ಪ್ರಳಯದ ಮೀನು ಅದು ಕೊಡ್ತಿದೆಯ ವಿನಾಶದ ಮುನ್ಸೂಚನೆ…. ಜಗತ್ತಿನಲ್ಲಿ ಅನಾಹುತಗಳ ಸರಮಾಲೆಯ ಶುರುವಾಗುತ್ತದೆಯಾ ಅಲ್ಲಲ್ಲಿ ಭೂಕಂಪಗಳು ಆ ಭೂಕಂಪಗಳಿಂದ ಉಂಟಾಗುವ ಸುನಾಮಿಗಳು ಇವೆಲ್ಲವನ್ನ ನಾವು ನೋಡಬೇಕಾಗುತ್ತದೆ ಜಪಾನ್ ಅಮೆರಿಕ ಸೇರಿದ ಹಾಗೆ ಪೆಸಿಫಿಕ್ ಸಾಗರದಲ್ಲಿ ಸಮಸ್ಯೆಗಳು ಹೆಚ್ಚಾಗಿ.
ಜಗತ್ತು ಮತ್ತೆ ಯುದ್ಧಭೀತಿಯಿಂದ ನರಳಬೇಕಾದ ಸಂದರ್ಭ ನಿರ್ಮಾಣವಾಗುತ್ತದೆಯಾ ಇಂತಹ ಅನುಮಾನಗಳಿಗೆ ಕಾರಣವಾಗುತ್ತಾ ಇರುವುದು ಅದು ಒಂದು ಮೀನು, ಆ ಮೀನು ಕಾಣಿಸಿದಾಗಲೆಲ್ಲ ಜಗತ್ತು ಸಮಸ್ಯೆಯನ್ನ ಕಂಡಿದೆಯಂತೆ 2011ರಲ್ಲಿ ಜಪಾನ್ ನಲ್ಲಿ ಭೂಕಂಪನ ಹಾಗೂ ಸುನಾಮಿ ಉಂಟಾದಂತಹ ಸಂದರ್ಭದಲ್ಲಿಯೂ.
ಈ ಮೀನುಗಳ ದರ್ಶನ ವಾಗಿತ್ತಂತೆ ಅಮೀನು ಈಗ ಮತ್ತೊಮ್ಮೆ ಕಂಡು ಬಂದಿದೆ ಅದು ಪಶ್ಚಿಮದ ದೇಶಗಳಲ್ಲಿ ಹಾಗೂ ಪೂರ್ವ ಏಷ್ಯಾ ದೇಶಗಳಲ್ಲಿ ಬಿತಿಯನ್ನ ಸೃಷ್ಟಿ ಮಾಡುತ್ತಾ ಇದೆ ಹಾಗಾದರೆ ಯಾವುದು ಆ ಮೀನು ಅದಕ್ಕೆ ಅಷ್ಟೊಂದು ಶಕ್ತಿ ಇದೆಯಾ ಆ ಬಗ್ಗೆ ಸಂಶೋಧನೆಯನ್ನು ನಡೆಸಿರುವಂತಹ ವಿಜ್ಞಾನಿಗಳು ಹೇಳುತ್ತಾ ಇರುವುದು ಏನು.
ಆ ಮೀನಿನ ಬಗ್ಗೆ ಇರುವ ನಂಬಿಕೆಗಳು ಏನು ಎನ್ನುವುದರ ಬಗ್ಗೆ ಒಂದಷ್ಟು ಮಾಹಿತಿಯನ್ನು ನಾವು ಈಗ ನೋಡುತ್ತಾ ಹೋಗೋಣ. ಕಲ್ಲಿನ ಕೋಳಿ ಕೂಗುತೈತೆ ಕಲ್ಲಿನಬಸವ ಕೂಗುತೈತೆ ಗುಲಗಂಜಿಯಾ ಕಪ್ಪು ಹೋದರೆ ಪ್ರಳಯಾಗುವುದು ಗ್ಯಾರಂಟಿ ಹೀಗೆ ನಮ್ಮಲ್ಲಿ ತರಾವರಿಯ ನಂಬಿಕೆಗಳು ನಮ್ಮಲ್ಲಿ ಒಂದೊಂದು ಪ್ರದೇಶದಲ್ಲಿಯೂ ಇಂತಹ ವಿಶೇಷ ನಂಬಿಕೆಗಳು ಇರುತ್ತವೆ.
ನಮ್ಮ ತುಮಕೂರಿನ ಪಕ್ಕದಲ್ಲಿರುವ ಚೇಳೂರಿನಲ್ಲಿ ಕಲ್ಲಿನಬಾವಿ ಹುಕ್ಕಿ ಮರಳಿನ ಬಸವ ಗುಟು ರಾಕಿ ಊರಿನ ಮುಂದೆ ಇರುವ ಕಲ್ಲಿನ ಕೋಳಿ ಕೂಗಿಬಿಟ್ಟರೆ ಕಲಿಯುಗದ ಅಂತ್ಯ ಎಂದು ನಂಬಲಾಗುತ್ತದೆ ಇದೇ ರೀತಿಯ ನಂಬಿಕೆ ಆಂಧ್ರಪ್ರದೇಶದಲ್ಲಿಯೂ ಇದೆ.
