ಡಾಕ್ಟರ್ ಪ್ರಮೋದ ದೇವಿ ಓದಿರೋದು ಎಷ್ಟು…. ರಾಜಮಾತೆ ಡಾಕ್ಟರ್ ಪ್ರಮೋದ ದೇವಿಯ ಜೀವನ ಕಥೆ ಏನು ಇವರು ಮೈಸೂರಿನ ಮಹಾರಾಣಿಯಾಗಿದ್ದು ಹೇಗೆ ರಾಜಮಾತೆ ಓದಿರುವುದು ಎಷ್ಟು ಪ್ರಮೋದ ದೇವಿ ಕುಟುಂಬದ ಆಸ್ತಿ ಎಷ್ಟು ಗೊತ್ತಾ ಸರ್ಕಾರದ ವಿರುದ್ಧ ಸಮರ ಸಾರಿ ಇರುವುದು ಯಾಕೆ ಎಲ್ಲವನ್ನು ಈಗ ತಿಳಿಯುತ್ತಾ ಹೋಗೋಣ.
1953ರ ನವೆಂಬರ್ 5 ರಂದು ಜನನ ಪ್ರಮೋದ ದೇವಿ 1953ರ ನವೆಂಬರ್ 5 ರಂದು ಮೈಸೂರಿನಲ್ಲಿ ಜನಿಸಿದರು ಇವರ ತಾಯಿ ಪುಟ್ಟ ಚಿನ್ನಮ್ಮಣ್ಣಿ ಎಂದು ದಂಪತಿಗೆ ಮದುವೆಯಾಗಿ ಹಲವು ವರ್ಷಗಳ ಕಾಲ ಮಕ್ಕಳಿರಲಿಲ್ಲ ನಂತರ ಜನಿಸಿದವರೆ ಈ ಪ್ರಮೋದ ದೇವಿ, ಪ್ರಮೋದ ದೇವಿ ಒಬ್ಬಳೆ ಮಗಳಾಗಿದ್ದರಿಂದ ಹೆಚ್ಚು ಏಕಾಂಗಿಯಾಗಿ ಬೆಳೆದರು.
ಇವರದ್ದು ಮೈಸೂರಿನ ಫೇಮಸ್ ಬೆಟ್ಟದ ಕೋಟೆ ಅರಸು ಕುಟುಂಬವಾಗಿತ್ತು ಇವರ ಕುಟುಂಬಕ್ಕೆ ಚಿಕ್ಕರ ಮನೆ ಕುಟುಂಬ ಎಂದು ಕೂಡ ಕರಿಯಲಾಗುತ್ತಾ ಇತ್ತು ಮೈಸೂರು ಒಡೆಯರ ಕುಟುಂಬಕ್ಕೆ ಸಂಬಂಧಿಕರಾಗಿದ್ದರು ಓದಿನಲ್ಲಿ ತುಂಬಾ ಮುಂದೆ ಇದ್ದ ಪ್ರಮೋದ ದೇವೆ ಹಿಂದಿಯಲ್ಲಿ ಪಿಜಿ ಶಿಕ್ಷಣವನ್ನು ಪಡೆದುಕೊಂಡರು.
ಜೊತೆಗೆ ಇವರ ತಾತ ಸಂಸ್ಕೃತ ಪೂಜೆ ಪುನಸ್ಕಾರಕ್ಕೆ ಸಂಬಂಧಿಸಿದ ಶಿಕ್ಷಣವನ್ನು ನೀಡಿದ್ದರು, 1976ರಲ್ಲಿ ಒಡೆಯರ್ ಜೊತೆ ಮದುವೆ ಶಿಕ್ಷಣ ಮುಗಿಸಿದ ಪ್ರಮೋದ ದೇವಿಗೆ ಆಗ 23 ವರ್ಷ ವಯಸ್ಸಾಗಿತ್ತು ಶ್ರೀಕಂಠ ದತ್ತ ಒಡೆಯರ್ ಅವರಿಗೆ ಹುಡುಗಿ ಹುಡುಕಲಗುತ್ತಾ ಇತ್ತು ಆಗ ಅವರ ತಾಯಿ ತ್ರಿಪುರ ಸುಂದರಿ ಅಮ್ಮಣಿ ಅವರ ಕಣ್ಣಿಗೆ ಪ್ರಮೋದ ದೇವಿ ಬಿದ್ದರೂ.
