ವೀಕ್ಷರಿಗೆ ನಮಸ್ಕಾರ ತುಳಸಿ ಗಿಡಕ್ಕೆ ಈ ಒಂದು ಹಾಕಿದರೆ ವನದಂತೆ ಬೆಳೆಯುತ್ತದೆ ,ಯಾವಾಗಲೂ ಹಸಿರಾಗಿರುತ್ತದೆ ಒಣಗೋದೆ ಇಲ್ಲ ಅನ್ನೋ ರಹಸ್ಯ ಮಾಹಿತಿಯನ್ನು ಈ ವಿಡಿಯೋದಲ್ಲಿ ತಿಳಿಸಿಕೊಡುತ್ತೇನೆ. ಮನೆ ಮುಂದೆ ತುಳಸಿ ಗಿಡ ಇದ್ದರೆ ಮನೆಯೊಳಗೆ ನೆಗೆಟಿವ್ ಎನರ್ಜಿಗಳು ಪ್ರವೇಶ ಮಾಡೋದಿಲ್ಲ. ಮನೆಗೆ ಶ್ರೀರಕ್ಷೆ ಇರುತ್ತೆ ಅಕಸ್ಮಾತ್ ಮನೆಗೆ ಅಕಸ್ಮಾತ್ ಮನೆಗೆ ಕೆಡಕು ಉಂಟಾಗುತ್ತದೆ ಕಷ್ಟಗಳು ಬರುತ್ತವೆ ಎಂದು ಮೊದಲೇ ತುಳಸಿ ಗಿಡಕ್ಕೆ ಗೊತ್ತಾಗುತ್ತದೆ. ಮತ್ತು ಒಣಗೋದಕ್ಕೆ ಆರಂಭವಾಗುತ್ತದೆ .
ಹಾಗಾದ್ರೆ ತುಳಸಿ ಗಿಡ ನಮ್ಮನ್ನ ನಮ್ಮ ಮನೆಯನ್ನ ರಕ್ಷಣೆ ಮಾಡಬೇಕು ನಮಗೆ ಬರುವಂತಹ ಕಷ್ಟಗಳು ಕಳಿಬೇಕು, ಅವುಗಳ ತಾಪ ನಮಗೆ ತಟ್ಲೆ ಬಾರದು ತುಳಸಿ ಗಿಡ ಸದಾ ಹಸಿರಾಗಿರಬೇಕು ಅಂತ ಅಂದ್ರೆ , ಈ ನೇಮ ಪಾಲಿಸಿ ಅನ್ನೋ ರಹಸ್ಯವನ್ನು ಈಗ ನೋಡಬಹುದು ಅಂದ್ರೆ ಅತಿ ಬಿಸಿಲು ಅತಿಯಾದ ಚಳಿ ಹೀಗೆ ಇನ್ನೂ ಹಲವು ಕಾರಣಗಳಿಂದ ನಾವು ನಿಮಗೆ ಒಂದು ಒಳ್ಳೆಯ ಉಪಾಯವನ್ನು ಹೇಳಿಕೊಡುತ್ತಿದ್ದೇವೆ. ಇಂದ ನಿಮ್ಮ ಒಣಗಿದ ತುಳಸಿ ಗಿಡ ಹೋಗುತ್ತೆ ತುಳಸಿ ಒಂದು ಪವಿತ್ರವಾದ ಗಿಡ.
ಇದರಲ್ಲಿ ಸಾಕ್ಷಾತ್ ಶ್ರೀಮನ್ನಾರಾಯಣ ,ಮತ್ತು ಮಾತೆ ಮಹಾಲಕ್ಷ್ಮಿ ,ವಾಸ ಇರುತ್ತೆ ಅಂತ ಹೇಳಲಾಗುತ್ತೆ .ಯಾರ ಮನೆ ಎದ್ರು ತುಳಸಿ ಗಿಡ ಇದೆಯೋ ಆ ಮನೆಗೆ ಮಾತೆ ಮಹಾಲಕ್ಷ್ಮಿ ಶ್ರೀಮನ್ನಾರಾಯಣರ ಸಮೇತ ಆಗಮಿಸ್ತಾರೆ ಅಂತ ಹೇಳಲಾಗುತ್ತೆ . ತುಳಸಿ ಪೂಜೆ ಮಾಡೋದ್ರಿಂದ ಮನೆಗೆ ಒಳ್ಳೆದಾಗುತ್ತೆ ಇನ್ನೂ ಕೆಲವರು ತುಳಸಿ ಎಲೆಗಳನ್ನ ಔಷಧಿ ಗುಣಗಳಿಗೋಸ್ಕರ ಮನೆಯಲ್ಲಿ ಇಡುತ್ತಾರೆ . ತುಳಸಿ ಎಲೆಯನ್ನು ಟಿಯಲ್ಲಿ ಕೂಡ ಉಪಯೋಗಿಸುತ್ತಾರೆ. ತುಳಸಿ ಗಿಡ ಮನೆಯಲ್ಲಿ ಒಣಗ್ತಾ ಇದ್ರೆ ಅದನ್ನ ಅಶುಭ ಮತ್ತು ಒಳ್ಳೆಯದಲ್ಲ ಅಂತ ಹೇಳ್ತಾರೆ .
