ಜ್ಯೋತಿಷ್ಯ ಶಾಸ್ತ್ರದಲ್ಲಿ ಕುಜ ಸ್ತಂಭನಕ್ಕೆ ವಿಶೇಷ ಮಹತ್ವವಿದೆ..ಕುಜನು ಒಂದು ರಾಶಿಯಲ್ಲಿ 45 ದಿನ ಸಂಚಾರ ಮಾಡುತ್ತಾನೆ. 45 ದಿನಕ್ಕಿಂತಲೂ ಹೆಚ್ಚಿನ ದಿನ ಒಂದು ರಾಶಿಯಲ್ಲಿ ಕುಜ ಸಂಚಾರ ಆದರೆ ಅದನ್ನು ಕುಜ ಸ್ತಂಭನ ಎಂಬ ಹೆಸರಿನಿಂದ ಕರೆಯಲಾಗುತ್ತದೆ.. ಈ ಕುಜ ಸ್ತಂಭವೂ 2022 ಜುಲೈ ಆಗಸ್ಟ್ ತಿಂಗಳಿನಲ್ಲಿ ಜರುಗಿತ್ತು.ಕುಜ ಸ್ವಂಭನ ಜರುಗಿದಾಗ ಕೆಲವು ರಾಶಿಗೆ ಅತ್ಯಂತ ಶುಭ ಉಂಟಾದರೆ ಕೆಲವು ರಾಶಿಗಳಿಗೆ ಸ್ವಲ್ಪ ಅಶುಭ ಫಲಗಳು ಕೂಡ ಪ್ರಾಪ್ತಿಯಾಗುತ್ತದೆ..2024 ರಲ್ಲಿ ಆಗಸ್ಟ್ 27 ರಿಂದ ಅಕ್ಟೋಬರ್ 21 ರ ತನಕ ಮಿಥುನ ರಾಶಿಯಲ್ಲಿ ಕುಜನು ಸಂಚರಿಸುತ್ತಾನೆ ಅಂದರೆ 45 ದಿನಕ್ಕಿಂತಲೂ ಹೆಚ್ಚಿನ ದಿನಗಳ ಕಾಲ ಮಿಥುನ ರಾಶಿಯಲ್ಲಿ ಸಂಚರಿಸಲಿದ್ದಾನೆ.ಅಂದರೆ 55 ದಿನ ಇದೆ ರಾಶಿಯಲ್ಲಿ ಕುಜ ಸಂಚಾರ ನಡೆಯುತ್ತದೆ.ನಂತರ ಅಕ್ಟೋಬರ್ 21 ರಿಂದ 2025 ಜನವರಿ 22 ನೆ ತಾರೀಖಿನ ವರೆಗೆ ಕರ್ಕಾಟಕ ರಾಶಿಯಲ್ಲಿ ಕುಜ ಸಂಚಾರ ಮಾಡ್ತಾನೆ ಅಂದರೆ ಸರಿಯಾಗಿ 92 ದಿನ ಕರ್ಕಾಟಕ ರಾಶಿಯಲ್ಲಿ ಸಂಚರಿಸುತ್ತಾನೆ.
ಮತ್ತೆ ಕುಜನು ಬಹಳ ವಿಶೇಷವಾಗಿ 2025 ಜನವರಿ 22 ನೇ ತಾರೀಖಿನಿಂದ ಏಪ್ರಿಲ್ 3 ನೇ ತಾರೀಖಿನವರೆಗೂ ಮಿಥುನ ರಾಶಿಯಲ್ಲಿ ಚಲಿಸಲಿದ್ದಾನೆ ,ಮಿಥುನ ರಾಶಿಯಲ್ಲಿ 81 ದಿನ ಕುಜನು ಸಂಚರಿಸುತ್ತಾನೆ..ಒಟ್ಟಾರೆಯಾಗಿ 81 ದಿನ ಹಾಗೂ 55 ದಿನ ಎರಡನ್ನೂ ಕೂಡಿದಾಗ 136 ದಿನಗಳ ಕಾಲ ಕುಜನು ಮಿಥುನ ರಾಶಿಯಲ್ಲಿಯೇ ಸ್ತಂಭಿಸುತ್ತಾನೆ.
