ಬಂಗು ಕಪ್ಪು ಕಲೆ ಚಿಂತೆ ಬಿಡಿ… ಬಂಗು ಮುಖ್ಯವಾಗಿ ಕುತ್ತಿಗೆಯ ಬಳಿ ಕಪ್ಪಾಗುತ್ತದೆ ಕೆಲವರಿಗೆ ಆಮೇಲೆ ಮೊಣಕೈಯ ತುದಿಯಲ್ಲಿ ಕಾಲಿನಲ್ಲಿ ಮಂಡಿಯಲ್ಲಿ ಕಪ್ಪಾಗಿರುತ್ತದೆ ಈ ರೀತಿ ಬಂಗು ಬಂದಾಗ ಏನು ಮಾಡಬೇಕು ಮನೆಯಲ್ಲಿ ಮಾಡಿಕೊಳ್ಳಬಹುದಾದಂತಹ ಮನೆಮದ್ದುಗಳು ಏನು ಅನ್ನುವುದನ್ನು ನಾಲ್ಕು ಹಂತದಲ್ಲಿ ನಾನು ನಿಮಗೆ ತಿಳಿಸಿಕೊಡುತ್ತೇನೆ.
ಇದಕ್ಕೂ ಪೂರ್ವದಲ್ಲಿ ಇವುಗಳು ಬರದೇ ಇರುವುದಕ್ಕೆ ತಡೆಯುವುದಕ್ಕೆ ನಾವು ಒಂದೇ ಕಡೆ ಒತ್ತಡ ಹಾಕುವುದನ್ನು ಬಿಡಬೇಕು ಕೆಲವರು ಒಂದೇ ಕಡೆ ಕುಳಿತುಕೊಂಡಿರುತ್ತಾರೆ ಅಲ್ಲಿ ಜಿಡ್ಡು ಕಟ್ಟಿದ ಹಾಗೆ ಆಗುತ್ತದೆ ಹಾಗೆ ಎರಡನೆಯದಾಗಿ ಸ್ಕಿನ್ ಫ್ರೆಂಡ್ಲಿ ಆಹಾರವನ್ನು ತೆಗೆದುಕೊಳ್ಳುವುದು ಅಂದರೆ ಹಣ್ಣುಗಳು ತರಕಾರಿಗಳು ಜೊತೆಗೆ ನಟ್ಸ್ ಗಳು ಮುಖ್ಯವಾಗಿ ತುಪ್ಪ ಬೆಣ್ಣೆ ಮೊಸರು ಮಜ್ಜಿಗೆ ಇವೆಲ್ಲ.
ಇವೆಲ್ಲವೂ ಕೂಡ ಚರ್ಮದ ಸ್ನೇಹಿತರಿತಂತೆ ಇವುಗಳನ್ನು ಹೆಚ್ಚಾಗಿ ನಾವು ಸೇವಿಸಬೇಕು ಆಗ ಅದು ನಮಗೆ ಸಹಾಯವಾಗುತ್ತದೆ ಇನ್ನೊಂದು ಮುಖ್ಯವಾದ ಚರ್ಮದ ಸ್ನೇಹಿತ ಎಂದರೆ ಅದು ನೀರು ಹೆಚ್ಚಾಗಿ ನೀರನ್ನು ಕುಡಿಯಬೇಕು ಅದು ಬಹಳ ಅನುಕೂಲವಾಗುತ್ತದೆ ಕನಿಷ್ಠ ಮೂರರಿಂದ ನಾಲ್ಕು ಲೀಟರ್ ಅಷ್ಟು ನೀರು ಕುಡಿಯುವ ಅಭ್ಯಾಸವನ್ನ ಹವ್ಯಾಸವನ್ನು ಬೆಳೆಸಿಕೊಳ್ಳಬೇಕು.
ನಾನು ನಿಮಗೆ ಆಗಲೇ ಹೇಳಿದ ಹಾಗೆ ನಾಲ್ಕು ಹಂತದಲ್ಲಿ ನಾನು ಇದನ್ನು ನಿಮಗೆ ಹೇಳಿಕೊಡುತ್ತೇನೆ ಅದು ಕೂಡ ಮನೆಯಲ್ಲಿಯೇ ಸುಲಭವಾಗಿ ಯಾವುದೇ ಹೆಚ್ಚು ಖರ್ಚು ಇಲ್ಲದೆ ಇದನ್ನು ಮಾಡಿಕೊಳ್ಳಬೇಕು. ಇದರಲ್ಲಿ ಮೊದಲನೇದಾಗಿ ನಾವು ಶುಚಿ ಮಾಡಿಕೊಳ್ಳಬೇಕು ಎರಡು ಮನೆ ಮದ್ದನ್ನು ಇದರಲ್ಲಿ ನಾನು ಹೇಳಿಕೊಡುತ್ತೇನೆ ಮೊದಲನೇದಾಗಿ ಆಲೂಗಡ್ಡೆಯ ಜ್ಯೂಸು.
