ಗಂಡ ಇಲ್ಲದ ಆಂಟಿ ಹೋಟೆಲ್ ನಲ್ಲಿ ಫ್ರೀ ಆಗಿ ಊಟ ಮಾಡುತ್ತಿದ್ದ ಪೊಲೀಸ್..!! ಒಂದಿನ ಆಂಟಿಗೆ ಮಾಡಿದ ಕೆಲಸ ನೋಡಿ...? - Karnataka's Best News Portal

ಗಂಡ ಇಲ್ಲದ ಆಂಟಿ ಹೋಟೆಲ್ ನಲ್ಲಿ ಫ್ರೀ ಆಗಿ ಊಟ ಮಾಡುತ್ತಿದ್ದ ಪೊಲೀಸ್..!! ಒಂದಿನ ಆಂಟಿಗೆ ಮಾಡಿದ ಕೆಲಸ ನೋಡಿ…?

ಆಂಧ್ರಪ್ರದೇಶದ ಗುಂಟೂರು ಸಿಟಿಯಲ್ಲಿ ಸುಲೋಚನಾ ಮತ್ತು ನಾಗಿ ರೆಡ್ಡಿ ಎಂಬ ದಂಪತಿಗಳು ವಾಸಮಾಡುತ್ತಿದ್ದರು. ಸುಲೋಚನಾ 27 ವರ್ಷ ನಾಗಿ ರೆಡ್ಡಿಗೆ 34 ವರ್ಷ ವಯಸ್ಸಾಗಿತ್ತು ಸುಲೋಚನ ಮತ್ತು ನಾಗಿರೆಡ್ಡಿ ನಡುವೆ ಎಂಟು ವರ್ಷಗಳ ವಯಸ್ಸಿನ ಅಂತರವಿತ್ತು ಈ ದಂಪತಿಗಳಿಗೆ ಇಬ್ಬರು ಹೆಣ್ಣು ಮಕ್ಕಳಿದ್ದರು. ಇಬ್ಬರು ಹೆಣ್ಣು ಮಕ್ಕಳನ್ನು ಚೆನ್ನಾಗಿ ಓದಿಸಿ ಒಳ್ಳೆಯ ಕಡೆ ಮದುವೆ ಮಾಡಿಕೊಡಬೇಕೆಂದು ಸುಲೋಚನ ನಾಗಿರೆಡ್ಡಿ ಗುರಿಯಾಗಿತ್ತು ನಾಗಿರೆಡ್ಡಿ ಕೂಲಿ ಕೆಲಸ ಮಾಡುತ್ತಿದ್ದ ಆದರೆ ವಿಧಿಯಾಟ ಎಂಬಂತೆ ಒಂದು ದಿನ ಆರೋಗ್ಯವಾಗಿ ಕೆಲಸಕ್ಕೆ ಹೋದ ನಾಗಿರೆಡ್ಡಿ ಹೃದಯಾಘಾತದಿಂದ ಅಲ್ಲೇ ಸತ್ತು ಹೋದ.ಗಂಡಸತ್ತ ವಿಷಯ ಕೇಳಿ ಸುಲೋಚನ ಸಿಕ್ಕಾಪಟ್ಟೆ ಕಣ್ಣೀರು ಹಾಕಿದ್ದಳು ಅಯ್ಯೋ ನಾನು ಎರಡು ಹೆಣ್ಣು ಮಕ್ಕಳನ್ನು ಹೇಗೆ ಸಾಕಲಿ ಒಬ್ಬಂಟಿಯಾಗಿ ನಾನು ಅವರಿಗೆ ಹೇಗೆ ವಿದ್ಯಾಭ್ಯಾಸ ಕೊಡಿಸಲಿ ಎಂದು ಸುಲೋಚನ ಯೋಚಿಸುತ್ತಾ ಪ್ರತಿದಿನ ಮನೆಯಲ್ಲಿ ಕಣ್ಣೀರು ಹಾಕುತ್ತಿದ್ದಳು. ಕೆಲವು ದಿನಗಳ ಬಳಿಕ ಹೀಗೆ ನಾನು ಯೋಚನೆ ಮಾಡುತ್ತ ಕುಳಿತರೆ ಏನು ಪ್ರಯೋಜನ ಇಲ್ಲ ಎಂದು ಅರ್ಥಮಾಡಿಕೊಂಡ ಸುಲೋಚನ ರಸ್ತೆ ಬದಿಯಲ್ಲಿ ಒಂದು ಹೋಟೆಲ್ ಓಪನ್ ಮಾಡೋಣ ಎಂದು ತೀರ್ಮಾನ ಮಾಡಿ ಅದರಂತೆ ಮನೆಯಲ್ಲಿದ್ದ ಅಲ್ಪ ಸ್ವಲ್ಪ ದುಡ್ಡನ್ನು ಖರ್ಚು ಮಾಡಿ ಒಂದು ತಳ್ಳುಗಾಡಿ ಕೊಂಡುಕೊಂಡಳು ಆ ಗಾಡಿಯ ಮೇಲೆ ಊಟವನ್ನು ತಯಾರು ಮಾಡಿ ಮಾರಲು ಶುರುಮಾಡಿದಳು. ಸುಲೋಚನ ಹಲೋ ಗಾಡಿ ಹೋಟೆಲ್ ಹೇಗೆ ಸುಮಾರಾಗಿ ನಡೆದುಕೊಂಡು ಹೋಗುತ್ತಿತ್ತು.
ಸುಲೋಚನ ಹೋಟೆಲ್ನಲ್ಲಿ ಇಡ್ಲಿ ದೋಸೆ ಪೂರಿ ಅನ್ನ-ಸಾಂಬಾರ್ ಈ 4 ಐಟಂಗಳನ್ನು ತಯಾರು ಮಾಡಿ ಬೆಳಿಗ್ಗೆ 10 ಗಂಟೆಯಿಂದ 11:00 ಗಂಟೆವರೆಗೂ ರಸ್ತೆಯಲ್ಲಿ ನಿಂತು ವ್ಯಾಪಾರ ಮಾಡುತ್ತಿದ್ದಳು. ಹೇಗೋ ಸುಲೋಚನ ಹೋಟೆಲ್ಗೆ ನಿಧಾನವಾಗಿ ಜನರು ಬರಲಾರಂಭಿಸಿದರು. ಒಂದು ದಿನ 10.30 ರ ಸಮಯದಲ್ಲಿ ದಿಡೀರ್ ಎಂದು ಒಬ್ಬ ಪೊಲೀಸ್ ಬಂದು ಸುಲೋಚನಾ ಗೆ ಅವಾಜ್ ಹಾಕಿದ ಏನಮ್ಮ ಮಧ್ಯರಾತ್ರಿ ಆಗಿದೆ ಇನ್ನು ವ್ಯಾಪಾರ ಮಾಡ್ತಾಇದ್ದೀಯ ರಸ್ತೆಯನ್ನು ನಿಮ್ಮಪ್ಪನ ದ ಯಾರು ಇಲ್ಲ ವ್ಯಾಪಾರ ಮಾಡಲು ನಿನಗೆ ಪರ್ಮಿಷನ್ ಕೊಟ್ಟಿದ್ದಾರೆ ಎಂದು ಜನಗಳೆಲ್ಲಾ ನಿಂತು ನೋಡುವಂತೆ ಜೋರಾಗಿ ಗಲಾಟೆ ಮಾಡಿ ಹೋಟೆಲ್ ಕ್ಲೋಸ್ ಮಾಡಿ ಎಂದು ಗದರಿದ ಅವನ ಮಾತಿಗೆ ಹೆದರಿದ ಸುಲೋಚನ ಆಯ್ತು ಸರ್ ಬನ್ನಿ ಕ್ಲೋಸ್ ಮಾಡುತ್ತೇನೆ ಬನ್ನಿ ಊಟ ಮಾಡಿ ಎಂದು ಹೇಳಿ ಪೊಲೀಸಪ್ಪನನ್ನು ಸಮಾಧಾನ ಮಾಡಿ ತಟ್ಟೆಗೆ 2 