ತುಳಸಿ ಗಿಡ ಒಣಗೋದ್ರೆ ಅದು ಒಳ್ಳೆಯದಲ್ಲ ಕೂಡ್ಲಿ ಅದನ್ನು ತೆಗೆದು ಅಲ್ಲಿಗೆ ಹೊಸ ಗಿಡವನ್ನು ನೆಡಬೇಕು ತುಳಸಿ ಗಿಡ ಜಾಸ್ತಿ ಇಡಬಾರದು . ನೇರವಾಗಿ ಸೂರ್ಯನ ಬೆಳಕು ಇರುವ ಕಡೆ ಬಿಡಬಾರದು , ಅದನ್ನು ನೆರಳಿರುವ ಕಡೆಗೆ ಇಡಬೇಕು. ಅಗರಬತ್ತಿ ದೂಪದಂತ ವಸ್ತುಗಳನ್ನು ಗಿಡದ ಹತ್ತಿರ ಇಡಬಾರದು ಇದರಿಂದಾಗಿ ಗಿಡ ಶಾಖದಿಂದ ಸುಟ್ಟು ಹೋಗುತ್ತದೆ . ತುಳಸಿ ಗಿಡದ ಮೇಲೆ ಇಬ್ಬನಿ ಹನಿಗಳು ಮತ್ತು ಮಂಜು ಬೀಳುವುದರಿಂದ ಆ ಗಿಡ ಒಣಗಿಹೋಗುತ್ತದೆ. ತುಳಸಿ ಗಿಡದ ಹತ್ತಿರ ಅಗರಬತ್ತಿ ಹಚ್ಚುವುದರಿಂದ ತುಳಸಿ ಗಿಡ ಒಣಗಿ ಹೋಗುತ್ತದೆ.
ತುಳಸಿ ಸಸ್ಯವು ಗಟ್ಟಿಮುಟ್ಟಾದ ಸಸ್ಯ ಇದನ್ನು ಬೆಳೆಯುವುದಕ್ಕೆ ಮರಳು ಮಿಶ್ರಿತ ಲೋ ಮಣ್ಣು ಉತ್ತಮವಾಗಿರುತ್ತದೆ ಹೆಚ್ಚು ಕ್ಲಾರಿಯಾ ಲವಣಯುಕ್ತ ಮತ್ತು ನೀರು ತುಂಬಿದ ಮಣ್ಣನ್ನು ಹಾಕಬಾರದು . ತುಳಸಿ ಗಿಡದಲ್ಲಿ ಬರುವಂತಹ ಬೀಜ ಅಥವಾ ಹೂಗಳನ್ನ ಆಗಾಗ ತೆಗಿತಾ ಇರಬೇಕು ಕಾಲಕಾಲಕ್ಕೆ ತುಳಸಿಯ ಬೀಜಗಳನ್ನ ತುಳಸಿ ಗಿಡದಿಂದ ತೆಗಿತಾ ಇರಬೇಕು ಮತ್ತು ಒಣಗುತ್ತೆ ಈ ಬೀಜಗಳು ಅಂದ್ರೆ ಮಂಜರಿಗಳು ತುಳಸಿ ಮೇಲೆ ಇರುವರೆಗೂ ಇವುಗಳು ತುಳಸಿ ಗಿಡದ ಶಕ್ತಿಯನ್ನು ಕಡಿಮೆ ಮಾಡ್ತಾ ಇರುತ್ತೆ ಅಂತ ಹೇಳುತ್ತಾರೆ.
ಹಾಗಾಗಿ ಇವುಗಳನ್ನು ಆಗಾಗ ಕಟ್ ಮಾಡಿದರೆ ಒಳ್ಳೆಯದು ತುಳಸಿ ಎಲೆಗಳನ್ನ ತುಳಸಿ ದಳವನ್ನು ಅಥವಾ ಮಂಜರಿಯನ್ನು ಕೀಳೋ ಮೊದ್ಲು ತುಳಸಿ ಮಾತಿಗೆ ಅನುಮತಿಯನ್ನು ಕೇಳಿಕೊಳ್ಳುವುದು ಅವಶ್ಯಕ. ಭಾನುವಾರ ಮತ್ತು ಏಕಾದಶಿ ಎಂದು ಈ ಕೆಲಸವನ್ನು ಮಾಡಬಾರದು ತುಳಸಿಯನ್ನ ಉಗುರುಗಳಿಂದ ಕಟ್ ಮಾಡಬಾರದು. ತುಳಸಿ ಗಿಡ ಎಲ್ಲೆಲ್ಲಿ ಒಣಗಿದ್ಯೋ ಆ ಭಾಗವನ್ನು ಮಾತ್ರ ಕತ್ತರಿಸಬೇಕು ಇದರ ಬೀಜಗಳನ್ನ ಒಂದು ಪಾತ್ರೆಯಲ್ಲಿ ಹಾಕಿ ಇಟ್ಕೊಂಡ್ರೆ, ಅದರಿಂದ ಬೇರೆ ಕಡೆ ತುಳಸಿ ಗಿಡವನ್ನು ಬೆಳೆಸಬಹುದು .
ತುಳಸಿ ಗಿಡಕ್ಕೆ ಹೆಚ್ಚು ನೀರನ್ನ ಹಾಕಿದ್ರೆ ಅದರ ಬೇರುಗಳು ಕೊಳೆಯುತ್ತದೆ ಮತ್ತು ಕಡಿಮೆಯಾದರೆ ಅದು ಒಣಗುತ್ತೆ ಹಾಗಾಗಿ ತುಳಸಿ ಗಿಡಕ್ಕೆ ಒಂದು ದಿನ ಬಿಟ್ಟು ಮತ್ತೊಂದು ದಿನ ನೀರು ಹಾಕಿದರೆ ಒಳ್ಳೆಯದು ಮಳೆಗಾಲದಲ್ಲಿ ವಾರಕ್ಕೆ ಎರಡು ಬಾರಿ ಮಾತ್ರ ನೀರನ್ನು ಹಾಕಬೇಕು ತುಳಸಿ ಗಿಡವನ್ನು ಕಟ್ ಮಾಡಿರುವ ಜಾಗದಲ್ಲಿ ಅರಿಶಿನವನ್ನು ಹಚ್ಚಬೇಕು.
ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.