ಮಂತ್ರಾಲಯದಲ್ಲಿ ಅಂದು ರಾತ್ರಿ ನಡೆದ ಆ ಘಟನೆ ನೆನೆದ ಮಾಸ್ಟರ್ ಆನಂದ್ ರಾಯರು ಬಾಳಿನಲ್ಲಿ ಮಾಡಿದ ಪವಾಡ ಎಂಥದ್ದು ಗೊತ್ತಾ ?

ಮಾಸ್ಟರ್ ಆನಂದ್ ಮಂತ್ರಾಲಯಕ್ಕೆ ತೆರಳಿದಾಗ ಅವರಿಗೆ ಹಾಗೂ ಅವರ ತಾಯಿಗೆ ಅವರ ಸಹಚರರಿಗೆ ಆದಂತಹ ಆಶ್ಚರ್ಯಕರ ಘಟನೆಗಳ ಬಗ್ಗೆ ತಿಳಿಸಿದ್ದಾರೆ ಅವರಿಗಾದಂತಹ ಅನುಭವಗಳು ಅವರ ನಂಬಿಕೆಯ ಗುರುಗಳು ಮಂತ್ರಾಲಯದಲ್ಲಿ ಯಾವೆಲ್ಲ ಪವಾಡ ನಡೆಯಿತು ಅವರ ಜೀವನದಲ್ಲಿ ಏನೆಲ್ಲಾ ಬದಲಾವಣೆಗಳಾಗಿತ್ತು ಎಂಬುದನ್ನ ಸಂಕ್ಷಿಪ್ತವಾಗಿ ನಾವಿವತ್ತು ನಿಮಗೆ ತಿಳಿಸಿಕೊಡುತ್ತೇವೆ

WhatsApp Group Join Now
Telegram Group Join Now

ಮಾಸ್ಟರ್ ಆನಂದ ರವರ ಮದುವೆಯಾಗಿದ್ದು 2010 ನಂತರ ಮಾಸ್ಟರ್ ಆನಂದ್ ಮದುವೆಯ ಒಂದು ವರ್ಷದ ನಂತರ 2011ರಲ್ಲಿ ವೀರ ಬ್ರಹ್ಮಯ್ಯ ಎನ್ನುವ ಮೆಡಿಟೇಟರ್ ಪರಿಚಯವಾಗುತ್ತದೆ ಅವರಿಂದ ಸಾಕಷ್ಟು ವಿಚಾರಗಳ ಬಗ್ಗೆ ನನಗೆ ತಿಳಿಯಿತು ಮೊದಲಿಗೆ ನಾನು ದೇವರನ್ನ ಭೇದ ಭಾವ ಮಾಡುತ್ತಿದ್ದೆ ಆದರೆ ವೀರ ಬ್ರಹ್ಮಯ್ಯರವರ ಅನುಭವದ ಮಾತುಗಳು ನನ್ನನ್ನು ಬದಲಾಯಿಸಿತು ದೇವರ ಮೇಲೆ ಅತಿಯಾದ ನಂಬಿಕೆಯನ್ನು ಹೊಂದಿದೆ ಮಾಸ್ಟರ್ ಆನಂದ್ ರವರು ವೀರ ಬ್ರಹ್ಮಯ್ಯರವರನ್ನ ಎಷ್ಟು ಭಕ್ತಿ ಭಾವದಿಂದ ನೋಡುತ್ತಿದ್ದರೆಂದರೆ ಅವರ ಕೈ ಮೇಲೆ ಅಚ್ಚೆಯ ಗುರುತನ್ನು ಸಹ ಹಾಕಿಸಿಕೊಂಡಿದ್ದರು. ಜ್ಞಾನದ ಅರಿವೇ ಗುರು ಎಂಬಂತೆ ನನಗೆ ಜ್ಞಾನವನ್ನು ಕೊಟ್ಟವರು ವೀರ ಬ್ರಹ್ಮಯ್ಯರವರು.