ಕುಜ ಸ್ತಂಭನದಿಂದ ಮಿಥುನ ರಾಶಿಗೆ ಫಲಗಳು ಚೆನ್ನಾಗಿರೋದಿಲ್ಲ..ಈ ಸ್ತಂಭನದ ಪ್ರಭಾವದಿಂದ ಅಶುಭ ಫಲಗಳು ಉಂಟಾಗುತ್ತದೆ.. ಕಟಕ ರಾಶಿಯಲ್ಲಿಯೂ ಕುಜನು ಹೆಚ್ಚು ದಿನ ಸಂಚರಿಸುವ ಕಾರಣ ಈ ರಾಶಿಗೂ ಅಂದರೆ ಕಟಕ ಅಥವಾ ಕರ್ಕಾಟಕ ರಾಶಿಗೂ ಕೂಡ ಅಶುಭ ಫಲಗಳು ಹೆಚ್ಚಾಗಿ ಉಂಟಾಗುತ್ತದೆ..
ಮಿಥುನ ಹಾಗೂ ಕಟಕ ರಾಶಿಯವರಿಗೆ ಈ ಆಗಸ್ಟ್ 27 ರಿಂದ ಮುಂದಿನ ಆಗಸ್ಟ್ 27 ರವರೆಗೂ ಕುಜ ಸಂಬಂಧ ಸಮಸ್ಯೆಗಳನ್ನು ಅನುಭವಿಸಬೇಕಾಗುತ್ತದೆ .ಈ ಎರಡು ರಾಶಿಯನ್ನು ಬಿಟ್ಟು ಮೀನ ರಾಶಿಗೆ ,ಮೇಷ ರಾಶಿಗೆ ಸ್ವಲ್ಪ ಕೆಡುಕು ಉಂಟಾಗುತ್ತದೆ.. ನಂತರ ವೃಶ್ಚಿಕ ಹಾಗೂ ಧನಸ್ಸು ರಾಶಿಯವರಿಗೆ ಅಷ್ಟಮ ಕುಜ ಸಮಸ್ಯೆಗಳು ಉಂಟಾಗುತ್ತದೆ..
ಮಿಥುನ ,ಕರ್ನಾಟಕ,ಮೀನ ,ಮೇಷ,ಧನಸ್ಸು,ವೃಶ್ಚಿಕ ಒಟ್ಟು ಆರು ರಾಶಿಗಳು ಅತ್ಯಂತ ಜಾಗ್ರತೆಯಿಂದ ಇರಬೇಕು..ಕುಜನು ಅನೂಕೂಲಕರವಾಗಿಲ್ಲದಿದ್ದಾಗ ಭೂಮಿಗೆ ಸಂಬಂಧಿಸಿದ ವಿಚಾರಗಳು,ಅಣ್ಣ ತಮಂದೀರ ವಿಷಯದಲ್ಲಿ,ಭೂಮಿ ಮಾರುವ ಕೊಳ್ಳುವ ವಿಷಯದಲ್ಲಿ ,ಕ್ರಯ ವಿಕ್ರಯದಲ್ಲಿ,ಕೋರ್ಟ್ ಕೇಸ್ ಸಮಸ್ಯೆಗಳಲ್ಲಿ,ಆರೋಗ್ಯ ವಿಷಯದಲ್ಲಿ ಎಚ್ಚರಿಕೆಯಿಂದ ಇರಬೇಕು.ಕಬ್ಬಿಣದ ವಸ್ತುಗಳ ವಿಷಯದಲ್ಲಿ, ಇದ್ದಕ್ಕಿದ್ದಂತೆ ಕೋಪ ಹೆಚ್ಚಾಗುವುದು,ಯಾವುದೇ ಕೆಲಸದಲ್ಲಿ ಆಸಕ್ತಿ ಇಲ್ಲದಂತಾಗುವುದು.ಸರ್ಕಾರಿ ಕೆಲಸದಲ್ಲಿರುವವರಿಗೆ,ಸೈನಿಕ ವೃತ್ತಿ ಮಾಡುವವರಿಗೆ,ನ್ಯಾಯವಾಧಿಗಳಿಗೆ ರಿಯಲ್ ಎಸ್ಟೇಟ್ ಉದ್ಯಮಿಗಳಿಗೆ,ವಾಹನ ಬಿಡಿ ಭಾಗಗಳ ಮಾರಾಟಗಾರರಿಗೆ,ಹೆಚ್ಚು ಅಶುಭ ಫಲ ಉಂಟಾಗುತ್ತದೆ..
