ಶನಿವಾರದಂದು ಇವುಗಳಲ್ಲಿ ಒಂದನ್ನು ನೋಡಿದ್ರೆ ಶನಿದೇವನ ಕೃಪೆ ನಿಮ್ಮ ಮೇಲೆ ಇದೆ ಅಂತ ಅರ್ಥ. ಅಲ್ಲದೆ ನಿಮ್ಮ ಒಳ್ಳೆಯ ಸಮಯ ಅತಿ ಶೀಘ್ರದಲ್ಲೇ ಪ್ರಾರಂಭವಾಗಲಿದೆ ಅಂತ ನಿಮಗೆ ಭಗವಂತನಿಂದ ದೊರೆಯುವ ಸೂಚನೆ ಇದಾಗಿದೆ. ಓಂ ಕೃಷ್ಣ ಗಾಯ ವಿದ್ಮಹೆ ರವಿ ಪುತ್ರಾಯ ಧಿಮಹಿ ತನ್ನೋ ಹಿ ಸೂರ್ಯ ಪ್ರಚೋದ ಯಾತ್ ಶನಿ ಗ್ರಹದ ಬಗ್ಗೆ ಅನೇಕ ಪುರಾಣಗಳಿವೆ. ಶನಿ ದೇವನನ್ನು ಸೂರ್ಯನ ಪುತ್ರ ಕರ್ಮಫಲದಾತ ಅಂತ ಹೇಳಲಾಗಿದೆ. ಶನಿ ಗ್ರಹಗಳ ಬಗ್ಗೆ ಅನೇಕ ತಪ್ಪು ಕಲ್ಪನೆಗಳಿವೆ ಮತ್ತು ಅದಕ್ಕಾಗಿಯೇ ಇದನ್ನ ಕಷ್ಟ ಕೊಡುವ ಅಶುಭ ಮತ್ತು ನೋವು ನೀಡುವ ಗ್ರಹ ಎನ್ನುವ ತಪ್ಪು ಕಲ್ಪನೆಗಳಿವೆ. ಆದರೆ ಶನಿಯು ಅಶುಭ ಮತ್ತು ಮಾರಕವಲ್ಲ. ಆತ ಮನುಷ್ಯನ ಕರ್ಮ ಫಲ ಗಳನ್ನು ಅಳೆದು ತೂಗಿ ನ್ಯಾಯ ನೀಡುವ ಶುಭಗ್ರಹ ಒಳ್ಳೆಯವರಿಗೆ ಒಳ್ಳೆಯವ ಕೆಟ್ಟವರಿಗೆ ಇನ್ನು ಕೆಟ್ಟವ.
ಆದ್ದರಿಂದಲೇ ಅವನು ಶತ್ರುವಲ್ಲ ಮಿತ್ರ ಮತ್ತು ಮೋಕ್ಷವನ್ನು ಕೊಡುವ ವನು ಶನಿ ದೇವನು ಒಬ್ಬನೇ ಶನಿಯು ಪ್ರಕೃತಿಯಲ್ಲಿ ಸಮತೋಲನ ವನ್ನು ಸೃಷ್ಟಿಸುತ್ತದೆ ಎಂಬುದೂ ಸತ್ಯ ಮತ್ತು ಪ್ರತಿ ಜೀವಿಗಳಿಗೂ ನ್ಯಾಯಯುತ ತೀರ್ಪು ನೀಡುತ್ತಾನೆ. ಅನಗತ್ಯ ಅಸಮಾನತೆ ಮತ್ತು ಅಸ್ವಾಭಾವಿಕ ಸಾಮರ್ಥ್ಯಗಳನ್ನು ಹೊಂದಿರುವವರನ್ನು ಮಾತ್ರ ಶನಿ ಶಿಕ್ಷಿಸುತ್ತಾನೆ. ಶನಿ ದೇವನಿಗೆ ಜೂಜು, ಮದ್ಯಪಾನ, ಬಡ್ಡಿ ಮತ್ತು ವಿಚಾರ ವಿನಾಕಾರಣ ಹರಟೆ ಹೊಡೆಯುವುದು, ಅಮಾಯಕರಿಗೆ ಕಿರುಕುಳ ನೀಡುವುದು ಅವರ ಬೆನ್ನ ಹಿಂದೆ ಏನಾದರೂ ಪಿತೂರಿ ಮಾಡುವುದು. ಚಿಕ್ಕಪ್ಪ ಚಿಕ್ಕಮ್ಮ, ಪೋಷಕರು, ಸೇವಕರು ಮತ್ತು ಗುರುಗಳನ್ನ ನಿಂದಿಸುವುದು ಶನಿ ದೇವನಿಗೆ ಇಷ್ಟವಿಲ್ಲ. ಇಂಥ ಕೆಟ್ಟ ಕೆಲಸಗಳಲ್ಲಿ ಭಾಗಿ ಆದರೆ ಶನಿದೇವನಿಂದ ಶಿಕ್ಷೆ ತಪ್ಪಿದ್ದ ಲ್ಲ, ದೇವರನ್ನು ನಿಂದಿಸುವುದು, ಹಲ್ಲುಗಳನ್ನು ಕೊಳಕು ಇಟ್ಟುಕೊಳ್ಳುವುದು, ಪಕ್ಷಿಗಳ ನ್ನು ಕೊಲ್ಲುವುದು ಮತ್ತು ಕಾಗೆಗಳನ್ನು ಹೆದರಿಸುವುದು ಶನಿ ದೇವನಿಗೆ ಇಷ್ಟವಿಲ್ಲ.
