ಶಾಮನೂರು ಶಿವಶಂಕರಪ್ಪ ರಿಯಲ್ ಲೈಫ್ ಸ್ಟೋರಿ ವಯಸ್ಸು ಲೆಕ್ಕಕ್ಕಿಲ್ಲ…. ಶಾಮನೂರು ಶಿವಶಂಕರಪ್ಪ ವಯಸ್ಸು 94 ವರ್ಷ ಗಡಿದಾಟ ದರು ರಾಜಕೀಯದಲ್ಲಿ ಆಕ್ಟಿವಾಗಿರುವ ನಾಯಕ ಪ್ರಭಾವಿ ಲಿಂಗಾಯಿತ ಲೀಡರ್ ಇಂತಹ ಶಾಮನೂರು ಶಿವಶಂಕರಪ್ಪ ಇಲ್ಲಿಯವರೆಗೆ ಬೆಳೆದು ಬಂದಿದ್ದು ಹೇಗೆ ಇವರ ಜೀವನ ಹಾದಿ ಹೇಗಿದೆ ಎಷ್ಟು ಬಾರಿ ಶಾಸಕರಾಗಿದ್ದಾರೆ ಎಷ್ಟು.
ಬಾರಿ ಮಂತ್ರಿ ಆಗಿದ್ದಾರೆ ಎಲ್ಲವನ್ನು ಈ ವಿಡಿಯೋದಲ್ಲಿ ನೋಡೋಣ. 1931ರ ಜೂನ್ ಹದಿನಾರಂದು ಜನನ ಶಾಮನೂರು ಶಿವಶಂಕರಪ್ಪ ಹುಟ್ಟಿದ್ದು 1931ರ ಜೂನ್ 16 ರಂದು ದಾವಣಗೆರೆಯಲ್ಲಿ ತಂದೆ ಶಾಮನೂರು ಕಲ್ಲಪ್ಪ ತಾಯಿ ಸಾವಿತ್ರಮ್ಮ ಇವರದು ವೀರಶೈವ ಲಿಂಗಾಯಿತ ಸಮುದಾಯ. ಓದಿದ್ದು ಸೆಕೆಂಡ್ ಪಿಯುಸಿವರೆಗೆ ಮಾತ್ರ ಕಟ್ಟಿದ್ದು ದೊಡ್ಡ.
ಬಿಸಿನೆಸ್ ಸಾಮ್ರಾಜ್ಯ ಶಾಮನೂರು ಶಿವಶಂಕರಪ್ಪ 1949ರಲ್ಲಿ ದಾವಣಗೆರೆಯ ಗೌರ್ನಮೆಂಟ್ ಹೈಸ್ಕೂಲ್ ನಲ್ಲಿ ಎಸ್ ಎಸ್ ಎಲ್ ಸಿ ಮುಗಿಸಿದ್ದರು 1951ರಲ್ಲಿ ದಾವಣಗೆರೆಯ ಡಿ ಆರ್ ಎಂ ಸೈನ್ಸ್ ಕಾಲೇಜಿನಲ್ಲಿ ಸೆಕೆಂಡ್ ಪಿಯುಸಿ ಮುಗಿಸಿದ್ದರು ನಂತರ ಬಿಜಿನೆಸ್ ಗೆ ಕೈ ಹಾಕಿ ದೊಡ್ಡ ಸಾಮ್ರಾಜ್ಯವನ್ನು ಕಟ್ಟಿದರು ಇವತ್ತು ಶಿಕ್ಷಣ ಸಂಸ್ಥೆಗಳಿಂದ ಹಿಡಿದು ಆಸ್ಪತ್ರೆ ಸಕ್ಕರೆ ಕಾರ್ಖಾನೆಗಳ.
ವರೆಗೂ ಹಲವು ವ್ಯವಹಾರಗಳನ್ನು ಹೊಂದಿದ್ದಾರೆ, 69 ರಲ್ಲಿ ನಗರಸಭೆ ಸದಸ್ಯರಾಗಿ ಆಯ್ಕೆ 70ರಲ್ಲಿ ಸಿನಿಮಾ ನಿರ್ಮಾಪಕರಾದರು ಶಾಮನೂರು ಶಿವಶಂಕರಪ್ಪ 1969ರಲ್ಲಿ ಕಾಂಗ್ರೆಸ್ ನಿಂದ ದಾವಣಗೆರೆ ನಗರಸಭೆ ಸದಸ್ಯರಾಗಿ ಆಯ್ಕೆಯಾಗುವುದರ ಮೂಲಕ ರಾಜಕೀಯಕ್ಕೆ ಎಂಟ್ರಿ ಕೊಟ್ಟರು ನಂತರ 1970ರಲ್ಲಿ ತೆರೆ ಕಂಡ ಬೋರೇಗೌಡ ಬೆಂಗಳೂರಿಗೆ.