ವೀರ ಬ್ರಹ್ಮೇಂದ್ರ ಸ್ವಾಮಿಗಳು ಅವರ ಕಾಲಜ್ಞಾನದಲ್ಲಿ ಕಲ್ಲಿನ ಬಸವ ಕಲ್ಲಿನ ಕೋಳಿಯ ಬಗ್ಗೆ ಬರೆದಿದ್ದಾರೆ ಎಂದು ಹೇಳುತ್ತಾರೆ ನಿಮ್ಮ ನಿಮ್ಮ ಊರುಗಳಲ್ಲಿಯೂ ಕೂಡ ಇದರ ಬಗ್ಗೆ ಸಾಕಷ್ಟು ನಂಬಿಕೆಗಳು ಇರುತ್ತದೆ. ನಮ್ಮಲ್ಲಿ ಈ ರೀತಿಯಾಗಿ ಸಾಕಷ್ಟು ನಂಬಿಕೆಗಳಿವೆ ನಾನು ಅದನ್ನ ಯಾವುದೂ ಕೂಡ ಮೌಡ್ಯ ಎಂದು ಕರೆಯುವುದಿಲ್ಲ.
ಕರೆದರೆ ಅದು ನಮ್ಮ ಮೌಡ್ಯವಾಗುತ್ತದೆ ಏಕೆಂದರೆ ಈ ನಂಬಿಕೆಗಳು ಸಾಕಷ್ಟು ಜನರ ಜೀವನದ ಉತ್ಸಾಹವನ್ನು ಹೆಚ್ಚು ಮಾಡುತ್ತಾ ಇರುತ್ತದೆ ಅವರಿಗೆ ಅವರ ಮೇಲೆಯೇ ನಂಬಿಕೆಯನ್ನು ಕೊಡುತ್ತಾ ಇರುತ್ತದೆ ನಾಳೆ ಪ್ರಪಂಚ ಪ್ರಳಯವಾಗಿ ಬಿಡುತ್ತದೆ ಎನ್ನುವ ಭಯಕ್ಕಿಂತ ಕಲ್ಲಿನ ಬಸವ ಕೂಗುವವರೆಗೂ ಈ ಪ್ರಪಂಚಕ್ಕೆ ಏನು ಆಗುವುದಿಲ್ಲ.
ಹೀಗಾಗಿ ನಾನು ಬದುಕಿರುವವರೆಗೂ ದುಡಿದು ಇರಬೇಕು ನನ್ನ ಕರ್ತವ್ಯವನ್ನ ಮಾಡುತ್ತಾ ಇರಬೇಕು ಎನ್ನುವ ನಂಬಿಕೆ ನಮ್ಮನ್ನ ಬದುಕಿನಲ್ಲಿ ಎಂಗೇಜ್ ಮಾಡಿಡುತ್ತದೆ ಎಂದರೆ ಆ ನಂಬಿಕೆಯಲ್ಲಿ ನಷ್ಟವೇನು. ಇದು ಕೇವಲ ನಮ್ಮ ಬಳಿ ಇದೆ ಎಂದು ಮಾತ್ರ ಅಂದುಕೊಳ್ಳಬೇಡಿ ಮೊನ್ನೆ ಯಾರೋ ಪೇಪರ್ನಲ್ಲಿ ಭಾರತ ಮೌಡ್ಯ ಎಂದು ಹೇಳಿದ್ದನ್ನು ಓದುತ್ತಾ ಇದ್ದೆ.
ಹಾಗೇನಾದರೂ ಅಂದುಕೊಂಡಿದ್ದರೆ ಅದು ಅವರ ಮೌಡ್ಯ ಏಕೆಂದರೆ ನಮಗಿಂತ ಹೆಚ್ಚಿನ ಈ ರೀತಿಯ ನಂಬಿಕೆಗಳು ವಿದೇಶದಲ್ಲಿ ಇವೆ ಯಾರನ್ನು ನಾವು ತುಂಬಾ ಬುದ್ಧಿವಂತ ಜನಾಂಗ ಎಂದು ನಂಬಿದ್ದೀವಿಯೋ ಆ ಪಶ್ಚಿಮತ್ಯರು ಇಂತಹದನ್ನೆಲ್ಲ ವಿಪರಿತವಾಗಿ ನಂಬುತ್ತಾರೆ ನಮ್ಮಲ್ಲಿ ವೀರ ಬ್ರಹ್ಮೇಂದ್ರ ಸ್ವಾಮಿಗಳು ಕೈವಾರ ತಾತಯ್ಯ ಮುಂತಾದ ಕಾಲಜ್ಞಾನಿಗಳು ಇರುವ ಹಾಗೆ.
ಅಲ್ಲಿ ನಾಸ್ಟ್ರೊ ಡಮಸ್ ಬಾಬಾ ಮುಂತಾದವರು ಇದ್ದಾರೆ ಅಲ್ಲಿಯ ಜನರು ಸೂಪರ್ ನ್ಯಾಚುರಲ್ ಶಕ್ತಿಯನ್ನ ನಂಬುತ್ತಾರೆ ಅಲ್ಲಿಯೂ ಕೂಡ ಜ್ಯೋತಿಷ್ಯ ಕೇಳುತ್ತಾರೆ ಕೆಟ್ಟ ಸಮಯ ಒಳ್ಳೆಯ ಸಮಯ ಅವೆಲ್ಲವನ್ನು ಕೂಡ ಅವರು ನಂಬುತ್ತಾರೆ ಶಕುನಗಳು ಅವರಿಗೂ ಇವೆ ಅಲ್ಲಿಯೂ ಕೂಡ ಸ್ವರ್ಗ ನರ್ಕದ ನಂಬಿಕೆಗಳು ಇವೆ. ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.