ನವರಾತ್ರಿ ಒಂದೇ ದಿನ 9 ಹೆಣ್ಣು ಮಕ್ಕಳು ಜನನ ನಿಜವಾಗ್ಲೂ ಸಾಕ್ಷತ್ ತಾಯಿ ಚಾಮುಂಡೇಶ್ವರಿ ಅನುಗ್ರಹವೇ ಸರಿ... - Karnataka's Best News Portal

ನವರಾತ್ರಿ ಒಂದೇ ದಿನ 9 ಹೆಣ್ಣು ಮಕ್ಕಳು ಜನನ ನಿಜವಾಗ್ಲೂ ಸಾಕ್ಷತ್ ತಾಯಿ ಚಾಮುಂಡೇಶ್ವರಿ ಅನುಗ್ರಹವೇ ಸರಿ…

ನವರಾತ್ರಿ ಹಬ್ಬವನ್ನು ಭಾರತದ ಎಲ್ಲ ರಾಜ್ಯಗಳಲ್ಲೂ ಸಹ ಅದ್ದೂರಿಯಾಗಿ ಆಚರಿಸುತ್ತಾರೆ. ನಮ್ಮ ಕರ್ನಾಟಕದಲ್ಲಿ ಸಹ ದಸರಾ ಹಬ್ಬವನ್ನು ಅದ್ದೂರಿಯಾಗಿ ಮಾಡುತ್ತಾರೆ ಅದರಲ್ಲು ಕೂಡ ಮೈಸೂರು ದಸರಾ ಎಂದರೆ ಪ್ರಪಂಚದ ವಿಖ್ಯಾತ ಎಂದು ಹೇಳಬಹುದು. ಹೊರ ದೇಶಗಳಿಂದ ಸಾಕಷ್ಟು ಲಕ್ಷಾಂತರ ಜನರು ವಿದೇಶಿಗರು ದಸರಾ ವೀಕ್ಷಿಸಲು ಬರುತ್ತಾರೆ ಇನ್ನೂ ಇದೆ ದಸರಾ ಸಂದರ್ಭದಲ್ಲಿ 9 ಮಹಿಳೆಯರು 9 ಹೆಣ್ಣು ಮಕ್ಕಳಿಗೆ ಜನ್ಮ ನೀಡಿದ್ದಾರೆ. ಮಹಾರಾಷ್ಟ್ರದ ಕಾಣೆ ಜಿಲ್ಲೆಗೆ ಸೇರಿದ ವೈಷ್ಣವಿ ಆಸ್ಪತ್ರೆಯಲ್ಲಿ 11 ಮಕ್ಕಳು ಜನಿಸಿದ್ದಾರೆ, ಅದರಲ್ಲಿ 9 ಹೆಣ್ಣುಮಕ್ಕಳು ಹುಟ್ಟಿದ್ದಾರೆ. ಆ ಕುಟುಂಬಗಳು ತುಂಬಾ ಸಂತೋಷ ವ್ಯಕ್ತಪಡಿಸಿದ್ದಾರೆ ಏಕೆಂದರೆ ನವರಾತ್ರಿ 9 ದಿನಗಳಲ್ಲಿ ಪ್ರತಿ ದಿನವೂ ಕೂಡ ಒಂದೊಂದು ದೇವತೆಗೆ ಮೀಸಲಿಡಲಾಗುತ್ತದೆ.

ಇದೇ ಸಂದರ್ಭದಲ್ಲಿ ಒಂದೇ ದಿನ 9 ಹೆಣ್ಣು ಮಕ್ಕಳು ಹುಟ್ಟಿರುವುದು ಸಾಕ್ಷಾತ್ ಚಾಮುಂಡಿ ತಾಯಿಯ ಕೃಪೆಯಿಂದ ಎಂದು ಮಕ್ಕಳ ಪೋಷಕರು ಹೇಳಿದ್ದಾರೆ. ಇದು ತಾಯಿಯ ಆಶೀರ್ವಾದ ಎಂದು ಹಲವರು ನಂಬುತ್ತಾರೆ. ಈ ನವರಾತ್ರಿಯ ಸಂದರ್ಭದಲ್ಲಿ 9 ಹೆಣ್ಣುಮಕ್ಕಳು ಜನಿಸಿರುವುದು ಚರಿತ್ರೆಯಲ್ಲಿದೆ ಇದೇ ಮೊದಲ ಬಾರಿಗೆ ಎಂದು ಹೇಳುತ್ತಿದ್ದಾರೆ. 11 ಮಂದಿ ತಾಯಿ ಮತ್ತು ಮಕ್ಕಳು ಆರೋಗ್ಯವಾಗಿ ಇದ್ದಾರೆ ಎಂದು ವೈದ್ಯಕೀಯ ಸಿಬ್ಬಂದಿ ತಿಳಿಸಿದ್ದಾರೆ. ಇದರ ಜೊತೆ ಆಸ್ಪತ್ರೆಯ ವೈದ್ಯರು 9 ಹೆಣ್ಣುಮಕ್ಕಳಿಗೆ ಫ್ರೀ ಆಗಿ ಡೆಲಿವರಿ ಮಾಡಿದ್ದಾರೆ ಮತ್ತು ಆಸ್ಪತ್ರೆಯು ಅವರಿಂದ ಯಾವುದೇ ಹಣ ಪಡೆಯುವುದಿಲ್ಲ ಎಂದು ಆಸ್ಪತ್ರೆಯವರು ಹೇಳಿದ್ದಾರೆ. ಇದು ಶುಭವಾಗುವ ಮುನ್ಸೂಚನೆ ಎನ್ನ ಬಹುದಾಗಿದೆ.

See also  ಓದಿದ್ದೆಲ್ಲಾ ಮರೆತು ಹೋಗುತ್ತೆ ಏನು ಮಾಡೋದು ಮಕ್ಕಳ ಮೆಮೊರಿ ಇಂಪ್ರೂವ್ ಆಗಲು ಹೀಗೆ ಮಾಡಿ
[irp]


crossorigin="anonymous">