ಪಬ್ಲಿಕ್ ಟಿವಿ ರಂಗಣ್ಣ ಅವರ ಕಣ್ಣೀರಿನ ಕಥೆ ಮಿಸ್ ಮಾಡದ್ದೆ ನೋಡಿ….

ಸಾಮಾನ್ಯವಾಗಿ ಪ್ರತಿಯೊಬ್ಬ ಯುವಕರಲ್ಲಿ ಒಂದು ತುಡಿತ ಇರುತ್ತದೆ ಏನಾದರೂ ಸಾಧನೆ ಮಾಡಬೇಕು, ಗುರಿ ತಲುಪಬೇಕು, ಕನಸು ನನಸು ಮಾಡಬೇಕೆಂದು ಸಾಕಷ್ಟು ಹಂಬಲ ಇಟ್ಟುಕೊಂಡಿರುತ್ತಾರೆ. ಒಬ್ಬ ಸಾಮಾನ್ಯ ವ್ಯಕ್ತಿ ಮಧ್ಯಮವರ್ಗದ ಹುಡುಗ ಒಂದು ಪಬ್ಲಿಕ್ ಟಿವಿ ಕಟ್ಟೋದು ಅಂದ್ರೆ ಸುಲಭದ ಮಾತಲ್ಲ 1966 ರಂಗನಾಥ್ ಅವರು ಜನಿಸಿದರು. ಇವರು ಚೂಟಿ, ಸ್ವಾಭಿಮಾನಿ, ಹಠವಾದಿ ಆಗಿದ್ದರು ಬಯಸಿದ್ದನ್ನು ಪಡೆದೆ ಪಡೆಯಬೇಕು ಎಂಬ ಹಠವಾದಿ ಕೆಲವೇ ಸ್ನೇಹಿತರೊಂದಿಗೆ ಶಾಲೆಗೆ ಹೋಗುತ್ತಿದ್ದರು. ಶಾಲೆಯಲ್ಲಿ ಎಂಟನೇ ತರಗತಿಯಲ್ಲಿರುವಾಗಲೇ ಬೃಂದತರಂಗ ಎಂಬ ಆರ್ಕೆಸ್ಟ್ರಾಕಟ್ಟಿ ಭಾವಗೀತೆ ಆಡುವುದರಿಂದ ಹಿಡಿದು ತನ್ನ ನಾಯಕತ್ವವನ್ನು ಬೆಳೆಸಿಕೊಳ್ಳುತ್ತಾರೆ. ಹೀಗೆ ಇವರ 8ನೇತರಗತಿ ಹುಡುಗ ನಾಗಿರುವಾಗ ಪಶುವಿನ ಪ್ರಸವ ವೇದನೆ ನೋಡಲಾರದೆ ಡೆಲಿವರಿ ಮಾಡಿಸಿದ್ದರು. ಹೌದು ರಂಗನಾಥ್ ಮತ್ತು ಅವರ ತಮ್ಮ ಪಶುವಿನ ಕಷ್ಟ ನೋಡಲಾಗದೆ ಪಶುವಿನ ಡೆಲಿವರಿ ಮಾಡಿಸುತ್ತಾರೆ.

ಮೈಸೂರಿನಲ್ಲಿ ಕಾಲೇಜಿನ ದಿನಗಳನ್ನು ಕಳೆಯುತ್ತಾರೆ ನಂತರ ಜರ್ನಲಿಸಂ ಮಾಡಿ ಮುಗಿಸಿ ಬೆಂಗಳೂರಿಗೆ ಪಾದಾರ್ಪಣೆ ಮಾಡುತ್ತಾರೆ. ಕನ್ನಡಪ್ರಭ ಪತ್ರಿಕೆಗೆ ರಿಪೋರ್ಟರ್ ಆಗಿ ಸೇರಿಕೊಳ್ಳುತ್ತಾರೆ ಹತ್ತು ವರ್ಷಗಳ ಕಾಲ ಇಲ್ಲಿ ಕೆಲಸ ಮಾಡಿ ವಿಶೇಷ ಸುದ್ದಿಗಳನ್ನು ಸಂಗ್ರಹ ಮತ್ತು ಬರವಣಿಗೆಯ ಮೂಲಕ ಮನೆ ಮಾತಾಗುತ್ತಾರೆ. ಹೀಗಿರುವಾಗ ಅವರಿಗೆ ಸುವರ್ಣನ್ಯೂಸ್ ಆಗಿನ್ನ ಅದೇ ಟಿವಿ ಮಾಧ್ಯಮ ನಮ್ಮ ಕರ್ನಾಟಕ ಮತ್ತು ನಮ್ಮ ಭಾರತಕ್ಕೆ ಕಾಲಿಟ್ಟಿತು, ನಂತರ ಸುವರ್ಣ ನ್ಯೂಸ್ ನಲ್ಲಿ ಆಹ್ವಾನ ಬರುತ್ತದೆ ಅಲ್ಲಿಗೆ ಕೆಲಸಕ್ಕೆ ಸೇರುತ್ತಾರೆ ಹಾಗಿರುವಾಗ ಕೆಲವು ವರ್ಷಗಳ ನಂತರ ಒತ್ತಡ ಬರುತ್ತೆ ಅವರ ಆತ್ಮಸಾಕ್ಷಿಗೆ ವಿರುದ್ಧವಾಗಿ ಕೆಲಸ ಮಾಡಬೇಕೆಂದು ಪ್ರೇರಪಿಸುತ್ತಾರೆ ಅವರು ರಾಜೀನಾಮೆ ಕೊಟ್ಟು ಚಾಲೆಂಜ್ ಮಾಡುತ್ತಾರೆ ತಾನು ಒಂದು ಟಿವಿ ಚಾನೆಲ್ ಕಟ್ಟುವುದಾಗಿ, ಒಂದು ರೂಪಾಯಿ ಇಲ್ಲದಿರುವಾಗ ತಮ್ಮ ಆತ್ಮ ವಿಶ್ವಾಸ ನಂಬಿಕೆ ಕನಸುಗಳನ್ನು ಇಟ್ಟುಕೊಂಡು ಮುನ್ನುಗ್ಗುತ್ತಾರೆ.

WhatsApp Group Join Now
Telegram Group Join Now
[irp]