ನನ್ನ ಟೈಮ್ ಸರಿಯಿಲ್ಲ ಎಂದು ನಿಮಗೆ ಅನ್ನಿಸುತ್ತಿದ್ದರೆ ಈ ವಿಡಿಯೋ ಒಮ್ಮೆ ನೋಡಿ..ನಿಮ್ಮ ಒಂದೊಂದು ದಿನವೂ ಸುಂದರವಾಗುತ್ತದೆ

ನನ್ನ ಟೈಮ್ ಸರಿಯಿಲ್ಲ ಎಂದು ನಿಮಗೆ ಅನ್ನಿಸುತ್ತಿದ್ದರೆ ಈ ವಿಡಿಯೋ ಒಮ್ಮೆ ನೋಡಿ..ನಿಮ್ಮ ಒಂದೊಂದು ದಿನವೂ ಸುಂದರವಾಗುತ್ತದೆ

WhatsApp Group Join Now
Telegram Group Join Now

ಒಂದಾನೊಂದು ಕಾಲದಲ್ಲಿ ಒಬ್ಬ ರಾಜನಿದ್ದ. ಆ ರಾಜನ ಆಸ್ಥಾನದಲ್ಲಿ ಒಬ್ಬ ಮಂತ್ರಿ ಇದ್ದ, ಆ ಮಂತ್ರಿ ಬುದ್ಧಿವಂತನಾಗಿದ್ದ ರಾಜನ ಮಂತ್ರಿ ಯಾವಾಗಲೂ ನಡೆಯುವುದೆಲ್ಲವೂ ಒಳ್ಳೆಯದಕ್ಕೆ ನಡೆಯುತ್ತದೆ ಎಂದು ಹೇಳುತ್ತಿದ್ದ.

ಒಂದು ಸಾರಿ ರಾಜನು ತನ್ನ ಆಯುಧವನ್ನು ಸ್ವಚ್ಛಗೊಳಿಸುತ್ತಿದ್ದ ಸಮಯದಲ್ಲಿ ತನ್ನ ಕಾಲಿನ ಮೇಲೆ ಬಿದ್ದು ರಾಜನ ಬೆರಳು ಕತ್ತರಿಸಿ ಹೋಯಿತು ಪಕ್ಕದಲ್ಲಿ ಕುಳಿತಿದ್ದ ಮಂತ್ರಿ ನಡೆಯುವುದೆಲ್ಲವೂ ಒಳ್ಳೆಯದಕ್ಕೆ ನಡೆಯುತ್ತದೆ ಎಂದು ಹೇಳುತ್ತಾನೆ.

ಇದರಿಂದ ರಾಜನಿಗೆ ಅತಿಯಾದ ಕೋಪ ಬರುತ್ತದೆ. ಆಗ ರಾಜನು ನನ್ನ ಕಾಲಿನ ಬೆರಳು ಕತ್ತರಿಸಿ ಹೋಗಿದೆ ಇದರಲ್ಲಿ ಒಳ್ಳೆಯದು ಏನಿದೆ ಎಂದು ಹೇಳಿ ಕೋಪಗೊಂಡು ಮಂತ್ರಿಯನ್ನು ಜೈಲಿಗೆ ಹಾಕಲು ಆದೇಶ ನೀಡುತ್ತಾನೆ.

ಮಂತ್ರಿಯನ್ನು ಜೈಲಿಗೆ ಕರೆದುಕೊಂಡು ಹೋಗುವಾಗಲೂ ಅವನು ನಡೆಯುವುದೆಲ್ಲವೂ ಒಳ್ಳೆಯದಕ್ಕೆ ನಡೆಯುತ್ತದೆ ಎಂದು ಹೇಳಿ ಹೋಗುತ್ತಾನೆ. ಆ ಮಾತು ಕೇಳಿ ರಾಜನಿಗೆ ಆಶ್ಚರ್ಯವಾಗುತ್ತದೆ.

