ಕೇರಳದವರಿಗೆ ಯಾಕೆ ಕೊಲ್ಲೂರು ಮೂಕಾಂಬಿಕೆ ಮನೆ ದೇವರಾಗುತ್ತಾಳೆ ಗೊತ್ತಾ ? ಅಲ್ಲಿನ ಮಹಿಳೆಯರು ಈ ದೇವರನ್ನು ಹೆಚ್ಚು ಪೂಜಿಸೋದು ಏಕೆ

ಕೇರಳದವರಿಗೆ ಯಾಕೆ ಕೊಲ್ಲೂರು ಮೂಕಾಂಬಿಕೆ ಮನೆ ದೇವರಾಗುತ್ತಾಳೆ ಗೊತ್ತಾ ? ಅಲ್ಲಿನ ಮಹಿಳೆಯರು ಈ ದೇವರನ್ನು ಹೆಚ್ಚು ಪೂಜಿಸೋದು ಏಕೆ

WhatsApp Group Join Now
Telegram Group Join Now

ಕೇರಳದವರಿಗೆ ಕೊಲ್ಲೂರು ಮೂಕಾಂಬಿಕೆ ಯಾಕೆ ಕುಲದೇವರು? ಅಲ್ಲಿನ ಮಹಿಳೆಯರು ಬಿಳಿ ಸೀರೆ ಉಡುಪುದೇಕೆ?

ಅದು ಕಾಲಡಿ ಅಂದಿನ ಕೇರಳದ ಒಂದು ಪುಟ್ಟ ಊರು. ತಂದೆ ಇಲ್ಲದ ತಬ್ಬಲಿಯಾದ ಬಾಲಶಂಕರ ತನ್ನ ಬಾಲ್ಯದಲ್ಲೇ ಸನ್ಯಾಸ ದೀಕ್ಷೆಯನ್ನು ತೊಡುತ್ತಾನೆ ಇದ್ದ ಒಬ್ಬನೇ ಮಗ ಸನ್ಯಾಸಿಯಾಗುತ್ತಾನೆ ಅಂದಾಗ ವಿಧವೆಯಾದ ತಾಯಿ ಆರ್ಯಂಬೆ ದಿಕ್ಕು ತೋಚದೆ ಮಗನನ್ನು ಅಪ್ಪಿ ಹಿಡಿದು ಅತ್ತು ಕೇಳುತ್ತಾಳೆ.


ನಾನು ಸಾಯುವ ಒಂದು ತೊಟ್ಟು ನೀರು ಬಿಟ್ಟು ನನ್ನ ಚಿತೆಗೆ ಕೊಳ್ಳಿ ಇಡುವವರು ಯಾರಿದ್ದಾರೆ, ನನಗೆ ಕಡೆಗಾಲ ಬಂದಾಗ ನಿನ್ನನ್ನು ಎಲ್ಲಿ ಹುಡುಕಲಿ ಎನ್ನುತ್ತಾ ಕರುಳು ಕಿತ್ತು ಬರುವ ಹಾಗೆ ಅಳುತ್ತಾಳೆ.

ಅಮ್ಮ ನಿನ್ನ ಕಡೆಗಾಲ ಬಂದಾಗ ಏಕ ಮನಸ್ಸಿನಿಂದ ನನ್ನನ್ನು ಧ್ಯಾನಿಸು ನೀನು ಧ್ಯಾನ ಮಾಡಿ ಕರೆದ. ಅರೆ ಕ್ಷಣದಲ್ಲಿ ನಿನ್ನ ಕಣ್ಣ ಮುಂದೆ ನಿಂತು ನಿನ್ನ ಕಾರ್ಯಗಳನ್ನೆಲ್ಲ ನಡೆಸಿಕೊಡುತ್ತೇನೆ ಎಂದು ತಾಯಿಗೆ ಸಮಾಧಾನದ ಮಾತುಗಳನ್ನು ಹೇಳಿ ಹಿಂದೂ ಧರ್ಮದ ಪುನರುತ್ಥಾನಕ್ಕಾಗಿ ದೇಶ ಪರ್ಯಟನೆಗೆ ಹೊರಡುತ್ತಾನೆ.

ಬಾಲಶಂಕರ ಅದೊಂದು ದಿನ ತಾಯಿ ಆರ್ಯಂಬೆ ತಾನು ಸಾಯುವ ಕಾಲ ಸಮೀಪಿಸುತ್ತಿದೆ ಎನ್ನುವಾಗ ಮಗ ಶಂಕರ ಹೇಳಿದಂತೆ. ಮನಸ್ಸಿನಲ್ಲೇ ಸಾವಿನ ಮಂಚದಿಂದ ಮಗನನ್ನು ಧ್ಯಾನದಿಂದ ಕೂಗಿ ಕರೆಯುತ್ತಾಳೆ.

See also  ಜನರ ದೃಷ್ಟಿ ಬಿದ್ದಾಗ ಈ 6 ಸೂಚನೆ ಸಿಗುತ್ತದೆ ನಿರ್ಲಕ್ಷ್ಯ ಮಾಡಬೇಡಿ..ರಾತ್ರಿ ಇದ್ದಕ್ಕಿದ್ದಂತೆ ಎಚ್ಚರವಾಗಿ..