ಕುಜ ಸ್ತಂಭನದಿಂದ ಮೂರು ರಾಶಿಗೆ ಮಾತ್ರ ಅತ್ಯಂತ ಶುಭಫಲಗಳು ಉಂಟಾಗುತ್ತದೆ. ಆ ಮೂರು ರಾಶಿಗಳಲ್ಲಿ ಮೊಟ್ಟ ಮೊದಲ ರಾಶಿ ಮೇಷ ರಾಶಿ ಯಾವಗಾಲದರೂ ಸರಿ ಜನ್ಮ ರಾಶಿಯಿಂದ ಲೆಕ್ಕ ಹಾಕಿದಾಗ ಮೂರು ಆರು ಹನ್ನೊಂದನೆ ರಾಶಿಯಲ್ಲಿ ಕುಜನ ಸಂಚಾರ ಆದರೆ ಆ ಸಂಚಾರದ ಫಲವಾಗಿ ವಿಶೇಷ ರಾಜಯೋಗ ಏರ್ಪಡುತ್ತದೆ.ಮೇಷ ರಾಶಿಯಿಂದ ಲೆಕ್ಕ ಹಾಕಿದಾಗ ಕುಜ ಇರುವ ಮಿಥುನ ರಾಶಿ ಮೇಷ ರಾಶಿಗೆ ಮೂರನೆ ರಾಶಿಯಾಗುತ್ತದೆ.ಆದ್ದರಿಂದ ಮೇಷ ರಾಶಿಗೆ 136 ದಿನ ಕುಜನು ಅತ್ಯಂತ ಶುಭ ಫಲ ನೀಡ್ತಾನೆ..ಭೂ ಲಾಭ ಗೃಹಲಾಭ ಪ್ರಾಪ್ತಿಯಾಗುತ್ತದೆ.. ಇಷ್ಟ ದಿನ ಇದ್ದ ಅಣ್ಣ ತಮ್ಮಂದೀರ ಕಲಹ ದೂರವಾಗಿ ಸಹೋದರ ಸಹೋದರಿಯರಿಂದ ಅತ್ಯಂತ ಲಾಭಗಳು ಪ್ರಾಪ್ತಿಯಾಗುತ್ತದೆ. ಸಾಲಗಳೆಲ್ಲಾ ದೂರವಾಗಲಿ ಋಣಮುಕ್ತರಾಗುವಿರಿ.ಒಂದಲ್ಲ ಒಂದು ವಿಷಯದಲ್ಲಿ ಅನೇಕ ಶುಭಗಳನ್ನೇ ಪಡೆದು ಜೀವನದಲ್ಲಿ ದೊಡ್ಡ ದೊಡ್ಡ ಬದಲಾವಣೆಗಳು ಉಂಟಾಗುತ್ತವೆ..
