ಅವನು ಮತ್ತೆ ಬರುವ ಸಮಯ ಬಂತು ಬಿಎಸ್ ಎನ್ ಎಲ್ ಆಗುತ್ತಾ ಡಾಟಾ ಕಿಂಗ್..ಅವರ ಆಟಕ್ಕೆ ಬ್ರೇಕ್ ಹಾಕುವವನು ಇನ್ನೂ ಬದುಕಿದ್ದಾನೆ

ಅವನು ಮತ್ತೆ ಬರುವ ಸಮಯ ಬಂತು ಬಿಎಸ್ ಎನ್ ಎಲ್ ಆಗುತ್ತಾ ಡಾಟಾ ಕಿಂಗ್..ಅವರ ಆಟಕ್ಕೆ ಬ್ರೇಕ್ ಹಾಕುವವನು ಇನ್ನೂ ಬದುಕಿದ್ದಾನೆ

WhatsApp Group Join Now
Telegram Group Join Now

ತುಂಬಾ ವರ್ಷ ಆಗ್ಲಿಲ್ಲ ಟೆಲಿಕಾಂ ಕ್ಷೇತ್ರದಲ್ಲಿ ಅದೊಂದು ಕ್ರಾಂತಿ ನಡೆದಿತ್ತು ಒಂದು ಜಿಬಿ ಡೇಟಾಗೆ 200 ರೂಪಾಯಿ ಒಂದು ನಿಮಿಷ ಮಾತನಾಡಿದರೆ ಒಂದು ರೂಪಾಯಿ ಚಾರ್ಜ್ ಆಗುತ್ತಿದ್ದ ಕಾಲವದು.

ಇಂತಹ ಸಂದರ್ಭದಲ್ಲಿ ಇದ್ದಕ್ಕಿದ್ದ ಹಾಗೆ ಟೆಲಿಕಾಂ ಕ್ಷೇತ್ರಕ್ಕೆ ಜಿಯೋ ಅನ್ನುವ ಹೆಸರು ಎಂಟ್ರಿ ಕೊಡುತ್ತೆ ಜಿಯೋ ಬರುತ್ತಲೆ ಟೆಲಿಕಾಂ ಕ್ಷೇತ್ರದಲ್ಲಿ ಬಿರುಗಾಳಿ ಏಳುತ್ತೆ ಟೆಲಿಕಾಂ ಕ್ಷೇತ್ರದಲ್ಲಿ ಯಾರು ಕೂಡ ಊಹೆ ಮಾಡಲು ಸಾಧ್ಯವಾಗದ ಆಫರ್ ಅನ್ನ ಹೊತ್ತುಕೊಂಡು ಬಂದಿತ್ತು.

ಜಿಯೋ ಕಾಲ್ ಕೂಡ ಫ್ರೀ ಇಂಟರ್ನೆಟ್ ಕೂಡ ಫ್ರೀ ಯಾರಿಗುಂಟು ಯಾರಿಗಿಲ್ಲ ಜಿಯೋ ಕೊಟ್ಟ ಈ ಆಫರ್ ನೋಡಿ ಉಳಿದ ಟೆಲಿಕಾಂ ಕಂಪನಿಗಳಿಗೆ ಸಿಡಿಲು ಬಡಿದ ಅನುಭವ ಆಗಿತ್ತು ಏರ್ಟೆಲ್ ವೊಡಾಫೋನ್ ಐಡಿಯಾ ಸಿಮ್ ಗಳನ್ನ ಬಳಕೆ ಮಾಡ್ತಾ ಇದ್ದ ಜನ ಇದ್ದಕ್ಕಿದ್ದ ಹಾಗೆ ಜಿಯೋ ಸಿಮ್ ಬಳಕೆ ಮಾಡೋದಕ್ಕೆ ಶುರು ಮಾಡ್ತಾರೆ.