ತಾಯಿಯ ಕರುಳಿನ ಕೂಗು ಶಂಕರಾಚಾರ್ಯರಿಗೆ ಮುಟ್ಟುತ್ತದೆ. ತಡಮಾಡದೆ ತಾಯಿಯ ಮುಂದೆ ನಿಲ್ಲುತ್ತಾರೆ ಶಂಕರಾಚಾರ್ಯರು ತನ್ನ ಮಗನನ್ನು ಕಣ್ಣು ತುಂಬಾ ನೋಡಿದ ತಾಯಿ ಮಗ ಬಿಟ್ಟ ತುಳಸಿ ನೀರಿನೊಂದಿಗೆ ನೆಮ್ಮದಿಯಿಂದ ಪ್ರಾಣ ಬಿಡುತ್ತಾಳೆ.

ಶಂಕರಾಚಾರ್ಯರಿಗೆ ಅಗ್ನಿ ಪರೀಕ್ಷೆಯಾಗುತ್ತದೆ ತಾಯಿಯ ಸಾವು ತಾನು ಸನ್ಯಾಸಿಯಾಗಿ ತಾಯಿಯ ಹೆಣವನ್ನು ಸಂಸ್ಕಾರ ಮಾಡುವ ಹಾಗಿಲ್ಲ ತನ್ನ ತಾಯಿ ವಿಧವೆ ಅನ್ನುವ ಕಾರಣಕ್ಕೆ ಊರ ಮಂದಿ ಯಾರು ಸಹಾಯ ಮಾಡುವುದಿಲ್ಲ ಇನ್ನು ಕೆಲವರು ಸಹಾಯ ಮಾಡಲು ಬಂದವರನ್ನು ಸಹಾಯ ಮಾಡಲು ಬಿಡುವುದಿಲ್ಲ.

ನಿಸ್ಸಹಾಯಕನಾಗಿ ತಾಯಿ ಕೊಲ್ಲೂರು ಮೂಕಾಂಬಿಕೆಯನ್ನು ನೆನೆದು ಬಿಡುತ್ತಾರೆ. ಪವಾಡ ನಡೆದೆ ಹೋಗುತ್ತದೆ ತಾಯಿಯ ದೇಹವನ್ನು ಮಾಯೆಯ ಅಗ್ನಿಯಿಂದ ಸುಡುತ್ತಾರೆ. ಇಂತಹ ಕ್ಲಿಷ್ಟ ಸಮಯದಲ್ಲೂ ಸಹಾಯ ಮಾಡದ ಊರ ಜನರ ಮೇಲೆ ಕೋಪ ತಾನಾಗಿಯೇ ಮೂಡುತ್ತದೆ.

ವಿಧವೆ ಎಂದು ತಾತ್ಸಾರ ನೋಡಿದ ಈ ಊರಲ್ಲಿ ಎಲ್ಲರೂ ವಿಧವೆಯರಾಗಿ ಇರಲಿ ಎಂದು ಶಪಿಸಿ ಹೊರಟು ಹೋಗುತ್ತಾರೆ. ದಿನ ಕಳೆದಂತೆ ಶಾಪ ಫಲಿಸುತ್ತದೆ ಅನೇಕ ಮಾಂಗಲ್ಯಗಳು ಕಳಚಿ ಬೀಳುತ್ತವೆ.

ಮೂಢನಂಬಿಕೆಗಳ ಗೋಡೆ ನಶಿಸಿ ಹೋಗಿ ತಮ್ಮ ತಪ್ಪಿನ ಅರಿವಾಗುತ್ತದೆ. ಓಡೋಡಿ ಬಂದು ಶಂಕರಾಚಾರ್ಯರಲ್ಲಿ ಕ್ಷಮೆಯನ್ನು ಹೇಳಿ ತಪ್ಪನ್ನು ಮನ್ನಿಸುವಂತೆ ಬೇಡಿಕೊಳ್ಳುತ್ತಾರೆ.

ಕರುಣೆಗೊಂಡ ಶಂಕರಾಚಾರ್ಯರು ಕನಿಕರದಿಂದ ಮಂಗಳ ಪ್ರದಾಯಿನಿಯಾದ ಕೊಲ್ಲೂರು ಮುಕಾಂಬಿಕೆಯ ದರ್ಶನವನ್ನು ಮಾಡಿದರೆ ನಿಮ್ಮ ಸಕಲ ವಿಘ್ನಗಳು ದೂರವಾಗಿ ನಿಮ್ಮ ಮಾಂಗಲ್ಯಗಳು ಗಟ್ಟಿಯಾಗುತ್ತವೆ ಎಂದು ಪರಿಮಾರ್ಜನೆಯ ದಾರಿ ತೋರಿಸುತ್ತಾರೆ.

See also  ಜನರ ದೃಷ್ಟಿ ಬಿದ್ದಾಗ ಈ 6 ಸೂಚನೆ ಸಿಗುತ್ತದೆ ನಿರ್ಲಕ್ಷ್ಯ ಮಾಡಬೇಡಿ..ರಾತ್ರಿ ಇದ್ದಕ್ಕಿದ್ದಂತೆ ಎಚ್ಚರವಾಗಿ..

ವಿಧವೆಯರು ಅಮಂಗಳೆಯರಲ್ಲ ಅನ್ನುವುದಕ್ಕೆ ಬಿಳಿಯ ಸೀರೆ ಉಡುವ ಸಂಪ್ರದಾಯ ಅಂದಿನಿಂದ ಕೇರಳದಲ್ಲಿ ಶುರುವಾಗುತ್ತದೆ ವಿಶೇಷವಾಗಿ ಓಣಂ ಸಂದರ್ಭದಲ್ಲಿ ಶ್ವೇತವರ್ಣದ ಸೀರೆಯುಟ್ಟು ಸಂಪ್ರದಾಯ ಆಚರಿಸುತ್ತಾರೆ.