ವರ್ಷದ ಎರಡನೇ ಚಂದ್ರಗ್ರಹಣ ಯಾವ ರಾಶಿಗೆ ಒಳಿತು ಯಾವ ರಾಶಿಗೆ ಕೆಡುಕು..ಗ್ರಹಣದ ಆಚರಣೆ ಇದೆಯಾ ನೋಡಿ

ವರ್ಷದ ಎರಡನೇ ಚಂದ್ರಗ್ರಹಣ ಯಾವ ರಾಶಿಗೆ ಒಳಿತು ಯಾವ ರಾಶಿಗೆ ಕೆಡುಕು..ಗ್ರಹಣದ ಆಚರಣೆ ಇದೆಯಾ ನೋಡಿ
ಚಂದ್ರ ಗ್ರಹಣ 2024 ಸೆಪ್ಟೆಂಬರ್ 18ನೇ ತಾರೀಕು ಚಂದ್ರಗ್ರಹಣ ಕಾಣಿಸಿಕೊಳ್ಳುತ್ತದೆ ಇದು ರಾಹುಗ್ರಸ್ತ ಚಂದ್ರಗ್ರಹಣ ಈ ಚಂದ್ರ ಗ್ರಹಣವು ನಮ್ಮ ಭಾರತದಲ್ಲಿ ಇದಿಯಾ ಇಲ್ಲವಾ ಎಂಬುವುದು ಬಹಳ ಅಷ್ಟು ಸಂಶಯಕಾರಿ ವಿಷಯವಾಗಿದೆ ಇಲ್ಲ ಅಂದ್ರು ಕೂಡ 12 ರಾಶಿಗಳ ಮೇಲೆ ಯಾವ ರೀತಿ ಪ್ರಭಾವವನ್ನು ಬೀರುತ್ತದೆ ಎಂಬುದನ್ನು ಇಂದು ತಿಳಿದುಕೊಳ್ಳೋಣ ಚಂದ್ರ ಗ್ರಹಣ ಗೋಚರವಾಗುವುದಿಲ್ಲ ಭಾರತದ ಕೆಲವೊಂದು ಭಾಗಗಳಲ್ಲಿ ಮಾತ್ರ ಗೋಚರವಾಗುತ್ತದೆ ಎಂಬ ಮಾಹಿತಿ ಇದೆ.

WhatsApp Group Join Now
Telegram Group Join Now

ಈ ಚಂದ್ರಗ್ರಹಣವು ಈ ವರ್ಷದ ಎರಡನೇ ಚಂದ್ರ ಗ್ರಹಣವಾಗಿದೆ 2024 ಸೆಪ್ಟೆಂಬರ್ 18ನೇ ತಾರೀಕು ಬೆಳಿಗ್ಗೆ 6 ಗಂಟೆಗೆ ಚಂದ್ರ ಗ್ರಹಣವು ಪ್ರಾರಂಭವಾಗಿ ಬೆಳಿಗ್ಗೆ 10.12 ನಿಮಿಷಕ್ಕೆ ಮುಕ್ತಾಯಗೊಳ್ಳುತ್ತದೆ ಒಟ್ಟು ಸುಮಾರು ನಾಲ್ಕು ಗಂಟೆ ನಾಲ್ಕು ನಿಮಿಷಗಳ ಕಾಲ ಚಂದ್ರಗ್ರಹಣ ಗೋಚರಿಸುತ್ತದೆ ಕನ್ಯಾ ಲಗ್ನ ಹಾಗೂ ತುಲಾ ಲಗ್ನದಲ್ಲಿ ಗ್ರಹಣ ಗೋಚರವಾಗುತ್ತದೆ ಸ್ವಲ್ಪ ವೃಶ್ಚಿಕ ರಾಶಿಗೂ ಸಹ ಗೋಚರವಾಗುತ್ತದೆ ಇದು ಭಾದ್ರಪದ ಮಾಸದ ಶುಕ್ಲ ಪಕ್ಷದ ಪೌರ್ಣಮಿ ಈ ಗ್ರಹಣ ಸಂಭವಿಸುತ್ತಿದೆ .

