ಮನುಷ್ಯನ ಅಸೆಯ ಕಥೆಯ ರೋಚಕ ಮಾಹಿತಿ..!! ನಿಮ್ಮ ಕೆಲಸ ಇಷ್ಟ ಇಲ್ಲವೆ.?ಕೇಳಲೇಬೇಕಾದ ಸುಂದರ ಕಥೆ.. » Karnataka's Best News Portal

ಮನುಷ್ಯನ ಅಸೆಯ ಕಥೆಯ ರೋಚಕ ಮಾಹಿತಿ..!! ನಿಮ್ಮ ಕೆಲಸ ಇಷ್ಟ ಇಲ್ಲವೆ.?ಕೇಳಲೇಬೇಕಾದ ಸುಂದರ ಕಥೆ..

ಒಂದು ಊರಿನಲ್ಲಿ ಒಬ್ಬ ಚಪ್ಪಲಿ ಹೊಲಿಯುವವನು ಇದ್ದನು ಅವನು ಸುಂದರವಾಗಿ ಚಪ್ಪಲಿಯನ್ನು ಹೊಲಿ ಯುತ್ತಿದ್ದನು ಅವನ ಊರಿನವರು ಮಾತ್ರ ಅಲ್ಲದೆ ಸುತ್ತಮುತ್ತಲಿನ ಊರಿನವರು ಅವನ ಬಳಿ ಚಪ್ಪಲಿ ಒಲಿಸಿಕೊಳ್ಳಲು ಬರುತ್ತಿದ್ದರು. ಅವನ ಜನಪ್ರಿಯತೆ ಎಷ್ಟಿತ್ತೆಂದರೆ ಆ ರಾಜ್ಯದ ರಾಜನಿಗೂ ಅವನೇ ಚಪ್ಪಲಿಯನ್ನು ಹೊಲೆದು ಕೊಡುತ್ತಿದ್ದನು ಒಟ್ಟಿನಲ್ಲಿ ಹೇಳುವುದಾದರೆ ಕಲಾತ್ಮಕವಾದ ಅವನ ಕುಸುರಿ ಕೆಲಸ ವನ್ನು ಮೆಚ್ಚಿ ಕೊಳ್ಳದ ವರಿಲ್ಲ ಇಷ್ಟೆಲ್ಲ ಪ್ರಖ್ಯಾತಿಯನ್ನು ಹೊಂದಿದ್ದರು ಅವನಿಗೆ ಅವನ ವೃತ್ತಿಯ ಬಗ್ಗೆ ಅಭಿಮಾನ ವಿರಲಿಲ್ಲ ಎಷ್ಟು ಸಂಪಾ ದಿಸಿದರು ಅದು ಹೊಟ್ಟೆಗೆ ಬಟ್ಟೆಗೆ ಸಾಲುತ್ತಿರಲಿಲ್ಲ. ಊರಿನಲ್ಲಿರುವ ದೊಡ್ಡ ದೊಡ್ಡ ವ್ಯಾಪಾರಿ ಗಳಂತೆ ವಿದ್ವಾಂಸರು ಗಳಂತೆ ವೈದ್ಯರು ಗಳಂತೆ ತಾನು ಸುಲಭವಾಗಿ ಕೈತುಂಬಾ ಸಂಪಾದನೆ ಮಾಡಬೇಕು ಎಂಬ ಆಸೆಯಾಯಿತು.ಅದೇ ಯೋಚನೆಯಲ್ಲಿ ತನ್ನ ವೃತ್ತಿಯಲ್ಲಿ ಆಸಕ್ತಿಯನ್ನು ಕಳೆದುಕೊಂಡನು. ಒಲ್ಲದ ಮನಸ್ಸಿನಿಂದ ಹೇಗೋ ಚಪ್ಪಲಿಗಳನ್ನು ಮಾಡಿ ಕೊಡುತ್ತಿದ್ದನು.ಜನರಿಗೆ ಅದು ಇಷ್ಟವಾಗಲಿಲ್ಲ ಜನರು ಪಕ್ಕದ ಊರುಗಳ ಚಮ್ಮಾರರ ಬಳಿ ಹೋಗಿ ಚಪ್ಪಲಿ ಹೊಲಿಸಿಕೊಳ್ಳುತ್ತಿದ್ದರು. ಇದರಿಂದ ವ್ಯಾಪಾರ ದಿನದಿಂದ ದಿನಕ್ಕೆ ಕಡಿಮೆಯಾಗತೊಡಗಿತು. ಈ ಬಗ್ಗೆ ಅವನು ತುಂಬಾ ಯೋಚಿಸಿದ ಕೊನೆಗೆ ಅವನಿಗೆ ಒಂದು ಉಪಾಯ ಹೊಳೆಯಿತು ಅವನು ವೈದ್ಯನಂತೆ ವೇಷ ಧರಿಸಿಕೊಂಡು ತನಗೆ ಪರಿಚಯ ಇಲ್ಲದ ಇನ್ನೊಂದು ಊರಿಗೆ

