ಬಿಗ್ ಬಾಸ್ ಸೀಸನ್ ಎಂಟರ ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದ್ದು ಕನ್ನಡ ಬಿಗ್ ಬಾಸ್ ಅಭಿಮಾನಿಗಳು ಬಹಳ ಕುತೂಹಲದಿಂದ ಕಾಯುತ್ತಿದ್ದಾರೆ. ಅಂದ ಹಾಗೆ ಈ ಬಾರಿಯ ಬಿಗ್ ಬಾಸ್ ಗೆ ಯಾರೆಲ್ಲ ಬರ್ತಾರೆ ಎಂಬ ಕುತೂಹಲವೂ ಪ್ರತಿಯೊಬ್ಬರಲ್ಲೂ ಇದೆ ಈ ಬಾರಿ ಕೂಡ ಸಾಮಾನ್ಯ ಜನರು ಹೋಗವ ಬಗ್ಗೆ ಮಾಹಿತಿ ಇಲ್ಲ ಆದರೆ ಬೇರೆ ಬೇರೆ ಕ್ಷೇತ್ರಗಳಲ್ಲಿ ಕೆಲಸ ಮಾಡಿರುವ ಸೆಲೆಬ್ರಿಟಿಗಳು ಮಾತ್ರ ಖಂಡಿತ ಇದರಲ್ಲಿದ್ದಾರೆ ಸಿನಿಮಾ, ಸೀರಿಯಲ್, ರಿಯಾಲಿಟಿ ಶೋ ಆಂಕರ್, ನ್ಯೂಸ್ ಆಂಕರ್, ಡಾನ್ಸರ್, ಸಿಂಗರ್ ಹೀಗೆ. ಆದರೆ ನಾವಿಲ್ಲಿ ಹೇಳುತ್ತಿರುವುದು ಬಿಗ್ ಬಾಸ್ ಎಂಟಕ್ಕೆ ಕಾಲಿಡಲಿರುವ ಸಂಭಾವ್ಯ ಪಟ್ಟಿ ಯಾರು ಬರ್ತಾರೆ ಅಂತ ಪಕ್ಕ ಹೇಳಲು ಆಗುವುದಿಲ್ಲ,
ಅದು ಶುರುವಾಗುವ ನಂತರವೆ ತಿಳಿಯೋದು. ಇವರು ಬರಬಹುದೇನೋ ಎಂಬ ಮಾತು ಸಿಕ್ಕಾಪಟ್ಟೆ ಹರಿದಾಡುತ್ತಿದೆ ಹಾಗಾಗಿ ಅಮೃತವರ್ಷಿಣಿ ಸೀರಿಯಲ್ ಜಾತಿಯ ರಜನಿ, ಆರ್ ಜೆ ಸುನಿಲ್, ನಟ ರಾಕೇಶ್ ಅಡಿಗ, ಕಾಮಿಡಿ ಕಿಲಾಡಿಗಳು ಖ್ಯಾತಿಯ ನಯನ, ನಟಿ ನಿವೇದಿತಾ, ನ್ಯೂಸ್ ಆಂಕರ್ ರಮಾಕಾಂತ್, ಇನ್ನೂ ಮಜಾ ಟಾಕೀಸ್ನಲ್ಲಿ ರಂಜಿಸುವ ನಟ ವಿಶ್ವ ಅವರು, ಹಾಗೆ ನಾನು ಅಂದರೆ ನಂಬರ್ ಎನ್ನುವಂತಹ ಆರ್ಯವರ್ಧನ್ ಗುರೂಜಿ, ಯಾರೆ ನೀ ಮೋಹಿನಿ ಖ್ಯಾತಿಯ ಸುಷ್ಮ ಶೇಖರ್, ಅಗ್ನಿಸಾಕ್ಷಿಯ ನಟಿ ಸುಕೃತ ನಾಗ್ ಅದೇರೀತಿ ರಾಧಾ ರಮಣ ಖ್ಯಾತಿಯ ಶ್ವೇತಾ ಆರ್ ಪ್ರಸಾದ್, ಸಿಂಗರ್ ಅಲೋಕ್ ಇದು ಸಂಭಾವ್ಯ ಪಟ್ಟಿಮಾತ್ರ ಇವರು ನೂರಕ್ಕೆ ನೂರು ಬರ್ತಾರೆ ಎಂಬ ಮಾಹಿತಿ ಇಲ್ಲ, ಅದು ಬಿಗ್ ಬಾಸ್ ಶುರುವಾದ ನಂತರವೆ ನಮಗೆ ತಿಳಿಯುತ್ತದೆ.
ಬಿಗ್ ಬಾಸ್ 8 ಕ್ಕೆ ಕಾಲಿಡುವ ಬರುವ ಸ್ಪರ್ಧಿಗಳ ಸಂಭಾವ್ಯ ಪಟ್ಟಿ ಒಮ್ಮೆ ನೋಡಿ ..
