ವಾಹನ ಸವಾರರಿಗೆ ಅಂದ್ರೆ ನಮ್ಮ ರಾಜ್ಯದ ವಾಹನ ಸವಾರರಿಗೆ ಹೊಸದೊಂದು ನಿಯಮ ಜಾರಿಯಾಗಿದೆ.ಹೌದು ಸಂಚಾರ ಮತ್ತು ರಸ್ತೆ ಸುರಕ್ಷತೆ ವಿಭಾಗದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರಾದಂತಹ ಅಲೋಕ್ ಕುಮಾರ್ ಅವರು ಈ ಬಗ್ಗೆ ಅಧಿಕೃತವಾಗಿ ಒಂದು ಮಾಹಿತಿಯನ್ನ ನೀಡಿದ್ದಾರೆ.
ಅದೇನಪ್ಪಾ ಅಂತ ಅಂದ್ರೆ ಯಾವುದೇ ವಾಹನ ಆಗಲಿ ಯಾವುದೇ ಚಾಲಕರಾಗಲಿ ನಮ್ಮ ಒಂದು ರಾಜ್ಯದಲ್ಲಿ 130 ಅಂದ್ರೆ ಗಂಟೆಗೆ 130 ಕಿಲೋಮೀಟರ್ ವೇಗದಲ್ಲಿ ವಾಹನವನ್ನ ಚಾಲನೆ ಮಾಡಿದರೆ ಅಂತವರಿಗೆ ಎಫ್ ಐಆರ್ ಅನ್ನ ದಾಖಲು ಮಾಡಲಾಗ್ತಾ ಇದೆ ದಯವಿಟ್ಟು ಎಚ್ಚರವಾಗಿರಿ.ಈ ಒಂದು ರೂಲ್ಸ್ ಇನ್ನ ಕೇವಲ ನಾಲ್ಕು ದಿನ ಅಂದ್ರೆ ಆಗಸ್ಟ್ ಒಂದನೇ ತಾರೀಕಿನಿಂದ ಈ ಒಂದು ನಿಯಮ ಜಾರಿಗೆ ಬರ್ತಾ ಇದೆ.
ಆಗಸ್ಟ್ ಒಂದನೇ ತಾರೀಕಿನಿಂದ ಯಾವುದೇ ಹೈವೇಗಳಲ್ಲಿ ಆಗಲಿ ಯಾವುದೇ ಸವಾರರಾಗಲಿ ಯಾವುದೇ ವಾಹನಗಳಾಗಲಿ 130 ಕಿಲೋಮೀಟರ್ ಗಿಂತ ಹೆಚ್ಚಿಗೆ ಸ್ಪೀಡ್ ನಲ್ಲಿ ವಾಹನವನ್ನ ಚಾಲನೆ ಮಾಡೋ ಹಾಗಿಲ್ಲ.ಆ ರೀತಿ ಚಾಲನೆ ಮಾಡಿದ್ರೆ ಎಫ್ ಐಆರ್ ದಾಖಲಾಗ್ತಾ ಇದೆ . ದಂಡ ಅಲ್ಲ ಎಫ್ಐಆರ್ ದಾಖಲಾಗ್ತಿದೆ! ಎಚ್ಚರವಾಗಿರಿ .
ಇನ್ನು ಯಾಕೆ ಈ ಒಂದು ರೂಲ್ಸ್ ಅನ್ನ ಜಾರಿಗೆ ಮಾಡಿದ್ದಾರೆ ಅಂದ್ರೆ ನಮ್ಮ ಒಂದು ರಾಜ್ಯದಲ್ಲಿ ನಡೀತಾ ಇರುವಂತಹ ಅಪಘಾತಗಳಲ್ಲಿ ಅದರಲ್ಲೂ ಮಾರಣಾಂತಿಕ ಅಪಘಾತಗಳಲ್ಲಿ ಶೇಕಡ 90 ರಷ್ಟು ನಡೀತಾ ಇರುವಂತದ್ದು.
ಅತಿಯಾದ ವೇಗದ ಚಾಲನೆಯಿಂದ ಈ ಒಂದು ಅಪಘಾತಗಳು ನಡೀತಾ ಇದೆ. ಆ ಕಾರಣಕ್ಕೋಸ್ಕರ ಅದನ್ನೆಲ್ಲ ತಪ್ಪಿಸಬೇಕು ಅನ್ನೋ ಕಾರಣಕ್ಕೋಸ್ಕರ ಹಾಗೆ ಅಪಾಯಕಾರಿ ಮತ್ತೆ ದುಡುಕಿನ ಒಂದು ಚಾಲನೆಗೆ ಒಂದು ಕಡಿವಾಣ ಹಾಕ್ಬೇಕು ಅನ್ನೋ ಕಾರಣಕ್ಕೋಸ್ಕರ ಈ ಒಂದು ರೂಲ್ಸ್ ಅನ್ನ ಜಾರಿಗೆ ತಂದಿದ್ದಾರೆ.ಇನ್ನ ಮೊನ್ನೆ ಅಷ್ಟೇ ಕಳೆದ ಗುರುವಾರ ಕೂಡ ಬೆಂಗಳೂರು ಮೈಸೂರು ಹೈವೇ ಎಕ್ಸ್ಪ್ರೆಸ್ ಹೈವೇ ಏನಿದೆ ಅಲ್ಲಿ 155 ವಾಹನಗಳು 130 ಕಿಲೋಮೀಟರ್ ಗಿಂತ ಹೆಚ್ಚಿಗೆ ಸ್ಪೀಡಲ್ಲಿ ಹೋಗಿದೆ ಅವರೆಲ್ಲರಿಗೂ ಕೂಡ ದಂಡವನ್ನು ಹಾಕಿದ್ದಾರೆ.
