ವರಮಹಾಲಕ್ಷ್ಮಿಗೆ ಯಾವ ಬಣ್ಣದ ಸೀರೆ ಶುಭಲಗ್ನ ಶುಭ ಮೂಹೂರ್ತ ಪೂರ್ಣ ವಿವರವಾಗಿ ತಿಳಿಸಿದ್ದಾರೆ ನೋಡಿ ವೀಣಾ ಜೋಶಿ ಅವರು

ವರಮಹಾಲಕ್ಷ್ಮಿಗೆ ಯಾವ ಬಣ್ಣದ ಸೀರೆ ಶುಭಲಗ್ನ ಶುಭ ಮೂಹೂರ್ತ ಪೂರ್ಣ ವಿವರವಾಗಿ ತಿಳಿಸಿದ್ದಾರೆ ನೋಡಿ ವೀಣಾ ಜೋಶಿ ಅವರು

WhatsApp Group Join Now
Telegram Group Join Now

ಸ್ನೇಹಿತರೆ ಈಗ ವರಮಹಾಲಕ್ಷ್ಮಿ ಹಬ್ಬದ ಶುಭ ಮುಹೂರ್ತದ ಬಗ್ಗೆ ತಿಳಿಸಿಕೊಡ್ತೀನಿ ಅಂತ ಯಾಕಂದ್ರೆ ಬಹಳಷ್ಟು ಮಂದಿ ನನಗೆ ದೂರವಾಣಿ ಮುಖಾಂತರ ಆಗಿರಬಹುದು. ಕಮೆಂಟ್ಸ್ ಮುಖಾಂತರ ಆಗಿರಬಹುದು ವರಮಹಾಲಕ್ಷ್ಮಿ ಹಬ್ಬದ ಬಣ್ಣದ ಸೀರೆಗಳನ್ನ ಬೇಗನೆ ಹೇಳ್ರಿ ಖರೀದಿ ಮಾಡಲಿಕ್ಕೆ ಆಗ್ತದ ಯಾಕಂದ್ರೆ ಹೋದ ವರ್ಷ ನಮಗೆ ಬಹಳನೇ ಶುಭ ಆಗಿದೆ ಅಂತ ಹೇಳಿದವರು ಇದ್ದೀರಿ.

ಅದಕ್ಕಾಗಿ ಈಗ ವರಮಹಾಲಕ್ಷ್ಮಿ ಹಬ್ಬದ ಶುಭ ಮುಹೂರ್ತ ಹೇಳ್ತೀನಿ ನೋಟ್ ಮಾಡಿ ಇಟ್ಕೊಳ್ರಿ ಯಾವ ಲಗ್ನದಲ್ಲಿ ಪೂಜೆಯನ್ನ ಮಾಡಿ ನಿಮಗೆ ಶುಭವನ್ನು ತಂದು ಕೊಡುತ್ತದೆ. ಜೊತೆಗೆ ಯಾವ ಲಗ್ನಕ್ಕೆ ಯಾವ ಬಣ್ಣದ ಸೀರೆ ಅದನ್ನು ಕೂಡ ಹೇಳಿಕೊಡ್ತೀನಿ.

ನೀವು ಬರೆದಿಟ್ಟುಕೊಳ್ಳಿ ನಂತರ ಸಂಕಲ್ಪ ಪೂರ್ವಕ ಶಾಸ್ತ್ರೋಕ್ತವಾಗಿ ಪೂಜೆಯನ್ನ ಹೇಳಿಕೊಡ್ತೀನಿ. ಆ ರೀತಿ ಪೂಜೆಯನ್ನ ಮಾಡ್ರಿ ಮೊದಲನೇದಾಗಿ ಪಂಚಾಂಗವನ್ನ ಒಂದ್ಸಲ ಅಧ್ಯಯನ ಮಾಡಿಬಿಡೋಣ.

