ಎಲ್ಲರನ್ನೂ ಚೆನ್ನಾಗಿ ಇಟ್ಟು ಆ ದೇವರು ನಮಗೆ ಮಾತ್ರ ಏಕೆ ಹೀಗೆ ಮಾಡ್ತಾರೆ ಅನ್ನಿಸುತ್ತಿದ್ದರೆ ಈ ವಿಡಿಯೋ ಒಮ್ಮೆ ನೋಡಿ

ಎಲ್ಲರನ್ನೂ ಚೆನ್ನಾಗಿ ಇಟ್ಟು ಆ ದೇವರು ನಮಗೆ ಮಾತ್ರ ಏಕೆ ಹೀಗೆ ಮಾಡ್ತಾರೆ ಅನ್ನಿಸುತ್ತಿದ್ದರೆ ಈ ವಿಡಿಯೋ ಒಮ್ಮೆ ನೋಡಿ

WhatsApp Group Join Now
Telegram Group Join Now

ಆ ದೇವರು ನನಗೆ ಮಾತ್ರ ಯಾಕೆ ಹೀಗೆ ಮಾಡ್ತಾರೆ ಎಂದು ನಿಮಗೆ ಅನಿಸುತ್ತಿದೆಯಾ… ಒಮ್ಮೆ ಒಬ್ಬ ವ್ಯಕ್ತಿ ಭಗವಾನ್ ಬುದ್ಧರ ಬಳಿ ಬಂದು ನನ್ನ ಬದುಕಿನಲ್ಲಿ ಇಷ್ಟು ದುಃಖ ಇರುವುದು ಯಾಕೆ? ಇಷ್ಟೊಂದು ತೊಂದರೆಗಳು ಇರುವುದು ಯಾಕೆ? ಇಷ್ಟೊಂದು ಸಮಸ್ಯೆಗಳು ಇರುವುದು ಯಾಕೆ? ಎಂದು ಪ್ರಶ್ನೆ ಕೇಳಿದರು.

ಆಗ ಭಗವಾನ್ ಬುದ್ಧರು ನಿನಗೆ ಯಾವ ರೀತಿಯ ಸಮಸ್ಯೆಗಳಿವೆ ಎಂದು ನನಗೆ ತಿಳಿಸು ಎಂದು ಹೇಳಿದರು ಆಗ ಆ ವ್ಯಕ್ತಿ ನನಗಿರುವ ಕಷ್ಟಗಳಲ್ಲಿ ಎಷ್ಟನ್ನು ನಿಮಗೆ ಹೇಳಲಿ ನನ್ನ ಇಡೀ ಜೀವನ ದುಃಖಗಳಿಂದಲೇ ತುಂಬಿದೆ ನನ್ನ ಜೊತೆಗಿರುವ ಸಂಬಂಧಗಳಿಂದಲೂ ಸಹ ನನಗೆ ದುಃಖವಾಗಿದೆ.

ನನ್ನ ದೇಹಕ್ಕೆ ಯಾವುದಾದರೂ ಒಂದು ಕಾಯಿಲೆ ಬರುತ್ತಲೇ ಇರುತ್ತದೆ ಒಂದಲ್ಲ ಒಂದು ವಿಷಯದಿಂದ ಸಿಕ್ಕಿಹಾಕಿಕೊಳ್ಳುತ್ತಲೇ ಇರುತ್ತೇನೆ ನನ್ನ ಜೊತೆಗಿರುವ ಸಂಬಂಧಗಳಿಂದ ನಾನು ಸಂತೋಷವಾಗಿ ಇಲ್ಲ ನನ್ನ ಜನರ ಜೊತೆಗೆ ನನಗೆ ಸಂತೋಷ ಇಲ್ಲ ನನ್ನ ಜೀವನದಲ್ಲಿ ಖುಷಿ ಎನ್ನುವುದೇ ಇಲ್ಲ ಇಂತಹ ಬದುಕಿಗಿಂತ ಸಾಯುವುದೇ ಮೇಲು ಅನ್ನಿಸುತ್ತದೆ.

ಬದುಕಲು ನನಗೆ ಯಾವುದೇ ಕಾರಣ ಇಲ್ಲ ಎನ್ನುತ್ತಾನೆ ಆಗ ಭಗವಾನ್ ಬುದ್ಧರು, ನಿನ್ನಲ್ಲಿರುವ ದುಃಖಗಳಿಗೆ ಕಾರಣ ಏನು ಎಂದು ಹೇಳು ಎಂದು ಕೇಳುತ್ತಾರೆ ಆಗ ಆ ವ್ಯಕ್ತಿ ಅದನ್ನು ತಿಳಿದುಕೊಳ್ಳುವ ಸಲುವಾಗಿಯೇ ನಾನು ನಿಮ್ಮ ಹತ್ತಿರ ಬಂದಿದ್ದೇನೆ ನನಗೆ ಇಷ್ಟು ದುಃಖವಾಗಲು ಕಾರಣ ಏನು ಎಂದು ನೀವು ನನಗೆ ತಿಳಿಸಿ ಎಂದು ಹೇಳುತ್ತಾನೆ.