ಆದರೆ ಎಫ್ ಐಆರ್ ದಾಖಲೆ ಮಾಡಿಲ್ಲ, ಎಫ್ ಐಆರ್ ದಾಖಲೆ ಏನಿದ್ರೂ ಆಗಸ್ಟ್ ಒಂದನೇ ತಾರೀಕಿಂದ ಜಾರಿಗೆ ಬರ್ತಾ ಇರುವಂತದ್ದು. ಅವರಿಗೆಲ್ಲರಿಗೂ ದಂಡವನ್ನು ಕೂಡ ಹಾಕಿದ್ದಾರೆ.ಇದು ಅತಿ ಆಗ್ತಾ ಹೋಗ್ತಾ ಇದೆ ಅಂದ್ರೆ ಫೈನ್ ಕಲೆಕ್ಷನ್ಸ್ ಜಾಸ್ತಿ ಆಗ್ತಾ ಇದೆ ಆದರೆ ಇದಕ್ಕೆ ಅಪಘಾತಗಳು ಕೂಡ ಜಾಸ್ತಿ ಆಗ್ತಾ ಇರೋ ಕಾರಣಕ್ಕೋಸ್ಕರ ಅದಕ್ಕೆ ಕಡಿವಾಣ ಹಾಕೋದಕ್ಕೆ ಈ ಒಂದು ರೂಲ್ಸ್ ಅನ್ನ ಜಾರಿಗೆ ತಂದಿದ್ದಾರೆ.
ಇನ್ನು ಈಗಾಗಲೇ ಹೈವೇಗಳಲ್ಲಿ ಸಾಕಷ್ಟು ಕ್ಯಾಮೆರಾಗಳ ಅಳವಡಿಕೆ ಆಗಿದೆ. ಇನ್ನ ಕೂಡ ಇನ್ನಷ್ಟು ಹೈವೇಗಳಲ್ಲಿ ಈ ಕ್ಯಾಮೆರಾ ಅಳವಡಿಕೆಯ ಕೆಲಸಗಳು ಪ್ರಗತಿಯಲ್ಲಿದೆ.ಟ್ರಾಫಿಕ್ ಪೊಲೀಸ್ ಇರಲಿ ಇಲ್ಲದೆ ಇರಲಿ ಓವರ್ ಸ್ಪೀಡಾಗಿ ವಾಹನವನ್ನ ಚಾಲನೆ ಮಾಡಿದ್ರೆ ದಂಡ ಕೂಡ ಬೀಳುತ್ತೆ. ಜೊತೆಗೆ ಎಫ್ ಐಆರ್ ಕೂಡ ದಾಖಲಾಗುತ್ತೆ ಇನ್ನ ಹೇಗೆ ಅದನ್ನ ಕ್ಯಾಲ್ಕುಲೇಟ್ ಮಾಡ್ತಾರೆ.
ಓವರ್ ಸ್ಪೀಡ್ ಅಲ್ಲಿ ಕ್ಯಾಮೆರಾ ಮೂಲಕ ಅಂತ ಅಂದ್ರೆ ಅದು ಬಂದು ಸ್ಪಾಟ್ ಮತ್ತೆ ಸೆಕ್ಷನಲ್ ಸ್ಪೀಡ್ ನ ದಾಖಲು ಮಾಡ್ಕೊಂಡು ಎಫ್ ಐಆರ್ ನ ಫೈಲ್ ಮಾಡ್ತಾರೆ .ಅದು ಹೇಗೆ ಅಂತ ಅಂದ್ರೆ ಎರಡು ಕ್ಯಾಮೆರಾಗಳು ಅಂದ್ರೆ ಕ್ಯಾಮೆರಾ ಇರೋ ಕಡೆ ಸ್ಲೋ ಆಗಿ ಹೋಗ್ಬಿಟ್ಟು ಕ್ಯಾಮೆರಾ ಇಲ್ಲದೆ ಇರೋ ಕಡೆ ನಾವು ಫಾಸ್ಟ್ ಆಗಿ ಹೋಗ್ತೀವಿ ಅಂತ ಅನ್ನೋವರು ಆದ್ರೆ ಕ್ಯಾಮೆರಾ ಇಲ್ಲದೆ ಇರೋ ಕಡೆ ನೀವು ಸ್ಪೀಡ್ ಆಗಿ ಹೋದ್ರು ಕೂಡ ಎಫ್ ಐಆರ್ ದಾಖಲಾಗುತ್ತೆ . ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ವಿಡಿಯೋವನ್ನ ಸಂಪೂರ್ಣವಾಗಿ ವಿಕ್ಷೀಸಿ.