ಆ ದಿನ ನಮಗೆ 16ನೇ ತಾರೀಕು ಶುಕ್ರವಾರ ಈ ಸಲ ಏನಾಗಿದೆ ಅಂತಂದ್ರ ಪುತ್ರದ ಏಕಾದಶಿ ವರಮಹಾಲಕ್ಷ್ಮಿ ಹಬ್ಬದ ದಿನಾನೇ ಬಂದಿರುವುದರಿಂದ ವರಮಹಾಲಕ್ಷ್ಮಿ ಹಬ್ಬಕ್ಕೆ ನೈವೇದ್ಯ ಇರುವುದಿಲ್ಲ.

ಆ ದಿನ ಪೂಜೆಯನ್ನ ಮಾಡಿ ಹಾಲು ಸಕ್ಕರೆ ಹಣ್ಣು ನೈವೇದ್ಯ ತೋರಿಸಿರಿ ಮಾರನೇ ದಿವಸ ಅಡುಗೆ ಎಲ್ಲ ತರದ ಅಡುಗೆಯನ್ನ ಮಾಡಿ ನೈವೇದ್ಯವನ್ನ ತೋರಿಸಬೇಕಾಗುತ್ತದೆ.

See also  ಭಾದ್ರಪದ ಮಾಸ ಬಹಳ ನೊಂದಿರುವ ಈ ರಾಶಿಗಳೊಗೆ ಅದೃಷ್ಟ ತಂದು ಕೊಡುತ್ತಿದೆ..ಯಾವ ರಾಶಿಗೆ ಜೀವನ ಸುಧಾರಿಸಲಿದೆ ನೋಡಿ

ಇನ್ನು ಆ ದಿನದ ವಿಶೇಷತೆ ಏನು ಅಂತ ಅಂದ್ರೆ ಸೂರ್ಯ 7:45 ನಿಮಿಷದ ತನಕ ಕರ್ಕ ರಾಶಿಯಲ್ಲಿ ಇರ್ತಾನೆ ನಂತರ ಸಿಂಹ ರಾಶಿಯನ್ನ ಪ್ರವೇಶ ಮಾಡ್ತಾನೆ ಧನು ರಾಶಿಯಲ್ಲಿ ಚಂದ್ರ ಸಂಚಾರವನ್ನು ಮಾಡ್ತಾನೆ.

ಇನ್ನು ಆ ದಿನದ ಸೂರ್ಯೋದಯ 6 ಗಂಟೆ ಏಳು ನಿಮಿಷಕ್ಕೆ ಸೂರ್ಯೋದಯ ಅದ ಮತ್ತೆ 6:54 ನಿಮಿಷಕ್ಕೆ ಸಾಯಂಕಾಲ ಸೂರ್ಯಾಸ್ತದ ಇವೆಲ್ಲವನ್ನು ನಾವು ಲೆಕ್ಕ ಹಾಕಿದಾಗ ನಮಗೆ ಶುಭ ಲಗ್ನಗಳನ್ನು ತೆಗಿಲಿಕ್ಕೆ ಆಗ್ತದ.

ಇನ್ನು ಮೊದಲೇ ಅತ್ಯಂತ ಶುಭ ಮುಹೂರ್ತವನ್ನು ಹೇಳ್ತೀನಿ ಅದು ಸಿಂಹ ಲಗ್ನ ಅಂತ ಹೇಳ್ತೇವೆ. ಆ ಸಿಂಹ ಲಗ್ನದಲ್ಲಿ ಮಾಡಿದಂತಹ ಪೂಜೆ ನಮಗೆ ಅತ್ಯಂತ ಶುಭವನ್ನು ತಂದು ಕೊಡುತ್ತದೆ.

ಸಿಂಹ ಲಗ್ನ 5:50 ನಿಮಿಷದಿಂದ 8:15 ನಿಮಿಷದವರೆಗೆ ಸಿಂಹ ಲಗ್ನಕ್ಕೆ ಅಧಿಪತಿ ಸೂರ್ಯ ಅಂತ ಹೇಳ್ತೀವಿ. ಸೂರ್ಯ ಅಧಿಪತಿಯಾಗಿರುವುದರಿಂದ ವಿಶೇಷವಾಗಿ ನಾವು ಆ ದಿನ ಕರ್ಕವನ್ನ ಕರ್ಕ ರಾಶಿಯಿಂದ ಸಿಂಹ ರಾಶಿಗೆ ಪ್ರವೇಶವನ್ನ ಮಾಡ್ತಾನೆ.