ಇನ್ನೂ ಕುಜ ಸ್ತಂಭಬದಿಂದ ಶುಭಯೋಗ ಪಡೆಯುವ ಎರಡನೆಯ ರಾಶಿ ಯಾವುದೆಂದರೆ ಮಕರ ರಾಶಿ ಏಕೆಂದರೆ ಮಕರ ರಾಶಿಯಿಂದ ಲೆಕ್ಕ ಹಾಕಿದಾಗ ಕುಜ ಸ್ತಂಭನ ಜರುಗುವ ಮಿಥುನ ರಾಶಿ ಆರನೆಯ ರಾಶಿಯಾಗುತ್ತದೆ.ಮಕರ ಕುಂಭ ಮೀನ ಮೇಷ ವೃಷಭ ಮಿಥುನ..ಕುಜ ಸ್ತಂಭನದಿಂದ ಮಕರ ರಾಶಿಗೆ 136 ದಿನಗಳ ಕಾಲ ಅನಾರೋಗ್ಯ ಸಮಸ್ಯೆಗಳೆಲ್ಲಾ ದೂರವಾಗುತ್ತದೆ.ಭಯಂಕರವಾದ ಋಣಬಾಧೆ ಎಂದರೆ ಸಾಲದ ಸಮಸ್ಯೆಗಳಿಂದ ಶೀಘ್ರವಾಗಿ ಮುಕ್ತರಾಗುವಿರಿ.ಶತ್ರುಗಳು ನಿಮ್ಮ ಮಾತಿಗೆ ಮನ್ನಣೆ ನೀಡುತ್ತಾರೆ..ನೀವು ಹೇಳಿದ್ದೆ ಸರಿ ನೀವು ಮಾಡಿದ್ದೆ ಸರಿ ಎಂದು ಹೇಳುತ್ತಾರೆ ಶತ್ರುತ್ವ ತೊಲಗಿ ಶತ್ರುಗಳು ಮಿತ್ರರಾಗುತ್ತಾರೆ..ಭೂ ಲಾಭ ಗೃಹ ಲಾಭದ ಜೊತೆಗೆ ಎದರಿನವರ ದೃಷ್ಟಿ ಅಸೂಯೆಯಿಂದ ಮುಕ್ತಿ ಹೊಂದುವಿರಿ.
ರಿಯಲ್ ಎಸ್ಟೇಟ್ ಉದ್ಯಮದಲ್ಲಿ ಅನೇಕ ಅನೇಕ ಲಾಭಗಳು ಉಂಟಾಗಿ ಹಣದ ಸಂಪಾದನೆ ಕೂಡ ಹೆಚ್ಚಾಗುತ್ತದೆ.. ನಾನಾ ಕ್ಷೇತ್ರಗಳಲ್ಲಿ ಹೆಚ್ಚಿನ ಆದಾಯ ಗಳಿಸಿ ಉತ್ತಮ ಜೀವನ ನಡೆಸುವಿರಿ..
ಇನ್ನೂ ಕುಜ ಸ್ತಂಭನದಿಂದ ರಾಜಯೋಗ ಪಡೆಯುವ ಮೂರನೆಯ ರಾಶಿ ಯಾವುದೆಂದರೆ ಸಿಂಹ ರಾಶಿ .ಸಿಂಹ ರಾಶಿಯಿಂದ ಲೆಕ್ಕ ಹಾಕಿದಾಗ ಕುಜ ಸ್ತಂಭನ ಜರುಗುವ ಮಿಥುನ ರಾಶಿ 11 ನೆ ರಾಶಿಯಾಗುತ್ತದೆ..ಆಗಲೆ ತಿಳಿಸಿದ ಹಾಗೆ 3,6,11 ಮನೆಯಲ್ಲಿ ಕುಜ ಸಂಚಾರ ನಡೆದರೆ ಅತ್ಯಂತ ಶುಭಫಲ ಉಂಟಾಗುತ್ತದೆ.. ಸಿಂಹ ರಾಶಿಗೂ ಕೂಡ 136 ದಿನಗಳ ಕಾಲ ಮುಟ್ಟಿದ್ದೆಲ್ಲಾ ಬಂಗಾರವಾಗುವಂತಹ ಫಲ ಉಂಟಾಗುತ್ತದೆ.. ಆರ್ಥಿಕವಾಗಿ ಏಳಿಗೆಯಾಗಲಿದ್ದೀರಿ.ಕುಟುಂಬದಲ್ಲಿ ನೆಮ್ಮದಿ ಹೆಚ್ಚುತ್ತದೆ.ಸಹೋದರ ಸಹೋದರಿಯರಿಂದ ಅನೇಕ ಸಹಾಯ ನಿಮಗೆ ಸಿಗುತ್ತದೆ..ಭೂಮಿಯಿಂದ ಲಾಭ ಉಂಟಾಗುತ್ತದೆ. ಹಣದ ಸಮಸ್ಯೆಗಳಿಂದ ಮುಕ್ತಿ ದೊರೆಯುತ್ತದೆ..