ಮುಂದೆ ನಾಲ್ಕೈದು ವರ್ಷಗಳ ಕಾಲ ಜಿಯೋ ಗೆ ಕಾಂಪಿಟೇಷನ್ ಅನ್ನೋದು ಇರಲೇ ಇಲ್ಲ ಜಿಯೋ ದ ಈ ನಾಗಾಲೋಟವನ್ನ ನೋಡಿ ಉಳಿದ ಕಂಪನಿಗಳು ಕೂಡ ಅದೇ ರೀತಿಯ ಆಫರ್ ಅನ್ನ ಕೊಡ್ತಾ ಹೋಗ್ತಾವೆ.

See also  ಮಂಗಳೂರಿನ ಚಡ್ಡಿಗ್ಯಾಂಗ್ ಯಾವ ರೀತಿ ದರೋಡೆ ಮಾಡಿದ್ರು ನೋಡಿ...ಇಂಚಿಂಚು ಮಾಹಿತಿ ಬಿಚ್ಚಿಟ್ಟ ಮನೆ ಮಾಲಕಿ

ಈ ಕಾಂಪಿಟೇಷನ್ ನಲ್ಲಿ ಲಾಭ ಆಗಿದ್ದು ಮಾತ್ರ ಜನರಿಗೆ ಆದರೆ ಈಗ ಕಾಲ ಬದಲಾಗಿದೆ ಒಂದು ಕಾಲದಲ್ಲಿ ರೇಟ್ ಕಡಿಮೆ ಮಾಡೋದಕ್ಕೆ ಕಾಂಪಿಟೇಷನ್ ಕೊಡ್ತಾ ಇದ್ದ ಕಂಪನಿಗಳು ಈಗ ರಿಚಾರ್ಜ್ ಹೆಚ್ಚು ಮಾಡುವ ಕಾಂಪಿಟೇಷನ್ ನಲ್ಲಿವೆ.

ನಿಮಗೆಲ್ಲ ಗೊತ್ತಿರುವ ಹಾಗೆ ಜಿಯೋ ಇದ್ದಕ್ಕಿದ್ದ ಹಾಗೆ ತಮ್ಮ ರಿಚಾರ್ಜ್ ಬೆಲೆಯನ್ನ ಏರಿಕೆ ಮಾಡಿಬಿಡ್ತು ಅದು ಕೂಡ ಒಂದೆರಡು ಪರ್ಸೆಂಟ್ ಅಲ್ಲ ಬರೊಬ್ಬರಿ 27% ನಷ್ಟು ಬೆಲೆಯನ್ನ ಜಿಯೋ ಏರಿಕೆ ಮಾಡಿಬಿಡ್ತು.

ಜಿಯೋ ಇಂಥದ್ದೊಂದು ಬೆಲೆ ಏರಿಕೆ ಮಾಡಿದ ಬೆನ್ನಲ್ಲೇ ಏರ್ಟೆಲ್ ಹಾಗೂ ವೊಡಾಫೋನ್ ತಾ ಮುಂದು ನಾ ಮುಂದು ಎಂಬಂತೆ ಬೆಲೆ ಏರಿಕೆ ಮಾಡಿಬಿಟ್ಟಿದ್ದಾವೆ.

ಹೀಗೆ ಒಂದಾದ ನಂತರ ಒಂದು ಕಹಿ ಸುದ್ದಿ ನೋಡಿದ ಜನರಿಗೆ ಇದೀಗ ಗುಡ್ ನ್ಯೂಸ್ ಒಂದು ಬರ್ತಾ ಇದೆ ಟೆಲಿಕಾಂ ಕ್ಷೇತ್ರಕ್ಕೆ ದಿಗ್ಗಜನೊಬ್ಬ ಭರ್ಜರಿಯಾಗಿ ಕಮ್ ಬ್ಯಾಕ್ ಮಾಡುವ ಪ್ರಯತ್ನ ಮಾಡ್ತಾ ಇದ್ದಾನೆ.

