ಒಂದೇ ಒಂದು ರೂಪಾಯಿಯನ್ನು ಖರ್ಚು ಮಾಡದೆ ಈ ಸರ್ಕಾರಿ ಉದ್ಯೋಗ ಪಡೆಯಬಹುದಾ..! ಹೇಗೆ ಅರ್ಜಿ ಸಲ್ಲಿಸುವುದು..? - Karnataka's Best News Portal

ಕೇಂದ್ರ ಸರ್ಕಾರದ ಪರಮಾಣುಶಕ್ತಿ ಇಲಾಖೆಯ ಅಧೀನದಲ್ಲಿ ಕಾರ್ಯನಿರ್ವಹಿಸಲು ಡೈರೆಕ್ಟರೇಟ್ ಆಫ್ ಪರ್ಚೇಸ್ ಮತ್ತು ಸ್ಟೋರ್ಸ್ ಅಂದರೆ ಡಿ.ಪಿ.ಎಸ್ಸಿ ವಿಭಾಗದಲ್ಲಿ ವಿವಿಧ ಹುದ್ದೆಗಳ ನೇಮಕಾತಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಡಿ.ಪಿ.ಎಸ್ಸಿ ನಾ ಗ್ರೂಪ್ ಬಿ ಮತ್ತು ಸಿ ಯಲ್ಲಿ ಹುದ್ದೆಗಳು ಖಾಲಿ ಇದ್ದು ನೇಮಕಾತಿಗೆ ಸಂಬಂಧಿಸಿದ ವಿದ್ಯಾರ್ಹತೆ ವಯೋಮಿತಿ ಅರ್ಜಿ ಶುಲ್ಕ ಅರ್ಜಿ ಸಲ್ಲಿಸುವ ದಿನಾಂಕ ಮಾಹಿತಿಗಳನ್ನು ಇಲ್ಲಿ ಸಂಕ್ಷಿಪ್ತವಾಗಿ ವಿವರಿಸಲಾಗುತ್ತದೆ. ಅಭ್ಯರ್ಥಿಗಳು ದಿನಾಂಕ 27-12-200೦ ರ ಒಳಗೆ ಅರ್ಜಿಯನ್ನು ಸಲ್ಲಿಸಲು ಈ ಮೂಲಕ ಕೋರಿಕೊಳ್ಳಲಾಗಿದೆ. ವಯೋಮಿತಿಯನ್ನು ನೋಡುವುದಾದರೆ ದಿನಾಂಕ 27.12.2020 ಕ್ಕೆ ಅನ್ವಯವಾಗುವಂತೆ ಸಾಮಾನ್ಯ ಹಾಗೂ ಎಲ್ಲಾ ವರ್ಗದ ಅಭ್ಯರ್ಥಿಗಳು ಕನಿಷ್ಠ ವಯೋಮಿತಿಯನ್ನು 18 ವರ್ಷಗಳಿಗೆ ನಿಗದಿ ಪಡಿಸಲಾಗಿದೆ ಹಾಗೂ ಸಾಮಾನ್ಯ ವರ್ಗದ ಅಭ್ಯರ್ಥಿಗಳ ಗರಿಷ್ಠ ವಯೋಮಿತಿಯನ್ನು 27 ವರ್ಷಗಳಿಗೆ ನಿಗದಿ ಪಡಿಸಲಾಗಿದೆ. ಇನ್ನು ಉಳಿದಂತೆ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡಕ್ಕೆ ಸೇರಿದ ಅಭ್ಯರ್ಥಿಗಳಿಗೆ ಐದು ವರ್ಷ ಇತರ ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ 3 ವರ್ಷ ಹಾಗೂ ಅಂಗವಿಕಲ ಅಭ್ಯರ್ಥಿಗಳಿಗೆ ಹತ್ತರಿಂದ ಹದಿನೈದು ವರ್ಷಗಳ ವಯೋಮಿತಿ ಸಡಿಲಿಕೆಯನ್ನು ನೀಡಲಾಗಿದೆ.