ಈ ವ್ಯಕ್ತಿ ಜೈಲಿಗೆ ಹೋಗುತ್ತಿದ್ದಾನೆ ಜೈಲಿಗೆ ಹೋಗುವ ಸಮಯದಲ್ಲೂ ಈ ಮಾತನ್ನು ಹೇಳುತ್ತಿದ್ದಾನೆ ಎಂದು ರಾಜನು ಆಶ್ಚರ್ಯಗೊಳ್ಳುತ್ತಾನೆ. ಈ ಘಟನೆ ನಡೆದು ಎರಡು ತಿಂಗಳು ಕಳೆಯುತ್ತದೆ ನಂತರ ರಾಜನು ತನ್ನ ಸೈನಿಕರ ಜೊತೆ ಬೇಟೆಯಾಡಲು ಕಾಡಿಗೆ ಹೋಗುತ್ತಾನೆ.

ಒಂದು ಜಿಂಕೆಯನ್ನು ಬೇಟೆಯಾಡಲು ಹಿಂಬಾಲಿಸಿದ ರಾಜ ದಟ್ಟ ಅರಣ್ಯದ ಒಳಗೆ ಹೋಗುತ್ತಾನೆ. ಆಗ ತನ್ನ ಸೈನಿಕರಿಂದ ಬೇರೆಯಾಗುತ್ತಾನೆ ಎಷ್ಟೇ ಪ್ರಯತ್ನ ಪಟ್ಟರು ಜಿಂಕೆಯನ್ನು ಹಿಡಿಯಲಾಗಲಿಲ್ಲ ನಂತರ ಆ ದಟ್ಟವಾದ ಕಾಡಿನಲ್ಲಿ ಕಳೆದು ಹೋದ ರಾಜನು ಅಲ್ಲಿಂದ ಹೊರಹೋಗಲು ದಾರಿಗಾಗಿ ಹುಡುಕಾಟ ಶುರು ಮಾಡುತ್ತಾನೆ.

ಆ ಸಮಯದಲ್ಲಿ ಅರಣ್ಯದ ಚಲಿಸುವಾಗ ಕಾಡಿನ ಜನರ ಗುಂಪೊಂದು ಕಾಣಿಸುತ್ತದೆ. ಅವರಲ್ಲಿ ಯಾರು ಕೂಡ ರಾಜನ ಸಂಸ್ಥಾನಕ್ಕೆ ಸೇರಿದವರಾಗಿರಲಿಲ್ಲ ಅವರು ಯಾರು ರಾಜನನ್ನು ಗುರುತಿಸಲು ಇಲ್ಲ.

ಆ ಜನರು ರಾಜನನ್ನು ಅಪಹರಿಸಿ ತಮ್ಮ ಜಾಗಕ್ಕೆ ಕರೆದುಕೊಂಡು ಹೋದರು ಅಂದು ಆ ಕಾಡಿನ ಜನರು ತಮ್ಮ ದೇವರಿಗೆ ಬಲಿಕೊಟ್ಟು ಪೂಜೆ ಮಾಡಲು ಒಬ್ಬ ಮನುಷ್ಯನನ್ನು ಹುಡುಕುತ್ತಿದ್ದರು ದೇವರಿಗೆ ಬಲಿ ಕೊಡುವ ಸಲುವಾಗಿ ರಾಜನನ್ನು ಕರೆದುಕೊಂಡು ಹೋದರು.

ರಾಜನು ತನ್ನನ್ನು ಬಿಟ್ಟುಬಿಡಬೇಕೆಂದು ಆ ಜನರಲ್ಲಿ ಮನವಿ ಮಾಡಿಕೊಳ್ಳುತ್ತಿದ್ದನು ಆದರೆ ಅವರಿಗೆ ರಾಜನ ಭಾಷೆ ಅರ್ಥವಾಗುತ್ತಿರಲಿಲ್ಲ. ಅವರೆಲ್ಲರೂ ಸಂತೋಷದಲ್ಲಿ ಡೋಲು ಬಡಿದು ಸಂಭ್ರಮ ಪಡುತ್ತಿದ್ದರು.