ಆತ ಬೇರೆ ಯಾರು ಅಲ್ಲ ಬಿ ಎಸ್ ಎನ್ ಎಲ್ ಹೌದು ಬಿಎಸ್ಎನ್ಎಲ್ ಹೊಸ ಜಿಯೋ ಆಗುತ್ತಾ ಅನ್ನುವ ಪ್ರಶ್ನೆ ಮೂಡಿದೆ ಬಿಎಸ್ಎನ್ಎಲ್ ಟೆಲಿಕಾಂ ಕ್ಷೇತ್ರದಲ್ಲಿ ಮತ್ತೊಮ್ಮೆ ಕಿಂಗ್ ಆಗಲು ಹೊರಟಿದೆ.

ಅಷ್ಟಕ್ಕೂ ಬಿಎಸ್ಎನ್ಎಲ್ ಉಳಿದ ಟೆಲಿಕಾಂ ಕಂಪನಿಗಳಿಗೆ ಸೆಡ್ ಹೊಡೆದುಬಿಡುತ್ತಾ ಬಿಎಸ್ಎನ್ಎಲ್ ಮತ್ತೊಮ್ಮೆ ಕಿಂಗ್ ಆಗಿ ಮೆರೆಯುತ್ತಾ ಎಲ್ಲವನ್ನ ಡೀಟೇಲ್ ಆಗಿ ತೋರಿಸ್ತೀವಿ.

See also  ಒಂದೇ ದಿನದಲ್ಲಿ ಲಕ್ಷಾಂತರ ಜನರು ಬಿಎಸ್ಎನ್ಎಲ್ ಗೆ ಪೋರ್ಟ್ ಆಗಿದ್ದಾರೆ..ಉಚಿತ ಸಿಮ್ ಕೊಡುತ್ತಿದ್ದಾರೆ..

ನೋಡಿ ಜಿಯೋ ಒಂದು ಕಾಲದಲ್ಲಿ ಟೆಲಿಕಾಂ ಕ್ಷೇತ್ರದಲ್ಲಿ ಸಂಚಲನ ಸೃಷ್ಟಿಸಿದ ಸಂಸ್ಥೆ ಎಷ್ಟು ಕಡಿಮೆ ಬೆಲೆಗೆ ಕೂಡ ರಿಚಾರ್ಜ್ ಪ್ಲಾನ್ ಕೊಡಬಹುದು ಅನ್ನೋದನ್ನ ಜಿಯೋ ದೇಶಕ್ಕೆ ತೋರಿಸಿತ್ತು.

ಅಲ್ಲಿಂದ ಎಲ್ಲವೂ ಬದಲಾಯಿತು ಭಾರತ ಇವತ್ತು ಡಿಜಿಟಲ್ ಇಂಡಿಯಾ ಆಗಿದೆ ಅಂದ್ರೆ ಅದಕ್ಕೆ ಪ್ರಮುಖ ಕಾರಣ ಇದೇ ಜಿಯೋ ಒಂದು ಕಾಲದಲ್ಲಿ ರಿಚಾರ್ಜ್ ಪ್ಲಾನ್ ಅನ್ನ ಇಳಿಕೆ ಮಾಡಿ.

ಪ್ರಖ್ಯಾತಿಯಾದ ಜಿಯೋ ಈಗ ರಿಚಾರ್ಜ್ ದರ ಏರಿಕೆ ಮಾಡೋದಕ್ಕೆ ಪ್ರಖ್ಯಾತಿ ಪಡಿತಾ ಇದೆ ಜಿಯೋ ಬೆಲೆ ಏರಿಕೆ ಮಾಡಿದ ಬೆನ್ನಲ್ಲೇ ನಾವೇನು ಕಡಿಮೆ ಇಲ್ಲವೆಂಬಂತೆ ಏರ್ಟೆಲ್ ಹಾಗೂ ವೊಡಾಫೋನ್ ಕೂಡ ಬೆಲೆ ಏರಿಕೆ ಮಾಡಿದೆ. ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ವಿಡಿಯೋವನ್ನು ವೀಕ್ಷಿಸಿcrossorigin="anonymous">