ಸಿನಿಮಾ ಸ್ಟೈಲ್ನ ಲವ್ ಸ್ಟೋರಿ ಇದು ಬೆಂಗಳೂರಿಂದ ಬೆಳಗಾವಿ ಇನ್ಸ್ಟಾ ಲವ್ ಸ್ಟೋರಿ. ಸಾಮಾನ್ಯ ಹುಡುಗನ ಜೊತೆಗೆ ಕೋಟ್ಯಾಧೀಶನ ಪುತ್ರಿಯ ಲವ್. ಈ ಪ್ರೀತಿಗೆ ಹುಡುಗಿಯ ಸೋದರ ಮಾವನ ಮಗನೇ ವಿಲನ್ ಆಗಿದ್ದ ಸಿನಿಮಾಗಳಲ್ಲಿ ನೋಡುವಂತಹ ಲವ್ ಸ್ಟೋರಿ. ನಿಜ ಜೀವನದಲ್ಲಿ ಬೆಂಗಳೂರಿನಿಂದ ಬೆಳಗಾವಿಯ ಇನ್ಸ್ಟಾದಲ್ಲಿ ಆದಂತಹ ಲವ್ ಸ್ಟೋರಿ ಪ್ರಕರಣ.
ಸಾಮಾನ್ಯ ಹುಡುಗನ ಜೊತೆಗೆ ಕೋಟ್ಯಾಧೀಶನ ಪುತ್ರಿಯ ಲವ್ ಹಾನಿ ಬೆಂಗಳೂರಿನ ಪ್ರಿಯಾಂಕ ಬೆಳಗಾವಿಯ ರೋಹಿತ್ ಮಧ್ಯೆ ಲವ್ ಆಗಿತ್ತು.ಇನ್ಸ್ಟಾಗ್ರಾಮ್ ನಲ್ಲಿ ಇನ್ಸ್ಟಾದಲ್ಲಿ ಇಬ್ಬರ ಪರಿಚಯದ ಬಳಿಕವಾಗಿ ಗಾಡವಾಗಿ ಇವರಿಬ್ಬರ ಮಧ್ಯದಲ್ಲಿ ಪ್ರೀತಿ ಬೆಳೆದಿತ್ತು .ಈಗ ಪ್ರಿಯಕರಣಿಗಾಗಿ ಗೃಹಬಂಧನವನ್ನ ಭೇದಿಸಿ ಆ ಪ್ರಿಯತಮೆ ಬೆಳಗಾವಿಗೆ ಆಗಮಿಸಿದ್ದಾಳೆ.
12 ಕೋಟಿ ಆಸ್ತಿಗಾಗಿ ಗೃಹಬಂಧನದಲ್ಲಿದ್ದಂತಹ ಪ್ರಿಯಾಂಕ ಬೆಳಗಾವಿ ಮೂಲದ ಹುಡುಗನನ್ನ ಸೇರುವುದಕ್ಕಾಗಿ ಬೆಂಗಳೂರಿಂದ ಬೆಳಗಾವಿಗೆ ಆಗಮಿಸಿದ್ದಾಳೆ. ಸಾಮಾನ್ಯ ಹುಡುಗ ಕೋಟ್ಯಾಧೀಶನ ಪುತ್ರಿ ನಡುವೆಯಲ್ಲಿ ಬೆಳೆದಂತಹ ಪ್ರೀತಿ 12 ಕೋಟಿ ಆಸ್ತಿ ಈ ಹುಡುಗಿಯ ಹೆಸರಲ್ಲಿ ಇರುವಂತದ್ದು ಚಿಕ್ಕ ವಯಸ್ಸಲ್ಲಿ ಪ್ರಿಯಾಂಕ ತಮ್ಮ ಪೋಷಕರನ್ನು ಕಳೆದುಕೊಂಡಿದ್ದರು ಅದಾದ ನಂತರದಲ್ಲಿ ಈ ಯುವತಿಯನ್ನ ಈಕೆಯ ಸೋದರ ಮಾವನ ಮಗ ಗೃಹಬಂಧನದಲ್ಲಿ ಇರಿಸಿದ.
ಹಾಗಾದರೆ ಒಂದು ಇಷ್ಟು ಅನುಮಾನಗಳು ಮೂಡ್ತಾ ಇದೆ. ಗೃಹಬಂಧನದಲ್ಲಿ ಇದ್ದಂತಹ ಪ್ರಿಯಾಂಕ ಎಸ್ಕೇಪ್ ಆಗಿ ಬೆಳಗಾವಿಗೆ ಹೋಗಿದ್ದಾರೆ. ಈಗ ಬೆಂಗಳೂರಿನ ಕಸ್ತೂರ್ಬಾ ನಗರದಲ್ಲಿ ಪ್ರಿಯಾಂಕ ವಾಸವಿದ್ದರು.ಬೆಂಗಳೂರಲ್ಲಿ ನಾಲ್ಕು ಅಂತಸ್ತಿನ ಎರಡು ಮನೆ ಇದೆ. ನಾಲ್ಕು ಕಾಂಪ್ಲೆಕ್ಸ್ ಇದೆ. ಪ್ರಿಯಾಂಕ ಎರಡು ವರ್ಷ ಇರುವಾಗಲೇ ಪೋಷಕರು ಸಾವನಪ್ಪಿದ್ರು 18 ವರ್ಷದ ಬಳಿಕ ಆಸ್ತಿ ಪ್ರಿಯಾಂಕ ಹೆಸರಿಗೆ ವರ್ಗಾವಣೆಯಾಗಿದೆ.
ಪ್ರೀತಿಯ ವಿಷಯ ಗೊತ್ತಾಗಿ ಪ್ರಿಯಾಂಕಗೆ ಗೃಹಬಂಧನದ ಶಿಕ್ಷೆಯನ್ನು ನೀಡಲಾಗಿದೆ. ಈಕೆಯ ಮಾವನ ಮಗ ಸುಧಾಕರ್ ರೆಡ್ಡಿ ವಿರುದ್ಧ ಈಗ ಗೃಹಬಂಧನದ ಆರೋಪ ಕೇಳಿ ಬಂದಿದೆ.ಪ್ರಿಯಾಂಕ ಎರಡು ವರ್ಷ ಇರುವಂತಹ ಸಂದರ್ಭದಲ್ಲಿ ಈಕೆಯ ಪೋಷಕರು ಸಾವನ್ನಪ್ಪುತ್ತಾರೆ. ಅದಾದ ನಂತರದಲ್ಲಿ ಪ್ರಿಯಾಂಕಗೆ 18 ವರ್ಷ ತುಂಬಿದ ನಂತರದಲ್ಲಿ ಆ ಎಲ್ಲಾ ಆಸ್ತಿ ಇವರ ಹೆಸರಿಗೆ ವರ್ಗಾವಣೆ ಆಗುತ್ತೆ.
12 ಕೋಟಿ ರೂಪಾಯಿ ಬೆಲೆಬಾಳುವಂತಹ ಆಸ್ತಿ ಪ್ರಿಯಾಂಕ ಹೆಸರಲ್ಲಿ ಇರುವಂತದ್ದು . ಇದೆಲ್ಲದರ ಮಧ್ಯದಲ್ಲಿ ಇನ್ಸ್ಟಾಗ್ರಾಮ್ ನಲ್ಲಿ ಬೆಳಗಾವಿ ಮೂಲದ ವ್ಯಕ್ತಿ ಆ ಹುಡುಗ ಪರಿಚಯ ಆಗ್ತಾನೆ.ಪರಿಚಯ ಪ್ರೀತಿಯಾಗುತ್ತೆ ರೋಹಿತ್ ಜೊತೆ ಮದುವೆ ಆಗದಂತೆ ದಾಖಲೆ ತಿದ್ದುಪಡಿ ಪ್ರಿಯಾಂಕ ಆಧಾರ್ ತಿದ್ದುಪಡಿ ಮಾಡಿದ ಆರೋಪ ಕೂಡ ಕೇಳಿ ಬಂದಿದೆ.
ಸೋದರ ಮಾವನ ಮಗ ಸುಧಾಕರ್ ರೆಡ್ಡಿ ವಿರುದ್ಧ ಗಂಭೀರ ಆರೋಪ ಇದು ಗೃಹಬಂಧನ ದಾಖಲೆಗಳ ತಿದ್ದುಪಡಿ ಇಷ್ಟು ದಿನ ನನಗೆ ತಂದೆ ತಾಯಿ ಪ್ರೀತಿ ಸಿಕ್ಕಿಲ್ಲ ರೋಹಿತ್ ಜೊತೆಗೆ ನಾನು ಸುಖವಾಗಿ ಇರಬಲ್ಲೆ ನನಗೆ ರಕ್ಷಣೆ ನೀಡಬೇಕು ಅಂತ ಪೊಲೀಸರಲ್ಲಿ ಪ್ರಿಯಾಂಕ ಮನವಿ ಮಾಡಿಕೊಂಡಿದ್ದಾರೆ.
ನಮ್ಮಮ್ಮ ಅವರ ತಮ್ಮನ ಮಗ ಏನಿದ್ದಾರೆ ಅವರು ಮೊದಲಿನಿಂದ ಸ್ವಲ್ಪ ತೊಂದರೆ ಕೊಡೋಕೆ ಆರಂಭ ಮಾಡ್ತಾ ಇದ್ರು ಯಾವಾಗ ತೊಂದರೆ ಆಸ್ತಿಗೋಸ್ಕರ .ನಾನು ಒಬ್ಬಳೇ ಇರೋದು ಅಪ್ಪ ಅಮ್ಮ ಕೂಡ ಇಲ್ಲ. ಯಾವಾಗ ನಾನು ಇನ್ನೊಬ್ಬರನ್ನು ನೋಡಿ ಮದುವೆಯಾಗಿ ಅವರ ಎಲ್ಲಾ ಆಸ್ತಿ ಹೋಗೋತು! ನನ್ನ ಕೈಯಿಂದ ಅಂತ ಅಂದುಬಿಟ್ಟು ನನಗೆ ಭಾರಿ ತೊಂದರೆ ಕೊಡೋಕೆ ಆರಂಭ ಮಾಡ್ತಿದ್ರು. ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ವಿಡಿಯೋವನ್ನ ಸಂಪೂರ್ಣವಾಗಿ ವಿಕ್ಷೀಸಿ.ವಿಡಿಯೋ ಹಾಗೂ ಮಾಹಿತಿ ಕೃಪೆ ಏಷಿಯಾ ನೆಟ್ ಸುವರ್ಣ.