ಬುಧವಾರ ಅವತ್ತಿನ ಪೂರ್ವಾ ಭದ್ರ ನಕ್ಷತ್ರ ನಾಲ್ಕನೇ ಪಾದ ಮೀನ ರಾಶಿಯಲ್ಲಿ ಈ ಒಂದು ಗ್ರಹಣ ಗೋಚರ ಅವತ್ತಿನ ಯೋಗ ಗಂಡ ಯೋಗ ಬವಕರಣ ಮನುಷ್ಯ ಮನುಷ್ಯ ಕಣದಲ್ಲಿ ಈ ಒಂದು ಗ್ರಹಣ ಸಂಭವಿಸುತ್ತದೆ ತಾಮ್ರದ ಲೋಹದ ಅಡಿಯಲ್ಲಿ ಈ ಗ್ರಹಣ ಸಂಭವಿಸುತ್ತಿದೆ ಈ ಒಂದು ಚಂದ್ರಗ್ರಹಣ ಯುರೋಪ್ ಆಫ್ರಿಕಾ ಉತ್ತರ ಮತ್ತು ದಕ್ಷಿಣ ಅಮೆರಿಕಗಳಲ್ಲಿ ಹಾಗೂ ಏಷ್ಯಾ ಖಂಡದ ಕೆಲವೊಂದು ಇಷ್ಟು ಭಾಗಗಳಲ್ಲಿ ಅಟ್ಲಾಂಟಿಕ್ ಮಹಾಸಾಗರ ಮತ್ತೆ ಹಿಂದೂ ಮಹಾಸಾಗರ ಮತ್ತು ಅಂಟಾರ್ಟಿಕಾ ಇಷ್ಟು ಜಾಗಗಳಲ್ಲಿ ಈ ಒಂದು ಗ್ರಹಣ ಗೋಚಾರವಾಗುತ್ತಿದೆ.

ಈ ಗ್ರಹಣ ಗೋಚಾರದಿಂದ ತುಂಬಾ ದೊಡ್ಡ ಸಮಸ್ಯೆಯನ್ನು ಹೊಂದುವಂತಹ ದೇಶ ಯಾವುದು ಅಂತಂದ್ರೆ ಅದು ಜಿರೋಪ್ ದೇಶ ಈ ಗ್ರಹಣ ಒಳ್ಳೇದ್ ಇಲ್ಲ ಈ ಒಂದು ಗ್ರಹಣವು ಮೀನಾ ರಾಶಿಗೆ ಗೋಚರಿಸುತ್ತದೆ ಎಂದರೆ ಅದರ ಅರ್ಥ ಮೀನ ರಾಶಿಯವರಿಗೆ ಕೆಟ್ಟದಾಗಿ ತೊಂದರೆಯಾಗುತ್ತದೆ ಎಂದು ಅರ್ಥವಲ್ಲ 12 ರಾಶಿಗಳಿಗೂ 27 ನಕ್ಷತ್ರಗಳಿಗೂ ಚಂದ್ರ ಗ್ರಹಣ ಗೋಚಾರ ಸಮಯದಲ್ಲಿ ಯಾವುದೇ ರೀತಿಯ ದೊಡ್ಡ ಸಮಸ್ಯೆ ಇರುವುದಿಲ್ಲ.

ಆ ದಿನದ ರಾಶಿ ಭವಿಷ್ಯವನ್ನು ನೋಡುವುದಾದರೆ ಮೊದಲನೆಯದಾಗಿ ಮೇಷ ರಾಶಿಯವರಿಗೆ ಹತಾಶೆ ಸಿಟ್ಟು ಖಿನ್ನತೆಗೆ ಒಳಗಾಗುವ ಸಾಧ್ಯತೆಗಳಿರುತ್ತದೆ ಮಾನಸಿಕವಾಗಿ ನೆಮ್ಮದಿ ಹಾಳಾಗುತ್ತದೆ ಕೆಲವೊಂದು ಬಹುದೊಡ್ಡ ಕೆಲಸಗಳು ಕೈಯಿಂದ ಜಾರುತಿದೆ ಎಂಬ ಮನಸ್ಸಿನಲ್ಲಿ ಕಸಿಬಿಸಿ ಉಂಟಾಗುತ್ತದೆ ನೀವು ಕಷ್ಟಪಟ್ಟಂತ ಶ್ರಮ ಕೈ ಬಿಟ್ಟು ಹೋಗುತ್ತಿದೆ ಇದರಿಂದ ನಷ್ಟವಾಗುತ್ತಿದೆ ಎಂದು ಬಸವಾಗುತ್ತದೆ.