ರಾಜನಿಗೆ ಸ್ನಾನ ಮಾಡಿಸಿ ಹೊಸಬಟ್ಟೆ ಹಾಕಿಸಿದರು ರಾಜನ ಕತ್ತಿಗೆ ಹೂವಿನ ಮಾಲೆಯನ್ನು ಹಾಕಿ ಬಲಿ ಕೊಡಲು ಸಿದ್ಧ ಮಾಡಿದರು ಇನ್ನೇನು ರಾಜನನ್ನು ಬಲಿ ಕೊಡಬೇಕು ಎನ್ನುವಷ್ಟರಲ್ಲಿ ಆ ಗುಂಪಿನ ನಾಯಕ ಬಂದು ರಾಜನನ್ನು ನೋಡಿ ರಾಜನ ಕಾಲಿನಲ್ಲಿ ಒಂದು ಬೆರಳು ಇಲ್ಲದೆ ಇರುವುದನ್ನು ಗಮನಿಸಿ ದೂಲು ಬಡಿಯುತ್ತಿದ್ದವರನ್ನು ನಿಲ್ಲಿಸಲು ಹೇಳುತ್ತಾನೆ.

ಈ ಮನುಷ್ಯನನ್ನು ಬಲಿ ಕೊಡಲು ಆಗುವುದಿಲ್ಲ ಏಕೆಂದರೆ ಈ ಮನುಷ್ಯ ಪರಿಪೂರ್ಣವಾಗಿಲ್ಲ ಪರಿಪೂರ್ಣವಾಗಿಲ್ಲದವರನ್ನು ಬಲಿಕೊಟ್ಟರೆ ದೇವರು ಸಂತೋಷ ಪಡುವುದಿಲ್ಲ ಬದಲಾಗಿ ಕೋಪಗೊಳ್ಳುತ್ತಾನೆ ಎಂದು ಹೇಳುತ್ತಾನೆ. ನಂತರ ರಾಜನನ್ನು ಅಲ್ಲಿಂದ ಹೊರಬಿಡಲಾಗುತ್ತದೆ.

ಆಗ ರಾಜನು ಸಂತೋಷವಾಗಿ ತನ್ನ ಆಸ್ಥಾನಕ್ಕೆ ಬರುತ್ತಾನೆ ಅರಮನೆಗೆ ಬಂದು ಯೋಚಿಸಲು ಶುರುಮಾಡಿದ ಬಳಿಕ ರಾಜನಿಗೆ ಒಂದು ವಿಷಯ ಅರ್ಥವಾಗುತ್ತದೆ ಒಂದು ವೇಳೆ ತನ್ನ ಕಾಲಿನ ಬೆರಳು ಕತ್ತರಿಸದೆ ಹೋಗಿದ್ದರೆ ಆ ದಿನ ತನ್ನನ್ನು ಬಲಿ ಕೊಡುತ್ತಿದ್ದರು ಎಂದು ಯೋಚಿಸುವ ರಾಜನು ಎಲ್ಲವೂ ಒಳ್ಳೆಯದಕ್ಕೆ ಆಗುತ್ತದೆ ಎನ್ನುವ ವಿಚಾರವನ್ನು ಅರ್ಥಮಾಡಿಕೊಳ್ಳುತ್ತಾನೆ.

ತನ್ನ ಸೈನಿಕರನ್ನು ಕರೆದು ಮಂತ್ರಿಯನ್ನು ಜೈಲಿನಿಂದ ಹೊರಗೆ ಕರೆಸಲು ಆದೇಶ ನೀಡುತ್ತಾನೆ. ಮಂತ್ರಿಯನ್ನು ಜೈಲಿನಿಂದ ಹೊರಗೆ ಕರೆಸಿದ ಬಳಿಕ ಅವನಿಗೆ ಮಂತ್ರಿಯ ಸ್ಥಾನವನ್ನು ಮತ್ತೆ ನೀಡಿ ರಾಜನು ಅವನ ಜೊತೆಗೆ ಮಾತುಕಥೆಗೆ ಕೂತು ಮಂತ್ರಿಗಳೇ ಒಂದು ವಿಷಯ ನನಗೆ ಹೇಳಿ ಅಂದು ನನ್ನ ಕಾಲುಬೆರಳು ಕತ್ತರಿಸಿ ಹೋದ ಕಾರಣ ಈಗ ನನ್ನ ಪ್ರಾಣ ಉಳಿಯಿತು. ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ವಿಡಿಯೋವನ್ನ ಸಂಪೂರ್ಣವಾಗಿ ವಿಕ್ಷೀಸಿ.

[irp]