ಒಟ್ಟಾರೆಯಾಗಿ ಮೇಷ,ಮಕರ,ಸಿಂಹ ರಾಶಿಗೆ ಅತ್ಯಂತ ಶುಭ ಫಲ ಉಂಟಾಗುತ್ತದೆ.. ಕೆಲವು ರಾಶಿಗಳಿಗೆ ಮಧ್ಯಮ ಫಲ ಉಂಟಾದರೆ ಕೆಲವು ರಾಶಿಗೆ ಅಶುಭ ಉಂಟಾಗುತ್ತದೆ. ಈ ಕುಜ ಸ್ತಂಭನದಿಂದಾಗುಗ ಅಶುಭ ಫಲಗಳಿಂದ ತಪ್ಪಿಸಿಕೊಳ್ಳಲು ಅಥವಾ ತೀವ್ರತೆ ಕಡಿಮೆಯಾಗಲು ಉಳಿದ ರಾಶಿಗಳು ಮಾಡಲೆಬೇಕಾದ ಕೆಲಸ ಏನೆಂದರೆ ಕುಜನಿಗೆ ಅಧಿಷ್ಟಾನ ದೈವವಾದ ಶ್ರೀ ಸುಬ್ರಹ್ಮಣ್ಯ ಸ್ವಾಮಿ ಹಾಗೂ ನರಸಿಂಹ ಸ್ವಾಮಿಯ ಧ್ಯಾನವನ್ನು ಆಗಾಗ ಮಾಡಿಕೊಳ್ಳಿ.ಮಂಗಳವಾರದ ದಿನದಂದು ಆದಷ್ಟೂ ನರಸಿಂಹ ಸ್ವಾಮಿ,ಸುಬ್ರಹ್ಮಣ್ಯ ಸ್ವಾಮಿಯ ದರ್ಶನ ಮಾಡಿ ಬನ್ನಿ.ಸುಬ್ರಹ್ಮಣ್ಯ ಕರಾವಲಂಬ ಸ್ತೋತ್ರ,ಲಕ್ಷ್ಮಿ ನರಸಿಂಹ ಕರಾವಲಂಬ ಸ್ತೋತ್ರವನ್ನು ಕೇಳುತ್ತಾ ಬನ್ನಿ..ಈ ಸುಲಭ ಪರಿಹಾರವನ್ನು ಉಳಿದ ರಾಶಿಗಳು ಪಾಲಿಸಿ.ಇದರ ಜೊತೆಗೆ ನೆನೆಸಿದ ಕಾಳುಗಳನ್ನು ಬೆಲ್ಲದೊಂದಿಗೆ ಬೆರೆಸಿ ಮಂಗಳವಾರದ ದಿನ ಗೋವಿಗೆ ತಿನ್ನಿಸುತ್ತಾ ಬನ್ನಿ..ಈ ಕೆಳಗಿನ ವಿಡಿಯೋ ನೋಡಿ.