ಇಡ್ಲಿ ಹಾಕಿಕೊಟ್ಟರು ಗರಮ್ ಆಗಿದ್ದ ಪೊಲೀಸಪ್ಪ ಎರಡು ಇಡ್ಲಿ ತಿಂದು ತಣ್ಣಗಾದ ಇನ್ನು ಎಲ್ಲವನ್ನು ಕೊಡು ಎಂದು ಬಿಟ್ಟಿಯಾಗಿ ತಿಂದು ಕಾಸು ಕೊಡದೆ ಊಟವನ್ನು ಸಹ ಪಾರ್ಸೆಲ್ ತೆಗೆದುಕೊಂಡು ಹೋದ ಅವತ್ತಿನಿಂದ ಪ್ರತಿದಿನ ಅಲ್ಲಿಗೆ ಬಂದು ಬಿಟ್ಟಿಯಾಗಿ ತಿಂದು ಹೋಗಲು ಶುರು ಮಾಡಿದ ಪ್ರತಿನಿತ್ಯ

See also  ಸೋನಿಯಾ ದುಡ್ಡಿನ ಕೋಟೆ..ಒಳಗೆ ಏನೇನಿದೆ ಗೊತ್ತಾ ? ಎಷ್ಟು ಓದಿದ್ದಾರೆ ? ಏನು ಓದಿದ್ದಾರೆ..ಎಲ್ಲಿಂದ ಹಣ ಬರುತ್ತೆ

ಅವನು ಬಂದು ತಿಂದು ಹೋಗುವುದರಿಂದ ಅವಳ ಯಾವುದೇ ಆದಾಯ ಇರಲಿಲ್ಲ ಏನು ಮಾಡೋದು ಅನಿವಾರ್ಯ ಪರಿಸ್ಥಿತಿ ಹಾಗಿತ್ತು ಹಾಗಾಗಿ ಎಷ್ಟು ಸಾರಿ ಬಂದ ಪೊಲೀಸ್ ಊಟ ಕೇಳಿದರು ಕೊಡುತ್ತಿದ್ದಳು ಒಂದು ದಿನ ಸುಲೋಚನ ಒಂದು ಬಾಡಿಗೆ ಅಂಗಡಿ ಪಡೆದು ಲೋನಿನ್ನ ಮುಖಾಂತರ ಒಂದು ಹೋಟೆಲ್ ತೆರೆದಳು ಅಂದಿನಿಂದ ತಳ್ಳುವ ಗಾಡಿಯಲ್ಲಿ ವ್ಯಾಪಾರ ಮಾಡುವುದನ್ನು ಸುಲೋಚನ ನಿಲ್ಲಿಸಿಬಿಟ್ಟಳು ಸುಲೋಚನ ಮಾಡಿದ್ದ ಹೋಟೆಲ್ಗೆ ಕೂಡ ಬಿಟ್ಟಿಯಾಗಿ ತಿನ್ನುತ್ತಿದ್ದ ಪೊಲೀಸ್ ನಾನೀಗ ಪುಟ್ ಪಾತ್ ನಲ್ಲಿ ವ್ಯಾಪಾರ ಮಾಡುತ್ತಿಲ್ಲ ಲೈಸೆನ್ಸ್ ಪಡೆದು ಲೀಗಲ್ ಆಗಿ ನಾನು ವ್ಯಾಪಾರ ಮಾಡುತ್ತಿದ್ದೇನೆ. ಈಗ ಇವರು ಹೋಟೆಲ್ ಕಾಲಿ ಮಾಡಿಸುತ್ತಾರೆ ಎಂಬ ಭಯವಿಲ್ಲ. ಅವಳ ಮನಸ್ಸಿನಲ್ಲಿ ಅವನು ಊಟ ಮಾಡಿ ದುಡ್ಡುಕೊಡದೆ ಹೋಗಲಿ ಅವನಿಗೆ ಸರಿಯಾಗಿ ಮಾಡುತ್ತೇನೆ ಎಂದು ಅಂದುಕೊಂಡಳು