ಮನೆಯಲ್ಲೇ ಸರಳತೆ ಯಿಂದ ಗೋಬಿ ಮಂಚೂರಿ ಮಾಡುವ ವಿಧಾನ ಒಮ್ಮೆ ತಿಳಿಯಿರಿ .. - Karnataka's Best News Portal

ಮನೆಯಲ್ಲೇ ಸರಳತೆ ಯಿಂದ ಗೋಬಿ ಮಂಚೂರಿ ಮಾಡುವ ವಿಧಾನ ಒಮ್ಮೆ ತಿಳಿಯಿರಿ ..

ಮೊದಲಿಗೆ ಬೇಕಾಗಿರುವ ಸಾಮಗ್ರಿಗಳು ಹೂಕೋಸು ಇದನ್ನು ಚಿಕ್ಕದಾಗಿ ಕಟ್ ಮಾಡಿ ನಂತರ ಒಂದು ರೌಂಡ್ ಇದನ್ನು ಬೇಯಿಸಿಕೊಳ್ಳಿ ಸಾಫ್ಟ್ ಆಗುವವರೆಗೂ ಬೇಯಿಸಿಕೊಂಡು ನಂತರ ನೀರನ್ನು ಶೋಧಿಸಿ ಹೂಕೋಸು ಒಂದು ಪಾತ್ರೆಗೆ ಹಾಕಿಕೊಳ್ಳಿ ಅದಾದನಂತರ ಒಂದು ಕಪ್ ಕಾರ್ನ್ ಫ್ಲೋರ್ ಹಾಗೂ ಕಾಲು ಕಪ್ ಮೈದಾ, ರೆಡ್ ಚಿಲ್ಲಿ ಪೌಡರ್, ಸಾಲ್ಟ್ ಹಾಕಿ ಮಿಕ್ಸ್ ಮಾಡಿ ಇದಕ್ಕೆ ನೀರು ಸೇರಿಸಬೇಡಿ. ನಂತರ ಎಣ್ಣೆ ಕಾಯಲು ಇಟ್ಟು ರೆಡಿ ಇರುವ ಹಿಟ್ಟನ್ನು ಎಣ್ಣೆಯಲ್ಲಿ ಚಿಕ್ಕ ಚಿಕ್ಕದಾಗಿ ಬಿಟ್ಟು ಫ್ರೈ ಮಾಡಿಕೊಳ್ಳಿ, ಇದನ್ನು ಡೀಪ್ ಫ್ರೈ ಮಾಡಿಕೊಳ್ಳಬೇಕಾಗುತ್ತದೆ. ನಂತರ ಸಾಸ್ ಮಾಡಿಕೊಳ್ಳಲು ಈರುಳ್ಳಿ ಮತ್ತು ಮೆಣಸಿನಕಾಯಿಯನ್ನು ಉದ್ದಕ್ಕೆ ಕಟ್ ಮಾಡಿಕೊಳ್ಳಿ ನಂತರ ಕೊತ್ತಂಬರಿ ಸೊಪ್ಪು, ಶುಂಠಿ ಬೆಳ್ಳುಳ್ಳಿ ಪೇಸ್ಟ್, ಸೋಯಾಸಾಸ್, ರೆಡ್ ಚಿಲ್ಲಿ ಪೌಡರ್ ಹಾಗೂ ಸಾಲ್ಟ್ ಬೇಕಾಗುತ್ತದೆ.

ಸ್ಟವ್ ಮೇಲೆ ಒಂದು ಬಾಣಲೆ ಇಟ್ಟು 2 ಟೇಬಲ್ ಸ್ಪೂನ್ ಎಣ್ಣೆ ಹಾಕಿ ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಹಾಕಿ ಫ್ರೈ ಮಾಡಿ, ನಂತರ ಈರುಳ್ಳಿ ಮತ್ತು ಮೆಣಸಿನಕಾಯಿ ಹಾಕಿ ಫ್ರೈ ಮಾಡಿ ನಂತರ ಇದಕ್ಕೆ ಒಂದು ಟೇಬಲ್ಸ್ಪೂನ್ ರೆಡ್ ಚಿಲ್ಲಿ ಪೌಡರ್ ಹಾಕಿ ಫ್ರೈ ಮಾಡಿ ನಂತರ ಟೊಮೊಟೊ ಸಾಸ್, ಸೋಯಾ ಸಾಸ್ ಹಾಕಿ ಫ್ರೈ ಮಾಡಿ ನಂತರ ಇದಕ್ಕೆ ಸ್ವಲ್ಪ ನೀರು ಸೇರಿಸಿ ಚೆನ್ನಾಗಿ ಕುದಿಸಿ. ಕುದಿಯ ಸಂದರ್ಭದಲ್ಲಿ ಸ್ವಲ್ಪ ಪೆಪ್ಪರ್ ಪೌಡರ್ ಹಾಗೂ ಸಾಲ್ಟ್ ಹಾಕಿ ಚೆನ್ನಾಗಿ ಕುದಿಸಿದ ನಂತರ ಪ್ರೈ ಮಾಡಿಕೊಂಡಿರುವ ಗೋಬಿ ಹಾಕಿ ಮಿಕ್ಸ್ ಮಾಡಿ ಕೊನೆಯಲ್ಲಿ ಕೊತ್ತಂಬರಿ ಸೊಪ್ಪು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ.

See also  ಪ್ಯಾಸೇಂಜರ್ ಟ್ರೈನ್ ಗಳನ್ನು ಯಾಕೆ ಕಡಿಮೆ ಮಾಡ್ತಾ ಇದ್ದಾರೆ ಗೊತ್ತಾ ಇಲ್ಲಿದೆ ನೋಡಿ ಈ ಸತ್ಯ..
[irp]