ಈ ರೀತಿ ಮಾಡಿದರೆ ಸೊಳ್ಳೆ ನೊಣ ಯಾವತ್ತೂ ಮನೆಯೊಳಗೆ ಬರೋದಿಲ್ಲ.ಯಾವುದೇ ಕೆಮಿಕಲ್ ಬಳಸದೆ ಮಾಡಬಹುದು
ಸೊಳ್ಳೆ ನೊಣಗಳ ಕಾಟವೇ? ಇಲ್ಲಿದೆ ಪರಿಹಾರ ಅಜ್ಜಿ ಹೇಳಿಕೊಟ್ಟ ಸೂಪರ್ ಟಿಪ್ಸ್…. ಸೊಳ್ಳೆಗಳು ಮತ್ತು ನೊಣಗಳು ಇವುಗಳನ್ನ ಮನೆಯಿಂದ ಓಡಿಸಲು ನೈಸರ್ಗಿಕವಾಗಿ ಇರುವಂತಹ ಮೂರು ಟಿಪ್ಗಳನ್ನು ಹೇಳುತ್ತೇನೆ ಪ್ರತಿನಿತ್ಯ ನಮ್ಮ ಮನೆಯಲ್ಲಿ ಉಪಯೋಗಿಸುವಂತಹ ಕೆಲವೊಂದು ವಸ್ತುಗಳು ಮಾತ್ರ ಸಾಕು.
ಯಾವುದೇ ರೀತಿಯಾದಂತಹ ಅಪಾಯ ಇಲ್ಲ ಸಣ್ಣ ಮಕ್ಕಳಿರುವಂತಹ ಮನೆಯಲ್ಲಿ ಅದೇ ರೀತಿ ದೊಡ್ಡವರು ಅಂದರೆ ವಯಸ್ಸಾದವರು ಇರುವಂತಹ ಮನೆಯಲ್ಲಿ ಎಲ್ಲಾ ಕಡೆ ಕೂಡ ನಾವು ಇದನ್ನು ಉಪಯೋಗಿಸಬಹುದು ನಾನು ಈಗ ನಿಮಗೆ ಮೂರು ಟಿಪ್ಪನ್ನು ಹೇಳುತ್ತೇನೆ ಅದರಲ್ಲಿ ಯಾವುದಾದರೂ ಒಂದನ್ನು ಮಾಡಿ ನೋಡಿ.
ಒಳ್ಳೆಯ ಫಲಿತಾಂಶ ಬರುತ್ತದೆ. ಒಂದು ಸಣ್ಣ ಬೌಲ್ ಅನ್ನು ತೆಗೆದುಕೊಳ್ಳಬೇಕು ಪ್ಲಾಸ್ಟಿಕ್ ಬೌಲ್ ಅನ್ನು ತೆಗೆದುಕೊಳ್ಳಬಾರದು ಗ್ಲಾಸ್ ಇದ್ದರೆ ಆಗುತ್ತದೆ ಏನೂ ಇಲ್ಲ ಎಂದರೆ ತೆಂಗಿನಕಾಯಿಯ ಚಿಪ್ಪನ್ನು ಕೂಡ ತೆಗೆದುಕೊಳ್ಳಬಹುದು ಅದಕ್ಕೆ ಎರಡರಿಂದ ಎರಡುವರೆ ಚಮಚದಷ್ಟು ಕಾಫಿ ಪುಡಿಯನ್ನು ಹಾಕಬೇಕು.
ಅದಕ್ಕಾಗಿಯೇ ನಾನು ಮೊದಲೇ ಹೇಳಿಬಿಡುತ್ತೇನೆ ತುಂಬಾ ದೊಡ್ಡ ಬಟ್ಟಲನ್ನು ತೆಗೆದುಕೊಳ್ಳಬೇಡಿ ಒಂದು ಚಿಕ್ಕ ಬಟ್ಟಲನ್ನು ತೆಗೆದುಕೊಳ್ಳಿ ನಂತರ ಅದಕ್ಕೆ ಮೂರರಿಂದ ನಾಲ್ಕು ಲವಂಗವನ್ನು ತೆಗೆದುಕೊಂಡು ಕಾಫಿ ಪುಡಿ ತುಂಬಿಸಿರುವಂತಹ ಬಟ್ಟಲಿಗೆ ಲವಂಗವನ್ನು ಸುತ್ತಾ ಸಿಗಿಸಬೇಕು ಇನ್ನು ಇದಕ್ಕೆ ಒಂದೇ ಒಂದು ಕರ್ಪೂರವನ್ನು ತೆಗೆದುಕೊಳ್ಳಬೇಕು.
ಕಾಫಿ ಪೌಡರ್ ಮಧ್ಯದಲ್ಲಿ ಕರ್ಪೂರವನ್ನು ಸಿಗಿಸಬೇಕು ಈ ಕರ್ಪೂರವನ್ನು ಹಚ್ಚಿ ಸಂಜೆ ಐದರಿಂದ ಆರು ಗಂಟೆಯ ಸಮಯದಲ್ಲಿ ಮನೆಯ ಒಳಗಡೆ ಇಟ್ಟರೆ ಒಂದು ಸೊಳ್ಳೆ ಕೂಡ ಬರುವುದಿಲ್ಲ ಅದೇ ರೀತಿ ನೊಣ ಕೂಡ ಮನೆಯ ಒಳಗಡೆ ಇರುವಂತಹ ನೊಣ ಸೊಳ್ಳೆ ಎಲ್ಲವೂ ಕೂಡ ಹೊರಗಡೆ ಹೋಗುತ್ತದೆ.
