ಹಾವುಗಳ ಮೇಲೆ ಭಯ ಇದಿಯಾ ದಮ್ಮಿದ್ರೆ ವಿಡಿಯೋ ನೋಡಿ - Karnataka's Best News Portal

ಮಾನವರು ವಾಸ ಮಾಡುತ್ತಿರುವ ಈ ಪ್ರಪಂಚ ತುಂಬಾ ವಿಚಿತ್ರವಾದದ್ದು ಇಲ್ಲಿ ಕೆಲ ಪ್ರಶ್ನೆಗಳಿಗೆ ಭೂತ ಕನ್ನಡಿ ಹಿಡಿದರು ಹುಡುಕಿದರು ಉತ್ತರ ಸಿಗಲ್ಲ. ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯಲ್ಲಿ ಶ್ರೀನಿವಾಸುಲು ಎಂಬ ವ್ಯಕ್ತಿ ಇದ್ದ ಶ್ರೀನಿವಾಸುಲು ಅವರದು ಆಗರ್ಭ ಶ್ರೀಮಂತ ಕುಟುಂಬ ಶ್ರೀನಿವಾಸಲು ಮಗ ಚೆನ್ನಾಗಿ ಓದಿ ಅಮೆರಿಕದಲ್ಲಿ ಒಳ್ಳೆಯ ಕೆಲಸ ಮಾಡುತ್ತಿದ್ದಾನೆ. ತಿಂಗಳಿಗೆ ಲಕ್ಷ ಲೆಕ್ಕದಲ್ಲಿ ಸಂಬಳ ಪಡೆಯುತ್ತಾ ಮದುವೆಯಾಗಿ ಹೆಂಡತಿ ಜೊತೆ ಸುಖ ಸಂಸಾರ ನಡೆಸುತ್ತಿದ್ದಾನೆ ಮಗ ಅಮೇರಿಕದಲ್ಲಿ ಸಂಪಾದನೆ ಮಾಡಿ ಕಳುಹಿಸುತ್ತಿದ್ದ ದುಡ್ಡನ್ನು ಹಳ್ಳಿಯಲ್ಲಿ ಹೊಸ ಜಾಮೀನು ತೆಗೆದುಕೊಳ್ಳಲು ತೀರ್ಮಾನಮಾಡಿ ತನ್ನ ಹೊಲದ ಪಕ್ಕವೇ ಮಾರಾಟಕ್ಕಿದ್ದ ವಲವನ್ನು ಕೊಂಡು ಕೊಳ್ಳುತ್ತಾನೆ.


ಶ್ರೀನಿವಾಸಲು ತನ್ನ ಹಳೆ ಮತ್ತು ಹೊಸ ವಲವನ್ನು ಒಟ್ಟಿಗೆ ಸೇರಿಸಲು ಎರಡು ಜಮೀನುಗಳ ಮಧ್ಯ ಇದ್ದ ಬೃಹತ್ ಮಣ್ಣಿನ ಗುಡ್ಡೆಯನ್ನು ಒಡೆದು ಒಂದು ಸಲ ಮಾಡಲು ಟ್ರ್ಯಾಕ್ಟರ್ ತರಿಸುತ್ತಾನೆ. ಕೂಲಿ ಆಳುಗಳು ನಿಧಾನವಾಗಿ ನೆಲಸಮ ಮಾಡುವ ಕಾರ್ಯದಲ್ಲಿ ತೊಡಗುತ್ತಾರೆ ಮಣ್ಣಿನಲ್ಲಿ ಒಂದು ಹುತ್ತ ಇರುವುದು ಕಣ್ಣಿಗೆ ಬೀಳುತ್ತೆ. ಕೂಲಿಯಾಳುಗಳು ಸ್ವಲ್ಪ ದೂರದಲ್ಲಿದ್ದ ಶ್ರೀನಿವಾಸುಲು ಕರೆದು ಕೆಲಸ ಮಾಡಲು ಆಗುತ್ತಿಲ್ಲ, ಹಾವಿನ ಹುತ್ತ ಅಡ್ಡ ಬಂದಿದೆ ಏನು ಮಾಡುವುದು ಎಂದು ಹೇಳುತ್ತಾರೆ. ಸಾಮಾನ್ಯವಾಗಿ ಹಾವುಗಳ ಮೇಲೆ ತುಂಬಾ ಭಕ್ತಿ ಇಟ್ಟುಕೊಂಡಿದ್ದ ಶ್ರೀನಿವಾಸಲು ಅಂದು ತನ್ನ ಭಕ್ತಿಗಿಂತ ಎರಡು ಜಮೀನುಗಳನ್ನು ಒಟ್ಟಿಗೆ ಸೇರಿಸುವುದು ತುಂಬಾ ಮುಖ್ಯ ಎಂದೆನಿಸಿ ಹುತ್ತವನ್ನು ಹೊಡೆದು ಹಾಕುವಂತೆ ಆಳುಗಳಿಗೆ ಹೇಳುತ್ತಾನೆ. ಶ್ರೀನಿವಾಸಲು ಹುತ್ತದಲ್ಲಿ ಹಾವು ಇಲ್ಲವೆಂದು ಭಾವಿಸಿ ಹುತ್ತವನ್ನು ಕೆಡವಲು ಮುಂದಾಗುತ್ತಾನೆ. ಅರ್ಧ ಹುತ್ತ ಕೆಡವುತಿದ್ದ ಹಾಗೆ ಹಾವು ಮೇಲೆ ಬುಷ್ ಎಂದು ಮೇಲೇಳಿಬಿಡುತ್ತದೆ.

By admin

Leave a Reply

Your email address will not be published. Required fields are marked *