒಳಗಡೆ ಹಾಕಿ ಆನಂತರ ಎರಡು ಲವಂಗ ಎರಡು ಏಲಕ್ಕಿ ಸ್ವಲ್ಪ ಚಕ್ಕೆ ಇಷ್ಟನ್ನು ಹಾಕಿ ಚೆನ್ನಾಗಿ ಕುದಿಸಿಕೊಳ್ಳಬೇಕು ಆನಂತರ ಎರಡು ಚಮಚ ಸಕ್ಕರೆಯನ್ನು ಸಹ ಹಾಕಿ ಚೆನ್ನಾಗಿ ಕುದಿಸಿಕೊಳ್ಳಬೇಕು. ಆನಂತರ ಕೊನೆ ಯಲ್ಲಿ ಎರಡು ಚಮಚ ಟೀ ಪುಡಿಯನ್ನು ಹಾಕಿ ಅದರಲ್ಲಿರುವಂತಹ ಅಂಶ ಚೆನ್ನಾಗಿ ಬಿಡುವ ತನಕ ಕುದಿಸಿಕೊಳ್ಳಬೇಕು.

ಆನಂತರ ಅದಕ್ಕೆ ಹಾಲನ್ನು ಮಿಶ್ರಣ ಮಾಡಿ ಚೆನ್ನಾಗಿ ಕುದಿಸಿಕೊಳ್ಳಬೇಕು ನಂತರ ಕೊನೆಯಲ್ಲಿ ನಾಲ್ಕರಿಂದ ಐದು ಒಣಗಿದಂತಹ ಗುಲಾಬಿ ದಳವನ್ನು ಸಹ ಹಾಕಿ ಚೆನ್ನಾಗಿ ಕುದಿಸಿಕೊಳ್ಳಬೇಕು. ಈ ರೀತಿ ಎಲ್ಲಾ ಅಂಶಗಳು ಸಹ ಅದರಲ್ಲಿ ಸೇರಿ ಟೀ ಅದ್ಭುತವಾದಂತಹ ರುಚಿಯನ್ನು ಹೊಂದುತ್ತದೆ. ಒಟ್ಟಾರೆಯಾಗಿ ಇದನ್ನು ಮಸಾಲೆ ಟೀ ಎಂದು ಹೇಳಬಹುದಾಗಿದೆ.

ಒಮ್ಮೆಯಾದರೂ ನೀವು ಈ ರೀತಿ ಮಾಡಿ ಸೇವನೆ ಮಾಡಿ ಖಂಡಿತವಾಗಿ ಯೂ ಇದರ ರುಚಿಯನ್ನು ನೀವು ಎಂದಿಗೂ ಮರೆಯುವುದಿಲ್ಲ. ಅದ ರಲ್ಲೂ ಪದೇ ಪದೇ ಈ ರೀತಿ ಮಾಡಿ ಸೇವನೆ ಮಾಡಬೇಕು ಎನ್ನುವ ಅನುಭವ ಉಂಟಾಗುತ್ತದೆ. ಅದರಲ್ಲೂ ಚಳಿಗಾಲದ ಸಮಯದಲ್ಲಿ ಮಳೆ ಬರುತ್ತಿರುವ ಸಮಯದಲ್ಲಿ ಈ ರೀತಿಯಾದಂತಹ ಮಸಾಲೆ ಟೀ ಮಾಡಿ ಸೇವನೆ ಮಾಡುವುದರಿಂದ ಅದ್ಭುತವಾದಂತಹ ಅನುಭವ ಉಂಟಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

By admin

Leave a Reply

Your email address will not be published. Required fields are marked *