ವೀರ ಬ್ರಹ್ಮಯ್ಯರವರು 2020 ರಲ್ಲಿ ಕೊರೋನಾ ಸಮಯದಲ್ಲಿ ಸಾವನಪ್ಪಿದರು ನಂತರ ಈ ನಡುವಿನಲ್ಲಿ 2017 ಅವಧೂತ ಶ್ರೀ ವಿನಯ್ ಗುರೂಜಿ ಪರಿಚಯ ಮಾಸ್ಟರ್ ಆನಂದ್ ರವರಿಗಾಗಿದ್ದು ಯಾವುದೋ ಒಂದು ಶೂಟಿಂಗ್ ಸಮಯದಲ್ಲಿ ಅವರ ಆಶ್ರಮ ಹಾಗೂ ಶೂಟಿಂಗ್ ಜಾಗ ಒಂದೇ ಜಾಗದಲ್ಲಿದ್ದು ವಿನಯ್ ಗುರೂಜಿಯವರು ಮಾಸ್ಟರ್ ಆನಂದ್ ರವರಿಗೆ ಪರಿಚಯವಾಗುತ್ತದೆ ನಮ್ಮಿಬ್ಬರ ಚರ್ಚೆಗಳ ನಡುವೆ ಗಾಳಿ ಇದೆ ಅಂತ ಹೇಳೋದು ಒಂದಾದರೆ ಅದು ಅನುಭವಕ್ಕೆ ಬರೋದು ಇನ್ನೊಂದು ಇಲ್ಲಿ ಯಾವುದೇ ಒಂದು ವಿಚಾರವಾದರೂ ಬಲವಾಗಿ ನಂಬಬೇಕಾದರೆ ಅದು ನಮ್ಮ ಅನುಭವಕ್ಕೆ ಬಂದಾಗ ಮಾತ್ರ ಸಾಧ್ಯ.

ಜಗತ್ತಿನಲ್ಲಿ ಯಾವುದೇ ಒಂದು ಅನುಭವ ಕೂಡ ಅಚನಕ್ಕಾಗಿ ಆಗುವುದಿಲ್ಲ ನಮಗೆ ಕೆಟ್ಟದಾದಾಗ ದೇವರನ್ನು ದೂರುವುದು ಒಳ್ಳೆಯದಾದಾಗ ಆತನನ್ನು ಹೊಗಳುವುದು ಮಾಡಬಾರದು ಇಲ್ಲಿ ಪ್ರತಿಯೊಬ್ಬರೂ ತಮ್ಮ ಅನುಭವವನ್ನು ಸಂಪೂರ್ಣವಾಗಿ ಅನುಭವಿಸಬೇಕಾಗಿರುತ್ತದೆ ಇದು ಆ ದೇವರ ಇಚ್ಛೆಯಾಗಿರುತ್ತದೆ ಎಂದರು ಮಾಸ್ಟರ್ ಆನಂದ್, ಖಂಡಿತವಾಗಿ ಪ್ರತಿಯೊಬ್ಬರ ಜೀವನದಲ್ಲೂ ಒಬ್ಬರಾದರೂ ಗುರೂಜಿ ಇದ್ದೇ ಇರುತ್ತಾರೆ ಅದು ನಿಮ್ಮ ಅನುಭವಕ್ಕೆ ಅರಿಯದೆ ಕೆಲವೊಂದು ಮಾಹಿತಿಗಳು ನಿಮಗೆ ತಲುಪಿರುತ್ತದೆ ನನ್ನ ಪಾಲಿಗೆ ನನ್ನ ದೇವರು ಎಂದರೆ ನನ್ನ ಗುರುಗಳೇ ನನ್ನ ದೇವರಾಗಿದ್ದಾರೆ ಎಂದು ಅವರ ಅನುಭವವನ್ನ ಹಂಚಿಕೊಳ್ಳುತ್ತಿದ್ದಾರೆ ಮಾಸ್ಟರ್ ಆನಂದ್.

ನಮ್ಮ ಜೀವನದಲ್ಲಿ ನಂಬಿಕೆ ಅನ್ನೋದು ಒಂದು ಗಾಡಿ ಅದು ನಮ್ಮನ್ನು ದೂರಕ್ಕೆ ಕರೆದುಕೊಂಡು ಹೋಗುವುದೇ ಅನುಭವದ ಬಳಿ ಯಾವಾಗ ಅನುಭವಗಳ ಬಗ್ಗೆ ನಮಗೆ ಅರಿವಾಗುತ್ತದೆಯೋ ಆಗ ದೇವರ ಮೇಲೆ ನಂಬಿಕೆ ಕೂಡ ಬರುತ್ತದೆ ದೇವರ ಬಗ್ಗೆ ಹರಿವು ಕೂಡ ನಮಗೆ ಮೂಡುತ್ತದೆ ಮಂತ್ರಾಲಯ ಎಂಬ ಊರಿನ ಪಕ್ಕದಲ್ಲಿ ಬಿಚ್ಚಾಲೆ ಎಂಬ ಗ್ರಾಮವಿದೆ ಅದರ ನಿಜವಾದ ಹೆಸರು ಭಿಕ್ಷಾಲಯ ರಾಯರ ಜೊತೆ ಇದ್ದಂತಹ ಅಪ್ಪಣ್ಣಾಚಾರರು “ಬಜತಾಂ ಕಲ್ಪವೃಕ್ಷಾಯ ನಮತಾಂ ಕಾಮಧೇನುಯೇ” ಎಂಬ ಮಂತ್ರವನ್ನ ಬರೆದವರು.