ಆದರೆ ಪೊಲೀಸ್ ಊಟ ಮಾಡಲಿಲ್ಲ ಬದಲಿಗೆ ಅವಳಿಗೆ ಒಂದು ಕವರ್ ಕೊಟ್ಟನು ಆ ಕವರ್ನಲ್ಲಿ ದುಡ್ಡು ಇತ್ತು ಲೆಕ್ಕಹಾಕಿ ನೋಡಿದಾಗ 270000 ರೂಪಾಯಿ ದುಡ್ಡು ಕವರ್ನಲ್ಲಿ ಇತ್ತು ಇದೇನು ಸಾರ್ ಇವತ್ತು ಇಷ್ಟು ದುಡ್ಡು ಕೊಡುತ್ತಿದ್ದೀರಾ ಎಂದು ಸುಲೋಚನ ಪೊಲೀಸರನ್ನು ಕೇಳಿದಳು ಆಗವರು ಇಷ್ಟು ದಿನ ನೀವು ಮಾಡುತ್ತಿದ್ದ ರಸ್ತೆ ಹೋಟೆಲ್ನಲ್ಲಿ ತಿಂದನಲ್ಲ ಅದರ ಹಣ ಇದು ಏನ್ಸಾರ್ ಹೇಳುತ್ತಿದ್ದೀರಾ ಹೌದಮ್ಮ ನಾನು ಬೇರೆ ಯಾರು ಅಲ್ಲ ನಿನ್ನ ಗಂಡನಾಗಿ ರೆಡ್ಡಿಯ ಆಪ್ತ ಸ್ನೇಹಿತ ನಾನು ಮತ್ತು ನಿಮ್ಮ ಗಂಡ ತುಂಬಾ ಚಿಕ್ಕವಯಸ್ಸಿನಿಂದಲೂ ಫ್ರೆಂಡ್ ಆದರೆ ನಿಮಗೆ ಗೊತ್ತಿಲ್ಲ ನಾನು ನಿಮ್ಮ ಮನೆಗೆ ಬಂದಿಲ್ಲ ನಾನು ಪರಿಚಯ ಕೂಡ ಮಾಡಿಕೊಂಡಿಲ್ಲ ಅದರಿಂದ ನಾನು ಯಾರೆಂದು ನಿಮಗೆ ಗೊತ್ತಿಲ್ಲ ನಾನು ಯಾಕೆ ನಿಮ್ಮ ಫುಟ್ಪಾತ್ ಹೋಟೆಲ್ನಲ್ಲಿ ಬಂದು ತಿಂದು ಹೋಗುತ್ತಿದ್ದೆ ಎಂದರೆ ನಿಮ್ಮ ಒಳ್ಳೆಯದಕ್ಕಾಗಿ ನಿಮ್ಮನ್ನು ನೋಡಿ ಕೆಲವರು ಕೆಟ್ಟ ರೀತಿಯಲ್ಲಿ ನೋಡುತ್ತಾರೆ ಅಷ್ಟೇ ಅಲ್ಲದೆ ನಿಮ್ಮ ಬಳಿ ನಾನು ನಗುತ್ತ ಮಾತಾಡಿದ್ದರೆ ಇಬ್ಬರಿಗೂ ಸಂಬಂಧ ಕಲ್ಪಿಸಿ ಬಿಡುತ್ತಾರೆ ಹೀಗಾಗಿ ನಿಮಗೂ ಒಂದು ಸೇಫ್ಟಿ ಬೇಕು ನಮ್ಮ ಬಗ್ಗೆ ಯಾರು ಕೆಟ್ಟದಾಗಿ ಮಾತನಾಡಬಾರದು ಎಂದು ನಾನು ಅಲ್ಲಿಗೆ ಊಟ ಮಾಡಲು ಬರುತ್ತಿದ್ದಾಗ ನಿಮ್ಮನ್ನು ಬಯ್ಯುತ್ತಿದ್ದೆ ದಯವಿಟ್ಟು ಕ್ಷಮಿಸಿ.crossorigin="anonymous">