ಡಿಕೆ ರವಿ ಪತ್ನಿ ಕುಸುಮರವರ ಬಯೋಗ್ರಫಿ ನೋಡಿದ್ರೆ ಬೆಚ್ಚಿಬೀಳ್ತಿರಾ... - Karnataka's Best News Portal

ಕುಸುಮ ಡಿಕೆ ರವಿ ಅವರು ಒಂದು ವಾರದಿಂದ ತುಂಬಾ ಫೇಮಸ್ ಆಗುತ್ತಿದ್ದಾರೆ ಇದಕ್ಕೆ ಮುಖ್ಯ ಕಾರಣ ಅವರು ರಾಜಕೀಯ ಅಖಾಡಕ್ಕೆ ಇಳಿಯುತ್ತಿರುವ ಸುದ್ದಿ ಮಾಧ್ಯಮಗಳಲ್ಲಿ ಕೇಳಿ ಬರುತ್ತಿದೆ. ಕುಸುಮ ಅವರಿಗೆ ಕಾಂಗ್ರೆಸ್ ಪಕ್ಷದಿಂದ ಆರ್.ಆರ್ ನಗರದಿಂದ ಅಭ್ಯರ್ಥಿಯಾಗಿ ನಿಲ್ಲುವುದಕ್ಕೆ ಅವಕಾಶ ಕೊಟ್ಟಿದ್ದಾರೆ. ಮುನಿರತ್ನ ಅವರು ಕಾಂಗ್ರೆಸ್ ಪಕ್ಷವನ್ನು ಬಿಟ್ಟು ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾದ ಕಾರಣ ಆ ಸ್ಥಾನವನ್ನು ಕುಸುಮಾ ರವಿ ಅವರಿಗೆ ಕೊಟ್ಟಿದ್ದಾರೆ. ಕುಸುಮಾ ಅವರು ಡಿಕೆ ರವಿ ತೀರಿಕೊಂಡನಂತರ ಮಾಧ್ಯಮಗಳಿಂದ ದೂರ ಇದ್ದರು ಇನ್ನೂ ಕುಸುಮಾ ಅವರ ಬಗ್ಗೆ ಮಾಹಿತಿ ಏನಿದೆ ಎಂಬುದನ್ನು ನೋಡುವುದಾದರೆ ಇವರು ಹನುಮಂತ ರಾಯಪ್ಪ ನವರ ದೊಡ್ಡ ಮಗಳು.

ಇವರು ತುಂಬಾ ವರ್ಷಗಳಿಂದ ರಾಜರಾಜೇಶ್ವರಿ ನಗರದಲ್ಲಿ ನೆಲೆಸಿದ್ದಾರೆ ಅಷ್ಟೇ ಅಲ್ಲದೆ ಹನುಮಂತ ರಾಯಪ್ಪ ನವರು ರಾಜರಾಜೇಶ್ವರಿ ನಗರದಲ್ಲಿರುವ ಸಿ.ಎಮ್.ಸಿ ಗೆ ಪ್ರೆಸಿಡೆಂಟ್ ಆಗಿ ಕೆಲಸ ಮಾಡುತ್ತಿದ್ದರೆ. ಕುಸುಮಾ ಅವರಿಗೆ ಈಗ 31 ವರ್ಷ ಇನ್ನೂ ಇವರು ಅಂಬೇಡ್ಕರ್ ಇಂಜಿನಿಯರ್ ಕಾಲೇಜಿನಲ್ಲಿ ಕಂಪ್ಯೂಟರ್ ಸೈನ್ಸ್ ಮುಗಿಸಿಕೊಂಡ ನಂತರ ಡಿ.ಕೆ ರವಿ ಅವರನ್ನು ಮದುವೆಯಾಗಿದ್ದಾರೆ. 2016 ರಲ್ಲಿ ಡಿ.ಕೆ ರವಿ ತೀರಿಕೊಂಡ ನಂತರ ಅಮೇರಿಕಾಕ್ಕೆ ಹೋಗಿ ಮಾಸ್ಟರ್ ಇನ್ ಇನ್ಫಾರ್ಮೇಶನ್ ಟೆಕ್ನಾಲಜಿ ಮಾಡಿ ಮುಗಿಸಿದ್ದಾರೆ. ನಂತರ 2019 ರಲ್ಲಿ ಭಾರತಕ್ಕೆ ಬಂದು ಬೆಂಗಳೂರಿನ ಪ್ರಸಿದ್ಧ ಕಾಲೇಜುಗಳಲ್ಲಿ ಒಂದಾದ ದಯಾನಂದ ಸಾಗರ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಈಗ ಅಸಿಸ್ಟೆಂಟ್ ಪ್ರೊಫೆಸರ್ ಆಗಿ ಕೆಲಸ ಮಾಡುತ್ತಿದ್ದಾರೆ. ನಟ ಧ್ರುವ ಸರ್ಜಾ ಅವರ ಪತ್ನಿ ಪ್ರೇರಣ ಅವರು ಕೂಡ ಇದೇ ಕಾಲೇಜಿನಲ್ಲಿ ಅಸಿಸ್ಟೆಂಟ್ ಪ್ರೊಫೆಸರ್ ಆಗಿ ಕೆಲಸ ಮಾಡುತ್ತಿದ್ದಾರೆ.

By admin

Leave a Reply

Your email address will not be published. Required fields are marked *