ಮಾಸ್ಟರ್ ಆನಂದ್ ಮಂತ್ರಾಲಯಕ್ಕೆ ಹೋದಾಗ ಅಲ್ಲಿ ಬಿಚ್ಚಾಲೆ ಎಂಬ ಗ್ರಾಮಕ್ಕೆ ಹೋದಾಗ ಅವರಿಗೆ ಆದಂತಹ ಅನುಭವ ಹಾಗೂ ಅವರ ಜೊತೆ ಇದ್ದಂತಹ ಅವರ ತಾಯಿ ಹಾಗೂ ಅವರ ಸಹಚರರಿಗೆ ಆದಂತಹ ಅನುಭವವನ್ನು ಕೇಳಿದರೆ ಮೈ ರೂಮಾಂಚನಗೊಳಿಸುತ್ತದೆ ತಡ ರಾತ್ರಿ ಸುಮಾರು 10 ಗಂಟೆ ಆಗಿರುವಾಗ ಮಂತ್ರಾಲಯಕ್ಕೆ ತೆರಳಿದ್ದ ಮಾಸ್ಟರ್ ಆನಂದ್ ಹಾಗೂ ಅವರ ಸಹಚರರು ಮಳೆ ಬರುವ ವಾತಾವರಣವಿರುತ್ತದೆ ಇಲ್ಲಿ ಮಾಸ್ಟರ್ ಆನಂದ್ ರವರ ಹರಕೆ ಎಂದರೆ ಮಂತ್ರಾಲಯಕ್ಕೆ ತೆರಳಿ ಅಲ್ಲಿ ಸೇವೆಯನ್ನು ಮುಗಿಸಿ ಅಲ್ಲೇ ದೇವಸ್ಥಾನದ ಬಳಿ ತಂಗಿದ್ದು ಬೆಳಿಗ್ಗೆ ಹೊರಡುವ ಹರಕೆಯನ್ನು ಹೊಂದಿದ್ದರು.

ಮಂತ್ರಾಲಯಕ್ಕೆ ತಡವಾಗಿ ತೆರಳಿದ್ದವು. ಆಗ ಎಲ್ಲರೂ ಮಲಗುವ ಸಮಯವಾಗಿತ್ತು ನಾವು ಎರಡು ಬಸ್ ಜನ ಇಳಿದಿದ್ದೆವು ಅಲ್ಲಿಯ ಜನರು ಯಾವುದೇ ರೀತಿಯ ಬೇಸರ ಮಾಡಿಕೊಳ್ಳದೆ ಪ್ರೀತಿಯಿಂದ ನಮ್ಮನ್ನು ಬರಮಾಡಿಕೊಂಡು ನಮಗೆ ಊಟಕ್ಕೆ ವ್ಯವಸ್ಥೆಯನ್ನ ಮಾಡಿದರು ಆದರೆ ಹೊರಗೆ ಮಳೆ ಬರುವ ಹಾಗಿತ್ತು ಊಟ ಮುಗಿಸಿದ ನಂತರ ಮೂಡ ಸಿಡಿಲು ಹುಡುಗನ ನೋಡಿ ಮಾಸ್ಟರ್ ಆನಂದ್ ರವರು ಮನಸ್ಸಿನಲ್ಲೆ ರಾಯರನ್ನ ನೆನೆಸಿದರು ಐದೇ ನಿಮಿಷಗಳಲ್ಲಿ ಮೂಡದಲ್ಲಿ ಯಾವುದೇ ರೀತಿಯ ಮಳೆ ಬರುವ ವಾತಾವರಣ ಕಾಣಿಸಲಿಲ್ಲ ನಕ್ಷತ್ರ ಕಾಣಿಸಲು ಶುರುವಾಯಿತು ಮನಸ್ಸಿನಲ್ಲೆ ರಾಯರನ್ನು ನೆನೆಸಿ ಮರದ ಕೆಳಗೆ ಚಾಪೆ ಆಸೆ ಮಲಗಿದೆವು. ರಾತ್ರಿ ಸುಮಾರು ಗಂಟೆಯಲ್ಲಿ ನನ್ನ ತಾಯಿಗೆ ತನ್ನ ಪಕ್ಕದಲ್ಲಿ ಯಾರೋ ಗೆಜ್ಜೆ ಶಬ್ದ ಮಾಡಿಕೊಂಡು ಹೋದಂತಾಗಿತ್ತು ಎಂದು ಬೆಳಗಿನ ಜಾವ ನನಗೆ ತಿಳಿಸಿದರು ಬಂದು ನನಗೂ ಸಹ ಅದೇ ಸಮಯದಲ್ಲಿ ಈ ರೀತಿಯಾಗಿ ಶಂಕದ ಶಬ್ದ ಗಂಟೆ ಶಬ್ದ ಜೋರಾಗಿ ಕೇಳಿಸುತ್ತಿತ್ತು ಎಂದು ಹೇಳಿದ ಅದನ್ನು ಅಲ್ಲಿ ಯಾರು ನಂಬಲು ಸಾಧ್ಯವಾಗದಿದ್ದರೂ ಇಬ್ಬರ ಹೇಳಿಕೆಯು ಒಂದೇ ರೀತಿಯಾಗಿದ್ದರಿಂದ ಅಲ್ಲೇ ಇದ್ದಂತಹ ಗುರುಗಳನ್ನು ಕೇಳಿದಾಗ ಅವರು ನುಡಿದ ಮಾತು ಬಹಳ ರೋಮಾಂಚನ ಎನಿಸಿತು.