ತಮ್ಮ ಮಗನಿಗೆ ಈಕೆಯ ತಕ್ಕ ಸೊಸೆ ಎಂದು ನಿರ್ಧರಿಸಿದರು ಎರಡು ಕುಟುಂಬಸ್ಥರು ಒಪ್ಪಿ ಎಂಗೇಜ್ಮೆಂಟ್ ಮಾಡಿದರು ಶ್ರೀಕಂಠ ದತ್ತ ಒಡೆಯರ್ ಪ್ರಮೋದ ದೇವಿಗೆ ಕಸಿನ್ ಆಗಬೇಕಾಗಿತ್ತು ಆದರೂ ಈ ಮದುವೆ ಪ್ರಸ್ತಾಪ ಪ್ರಮೋದಾಗ ಅನಿರೀಕ್ಷಿತವಾಗಿತ್ತು ಎಂಗೇಜ್ಮೆಂಟ್ ಆದ ನಂತರ ಅಷ್ಟೇ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳುವುದಕ್ಕೆ ಸಾಧ್ಯವಾಯಿತು.
1976ರಲ್ಲಿ ಶ್ರೀಕಂಠ ದತ್ತಾ ಒಡೆಯರ್ ಜೊತೆ ಪ್ರಮೋದದೇವಿ ಮದುವೆಯೂ ಆಯ್ತು ಪ್ರಮೋದ ದೇವಿ ಮೈಸೂರು ಮಹಾರಾಣಿಯಾದರು ಅರಮನೆಯಲ್ಲಿ ಪ್ರಮೋದ ದೇವಿಯ ಜೀವನ ಶುರುವಾಯಿತು, ನಿಜವಾದ ಶಾಪ ಮಕ್ಕಳಾಗಲಿಲ್ಲ ಪತಿ ಅಗಲಿಕೆ ಬಳಿಕ ಏಕಾಂಗಿ ಅಲಮೇಲಮ್ಮನ ಶಾಪದಂತೆ ಶ್ರೀಕಂಠ ದತ್ತ ಒಡೆಯರ್ ಅವರಿಗೆ ಮಕ್ಕಳಾಗಲಿಲ್ಲ.
ಆದರೆ ಪರಸ್ಪರ ಒಬ್ಬರಿಗೊಬ್ಬರು ಮಕ್ಕಳಾಗಿ ಜೀವನ ಸಾಗಿಸಿದರು ರಾಜಕೀಯ ಕ್ರೀಡೆ ಹೀಗೆ ಶ್ರೀಕಂಠ ದತ್ತ ಒಡೆಯರ್ ಯಾವುದರಲ್ಲಿ ಇರಲಿಲ್ಲ ಎಲ್ಲಾ ಕ್ಷೇತ್ರದಲ್ಲಿಯೂ ಆಸಕ್ತಿಯನ್ನು ಹೊಂದಿದ್ದರು ಆದರೆ 2013ರಲ್ಲಿ ತಮ್ಮ 60ನೇ ವಯಸ್ಸಿನಲ್ಲಿ ಶ್ರೀಕಂಠ ದತ್ತ ಒಡೆಯರ್ ಗೆ ಹೃದಯಾಘಾತವಾಯಿತು ಬಾರದೂರಿಗೆ ಪಯಣಿಸಿದರು.
ಪ್ರಮೋದ ದೇವಿಗೆ ಮಕ್ಕಳಾಗದೇ ಇದ್ದರೂ ಆ ವರೆಗೂನು ದತ್ತು ಪಡೆದಿರಲಿಲ್ಲ ಹಾಗಾಗಿ ಒಬ್ಬಂಟಿಯಾಗಿ ಇದ್ದರು, ಯದುವೀರ್ ದತ್ತು ಪಡೆದ ಪ್ರಮೋದಾ ಒಡೆಯರ ನಿಧನದ ನಂತರ ಉತ್ತರಧಿಕಾರಿ ಆಯ್ಕೆಗಾಗಿ ದತ್ತು ಪಡೆಯುವುದು ಅನಿವಾರ್ಯವಾಯಿತು.
ಶ್ರೀಕಂಠ ದತ್ತ ಒಡೆಯರ್ ನಿಧನರಾದ 14 ತಿಂಗಳುಗಳ ಬಳಿಕ ಅಂದರೆ 2015ರಲ್ಲಿ ಸಂಪ್ರದಾಯದಂತೆ 21 ವರ್ಷದ ಯದುವೀರನ್ನು ದತ್ತು ತೆಗೆದುಕೊಳ್ಳಲು ಪ್ರಮೋದ ದೇವಿ ನಿರ್ಧರಿಸಿದರು. ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.