ಆಗ ಬುದ್ಧರು ಈ ವಿಷಯವನ್ನು ನೀನು ಆಳವಾಗಿ ಯೋಚಿಸಿ ವಿಚಾರ ಮಾಡು ನಿನ್ನ ದುಃಖ ಎಲ್ಲಿದೆ ಎಂದು ನೋಡು ನಿನ್ನ ದುಃಖಕ್ಕೆ ಕಾರಣ ಏನಿರಬಹುದು ಎನ್ನುತ್ತಾರೆ ಆಗ ಆ ವ್ಯಕ್ತಿ ಬಹಳ ಯೋಚಿಸುತ್ತಾನೆ ಆದರೆ ಅವನಿಗೆ ತನ್ನ ದುಃಖಕ್ಕೆ ಕಾರಣ ಏನು ಎಂದು ತಿಳಿಯುವುದಿಲ್ಲ.

ಆಗ ಬುದ್ಧರು ನಿನ್ನ ಎಲ್ಲಾ ದುಃಖಕ್ಕೂ ಕಾರಣ ಮತ್ತೇನು ಅಲ್ಲ ಅದು ನೀನೆ ನಿನ್ನ ಮನಸ್ಸಿನಲ್ಲಿ ಮೂಡುವ ಆಸಕ್ತಿ ನಿನ್ನ ಮನಸ್ಸಿನಲ್ಲಿರುವ ಮೋಹ ಕಾರಣವಾಗಿದೆ ಎಂದು ಹೇಳುತ್ತಾರೆ. ಆಗ ಆ ವ್ಯಕ್ತಿ ನಿಮ್ಮ ಮಾತುಗಳು ನನಗೆ ಅರ್ಥವಾಗಲಿಲ್ಲ ನನ್ನ ಮನಸ್ಸಿನಲ್ಲಿರುವ ಮೋಹ ನನ್ನ ದುಃಖಕ್ಕೆ ಕಾರಣ ಆಗುವುದು ಹೇಗೆ ಎಂದು ಬುದ್ಧನನ್ನು ಪ್ರಶ್ನೆ ಮಾಡುತ್ತಾನೆ.

ಆಗ ಭಗವಾನ್ ಬುದ್ಧರು ಆ ವ್ಯಕ್ತಿಗೆ ಮೂರು ಸಣ್ಣ ಕಥೆಗಳನ್ನು ಹೇಳುತ್ತಾರೆ, ಬುದ್ಧರು ಹೇಳಿದ ಮೊದಲ ಕಥೆ ಹೀಗಿತ್ತು ಒಬ್ಬ ವ್ಯಕ್ತಿ ಒಂದು ಮರದ ಹಿಂದೆ ಬಚ್ಚಿಟ್ಟುಕೊಂಡು ಕಿರುಚಲು ಶುರು ಮಾಡಿದ ನನ್ನನ್ನು ಕಾಪಾಡಿ, ಈ ಮರ ನನ್ನನ್ನು ಹಿಡಿದುಕೊಂಡಿದೆ ಮರದ ಹಿಡಿತದಿಂದ ನನ್ನನ್ನು ಬಿಡಿಸಿ ಎಂದು ಜೋರಾಗಿ ಕಿರುಚಿದ.

ಅದೇ ದಾರಿಯಲ್ಲಿ ಗುರು ಶಿಷ್ಯರು ಹೋಗುತ್ತಾ ಇದ್ದರು ಆ ವ್ಯಕ್ತಿಯನ್ನು ನೋಡಿದ ಶಿಷ್ಯ ಗುರುಗಳೇ ನಾವು ಆ ವ್ಯಕ್ತಿಗೆ ಸಹಾಯ ಮಾಡೋಣ ಎಂದು ಹೇಳುತ್ತಾನೆ ಆಗ ಗುರುಗಳು ಯಾರಿಂದಲೂ ಆ ವ್ಯಕ್ತಿಗೆ ಸಹಾಯ ಮಾಡಲು ಸಾಧ್ಯವಿಲ್ಲ ಎನ್ನುತ್ತಾರೆ ಆದ ಶಿಷ್ಯ ಗಾಬರಿಯಾಗಿ ಅವನಿಗೆ ಸಹಾಯ ಮಾಡಲು ಆಗದೆ ಇರುವಂತದ್ದು ಏನಿದೆ ಎಂದು ಗುರುಗಳಿಗೆ ಕೇಳುತ್ತಾನೆ.

ಆಗ ಗುರುಗಳು ಮರವನ್ನು ಆ ವ್ಯಕ್ತಿಯೇ ಹಿಡಿದುಕೊಂಡಿದ್ದಾನೆ ಯಾರಾದರೂ ಅವರೇ ಆ ವಸ್ತುವನ್ನು ಹಿಡಿದುಕೊಂಡಿದ್ದರೆ ಮತ್ತೊಬ್ಬರೂ ಅದರಿಂದ ಆ ವ್ಯಕ್ತಿಯನ್ನು ಬಿಡಿಸಲು ಹೇಗೆ ಸಾಧ್ಯ ಎಂದು ಹೇಳುತ್ತಾರೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.