ದೇವಸ್ಥಾನ ಬಳಿ ಇದ್ದಂತಹ ಗುರುಗಳು ಒಬ್ಬರು ಮಾಸ್ಟರ್ ಆನಂದ್ ರವರಿಗೆ ಈ ರೀತಿಯಾಗಿ ಹೇಳಿದರು. ರಾಯರ ಸನ್ನಿಧಿಯ ಸ್ವಲ್ಪ ದೂರದಲ್ಲೇ ಮಂಚಾಲಮ್ಮ ಎಂಬ ಗ್ರಾಮ ದೇವತೆ ನೆಲೆಸಿದ್ದಾರೆ ಇಲ್ಲಿ ಮಂತ್ರಾಲಯ ಎಂಬ ಹೆಸರು ಮಂಚಾಲಮ್ಮ ಎಂಬ ಗ್ರಾಮ ದೇವತೆಯಿಂದ ಬಂದಿರುವಂತಹ ನಿಮ್ಮ ತಾಯಿಗೆ ಕೇಳಿಸಿರುವಂತಹ ಗೆಜ್ಜೆ ಶಬ್ದ ಅದು ಮಂಚಾಲಮ್ಮನ ಸಂಚಾರದ ಶಬ್ದ ಗಂಟೆ ಜಾಗಟೆ ಶಬ್ದವೆಂದರೆ ಅದು ಅಪ್ಪಣ್ಣಾಚಾರರು ಬೃಂದಾವನದಲ್ಲಿ ಮಾಡಿರುವಂತಹ ಪೂಜೆ ಶಬ್ದ ಬಿಚ್ಚಾಲೆಯಲ್ಲಿ ಆ ಒಂದು ಬೃಂದಾವನ ಸ್ಥಾಪನೆ ಯಾಗಲು ಕಾರಣ ರಾಯರು ಬೃಂದಾವನ ಪ್ರವೇಶ ಮಾಡಿದ ನಂತರ ಅಪ್ಪಣ್ಣಾಚಾರರು ದಿನ ಅವರ ಬೃಂದಾವನವನ್ನು ನೋಡಲು ಹೋಗುತ್ತಿರುತ್ತಾರೆ ಪ್ರತಿದಿನ 15 ಕಿ.ಮೀಗಳವರೆಗೂ ಕಾಲಿನ ನಡಿಗೆ ಕಲ್ಲು ಮುಳ್ಳಿನ‌ ಹಾದಿಯಲ್ಲಿ ಬೃಂದಾವನ ನೋಡಲು ಹೋಗುತ್ತಿರುತ್ತಾರೆ ಇದನ್ನು ತಿಳಿದ ರಾಯರು ಅಪ್ಪಣ್ಣ ಚಾರ್ಯರಿಗೆ ನೀನು ಇರುವ ಸ್ಥಳದಲ್ಲೇ ಬೃಂದಾವನವನ್ನು ಪ್ರತಿಷ್ಠಾಪನೆ ಮಾಡು ನಾನು ಮೊದಲ ಪೂಜೆಗೆ ಅಲ್ಲಿಗೆ ಬರುತ್ತೇನೆ ಎಂದು ಹೇಳಿದರು ಈ ಕ್ಷಣದವರೆಗೂ ಮೊದಲ ಪೂಜೆ ಅಲ್ಲಿಗೆ ನಡೆಯುತ್ತದೆ ಇಲ್ಲಿ ಅನುಭವ ಹಾಗೂ ನಂಬಿಕೆ ಎಷ್ಟು ಮುಖ್ಯವಾಗುತ್ತದೆ ಅನುಭವದಿಂದ ನಂಬಿಕೆ ಹುಟ್ಟುತ್ತದೆ ಇದು ಮಾಸ್ಟರ್ ಆನಂದ್ ರವರ ಅನುಭವದ Arts

[irp]