ಎರಡನೆಯ ಟಿಪ್ಸ್ ಒಂದು ಐದಾರು ಲವಂಗವನ್ನು ತೆಗೆದುಕೊಳ್ಳಬೇಕು ಈ ಲವಂಗದ ವಾಸನೆ ನೊಣ ಮತ್ತು ಸೊಳ್ಳೆಗಳಿಗೆ ಆಗುವುದಿಲ್ಲ ಅದು ತುಂಬಾ ವಾಸನೆ ಅದಕ್ಕಾಗಿಯೇ ನಾವು ಲವಂಗವನ್ನು ಉಪಯೋಗಿಸಿ ಒಂದು ಟಿಪ್ಸ್ ಅನ್ನು ಮಾಡುವುದು ಈ ಲವಂಗವನ್ನು ಒಂದು ಕುಟ್ಟುವ ಕಲ್ಲಿಗೆ ಹಾಕಿ ಚೆನ್ನಾಗಿ ಕುಟ್ಟಿ ಸ್ವಲ್ಪ ಜಜ್ಜಿಕೊಳ್ಳಬೇಕು.
ಇದು ಅತಿಯಾಗಿ ಪುಡಿ ಆಗಬಾರದು ಇದನ್ನು ಒಂದು ಸೈಡಿಗೆ ಇಟ್ಟು ಮತ್ತೆ ಒಂದು ಬಟ್ಟಲನ್ನು ತೆಗೆದುಕೊಂಡು ಕುಟ್ಟಿ ಇಟ್ಟಿರುವಂತಹ ಲವಂಗದ ಪುಡಿಯನ್ನು ಬಟ್ಟಲಿಗೆ ಹಾಕಿ ಇದಕ್ಕೆ ಎರಡರಿಂದ ಮೂರು ಚಮಚ ಕಹಿಬೇವಿನ ಎಣ್ಣೆ ನೀಮ್ ಆಯಿಲ್ ಎಂದು ಹೇಳುತ್ತೇವೆ ಅದನ್ನು ಹಾಕಬೇಕು ಇದಕ್ಕೆ ಬೇರೆ ಯಾವುದೇ ಎಣ್ಣೆಯನ್ನು ಹಾಕಿದರೂ ಇದು ಸರಿಯಾಗಿ ಕೆಲಸ ಮಾಡುವುದಿಲ್ಲ.
ಕಹಿಬೇವಿನ ಹೆಣ್ಣೆ ಸೊಳ್ಳೆಗಳನ್ನ ಓಡಿಸಲು ತುಂಬಾ ಉತ್ತಮ ಇದನ್ನು ಚೆನ್ನಾಗಿ ಮಿಶ್ರಣ ಮಾಡಿ ಒಂದು ಗಂಟೆಗಳ ಕಾಲ ಇದನ್ನು ಸೈಡಿಗೆ ಇಡಬೇಕು ಅಂದರೆ ಎಣ್ಣೆ ಮತ್ತು ಲವಂಗ ಎರಡು ಕೂಡ ಮಿಶ್ರಣ ವಾಗುವುದಕ್ಕೆ ಒಂದು ಗಂಟೆ ಆದರು ಇದನ್ನು ಒಂದು ಜಾಗದಲ್ಲಿ ಇಡಬೇಕು.
ನಂತರ ಒಂದು ದೀಪವನ್ನು ನಾವು ತಯಾರು ಮಾಡಬೇಕು ಆತ ಯಾರು ಮಾಡುವಂತಹ ದೀಪ ವನ್ನು ನಾವು ಈರುಳ್ಳಿಯಲ್ಲಿ ತಯಾರು ಮಾಡಬೇಕು ಒಂದು ದೊಡ್ಡ ಈರುಳ್ಳಿಯನ್ನು ತೆಗೆದುಕೊಂಡು ಅದರ ಸಿಪ್ಪೆಯನ್ನೆಲ್ಲ ತೆಗೆದು ಈರುಳ್ಳಿಯ ಮಧ್ಯ ಇರುವಂತಹ ಪದರಗಳನ್ನು ತೆಗೆದು ಅದನ್ನು ಒಂದು ದೀಪದ ರೀತಿ ಮಾಡಿಕೊಳ್ಳಬೇಕು ನೀವು ಇದನ್ನು.
ಉಪಯೋಗಿಸಬೇಕಾಗಿರುವಾಗ ನಾನು ಹೇಳಿರುವಂತಹ ಪದಾರ್ಥ ಗಳನ್ನು ಉಪಯೋಗಿಸಿ ಮಾಡಿ ಏಕೆಂದರೆ ಕಹಿಬೇವಿನ ಎಣ್ಣೆ ಮಾತ್ರ ನಮಗೆ ಒಳ್ಳೆಯ ಫಲಿತಾಂಶ ಸಿಗುವುದು ಬೇರೆ ಎಣ್ಣೆ ಹಾಕಿದರೆ ಸಿಗುವುದಿಲ್ಲ .ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.