ಬಂದ ಸಿನಿಮಾವನ್ನು ಇತರರ ಜೊತೆ ಸೇರಿ ನಿರ್ಮಾಣ ಮಾಡಿ ನಿರ್ಮಾಪಕರು ಕೂಡ ಆದರೂ ಬಳಿಕ 1971ರಲ್ಲಿ ನಗರ ಸಭೆ ಅಧ್ಯಕ್ಷರಾದರು. 80ರಲ್ಲಿ ಲೋಕಸಭೆಗೆ ಸ್ಪರ್ಧೀಸ್ ಸೋತರು 1980ರಲ್ಲಿ ಲೋಕಸಭಾ ಚುನಾವಣೆ ಬಂದಾಗ ಶಾಮನೂರು ಶಿವಶಂಕರಪ್ಪ ಕಾಂಗ್ರೆಸ್ ಯು ಪಕ್ಷದ ಅಧ್ಯಕ್ಷರಾಗಿ ದಾವಣಗೆರೆ ಕ್ಷೇತ್ರದಿಂದ ಕಣಕ್ಕಿಳಿದರು ಆದರೆ ಸೋತು ಮೂರನೇ ಸ್ಥಾನಕ್ಕೆ.
ತೃಪ್ತಿಪಟ್ಟುಕೊಂಡರು, 94ರಲ್ಲಿ ವಿಧಾನಸಭೆಗೆ ಸ್ಪರ್ಧೆ ಗೆಲುವು 80ರ ಲೋಕಸಭಾ ಚುನಾವಣೆ ಸೋತ ಬಳಿಕ ಎಲೆಕ್ಷನ್ ಗಳಿಂದ ದೂರ ಉಳಿದ ಶಾಮನೂರು 1994ರ ವಿಧಾನಸಭಾ ಚುನಾವಣೆಗೆ ನಿಂತರು ದಾವಣಗೆರೆ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದು ಜಯಭೇರಿ ಬಾರಿಸಿದರು ಮೊದಲ ಬಾರಿ ಎಂಎಲ್ಎ ಆಗಿ ವಿಧಾನಸಭೆಗೆ ಎಂಟರಿ ಕೊಟ್ಟರು.
98 ರಲ್ಲಿ ಲೋಕಸಭೆಗೆ ಸ್ಪರ್ಧೆ ಗೆಲುವು ಶಾಸಕರಾಗಿದ್ದ ಶಾಮನೂರು 98 ರ ಲೋಕಸಭಾ ಎಲೆಕ್ಷನ್ ಗೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದರು ಅದರಲ್ಲಿ ಗೆದ್ದು ದಾವಣಗೆರೆ ಸಂಸದರಾಗಿ ಲೋಕಸಭೆ ಪ್ರವೇಶಿಸಿದರು ಹೀಗಾಗಿ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡಬೇಕಾಗಿತ್ತು,
ಇವರ ರಾಜೀನಾಮೆ ಇಂದ ತೆರವಾದ ದಾವಣಗೆರೆ ವಿಧಾನಸಭಾ ಕ್ಷೇತ್ರಕ್ಕೆ ಉಪ ಚುನಾವಣೆ ನಡೆಯಿತು ಆಗ ಮಗ ಎಸ್ಎಸ್ ಮಲ್ಲಿಕಾರ್ಜುನ್ ಅವರನ್ನು ಅಲ್ಲಿಂದ ಕಣಕ್ಕಿಳಿಸಿ ಗೆಲ್ಲಿಸಿದ್ದರು, 99ರ ಲೋಕಸಭೆ ಎಲೆಕ್ಷನ್ ನಲ್ಲಿ ಸೋಲು ಅಂದಿನ ವಾಜಿಪೈ ಸರ್ಕಾರ ಒಂದು ವರ್ಷದಲ್ಲೇ.
ಪತನವಾದಾ ಹಿನ್ನೆಲೆ ಮತ್ತೆ 1999 ರಲ್ಲಿ ಲೋಕಸಭಾ ಎಲೆಕ್ಷನ್ ಬಂದಿತ್ತು ಕಾಂಗ್ರೆಸ್ ಸಂಸದರಾಗಿದ್ದ ಶಾಮನೂರು ಮತ್ತೊಮ್ಮೆ ದಾವಣಗೆರೆಯಿಂದ ನಿಂತರು ಆದರೆ ಅದರಲ್ಲಿ ಸೋಲಬೇಕಾಯಿತು.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.