ಆ ಸಮಯದಲ್ಲಿ ಮಾಡುವಂತಹ ಪೂಜೆ ನಮಗೆ ಪೂರ್ಣ ಯಶಸ್ಸನ್ನ ತಂದು ಕೊಡುತ್ತದೆ ಅಂತ ಹೇಳಿ ಅದಕ್ಕಾಗಿ ಮೊದಲನೇ ಲಗ್ನ 5:50 ನಿಮಿಷದಿಂದ 8:20 ನಿಮಿಷದವರೆಗೂ ಮಾಡಿದ್ರು ನಡೀತದ.

ಈ ರೀತಿಯಾಗಿ ಮೊದಲನೇ ಮುಹೂರ್ತ ಆ ಸಮಯದಲ್ಲಿ ನೀವು ಪೂಜೆಯನ್ನು ಮಾಡುವುದಾದರೆ ಕೆಂಪು ಅಥವಾ ಈ ರಾಣಿ ಪಿಂಕ್ ಅಂತ ಹೇಳ್ತಿವಲ್ಲ ಆ ಸೀರೆಯನ್ನು ಉಡಿಸಬಹುದು.

See also  ಈ ಐದು ರಾಶಿಗೆ ಗುರುಬಲ ಬರ್ತಿದೆ ನೀವು ಮುಟ್ಟಿದ್ದೆಲ್ಲಾ ಚಿನ್ನವಾಗುವ ಸಮಯ...ಆರಂಭವಾಗಲಿದೆ

ದೇವಿಗೆ ಆ ಸೀರೆಯನ್ನು ಉಡಿಸಿ ಪೂಜೆಯನ್ನು ಮಾಡಿದ್ರೆ ಖಂಡಿತವಾಗಿಯೂ ಶುಭ ಸಿಗುತ್ತದೆ ಅಂತ ಹೇಳಿ. ಇನ್ನು ಎರಡನೇ ಲಗ್ನವನ್ನು ಹೇಳ್ತೀನಿ 8:15 ನಿಮಿಷದಿಂದ 10 ಗಂಟೆ 25 ನಿಮಿಷದವರೆಗೆ ಇದು ಕನ್ಯಾ ಲಗ್ನ ಅಂತ ಹೇಳ್ತೇವೆ.

ಕನ್ಯಾ ಲಗ್ನದ ಅಧಿಪತಿ ಬುಧ ಮಕ್ಕಳಿಗೆ ವಿದ್ಯಾ ಬುದ್ಧಿ ಆಗಿರಬಹುದು ಧನಧಾನ್ಯ ಸಮೃದ್ಧಿಗಾಗಿ ಕನ್ಯಾ ಲಗ್ನ ಕೂಡ ಬಹಳನೇ ಶುಭ ಅಂತ ಹೇಳ್ತೀವಿ ಈ ಸಮಯದಲ್ಲಿ ನೀವು ಪೂಜೆಯನ್ನು ಮಾಡಬೇಕಾದರೆ ಹಸಿರು ಬಣ್ಣದ ಅಥವಾ ನವಿಲು ಬಣ್ಣದ ಸೀರೆಯನ್ನು ಉಡಿಸಿ ಪೂಜೆಯನ್ನು ಮಾಡಬಹುದು.

ಆದರೆ ನವಿಲು ಬಣ್ಣದ್ದು ಇದ್ದರೂ ಕೂಡ ಅದು ಹಸಿರು ಬಣ್ಣದ ತರ ಇರಬೇಕು ಹಸಿರು ಬಣ್ಣದ ಸೀರೆ ಅತ್ಯಂತ ಶ್ರೇಷ್ಠ ಬುಧ ಲಗ್ನಕ್ಕೆ ಅಂತ ಹೇಳಿ. ಇನ್ನು ಕೆಲವರು ರಾಹುಕಾಲದಲ್ಲಿ ಲಕ್ಷ್ಮಿ ಪೂಜೆಯನ್ನ ಮಾಡ್ತಾರೆ. ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ವಿಡಿಯೋವನ್ನ ಸಂಪೂರ್ಣವಾಗಿ ವಿಕ್ಷೀಸಿ.

[irp]