ಆಲೂಗಡ್ಡೆಯನ್ನು ಜ್ಯೂಸ್ ಮಾಡಿ ಅದಕ್ಕೆ ನೀರು ಹಾಕಬಾರದು ಅದು ಗಟ್ಟಿಯಾಗಿ ಇರಬೇಕು ಪೇಸ್ಟ್ ರೀತಿ ಇರಬೇಕು ಅದನ್ನು ಒಂದು ಹತ್ತಿಯಲ್ಲಿ ಅಜ್ಜಿ ಎಲ್ಲಿ ಪಿಗ್ಮೆಂಟೇಷನ್ ಇರುತ್ತದೆ ಅಲ್ಲಿ ಮಸಾಜ್ ಮಾಡಿಕೊಳ್ಳಬೇಕು ಇದನ್ನು ಪ್ರತಿನಿತ್ಯ 15 ದಿನಗಳ ಕಾಲ ಮಾಡಬೇಕು ಆಗ ನಿಧಾನವಾಗಿ ಚರ್ಮದ ಬಣ್ಣ ಬದಲಾಗುವುದಕ್ಕೆ ಅನುಕೂಲವಾಗುತ್ತದೆ ಇದನ್ನು ನಾವು ಕ್ಲೆನ್ಸಿಂಗ್ ಎಂದು ಹೇಳಬಹುದು.
ಒಂದು ವೇಳೆ ಇದಕ್ಕಿಂತಲೂ ಕೂಡ ಪ್ರಯೋಜನಕಾರಿ ಆಗಿದ್ದು ಇದೆ ಅದು ಆಪಲ್ ವಿನಗರ್ ಅದನ್ನು ನಾವು ಹೊರಗಡೆ ಅಂಗಡಿಯಲ್ಲಿ ತರಬೇಕಾಗುತ್ತದೆ ವಾರಕ್ಕೆ 3 4 ದಿವಸ ಅಥವಾ ದಿನ ಬಿಟ್ಟು ದಿನ ಇದನ್ನು ಮಾಡಬಹುದು ಒಂದು ಅರ್ಧ ಗ್ಲಾಸ್ ನೀರಿಗೆ ಒಂದು ಚಮಚದಷ್ಟು ಆಪಲ್ ವಿನೆಗರ್ ಅನ್ನು ಹಾಕಿ ಮಿಶ್ರಣ ಮಾಡಿ ಆ ನೀರಿನಲ್ಲಿ ಮತ್ತೆ ಹತ್ತಿಯನ್ನು ಅಜ್ಜಿ ಬಂಗು ಇರುವಂತಹ ಜಾಗದಲ್ಲಿ ಮಸಾಜ್ ಮಾಡಿಕೊಳ್ಳಬೇಕು.
ಹೀಗೆ ಮಾಡುವುದರಿಂದ ಅದು ಶುಚಿಯಾಗುತ್ತದೆ ಮುಂದಿನ ಟ್ರೀಟ್ಮೆಂಟ್ ಗೆ ನಮ್ಮ ದೇಹ ತಯಾರಾಗುತ್ತದೆ ಈಗ ಮಸಾಜ್ ಮಾಡುವುದು ಹೇಗೆ ಎಂದು ತಿಳಿದುಕೊಂಡಾಯಿತು ನಂತರದ ಹಂತವನ್ನು ಈಗ ತಿಳಿಯೋಣ ಈ ರೀತಿ ಮಸಾಜ್ ಮಾಡಿದ ನಂತರ ಅದಕ್ಕೆ ಮಾಯಿಶ್ಚರೈಸರ್ ಅನ್ನು ಮಾಡಬೇಕು.
ಮಾಯಿಶ್ಚರೈಸ್ ಮಾಡುವುದರಿಂದಾಗಿ ನಮ್ಮ ಚರ್ಮಕ್ಕೆ ಒಳ್ಳೆಯ ಕಳೆ ಬರುತ್ತದೆ ಆ ಕಪ್ಪು ಕಲೆ ಹೋಗುವುದಕ್ಕೆ ಬಂಗು ಕಡಿಮೆಯಾಗುವುದಕ್ಕೆ ಸಹಾಯಮಾಡುತ್ತದೆ ಹಾಗಾಗಿ ಮಸಾಜ್ ಮಾಡಿದ ನಂತರ ಮಾಯಿಶ್ಚರೈಸಿಂಗ್ ಅನ್ನು ಮಾಡಬೇಕು. ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.