ನಾನು ಮನೆ ಬಿಟ್ಟು ಹೋಗುವಾಗ ಅವನು ಕೇಳಿದ ಆ ಪ್ರಶ್ನೆ… ನಾನು ಮನೆ ಬಿಟ್ಟು ಹೋಗಬೇಕಾದರೆ ಅವರು ಕೇಳಿದ್ದು ಒಂದೇ ಪ್ರಶ್ನೆ ಆ ಮನೆಯಲ್ಲಿ ಸುಖವಾಗಿ ಇರುತ್ತೀಯ ಚೆನ್ನಾಗಿ ನೋಡಿಕೊಳ್ಳುತ್ತಾನ ನಿನಗೆ ನಂಬಿಕೆ ಇದೆಯಾ ಅವನ ಮೇಲೆ ಅವನು ಅಪ್ಪ ರೀತಿ ಅಲ್ಲವ ಎಂದು ಕೇಳಿದ ನನಗೆ ಆ ಸಮಯದಲ್ಲಿ ಏನು ಉತ್ತರಿಸಬೇಕು ಎಂದೇ ಗೊತ್ತಾಗಲಿಲ್ಲ.
ನೀವು ಇಷ್ಟ ಪಟ್ಟಂತಹ ಈರೋ ಶರತ್ ಲೈಫಿನಲ್ಲಿ ಬಂದರೂ ನೀವು ಮದುವೆಯಾದರೆ ನಿಮ್ಮ ಜೀವನದಲ್ಲಿ ವಿಲನ್ಗಳು ಯಾರು ಇಲ್ಲವಾ ನಮ್ಮ ಅಪ್ಪನೇ ವಿಲನ್ ಅವರಿಗೆ ಇಷ್ಟ ಇರಲಿಲ್ಲ ನಾನು ಶರತ ಅವರನ್ನು ಮದುವೆ ಮಾಡಿಕೊಳ್ಳುವುದು ಮೊದಲನೆಯದಾಗಿ ಕ್ಯಾಸ್ಟ್ ಆನಂತರ ಅವರಿಗೆ ಪ್ರೀತಿಸಿ ಮದುವೆಯಾಗುವುದರಲ್ಲಿ ನಂಬಿಕೆ ಇರಲಿಲ್ಲ.
ಪ್ರೀತಿಸಿ ಮದುವೆಯಾದವರು ಚೆನ್ನಾಗಿ ಇರುವುದಿಲ್ಲ ಆ ರೀತಿ ಈ ರೀತಿ ಎಂದು ಮತ್ತು ನಾನು ಒಬ್ಬಳೇ ಮಗಳು ಎಂದು ಹಾಗಾಗಿ ಅವರೆಗೆ ಇಷ್ಟ ಇರಲಿಲ್ಲ ಆದರೆ ನಾನು ಶರತನ ನೋಡಿದ್ದರಿಂದ ಅವನ ಜೊತೆ ಇದ್ದಿದ್ದರಿಂದ ಗೊತ್ತಿತ್ತು ಅವನು ಹೇಗೆ ಯಾವ ಯಾವ ವಿಷಯದಲ್ಲಿ ಹೇಗೆ ನಡೆದುಕೊಳ್ಳುತ್ತಾನೆ ಅವನು ಎಲ್ಲಿ ನನ್ನನ್ನು ಟ್ರಿಪ್ ಮಾಡುತ್ತಾನೆ ಎಲ್ಲಿ ನನಗೆ ಫ್ರೀಡಂ ಕೊಡುತ್ತಾನೆ.
ಎಂದು ನನಗೆ ತುಂಬಾ ಚೆನ್ನಾಗಿ ಗೊತ್ತಿತ್ತು ಹಾಗಾಗಿ ನನಗೆ ಅನಿಸಿತು ನನ್ನನ್ನು ಯಾರಾದರೂ ಒಬ್ಬರು ನಿಯಂತ್ರಣದಲ್ಲಿ ಇಟ್ಟುಕೊಂಡು ನಿನ್ನನ್ನ ಗೈಡ್ ಮಾಡುವವರು ಯಾರಾದರೂ ಇದ್ದಾರೆ ಎಂದರೆ ಅದು ಕೇವಲ ಶರತ್ ಎಂದು ನನ್ ತಪ್ಪು ಮಾಡಿದರೆ ಸರಿ ಮಾಡುವುದಕ್ಕೆ ಅವನಿಗೆ ಗೊತ್ತು ನಾನು ತಪ್ಪು ಮಾಡದೆ ಇರುವ ಹಾಗೆ ಅವನಿಗೆ ನೋಡಿಕೊಳ್ಳುವುದಕ್ಕೂ ಗೊತ್ತು.
