ಸಂತಾನಭಾಗ್ಯ ಮತ್ತು ಸರ್ಪ ದೋಷ ನಿವರಣೆಗಾಗಿ ಸುಬ್ರಹ್ಮಣ್ಯ ಷಷ್ಠಿ ಮತ್ತು ಪೂಜೆ ಮಕ್ಕಳಿಂದ ದಾನ... - Karnataka's Best News Portal

ದೀಪದ ಆರಾಧನೆ ತುಂಬಾನೇ ವಿಶಿಷ್ಟವಾದದ್ದು ಸುಬ್ರಹ್ಮಣ್ಯ ಷಷ್ಠಿ ಅಮಾವಾಸ್ಯೆ ಆದ ಆರನೆಯ ದಿನದಂದು ಬರುತ್ತದೆ. ಈ ಷಷ್ಠಿಯು ಮಾರ್ಗಶಿರ ಮಾಸ ಶುಕ್ಲ ಪಕ್ಷದಲ್ಲಿ ಬರುವಂತಹದ್ದು ಇದನ್ನು ಸುಬ್ರಮಣ್ಯ ಷಷ್ಟಿ ಅಂತ ಕರೆಯುತ್ತಾರೆ ಇನ್ನು ಕೆಲವು ಕಡೆ ಚಂಪ ಷಷ್ಠಿ, ಸ್ಕಂದ ಷಷ್ಠಿ ಎಂದು ಕರೆಯುತ್ತಾರೆ. ಶಿವನ ತೇಜಸ್ಸಿನಿಂದ ಸೃಷ್ಟಿ ಕೊಂಡವನೇ ಈ ಸುಬ್ರಹ್ಮಣ್ಯ ಹಾಗೆಯೇ ಸುಬ್ರಹ್ಮಣ್ಯನಿಗೆ 6 ಮುಖಗಳು ಹೊಂದಿರುವುದರಿಂದ ಆತನನ್ನು ಷಣ್ಮುಖ ಅಂತ ಕೂಡ ಕರೆಯುತ್ತಾರೆ. ಇವರಿಗೆ ಆರು ಮುಖದ ಬಣ್ಣಗಳು ಇದೆ ಅದು ಯಾವುದು ಎಂದರೆ ಬಿಳಿ ಬಣ್ಣ, ಕಪ್ಪು ಬಣ್ಣ, ಕೆಂಪು ಬಣ್ಣ, ಕಂದು ಬಣ್ಣ, ಚಿತ್ರವರ್ಣ ಮತ್ತು ಹಳದಿ ಬಣ್ಣಗಳು ಈ ರೀತಿ ಆರು ಬಣ್ಣಗಳನ್ನು ಒಳಗೊಂಡಿರುವನೇ ಸುಬ್ರಹ್ಮಣ್ಯ. ಹಾಗೆಯೇ ವಿಶೇಷವಾದ ವಿಚಾರ ಏನೆಂದರೆ ಸುಬ್ರಮಣ್ಯಸ್ವಾಮಿ ಸರ್ಪರೂಪದಲ್ಲಿ ಈ ಷಷ್ಠಿಯ ದರ್ಶನವನ್ನು ನೀಡುತ್ತಾನೆ ಆಗಾಗಿ ಈ ಪೂಜೆ ತಪ್ಪಿಸುವುದಕ್ಕೆ ಹೋಗಬೇಡಿ.

ಈ ದಿನದ ಪೂಜೆ ಮಾಡಿದರೆ ತುಂಬಾನೆ ಒಳ್ಳೆಯದು ಆಗುತ್ತದೆ ಪಂಚಭೂತಗಳಿಂದ ಇರುವ ವ್ಯಕ್ತಿ ಅಂದರೆ ಅದು ಸುಬ್ರಹ್ಮಣ್ಯ ಆ ಪಂಚಭೂತಗಳು ಯಾವುದು ಎಂದರೆ. ಭೂ ತತ್ವ, ಅಗ್ನಿ ತತ್ವ, ಆಕಾಶ ತತ್ವ, ವಾಯು ತತ್ವ, ಮತ್ತು ಜಲ ತತ್ವ, ಈ ರೀತಿಯಾದಂತಹ ಪಂಚಭೂತಗಳಿಂದ ಅವರು ಹುಟ್ಟುವುದರಿಂದ ಈತನ ಉಪಾಸನೆ ಮಾಡಿದರೆ ಪಂಚದೋಷಗಳು ಕೂಡ ನಿವಾರಣೆಯಾಗುತ್ತದೆ. ಈತನಿಗೆ ಕೆಂಪು ಬಣ್ಣದ ಹೂವು ಅಂದರೆ ತುಂಬಾನೇ ಪ್ರೀತಿ ಇನ್ನು ಸಂತನ ಭಾಗ್ಯ ಬೇಕು ಅಂತ ಯಾರು ಅಂದುಕೊಂಡಿರುತ್ತಾರೆ ಅವರು ಈ ಪೂಜೆ ಮಾಡುವುದರಿಂದ ಬಹಳ ಒಳ್ಳೆಯದು ಆಗುತ್ತದೆ‌. ಜೊತೆಗೆ ಯಾರಿಗೆ ಬಾಲಗ್ರಹ ತೊಂದರೆ ಇರುತ್ತದೆ ಚರ್ಮ ಕಾಯಿಲೆ ವಿದ್ಯಾಭ್ಯಾಸ ಪ್ರಗತಿಗಾಗಿ ಪೂಜೆ ಮಾಡುವುದರಿಂದ ನೀವು ಏನೇ ಅರಿಕೆ ಮಾಡಿಕೊಂಡರು ಕೂಡ ಅದು ಇಡೇರುತ್ತದೆ ಎಂಬ ನಂಬಿಕೆ ಇದೆ ಹಾಗಾಗಿ ನಿಮ್ಮ ಮನಸ್ಸಿನಲ್ಲಿರುವ ಕೋರಿಕೆಗಳನ್ನು ದೇವರ ಬಳಿ ಹೇಳಿಕೊಳ್ಳಿ.

By admin

Leave a Reply

Your email address will not be published. Required fields are marked *