ಶನಿ ದೇವರು ನ್ಯಾಯವನ್ನು ತುಂಬಾ ಇಷ್ಟಪಡುತ್ತಾರೆ. ಅವರು ಪ್ರಾಮಾಣಿಕರನ್ನು ಎಂದಿಗೂ ನೋಯಿಸುವುದಿಲ್ಲ. ಶನಿ ದೇವನು ಇತರರನ್ನು ಮೋಸ ಮಾಡುವವರಿಗೆ ಎಂತಹ ಶಿಕ್ಷೆಯನ್ನು ನೀಡುತ್ತಾನೆ ಎಂದರೆ ಅವರು ಜೀವನದಲ್ಲಿ ಅನುಭವಿಸಿದ ಸಂತೋಷಕ್ಕಿಂತ ಅನೇಕ ಪಟ್ಟು ಹೆಚ್ಚು ದುಃಖವನ್ನು ಅನುಭವಿಸಬೇಕಾಗುತ್ತೆ. ಶನಿ ದೇವನು ಸಾವಿನ ಪ್ರಪಂಚದ ಏಕೈಕ ಅಧಿಪತಿಯಾಗಿದ್ದು ಸಮಯ ಬಂದಾಗ ಅವನ ಒಳ್ಳೆಯ ಮತ್ತು ಕೆಟ್ಟ ಕಾರ್ಯಗಳ ಆಧಾರದ ಮೇಲೆ ಖಂಡಿತ ವಾಗಿಯೂ ಶಿಕ್ಷಿಸುತ್ತಾನೆ. ಶನಿ ದೇವ ಯಾರನ್ನು ಕ್ಷಮಿಸೋದಿಲ್ಲ, ಅದ ಕ್ಕಾಗಿಯೇ ಎಲ್ಲರೂ ಶನಿ ದೇವರಿಗೆ ಹೆದರುತ್ತಾರೆ. ಈ ಕಾರಣಕ್ಕಾಗಿ ದುಷ್ಟರು ಶನಿಯನ್ನ ಕೃರಾ ಅಂತ ಕರೀತಾರೆ. ಶನಿವಾರ ನ್ಯಾಯದ ದೇವರು ಶನಿ ದೇವನ ದಿನ.
ನೀವು ಶನಿವಾರ ಬೆಳಗ್ಗೆ ಈ ಯಾವುದನ್ನಾದರೂ ನೋಡಿದರೆ ಶನಿ ದೇವರ ಕೃಪೆ ನಿಮ್ಮೊಂದಿಗಿದೆ ಅಂತ ನೀವು ಅರ್ಥಮಾಡಿಕೊಳ್ಳಬೇಕು ಮತ್ತು ನಿಮ್ಮ ಜೀವನದಲ್ಲಿ ನಡೆಯುತ್ತಿರುವಂತಹ ತೊಂದರೆಗಳು ಈಗ ಕೊನೆಗೊಳ್ಳುತ್ತಿವೆ ಅಂತ ಅರ್ಥ. ಆದ್ದರಿಂದ ನೀವು ಶನಿವಾರದಂದು ಈ ವಿಷಯಗಳನ್ನ ನೋಡಿದ ತಕ್ಷಣ ನೀವು ಶನಿ ದೇವರನ್ನು ಧ್ಯಾನಿಸ ಬೇಕು ಮತ್ತು ಸಂಜೆ ಸಮಯದಲ್ಲಿ ಖಂಡಿತವಾಗಿ ಶನಿ ದೇವಸ್ಥಾನಕ್ಕೆ ಹೋಗಿ ಎಳ್ಳು ಎಣ್ಣೆ ದೀಪವನ್ನು ಬೆಳಗಿಸಬೇಕು. ಶನಿ ದೇವನ ಕೃಪೆಯಿಂದ ನಿಮ್ಮ ಎಲ್ಲಾ ದುಃಖಗಳು ದೂರವಾಗುತ್ತವೆ. ಹಾಗಾದ್ರೆ ಶನಿವಾರದಂದು ಯಾವ ವಿಷಯಗಳನ್ನ ನೋಡುವುದು ಅತ್ಯಂತ ಮಂಗಳಕರ ಅಂತ ಪರಿಗಣಿಸಲಾಗಿದೆ ಅನ್ನೋದನ್ನ ತಿಳ್ಕೊಳ್ಳೋಣ. ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