ವೇತನ ಶ್ರೇಣಿಯನ್ನು ನೋಡುವುದಾದರೆ ಮಾಸಿಕ 25,500 ರೂಪಾಯಿಯಿಂದ 35,400 ರೂಪಾಯಿ ವರೆಗೆ ವೇತನವನ್ನು ನಿಗದಿಯಾಗಿದ್ದು ಸರ್ಕಾರದ ನಿಯಮದಂತೆ ಇತರ ಹಲವಾರು ಬತ್ಯೆಗಳನ್ನು ಸಹ ನೀಡಲಾಗುತ್ತದೆ. ಅರ್ಜಿ ಶುಲ್ಕ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಮಹಿಳಾ ಅಭ್ಯರ್ಥಿ, ಮಾಜಿ ಸೈನಿಕ, ಅಂಗವಿಕಲ ಅಭ್ಯರ್ಥಿಗಳನ್ನು ಹೊರತು ಪಡಿಸಿ ಉಳಿದ ಅಭ್ಯರ್ಥಿಗಳಿಗೆ ನೂರು ರೂಪಾಯಿಗಳನ್ನು ಅರ್ಜಿ ಶುಲ್ಕವನ್ನು ನಿಗದಿ ಮಾಡಲಾಗಿದೆ‌. ಇಲ್ಲಿ ಪರಿಶಿಷ್ಟ ಜಾತಿ ಅಭ್ಯರ್ಥಿಗಳಿಗೆ 11 ಹುದ್ದೆಗಳನ್ನು, ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ 5 ಹುದ್ದೆಗಳನ್ನು, ಇತರೆ ಹಿಂದುಳಿದ ವರ್ಗಕ್ಕೆ ಸೇರಿದ ಅಭ್ಯರ್ಥಿಗಳಿಗೆ 20 ಹುದ್ದೆಗಳನ್ನು, ಸಾಮಾನ್ಯ ವರ್ಗಕ್ಕೆ ಸೇರಿದ ಅಭ್ಯರ್ಥಿಗಳಿಗೆ 32 ಹುದ್ದೆಗಳನ್ನು, ಹಾಗೂ ಆರ್ಥಿಕವಾಗಿ ದುರ್ಬಲವಾಗಿರುವ ಅಭ್ಯರ್ಥಿಗಳಿಗೆ 6 ಹುದ್ದೆಗಳನ್ನು ಮೀಸಲಾಗಿಡಲಾಗಿದೆ. ಹುದ್ದೆಗಳ ವಿವರವನ್ನು ನೋಡುವುದಾದರೆ ಸ್ಟೆನೋಗ್ರಾಫರ್ ಗ್ರೇಡ್ ಐಐ-2, ಸ್ಟೆನೋಗ್ರಾಫರ್ ಗ್ರೇಟ್ ಐಐಐ-4, ಅಪ್ಪರ್ ಡಿವಿಷನ್ ಕ್ಲರ್ಕ್ 5, ಜುನಿಯರ್ ಪರ್ಚೇಸ್ ಅಸಿಸ್ಟೆಂಟ್ ಅಥವಾ ಜೂನಿಯರ್ ಸ್ಟೋರ್ ಕೀಪರ್ 63, ಒಟ್ಟು ಹುದ್ದೆಗಳು 74. ವಿದ್ಯಾ ಅರ್ಹತೆ ಎಸೆಸೆಲ್ಸಿ ಇಂಗ್ಲಿಷ್ ಪಾರ್ಟ್ ಹ್ಯಾಂಡ್ ತಿಳಿದಿರಬೇಕು, ವಿಜ್ಞಾನ ಕಾಮರ್ಸ್ ವಿಷಯಗಳಲ್ಲಿ ಪದವಿ ಮತ್ತು ಮೆಕಾನಿಕಲ್ ಎಲೆಕ್ಟ್ರಿಕಲ್ ಎಲೆಕ್ಟ್ರಾನಿಕ್ ಕಂಪ್ಯೂಟರ್ ಸೈನ್ಸ್ ಡಿಪ್ಲೋಮಾದಲ್ಲಿ ಕನಿಷ್ಠ 60% ಅಂಕ ಪಡೆದಿರಬೇಕು.

By admin

Leave a Reply

Your email address will not be published. Required fields are marked *