ನಾನು ಸಮಸ್ಯೆಯಲ್ಲಿದ್ದಾಗ ಅದನ್ನು ನಿವಾರಿಸುವುದಕ್ಕೆ ಅವನಿಗೆ ಗೊತ್ತು ಆ ರೀತಿ ಆಗಿ ನನ್ನ ತಲೆಯಲ್ಲಿ ಉಳಿದುಕೊಂಡಿತು ಮದುವೆಗೆ ಹಾಗಾಗೇ ಅವರಿಗೆ ಯಾರಿಗೂ ಕೂಡ ಒಪ್ಪಿಗೆ ಇರಲಿಲ್ಲ ಹಾಗಾಗಿ ನಾನು ಮನೆ ಬಿಟ್ಟು ಹೊರಗೆ ಬಂದೆ ನಾನು ಮನೆಯಲ್ಲಿ ಏನು ಹೇಳಿರಲಿಲ್ಲ ಸೀದಾ ಮನೆ ಬಿಟ್ಟು ಬಂದೆ ಏಕೆಂದರೆ ಅಷ್ಟೊತ್ತಿಗೆ ಆಗಲೇ ನನ್ನ ತಂದೆ ಒಡೆದು ಬಡೆದು ಎಲ್ಲವನ್ನೂ ಕೂಡ ಮಾಡಿದ್ದರು.
ಚಿಕ್ಕವಯಸ್ಸಿನಲ್ಲಿ ಎಂದರೆ ಒಂದಷ್ಟು ಕಿತಾಪತಿಗಳನ್ನು ಮಾಡುತ್ತಿದ್ದವು ಆದರೆ ಒಂದು ವಯಸ್ಸಿಗೆ ಬಂದ ನಂತರ ಒಂದು ಹಂತಕ್ಕೆ ಬಂದ ಮೇಲೆ ಅಪ್ಪ ಅಮ್ಮನ ಬಳಿ ಒಡೆಸಿಕೊಳ್ಳುವುದು ಎಂದರೆ ಒಂದು ರೀತಿಯ ಹಿಂಸೆ ಸಂಕಟ ಎಂದು ಅನಿಸುತ್ತಿತ್ತು ನನಗೆ ಅಕ್ಕ ಪಕ್ಕದ ಸ್ನೇಹಿತರನ್ನೆಲ್ಲ ನೋಡಬೇಕಾದರೆ ಒಂದು ರೀತಿ ಅವರ ಅಪ್ಪ ಅಮ್ಮ ಎಷ್ಟು ಚೆನ್ನಾಗಿ ನೋಡಿಕೊಳ್ಳುತ್ತಾರೆ.
ನಮ್ಮ ಮನೆಯಲ್ಲಿ ಯಾಕೆ ನಮ್ಮ ಅಪ್ಪ ಬೇರೆ ಮಕ್ಕಳನ್ನ ತುಂಬಾ ಚೆನ್ನಾಗಿ ಮಾತನಾಡಿಸುತ್ತಾ ಇದ್ದರು ಮತ್ತು ಅವರಿಗೆ ಧೈರ್ಯವನ್ನ ನೀಡುತ್ತಾ ಇದ್ದರು ಆದರೆ ಅವರ ಮಕ್ಕಳ ಜೀವನ ಎಂದು ಬಂದಾಗ ತುಂಬಾ ಸ್ಟ್ರಿಕ್ಟ್ ಆಗಿ ಇಡುವುದಕ್ಕೆ ನೋಡುತ್ತಾ ಇದ್ದರು ನನಗೆ ಯಾವಾಗಲೂ ಕೂಡ ಮನಸ್ಸಿನಲ್ಲಿ ಆ ಒಂದು ಕೊರಗು ಇತ್ತು.
ನನ್ನ ಅಪ್ಪನ ಜೊತೆ ನಾನು ಒಳ್ಳೆಯ ದಿನಗಳನ್ನು ಕಳೆಯಲಿಲ್ಲ ಅವರು ಎಲ್ಲಿಯಾದರೂ ತಿನ್ನೋದಕ್ಕೆ ಕರೆದುಕೊಂಡು ಹೋದರೆ ಕೇವಲ ತಿಂದು ಬರುವುದು ಅಷ್ಟೇ ನಮ್ಮ ಕೆಲಸ ಅವರಿಗೆ ನಮ್ಮ ಮೇಲೆ ಪ್ರೀತಿ ಇತ್ತು ಆದರೆ ಅದನ್ನು ತೆರೆದು ತೋರಿಸಿಕೊಳ್ಳುತ್ತಾ ಇರಲಿಲ್ಲ ನಮಗೆ ಅವರ ಮೇಲೆ ಪ್ರೀತಿಗಿಂತ ಹೆಚ್ಚು ಭಯವಿತ್ತು ಏನು ಹೇಳಿದರೆ ಏನು ತಪ್ಪು ತಿಳಿದುಕೊಳ್ಳುತ್ತಾರೆ ಎಂದು. ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.