ವೃಷಭ ರಾಶಿ ಇವರಿಗೆ ಹಣಕಾಸಿನ ವಿಷಯದಲ್ಲಿ ಬಹಳ ಚಿಂತೆ ಉಂಟಾಗುತ್ತದೆ ಸಾಲ ಬಾದೆಗಳು ಹೆಚ್ಚಾಗಿರುತ್ತದೆ ಶತ್ರುಗಳು ನಿಮ್ಮಿಂದ ಮೇಲುಗೈ ಒಂದಿರುತ್ತಾರೆ ಕೌಟುಂಬಿಕ ವಿಷಯದಲ್ಲಿ ಸಣ್ಣ ಪುಟ್ಟ ಚರ್ಚೆಗಳು ಹಾಗೂ ವಿಭಿನ್ನ ಚರ್ಚೆಗಳಾಗಿ ಮನಸ್ಸಿಗೆ ಬೇಸರ ಉಂಟಾಗುತ್ತದೆ.

ಮಿಥುನ ರಾಶಿಯವರಿಗೆ ಅವಿವಾಹಿತರಿಗೆ ಯಾರಿಗೆ ಮದುವೆ ಆಗಿರುವುದಿಲ್ಲ ಅವರಿಗೆ ಮದುವೆ ಆಗುವ ಸಂದರ್ಭಗಳು ಹೆಚ್ಚಾಗಿ ಸಿಗುತ್ತದೆ ಇದರ ಪೂರಕ ಬೆಳವಣಿಗೆ ಅಭಿವೃದ್ಧಿಯಾಗುತ್ತದೆ ದಂಪತಿಗಳ ನಡುವೆ ಅದ್ಭುತವಾದ ಸಂತೋಷ ಸಾಮರಸ್ಯ ಹಾಗೂ ಕೆಲವೊಂದು ಸ್ಥಾನ ಪಲ್ಲಟ ವರ್ಗಾವಣೆಗಳಾಗುವ ಸಾಧ್ಯತೆಗಳಿರುತ್ತದೆ ಸಹೋದರ ಸಹೋದರಿಯರ ಜೊತೆ ನಿಮ್ಮ ಒಡನಾಟ ಬಹಳಷ್ಟು ಸುಂದರವಾಗಿರುತ್ತದೆ ವಿದೇಶ ಪ್ರಯಾಣಕ್ಕೆ ಸಂದರ್ಭ ಕೂಡಿಬರುತ್ತದೆ ತಂದೆ ತಾಯಿಯ ಆರೋಗ್ಯ ವೃದ್ಧಿಯನ್ನ ಕಾಣಬಹುದು.

ಕಟಕ ರಾಶಿ ಆರೋಗ್ಯದಲ್ಲಿ ಸಣ್ಣಪುಟ್ಟ ಬದಲಾವಣೆಯಾಗಬಹುದು ಗ್ರಹಣ ಗೋಚಾರದ ಸಮಯದಲ್ಲಿ ಒಳ್ಳೆಯ ಆರೋಗ್ಯ ಸಿಗುವುದು ಸ್ವಲ್ಪ ಕಷ್ಟವಾಗುತ್ತದೆ ಆ ದಿನ ಸ್ವಲ್ಪ ಆರೋಗ್ಯದ ಕಡೆ ಹೆಚ್ಚಿನ ಗಮನವನ್ನು ವಹಿಸಬೇಕು ಕೆಲಸದಲ್ಲಿ ಒತ್ತಡ ಅತಿಯಾಗಿದ್ದು ವಿದ್ಯಾರ್ಥಿಗಳಿಗೆ ಏಕಾಗ್ರತೆಯಲ್ಲಿ ಗಮನ ಕಡಿಮೆಯಾಗಿರುತ್ತದೆ ಉದ್ಯೋಗದಲ್ಲಿ ಒತ್ತಡ ಜಾಸ್ತಿ ಇದ್ದು ತುಂಬಾ ಗಮನ ಇಟ್ಟು ಕೆಲಸವನ್ನ ಮಾಡಬೇಕಾಗುತ್ತದೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

[irp]