ತಿರುಮಲ ಬೆಟ್ಟದಲ್ಲಿ ಐದು ವರ್ಷದ ಮಗು ಮಾಡಿದ್ದೇನುಗೊತ್ತಾದ್ರೆ ಶಾಕ್ ಆಗ್ತೀರಾ.... - Karnataka's Best News Portal

ಕೆಲವು ಭಕ್ತರು ತಿರುಪತಿ ಇಂದ ತಿರುಮಲಕ್ಕೆ ಮೆಟ್ಟಿಲುಗಳನ್ನು ಹತ್ತಿಕೊಂಡು ಪಾದಯಾತ್ರೆಯ ಮೂಲಕವೇ ನಡೆದುಕೊಂಡು ದೇವರ ದರ್ಶನಕ್ಕಾಗಿ ಹೋಗುತ್ತಾರೆ. ಈ ರೀತಿ ಪಾದಯಾತ್ರೆಯಲ್ಲಿ ವೆಂಕಟೇಶ್ವರನ ದರ್ಶನ ಮಾಡಿದರೆ ತಾವು ಮಾಡಿಕೊಂಡಿರುವ ಬೇಡಿಕೆಗಳು ಖಂಡಿತ ನೆರವೇರುತ್ತವೆ ಎಂದು ನಂಬಿಕೆ ಭಕ್ತರಲ್ಲಿದೆ, ಹೀಗಾಗಿ ಹಲವರು ಮೆಟ್ಟಿಲುಗಳನ್ನು ಹತ್ತುತಲೆ ದರ್ಶನ ಪಡೆಯುತ್ತಾರೆ. ಇತ್ತೀಚಿಗೆ ತಿರುಮಲದಲ್ಲಿ ಒಂದು ಪವಾಡ ನಡೆದಿದೆ ಇತ್ತೀಚಿಗೆ ತಿರುಪತಿ ವೆಂಕಟೇಶ್ವರನ ದರ್ಶನ ಪಡೆಯಲು ತಮಿಳು ನಾಡಿನಿಂದ ಒಂದು ಕುಟುಂಬ ಹೋಗಿತ್ತು. ಮೆಟ್ಟಿಲುಗಳನ್ನು ಹತ್ತುತ್ತಿದ್ದ ಸಮಯದಲ್ಲಿ ಒಂದು ಗಂಡುಮಗು ಮೆಟ್ಟಿಲುಗಳಿಂದ ಜಾರಿ ಕೆಳಗೆ ಬಿದ್ದು ಬಿಟ್ಟಿತು. ಸುಮಾರು 150 ಮೆಟ್ಟಿಲುಗಳಷ್ಟು ದೂರವ ಕೆಳಗೆ ಬಿದ್ದಿತ್ತು. ಅಲ್ಲಿದ್ದ ಬೇರೆ ಭಕ್ತರೆಲ್ಲರೂ ಇಷ್ಟೊಂದು ಮೆಟ್ಟಿಲುಗಳಿಂದ ಕೆಳಗೆ ಬಿದ್ದ ಮಗು ಕಥೆ ಏನು.


ಏನಾಯಿತು ಮಗು ಬದುಕಿರಲು ಸಾಧ್ಯವೇ ಇಲ್ಲವೆಂದು ಹೇಳಲು ಶುರುಮಾಡಿದರು. ಆದರೆ ಅಷ್ಟು ದೂರ ಆ ಮಗು ಉರುಳಿ ಕೆಳಗೆ ಬಿದ್ದರೂ ಕೂಡ ಆ ಮಗುವಿಗೆ ಒಂದು ಸಣ್ಣ ಗಾಯ ಕೂಡ ಆಗಿರಲಿಲ್ಲ. ಇದನ್ನು ನೋಡಿ ಅಲ್ಲಿದ್ದ ಭಕ್ತರು ಆಶ್ಚರ್ಯ ಚಕಿತರಾದರು ಘಟನೆ ನಡೆದ ವಿಷಯ ಗೊತ್ತಾಗಿ ಟಿಟಿಟಿ ಅಧಿಕಾರಿಗಳು ಸ್ಥಳಕ್ಕೆ ಡಾಕ್ಟರ್ ಗಳ ಸಮೇತ ಆಗಮಿಸಿ ಪರೀಕ್ಷೆ ಮಾಡಿದರು. ಡಾಕ್ಟರ್ಗಳು ಕೂಡ 150 ಮೆಟ್ಟಿಲುಗಳಿಂದ ಕೆಳಗೆ ಬಿದ್ದಿದ್ದ ಮಗುವನ್ನು ಎತ್ತಿಕೊಂಡು, ಪರೀಕ್ಷೆ ಮಾಡಿ ಮಗುವಿಗೆ ಏನು ಆಗಿಲ್ಲ ಮಗು ಆರೋಗ್ಯವಾಗಿದೆ ಎಂದು ಹೇಳಿದರು. ಆ ಮಗು ತಂದೆ ತಾಯಿ ಮದುವೆಯಾಗಿ ಹತ್ತು ವರ್ಷವಾದರೂ ಕೂಡ ನಮಗೆ ಮಕ್ಕಳಾಗಿರಲಿಲ್ಲ. ವೆಂಕಟೇಶ್ವರನ ಕೃಪೆಯಿಂದ ನಮಗೆ ಐದು ವರ್ಷದ ಹಿಂದೆ ಈ ಮಗು ಜನಿಸಿತ್ತು. ಮಗುವಿಗೆ ವೆಂಕಟೇಶ ಎಂದು ದೇವರ ಹೆಸರನ್ನು ಇಟ್ಟಿದ್ದಾರೆ.

By admin

Leave a Reply

Your email address will not be published. Required fields are marked *