ಹೋದನು ಅಲ್ಲಿ ಅವನು ಅವನ ಅಜ್ಜಿ ಅವನಿಗೆ ಕಾಯಿಲೆ ಬಂದಾಗ ಮಾಡಿಕೊಡುತ್ತಿದ್ದ ಚೂರ್ಣವನ್ನು ಜ್ಞಾಪಿಸಿಕೊಂಡು. ನಾರು-ಬೇರು ಗಳನ್ನು ತಂದು ಚೂರ್ಣವನ್ನು ಮಾಡಿ ದವಾಖಾನೆ ಯನ್ನು ತೆರೆದಈ ಹೊಸ ವೈದ್ಯರ ಬಳಿ ಬರಲು ಜನರು ಎದರಿದರು. ಅವನು ತನ್ನ ಚೂರ್ಣವನ್ನು ಸಣ್ಣ ಪೆಟ್ಟಿಗೆಯಲ್ಲಿ ಇಟ್ಟುಕೊಂಡು ಮನೆಮನೆಗೆ ಹೋಗಿ ನಿಮ್ಮ ಮನೆಯಲ್ಲಿ ಯಾರಾದರೂ ಕಾಯಿಲೆಯವರು ಇದ್ದಾರೆ ಔಷಧಿ ಯನ್ನು ಕೊಡುತ್ತೇನೆ. ಎಂದು ಹೇಳಿಕೊಂಡು ತಿರುಗಾಡ ತೊಡಗಿದನು. ಒಮ್ಮೆ ಒಬ್ಬ ಮುದುಕಿಯ ಮನೆಯಲ್ಲಿ ಅವನ ಮೊಮ್ಮಗನಿಗೆ ಕಾಯಿಲೆ ಬಂದಿತ್ತು ದೊಡ್ಡ ದೊಡ್ಡ ವೈದ್ಯರ ಬಳಿ ಹೋಗಲು ಅವಳ ಬಳಿ ಹಣ ಇರಲಿಲ್ಲ ಅಲ್ಪಸ್ವಲ್ಪ ಹಣಕ್ಕೆ ಯಾರಾದರೂ ಬಂದು ಚಿಕಿತ್ಸೆ ಕೊಡು ತ್ತಾರೆಂದು ಕಾಯುತ್ತಿದ್ದಳು. ಆ ವೇಳೆಗೆ ನಕಲಿ ವೈದ್ಯ ದೇವರಾಗಿ ಬಂದ ಮುದುಕಿ ಅವನನ್ನು ನಂಬಿ ತನ್ನ ಮೊಮ್ಮಗನಿಗೆ ಚಿಕಿತ್ಸೆ ನೀಡಲು ಹೇಳಿದಳು ಅವನು ತನ್ನ ಬಳಿಯಿದ್ದ ಚೂರ್ಣವನ್ನು ನೀರಿನಲ್ಲಿ ಕಲಸಿ ಹುಡುಗನಿಗೆ ಕುಡಿಯಲು ಕೊಟ್ಟನು. ಅದನ್ನು ಕುಡಿದ ಕೆಲವೇ ಕ್ಷಣಗಳಲ್ಲಿ ಅವನು ಎದ್ದು ಓಡಾಡತೊಡಗಿದನು. ಮುದುಕಿ ಕೃತಜ್ಞ ತೆಯಿಂದ ಅವಳ ಬಳಿ ಇದ್ದ ಸ್ವಲ್ಪ ಹಣವನ್ನು ಕೊಟ್ಟಳು ಅವನು ಅದನ್ನು ಅವನ ಕಣ್ಣಿಗೆ ಒತ್ತಿಕೊಂಡು ತನ್ನ ಪೆಟ್ಟಿಗೆಯಲ್ಲಿ ಇಟ್ಟುಕೊಂಡ ನೋವು. ಅವನಿಗೆ ಎರಡು ದಿನಕ್ಕಾಗುವಷ್ಟು ಔಷಧಿ ಪುಡಿಯನ್ನು ನೀಡಿ ತನ್ನ ದಾರಿಯನ್ನು ಹಿಡಿದನು.

WhatsApp Group Join Now
Telegram Group Join Now
See also  ಬೆಂಗಳೂರು ಸ್ಫೋಟ ಹುಬ್ಬಳ್ಳಿಯ ನೇಹಾ ಅಂತ್ಯ ತನಿಖೆಯಲ್ಲಿ ಬಯಲಾಗ್ತಿರೋದು ಏನು ಗೊತ್ತಾ? ನೀವು ಅರಿಯದ ಶಾಕಿಂಗ್ ಸತ್ಯ
[irp]


crossorigin="anonymous">